HOME » NEWS » Tech » POCO M3 PRO 5G LAUNCH IN INDIA TODAY HOW TO WATCH LIVESTREAM HG

ಇಂದು ತ್ರಿವಳಿ ಕ್ಯಾಮೆರಾವಿರುವ Poco M3 Pro ಮಾರುಕಟ್ಟೆಗೆ; ಬೆಲೆ?

ಪೊಕೊ M3 ಪ್ರೊ ಸ್ಮಾರ್ಟ್​ಫೋನ್​ ತ್ರಿವಳಿ ಕ್ಯಾಮೆರಾವನ್ನು ಹೊಂದಿದೆ.48 ಮೆಗಾಫಿಕ್ಸೆಲ್​​ ಕ್ಯಾಮೆರಾ, 2 ಮೆಗಾಫಿಕ್ಸೆಲ್​ ಮ್ಯಾಕ್ರೊ ಕ್ಯಾಮೆರಾ ಮತ್ತು 2 ಮೆಗಾಫಿಕ್ಸೆಲ್​ ಡೆಪ್ತ್​​ ಸೆನ್ಸಾರ್​ ನೀಡಲಾಗಿದೆ. ಮುಂಭಾಗದಲ್ಲಿ 8 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಲಾಗಿದೆ.

news18-kannada
Updated:June 8, 2021, 8:51 AM IST
ಇಂದು ತ್ರಿವಳಿ ಕ್ಯಾಮೆರಾವಿರುವ Poco M3 Pro ಮಾರುಕಟ್ಟೆಗೆ; ಬೆಲೆ?
Poco M3 Pro 5G
  • Share this:
ಪೊಕೊ M3 ಪ್ರೊ 5G ಸ್ಮಾರ್ಟ್​ಫೋನನ್ನು ಇಂದು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ನೂತನ ಸ್ಮಾರ್ಟ್​ಫೋನ್ ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​​ಕಾರ್ಟ್​ ಮೂಲಕ ಮಾರಾಟ ಮಾಡಲಿದೆ. ಮೇ ತಿಂಗಳಿನಲ್ಲಿ ಜಾಗತಿಕವಾಗಿ ಖರೀದಿಗೆ ಸಿಗಲಿದೆ.

ಪೊಕೊ M3 ಪ್ರೊ ವಿಶೇಷತೆ:

ನೂತನ ಸ್ಮಾರ್ಟ್​ಫೋನ್​ 6.5 ಇಂಚಿನ ಎಫ್​ಹೆಚ್​ಡಿ+ ಡಿಸ್​ಪ್ಲೇ ಜೊತೆಗೆ 90ಹೆಚ್​ಝೆಡ್​ ರಿಫ್ರೆಶ್​ ರೇಟ್​ ಹೊಂದಿದೆ. 5ಜಿ ನೆಟ್​ವರ್ಕ್​ನಡಿಯಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್​ಫೋನ್​ ಮೀಡಿಯಾಟೆಕ್​ ಡೆಮೆನ್ಸಿಟಿ 700ಚಿಪ್​ ಜತೆಗೆ 6GB RAM​ ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.

ಪೊಕೊ M3 ಪ್ರೊ ಸ್ಮಾರ್ಟ್​ಫೋನ್​ ತ್ರಿವಳಿ ಕ್ಯಾಮೆರಾವನ್ನು ಹೊಂದಿದೆ.48 ಮೆಗಾಫಿಕ್ಸೆಲ್​​ ಕ್ಯಾಮೆರಾ, 2 ಮೆಗಾಫಿಕ್ಸೆಲ್​ ಮ್ಯಾಕ್ರೊ ಕ್ಯಾಮೆರಾ ಮತ್ತು 2 ಮೆಗಾಫಿಕ್ಸೆಲ್​ ಡೆಪ್ತ್​​ ಸೆನ್ಸಾರ್​ ನೀಡಲಾಗಿದೆ. ಮುಂಭಾಗದಲ್ಲಿ 8 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಲಾಗಿದೆ.

ಇನ್ನು ನೂತನ ಸ್ಮಾರ್ಟ್​ಫೋನ್​ 5 ಸಾವಿರ ಎಮ್​ಎಹೆಚ್​ ಬ್ಯಾಟರಿ ಜತೆಗೆ 18 ವ್ಯಾಟ್​ ಫಾಸ್ಟ್​​ ಚಾಜಿಂಗ್​ ಸೌಲಭ್ಯ ಹೊಂದಿದೆ. ಆಂಡ್ರಾಯ್ಡ್​ 11ನಿಂದ ಕಾರ್ಯನಿರ್ವಹಿಸುವ ಈ ಫೋನ್​ ಫಿಂಗರ್​ಪ್ರಿಂಟ್​ ಸೆನ್ಸಾರ್​​ ಇದರಲ್ಲಿದೆ. ಗ್ರಾಹಕರಿಗಾಗಿ ಮೂರು ಬಣ್ಣದಲ್ಲಿ ಸಿಗಲಿದೆ. ನೀಲಿ, ಕಪ್ಪು ನತ್ತು ಹಳದಿ ಬಣ್ಣದಲ್ಲಿ ಪರಿಚಯಿಸಲಿದೆ.

ಬೆಲೆ:

ಇಂದಿನಿಂದ ಪೊಕೊ M3 ಪ್ರೊ ಸ್ಮಾರ್ಟ್​ಫೋನ್​ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಸಿಗಲಿದೆ. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಇದರ ಬೆಲೆ 15 ಸಾವಿರ ರೂ ಎಂದು ಅಂದಾಜಿಸಲಾಗಿದೆ.
Published by: Harshith AS
First published: June 8, 2021, 8:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories