ಒನ್​ಪ್ಲಸ್​ 6ಗೆ ಕೌಂಟರ್​ ನೀಡುಲು ಬಂದಿದೆ Poco F1


Updated:August 22, 2018, 5:33 PM IST
ಒನ್​ಪ್ಲಸ್​ 6ಗೆ ಕೌಂಟರ್​ ನೀಡುಲು ಬಂದಿದೆ Poco F1
  • Share this:
ಶಿಯೋಮಿ ಒಡೆತನದ ಪೊಕೊ ಮೊಬೈಲ್​ ತನ್ನ ನೂತನ ಪೊಕೊ ಎಫ್​1 ಮೊಬೈಲ್​ನ್ನು ಬುಧವಾರದಂದು ದೆಹಲಿಯಲ್ಲಿ ಬಿಡುಗಡೆ ಮಾಡಿದೆ.

ಫ್ಲಿಪ್​ಕಾರ್ಟ್​ನಲ್ಲಿ ಮಾತ್ರಾವೇ ಮಾರಾಟವಾಗುವ ಮೊಬೈಲ್​ಗಳಲ್ಲಿ ಒಂದಾಗಿರುವ Poco F1 ಮೊಬೈಲ್​ಗೆ ಬಿಡುಗಡೆ ಕಾರ್ಯಕ್ರಮವನ್ನು ವಿಶ್ವಾದ್ಯಂತ ವಿಕ್ಷಿಸಲು ಯೂಟ್ಯೂಬ್ ಚಾನೆಲ್​ ಕೂಡಾ ತೆರೆಯಲಾಗಿತ್ತು. ಇನ್ನು ಒನ್​ಪ್ಲಸ್​ 6 ಮೊಬೈಲ್​ಗೆ ನೇರವಾಗಿ ಸ್ಪರ್ಧೆಗೆ ಇಳಿದಿರುವ ಪೊಕೊ ಅತ್ಯಂತ ಬಲಿಷ್ಠ ಪ್ರೊಸೆಸರ್​ನಲ್ಲಿ ಒಂದಾದ ಸ್ನಾಪ್​ ಡ್ರಾಗನ್​ 845 ಪ್ರೊಸೆಸರ್​ ಅಳವಡಿಸಲಾಗಿದೆ.

ಬೆಲೆ: 20,999 - 6GB RAM, 64GB ಹಾಗೂ 128GB ಆಂತರಿಕ ಮೆಮೊರಿ ಮೊಬೈಲ್​ಗೆ Rs 23,999,
8GB RAM, 256GB ಮೊಬೈಲ್​ಗೆ Rs 28,999, ಕೆಲ್ವೆರ್​ ಎಂಬ ಶ್ರೇಣಿಯ 8GB RAM, 256GB ಮೊಬೈಲ್​ಗೆ Rs 29,999, ರೂ ಬೆಲೆ ತಗುಲುತ್ತದೆ.

6GB/8GB RAM ಮತ್ತು 64GB/128GB/256GB ಹಾಗು ಆಂತರಿಕ ಮೆಮೊರಿ ಹೊಂದಿರುವ ಪೊಕೊ F1 ಮೊಬೈಲ್​ ಇದೇ ತಿಂಗಳ 29ರಂದು ಫ್ಲಿಪ್​ಕಾರ್ಟ್​ನಲ್ಲಿ ಮಾರಾಟವಾಗಲಿದೆ. ಮೊಬೈಲ್​ ಬಿಸಿಯಾಗುವುದನ್ನು ತಪ್ಪಿಸಲು ತೀರ್ಮಾನಿಸಿರುವ ಸಂಸ್ಥೆ ಲಿಕ್ವಿಡ್​ ಕೂಲ್​ ಟೆಕ್ನಾಲಜಿಯನ್ನು ಈ ಮೊಬೈಲ್​ಗೆ ಅಳವಡಿಸಿದೆ. ಈ ಮೊಬೈಲ್​ಗಳಿಗೆ 256ಜಿಬಿ ವರೆಗೂ ಆಂತರಿಕ ಮೆಮೊರಿಯನ್ನು ವೃದ್ಧಿಸುವ ಅವಕಾಶ ಕಲ್ಪಿಸಲಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್​ ಮತ್ತು 5 ಮೆಗಾಪಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ, ಸೆಲ್ಫಿ ಪ್ರಿಯರಿಗಾಗಿ 20 ಮೆಗಾಪಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ. ದೀರ್ಘಕಾಲಿಕ ಬ್ಯಾಟರಿಗಾಗಿ 4000 mAh ಬ್ಯಾಟರಿ ಮತ್ತು 3.0 ಶೀಘ್ರ ಚಾರ್ಜಿಂಗ್​ ಬ್ಯಾಟರಿ ನೀಡಲಾಗಿದೆ.
First published: August 22, 2018, 5:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading