ಗೂಗಲ್​ನಲ್ಲಿ ಪ್ರಧಾನಿ ಮೋದಿ ಭಾಷಣ!


Updated:August 14, 2018, 4:30 PM IST
ಗೂಗಲ್​ನಲ್ಲಿ ಪ್ರಧಾನಿ ಮೋದಿ ಭಾಷಣ!
Indian Prime Minister Narendra Modi gestures as he addresses the nation from the historic Red Fort during Independence Day celebrations in Delhi, India August 15, 2017. REUTERS/Adnan Abidi - RC13F76221C0

Updated: August 14, 2018, 4:30 PM IST
ನ್ಯೂಸ್​18 ಕನ್ನಡ 

ನವದೆಹಲಿ: ಸಾಮಾಜಿಕ ಜಾಲತಾಣದಲ್ಲೇ ಅತ್ಯಂತ ಹೆಚ್ಚು ಫಾಲೋವರ್ಸ್​ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಇತಿಹಾಸ ಸೃಷ್ಠಿಸಲು ತೀರ್ಮಾನಿಸಿದ್ದಾರೆ.

ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಗೂಗಲ್​ ಮತ್ತು ಯೂಟ್ಯೂಬ್​ನಲ್ಲಿ ನೇರ ಭಾಷಣ ಮಾಡಲಿದ್ದಾರೆ. ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಮೋದಿ ನಡೆಸಿದ ಭಾಷಣದ ಲೈವ್​ ವಿಡಿಯೋ ಮಾಡಿದ ಪ್ರಸಾರ ಭಾರತಿಯಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟಿತ್ತು. ಇದೀಗ ಗೂಗಲ್​ ಮತ್ತು ಯೂಟ್ಯೂಬ್​ನೊಂದಿಗೆ ಪ್ರಸಾರ ಭಾರತಿ ಒಪ್ಪಂದ ಮಾಡಿಕೊಂಡಿದೆ.

ಡಿಜಿಟಲ್​ ಯುಗದಲ್ಲಿ ನಾವೂ ಹೆಚ್ಚು ಬೆರೆತುಕೊಳ್ಳುವ ಸಲುವಾಗಿ ಇದೇ ಮೊದಲ ಬಾರಿ ಯೂಟ್ಯೂಬ್​ ಮತ್ತು ಗೂಗಲ್​ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸ್ವಾತಂತ್ರ ದಿನದಂದು ಆನ್​ಲೈನ್​ನಲ್ಲೇ ವಿಡಿಯೋ ಲೈವ್​ ಮಾಡುತ್ತಿದ್ದೇವೆ ಎಂದು ಪ್ರಸಾರ ಭಾರತಿ ಸಿಇಒ ಶಶಿ ಶೇಖರ್​ ತಿಳಿಸಿದ್ದಾರೆ.

ಪ್ರತೀಬಾರಿ ಲೈವ್​ ಮಾಡಿದ ಸಂದರ್ಭದಲ್ಲಿ ಕನಿಷ್ಟ 1.5 ರಿಂದ 2 ಮಿಲಿಯನ್​ ಮಂದಿ ಲೈವ್​ ವಿಡಿಯೋ ವೀಕ್ಷಣೆ ಮಾಡುತ್ತಾರೆ, ಹೀಗಾಗಿ ಈ ಕಾರ್ಯಕ್ರಮವನ್ನೂ ಸಹ ಲೈವ್​ ಮಾಡಿದರೆ ಆನ್​ಲೈನ್​ ವೇದಿಕೆಯಲ್ಲೂ ಪ್ರಸಾರ ಭಾರತಿಯ ಛಾಪು ಮೂಡಿಸಬಹುದು ಎಂದು ಶಶಿ ಶೇಖರ್​ ಅಭಿಪ್ರಾಯ ಪಟ್ಟಿದ್ದಾರೆ.

ಈ ಕಾರ್ಯಕ್ರಮಕ್ಕೆ ದೂರದರ್ಶನದ ನಿರೂಪಕರೂ ಸಾಥ್​ ನೀಡಲಿದ್ದು, ಕೆಂಪುಕೋಟೆ ಹಾಗೂ ರಾಜ್​ ಘಾಟ್​ನಿಂದ 24 ಕ್ಯಾಮೆರಾಗಳಿಂದ ಲೈವ್​ ನೀಡಲಿದ್ದಾರೆ. ಮೊದಿ ಭಾಷಣವನ್ನು ಒಟ್ಟಾರೆ 22 ಭಾಷೆಗಳಲ್ಲಿ ಅನುವಾದ ಮಾಡಲಿದ್ದಾರೆ. ಗಾಯಕ ಶಂಕರ್​ ಮಹಾದೇವನ್​ ಸ್ವಾತಂತ್ರ್ಯ ದಿನದಂದು ತಮ್ಮ ಸಂಗೀತದ ಮೂಲಕ ರಂಜಿಸುವುದನ್ನು ಪ್ರಸಾರ ಭಾರತಿ ಪ್ರಸಾರ ಮಾಡುತ್ತದೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...