• Home
  • »
  • News
  • »
  • tech
  • »
  • Poco F5 5G Smartphone: ಬಿಡುಗಡೆಗೆ ಮೊದಲೇ ಸೋರಿಕೆಯಾಯಿತಾ ಪೋಕೋ ಎಫ್5 5ಜಿ ವಿಶೇಷತೆಗಳು

Poco F5 5G Smartphone: ಬಿಡುಗಡೆಗೆ ಮೊದಲೇ ಸೋರಿಕೆಯಾಯಿತಾ ಪೋಕೋ ಎಫ್5 5ಜಿ ವಿಶೇಷತೆಗಳು

Poco F5 5G

Poco F5 5G

ಇದೀಗ ಶೀಘ್ರದಲ್ಲೇ ಹೊಸ POCO ಸ್ಮಾರ್ಟ್‌ ಫೋನ್‌ ಅನ್ನು F ಲೈನ್‌ಅಪ್‌(Lineup) ಅಡಿಯಲ್ಲಿ POCO F5 5G ಮೊಬೈಲ್ ಬಿಡುಗಡೆಯಾಗಬಹುದೆಂದು ತೋರುತ್ತಿದೆ. ಇದಲ್ಲದೆ ಇದರ ಕೆಲವು ಪ್ರಮುಖ ಫೀಚರ್ಸ್‌ಕೂಡ ಸಾಮಾಜಿಕ ಜಾಲತಾಣದಲ್ಲಿ ಲೀಕ್‌ ಆಗಿದೆ.

  • Share this:

    ವರ್ಷದಿಂದ ವರ್ಷ ಹೊಸ ಹೊಸ ಸ್ಮಾರ್ಟ್‌ ಫೋನ್‌ (smartphone) ಗಳು ಬಿಡುಗಡೆಯಾಗುತ್ತಾ ಇರುತ್ತದೆ ಅದೇ ರೀತಿ ಈ ವರ್ಷ ಕೂಡಾ ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿದೆ. ಆದರೆ POCO ಸ್ಮಾರ್ಟ್ ಫೋನ್‌ ಸಂಸ್ಥೆಯ ಹೊಸ ಉತ್ಪನ್ನದ (Product) ಲಕ್ಷಣಗಳು ಇಲ್ಲಿ ಬಿಡುಗಡೆಯಾಗುವ ಮೊದಲೇ ಸೋರಿಕೆಯಾಗಿದೆ. ಯಾವುದು ಅದು ಹೊಸ ಸ್ಮಾರ್ಟ್‌ಫೋನ್‌ (smartphone)? ಹೇಗಿದೆ ಎಂಬುದನ್ನು ತಿಳೀಬೇಕಾ ? ಹಾಗಿದ್ದರೆ ಕೆಳಗಿನ ವಿವರಣೆಯನ್ನು ಓದಿ. POCO ಮೊಬೈಲ್‌ (Mobile) ಸಂಸ್ಥೆಯು ಹಲವಾರು ಸೀರಿಸ್‌ಗಳನ್ನು (Series) ಹೊಂದಿದೆ. ಅದರಲ್ಲೂ ಇದು Flagship X series Affordable M Series Powerful F series ಈ ರೀತಿಯ ಸೀರಿಸ್‌ ಗಳಲ್ಲಿ ಸ್ಮಾರ್ಟ್‌ ಫೋನ್‌ ಅನ್ನು ಉತ್ಪಾದನೆ ಮಾಡುತ್ತಿದ್ದರು.


    ಇದೀಗ ಶೀಘ್ರದಲ್ಲೇ ಹೊಸ POCO ಸ್ಮಾರ್ಟ್‌ ಫೋನ್‌ ಅನ್ನು F ಲೈನ್‌ಅಪ್‌ (Lineup) ಅಡಿಯಲ್ಲಿ POCO F5 5G ಮೊಬೈಲ್ ಬಿಡುಗಡೆಯಾಗಬಹುದೆಂದು ಹೇಳುತ್ತಿದೆ. ಇದಲ್ಲದೆ ಇದರ ಕೆಲವು ಪ್ರಮುಖ ಫೀಚರ್ಸ್‌ಕೂಡ ಸಾಮಾಜಿಕ ಜಾಲತಾಣ (Social media) ದಲ್ಲಿ ಲೀಕ್‌ ಆಗಿದೆ.


    POCO F5 5G ಈ ವರ್ಷದಲ್ಲಿ ಬಿಡುಗಡೆಯಾದ POCO F4 5G ಸ್ಮಾರ್ಟ ಫೋನ್‌ ಗಿಂತಲೂ ಹೆಚ್ಚು ಫೀಚರ್ಸ್‌ ಅನ್ನು ಹೊಂದಿದ್ದು ಇದು ಇನ್ನಷ್ಟು ಯಶಸ್ವಿಯಾಗಲಿದೆ. ಇನ್ನು ಈ ಹಿಂದೆ ಉತ್ಪಾದಿಸಿದ ಸ್ಮಾರ್ಟ ಫೋನ್‌  REDMI K40 ಇಂದ ಅಭಿವೃದ್ಧಿಪಡಿಸಿದ ವರ್ಶನ್‌ ಆಗಿದೆ. ಆದರೆ ಮುಂಬರುವ POCO F5 5G ಮೊಬೈಲ್‌ REDMI K60 5G ಯ ಮರುಬ್ರಾಂಡೆಡ್‌ ಎಂದು ಹೇಳಲಾಗುತ್ತಿದೆ.


    ಇನ್ನು ಈ POCO ಮೊಬೈಲ್‌ IMEI ಡಾಟಾಬೇಸ್‌ ನಲ್ಲಿ ಗುರುತಿಸಲಾಗಿದೆ. ಈ ಡಾಟಾಬೇಸ್‌ ಅನ್ನು XIAOMIUI ನ ವರದಿಯು ಗುರುತಿಸಿದೆ


    ಇದನ್ನೂ ಓದಿ : 50MP ಕ್ಯಾಮೆರಾ, 6000mAh ಬ್ಯಾಟರಿ! ರಿಯಾಯಿತಿ ಬೆಲೆಗೆ ಸಿಗುತ್ತಿದೆ ರೆಡ್​ಮಿ ಕಂಪನಿಯ ಈ ಸ್ಮಾರ್ಟ್​ಫೋನ್


    POCO F5 5Gಯ ಕೆಲವೊಂದು ಫೀಚರ್‌ ಹೀಗಿದೆ !


    ಇಲ್ಲಿ ನಾವು ಈ Poco F5 5G ಮೊಬೈಲ್‌ನ ಕೆಲವೊಂದು ಮುಖ್ಯ ಲಕ್ಷಣಗಳನ್ನು ಗಮನಿಸಬಹುದಾಗಿದೆ.


    POCO may ready to launch new M-series smartphone in India


    ಈ  ಹೊಸ POCO  ಸ್ಮಾರ್ಟ್‌ ಫೋನ್‌ 2K ರೆಸಲ್ಯುಶನ್‌ ನೊಂದಿಗೆ AMOLED ಡಿಸ್‌ಪ್ಲೇ ಯನ್ನು ತೋರಿಸಲು ಸಿದ್ಧವಾಗಿದೆ.  ಇನ್ನು ಇದು Snapdragon 8+ Gen1 Chipset ಅನ್ನು ಹೊಂದಿದ್ದು ಇದು ಇನ್ನಷ್ಟು ಈ ಮೊಬೈಲನ್ನು ಬಲಪಡಿಸುತ್ತದೆ. Redmi K60 5G ಮೊಬೈಲ್‌ ಕೂಡ ಇದೇ ಲಕ್ಷಣಗಳನ್ನು ಹೊಂದಿದ್ದು ಅದಕ್ಕಾಗಿಯೇ ಈ Poco ಮೊಬೈಲನ್ನು ಇದರ ರೀಬ್ರಾಂಡೆಡ್‌ ವರ್ಶನ್ (‌version) ಎಂದು ಬಹಿರಂಗ ಪಡಿಸಲಾಗಿದೆ ‌


    ಇದು 2023 ರಲ್ಲಿ ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ. IMEI ಡಾಟಾಬೇಸ್‌ನಲ್ಲಿ ಹೊಸ Xiaomi ಫೋನ್‌ ಮಾದರಿ ಸಂಖ್ಯೆ 23013RK75C ಚೀನೀ ರೂಪಾಂತರದಲ್ಲಿ ಕಾಣಿಸಿಕೊಂಡಿದೆ. ಅದೇ ರೀತಿಯಲ್ಲಿ 23013PC75I ಮಾದರಿ ಸಂಖ್ಯೆಯೊಂದಿಗೆ ಇದರ ಭಾರತೀಯ ರೂಪಾಂತರ ಮತ್ತು2301375G ಮಾದರಿ ಸಂಖ್ಯೆಯೊಂದಿಗೆ ಜಾಗತಿಕ ಅವೃತ್ತಿಯು IMEI ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದೆ.


    ಇದು 8GB Ram ಮತ್ತು 256GB Storage ಅನ್ನು ಕೂಡಾ ಒಳಗೊಂಡಿದ್ದು ಜೊತೆಗೆ ಬಹಳ ವೇಗದ ಚಾರ್ಜಿಂಗ್‌ ಅಯ್ಕೆಯನ್ನು ಕೂಡ ಇದು ಹೊಂದಿದೆ.


    ಇದನ್ನೂ ಓದಿ :Iphone​ ಪ್ರಿಯರಿಗೆ ಸಿಹಿ ಸುದ್ದಿ! ಶೀಘ್ರದಲ್ಲೇ 5G ಸೇವೆಯನ್ನು ತೆರೆಯಲಿರುವ ಆ್ಯಪಲ್​


    ಇದಿಷ್ಟು ಈವರೆಗೆ ಲೀಕ್‌ ಆದ Poco F5 5G ಮೊಬೈಲ್‌ನ ಲಕ್ಷಣಗಳು. ಹಾಗೆ ಇದನ್ನು 2023 ರಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ ಅದ್ದರಿಂದ ಬಿಡುಗಡೆಗೆ ಇನ್ನೂ ತಿಂಗಳುಗಳು ಮಾತ್ರ ಬಾಕಿ ಇರುವುದರಿಂದ  ಬಿಡುಗಡೆಗೆ ಮೊದಲು ಇನ್ನಷ್ಟು ಹೆಚ್ಚಿನ ಮಾಹಿತಿ ಲೀಕ್‌ ಆಗುವ ಛಾನ್ಸ್‌ ಕೂಡಾ ಇದೆ.


    Published by:Harshith AS
    First published: