ಇಂದಿನಿಂದ Flipkart Big Diwali Sale ಪ್ರಾರಂಭ; ಕೇವಲ 7 ಸಾವಿರಕ್ಕೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್​!

Poco Smartphones Offer: ಅಕ್ಟೋಬರ್ 28 ರಿಂದ ನವೆಂಬರ್ 3 ರವರೆಗೆ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟ ನಡೆಸಲಿದೆ. ಇದರಲ್ಲಿ ಪೊಕೊ ಸ್ಮಾರ್ಟ್​ಫೋನ್​ಗಳನ್ನು ಕಡಿಮೆ ಬೆಲೆಗೆ ಗ್ರಾಹಕರಿಗೆ ದೊರಕುವಂತೆ ಸೇಲ್​ ಮಾಡುತ್ತಿದೆ. Poco ಕೆಲವು ಮಾದರಿಗಳ ಮೇಲೆ ಇದೇ "ಕೊನೆಯ ಬಾರಿಗೆ" ಎಂದು ಹೇಳುವ ಮೂಲಕ ರಿಯಾಯಿತಿ ನೀಡುತ್ತಿದೆ.

Flipkart

Flipkart

 • Share this:
  ದೀಪಾವಳಿ ಹಬ್ಬವನ್ನು (Diwali 2021) ಸಡಗರದಿಂದ ಸಂಭ್ರಮಿಸಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ Poco ತನ್ನ ಹಲವಾರು ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ. ಫ್ಲಿಪ್‌ಕಾರ್ಟ್‌ನ (Flipkart) ದೀಪಾವಳಿ ಮಾರಾಟದಲ್ಲಿ Poco X3 Pro, Poco M2 Pro, Poco C3 ಮತ್ತು ಇತರ ಮಾದರಿಯನ್ನು ರಿಯಾಯಿತಿ ದರದಲ್ಲಿ ನೀಡುತ್ತದೆ.

  ಅಕ್ಟೋಬರ್ 28 ರಿಂದ ನವೆಂಬರ್ 3 ರವರೆಗೆ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟ (Flipkart Big Diwali Sale) ನಡೆಸಲಿದೆ. ಇದರಲ್ಲಿ ಪೊಕೊ ಸ್ಮಾರ್ಟ್​ಫೋನ್​ಗಳನ್ನು ಕಡಿಮೆ ಬೆಲೆಗೆ ಗ್ರಾಹಕರಿಗೆ ದೊರಕುವಂತೆ ಸೇಲ್​ ಮಾಡುತ್ತಿದೆ. Poco ಕೆಲವು ಮಾದರಿಗಳ ಮೇಲೆ ಇದೇ "ಕೊನೆಯ ಬಾರಿಗೆ" ಎಂದು ಹೇಳುವ ಮೂಲಕ ರಿಯಾಯಿತಿ ನೀಡುತ್ತಿದೆ.

  ಮಾರಾಟದ ಸಮಯದಲ್ಲಿ, Poco X3 Pro ನ ಎರಡೂ ಮಾದರಿಗಳು 7,000 ರೂಪಾಯಿಗಳ ಬೃಹತ್ ಮುಂಗಡ ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿರುತ್ತವೆ. ಇದರರ್ಥ 6GB RAM ಹೊಂದಿರುವ Poco X3 Pro ಅದರ ಮೂಲ ಬೆಲೆ 23,999 ರಿಂದ 16,999 ರೂ.ಗೆ ಮಾರಾಟವಾಗುತ್ತದೆ. ಅದೇ ರೀತಿ, ಫೋನ್‌ನ 8GB RAM ಆಯ್ಕೆ ಮೂಲ ಬೆಲೆ 25,999 ರೂ. ಆಗಿದ್ದುಮ 18,999 ರೂಗೆ ಸಿಗುತ್ತದೆ.

  ಮುಂಗಡ ರಿಯಾಯಿತಿಗಳ ಜೊತೆಗೆ, Flipkart ಫೋನ್‌ಗಳ ಮೇಲೆ ಬ್ಯಾಂಕ್ ರಿಯಾಯಿತಿಯನ್ನು ನೀಡುತ್ತಿದೆ. ಖರೀದಿಯ ಮೇಲೆ ಈ ಎಲ್ಲಾ ಕೊಡುಗೆಗಳನ್ನು ಪಡೆಯುವುದರಿಂದ, ಜನರು Poco X3 Pro ನ ಮೂಲ ರೂಪಾಂತರವನ್ನು 15,749 ರೂಗೆ ಖರೀದಿಸಲು ಸಾಧ್ಯವಾಗುತ್ತದೆ. 8GB RAM ಹೊಂದಿರುವ Poco X3 Pro ರೂ 17,749 ಕ್ಕೆ ಲಭ್ಯವಿರುತ್ತದೆ.

  Read Also:WhatsApp​ನಲ್ಲಿ HD ಕ್ವಾಲಿಟಿ ಫೋಟೋ ಸೆಂಡ್​ ಮಾಡಬೇಕಾ; ಇಲ್ಲಿದೆ ಟ್ರಿಕ್ಸ್​​

  ಇತರ Poco ಫೋನ್‌ಗಳಲ್ಲಿಯೂ ಇದೇ ರೀತಿಯ ರಿಯಾಯಿತಿಗಳು ಲಭ್ಯವಿರುತ್ತವೆ. 4GB RAM ಮತ್ತು 64GB ಸ್ಟೋರೇಜ್ ಹೊಂದಿರುವ Poco M2 Pro ಬೇಸ್ ರೂಪಾಂತರವು ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟದ ಸಮಯದಲ್ಲಿ 10,799 ರೂ.ಗೆ ಲಭ್ಯವಿರುತ್ತದೆ. ಇದು ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 16,999 ರೂ.ಗಳ ಮೇಲೆ 6,000 ರೂ.ಗಿಂತ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತದೆ. 6GB RAM ಆಯ್ಕೆಯು ಫೋನ್​  11,749 ರೂ.ಗೆ ಸಿಗಲಿದೆ

  ಕೊನೆಯದಾಗಿ, Poco C3, 3GB RAM ಮತ್ತು 32GB ಸಂಗ್ರಹದೊಂದಿಗೆ ಬರುವ ಕಂಪನಿಯ ಬಜೆಟ್ ಕೊಡುಗೆಯು ಮಾರಾಟದ ಸಮಯದಲ್ಲಿ 9,999 ಮೂಲ ಬೆಲೆ ಫೋನ್​ 6,749 ರೂ. ಗೆ ಲಭ್ಯವಿರುತ್ತದೆ. ಈ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ ಗಮನಿಸಿದಾಗ 3,000 ಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿದೆ.

  Read Also: Travel agency: ಭಾರತದಲ್ಲಿ ಟ್ರಾವೆಲ್ ಏಜೆನ್ಸಿ ಪ್ರಾರಂಭಿಸಲು ಅನುಸರಿಸಬೇಕಾದ ಹಂತಗಳೇನು..? ಇಲ್ಲಿದೆ ವಿವರ

  ಇತರ Poco ಫೋನ್‌ಗಳು ಮಾರಾಟದ ಸಮಯದಲ್ಲಿ ರಿಯಾಯಿತಿ ದರಗಳನ್ನು ಗಮನಿಸಬೇಕಿದೆ. Poco M3 ಮತ್ತು Poco M3 Pro ಕ್ರಮವಾಗಿ 10,999 ಮತ್ತು 13,249 ರೂ.ಗಳಿಗೆ ಸಿಗುತ್ತದೆ. Poco C31 ಫೋನನ್ನು​ 7,649 ರೂ ಬಜೆಟ್​ ಬೆಲೆಗೆ ಖರೀದಿಸಬಹುದಾಗಿದೆ.

  ಇಂದಿನಿಂದ ಮಾರಾಟ ಪ್ರಾರಂಭವಾಗಲಿದ್ದು, ನವೆಂಬರ್ 3 ರವರೆಗೆ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟ ನಡೆಸಲಿದೆ.
  Published by:Harshith AS
  First published: