Aatmanirbhar Bharat: ದೇಶಿಯ ಆ್ಯಪ್ ಅಭಿವೃದ್ದಿ ಪಡಿಸಲು ಮೋದಿ ಕರೆ; ಯಶಸ್ವಿ ಆದರೆ 20 ಲಕ್ಷ ಬಹುಮಾನ!

Aatmanirbhar Bharat App Innovation Challenge: ಇತ್ತೀಚೆಗೆ ಕೇಂದ್ರ ಸರ್ಕಾರ ಚೀನಾ ಮೂಲದ 59 ಆ್ಯಪ್​ಗಳನ್ನು ನಿಷೇಧ ಮಾಡಿದೆ. ಆಂತರಿಕ ಮತ್ತು ಭದ್ರತೆಯ ದೃಷ್ಠಿಯಿಂದ ಈ ನಿರ್ಣಯವನ್ನು ಕೈಗೊಂಡಿದೆ. ಹಾಗಾಗಿ ಇದೀಗ ನರೇಂದ್ರ ಮೋದಿ ಅವರು ಆತ್ಮನಿರ್ಭಾರ್​​​ ಭಾರತ್​​​ ಕಾರ್ಯಕ್ರಮದ ಮೂಲಕ ದೇಶಿಯ ಆ್ಯಪ್​​ಗಳನ್ನು ಅಭಿವೃದ್ಧಿ ಪಡಿಸುವಂತೆ ಕರೆ ನೀಡಿದ್ದಾರೆ.

news18-kannada
Updated:July 4, 2020, 10:28 PM IST
Aatmanirbhar Bharat: ದೇಶಿಯ ಆ್ಯಪ್ ಅಭಿವೃದ್ದಿ ಪಡಿಸಲು ಮೋದಿ ಕರೆ; ಯಶಸ್ವಿ ಆದರೆ 20 ಲಕ್ಷ ಬಹುಮಾನ!
ಆತ್ಮನಿರ್ಭಾರ್​​​ ಭಾರತ್​​​
  • Share this:
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಆತ್ಮನಿರ್ಭಾರ್​​​ ಭಾರತ್​​​ ಕಾರ್ಯಕ್ರಮದ ಮೂಲಕ ನೂತನ ಆ್ಯಪ್​​ಗಳನ್ನು ಸಿದ್ಧಪಡಿಸುವ ಹೊಸ ಚಾಲೆಂಜ್​​ಗೆ ಚಾಲನೆ ನೀಡಿದ್ದಾರೆ. ಡಿಜಿಟಲ್ ಇಂಡಿಯಾ ಮತ್ತು ಸ್ವದೇಶಿ ಅಭಿಯಾನ ಕುರಿತಾಗಿ ಈ ಚಾಲೆಂಜ್​ ಹುಟ್ಟುಹಾಕಿದ್ದು, ಈ ಚಾಲೆಂಜ್​ನಲ್ಲಿ ಟೆಕ್ಕಿಗಳು ಮತ್ತು ಆ್ಯಪ್​ ಡೆವಲಪರ್ಸ್​ಗಳು ಭಾಗವಹಿಸಬಹುದು ಎಂದು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಆ್ಯಪ್​ಗಳನ್ನು ಅಭಿವೃದ್ಧಿ ಪಡಿಸುವಂತೆ ಈ ಕಾರ್ಯಕ್ರಮದ ಮೂಲಕ ಮೋದಿ ಕರೆ ನೀಡಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಚೀನಾ ಮೂಲದ 59 ಆ್ಯಪ್​ಗಳನ್ನು ಭಾರತದಲ್ಲಿ ನಿಷೇಧ ಮಾಡಿದೆ. ಆಂತರಿಕ ಮತ್ತು ಬಾಹ್ಯ ಭದ್ರತೆಯ ತೊಂದರೆಯಾಗಬಹುದು ಎಂಬ ದೃಷ್ಠಿಯಿಂದ ಈ ನಿರ್ಣಯವನ್ನು ಕೈಗೊಂಡಿದೆ. ಹಾಗಾಗಿ ಇದೀಗ ನರೇಂದ್ರ ಮೋದಿ ಅವರು ಆತ್ಮನಿರ್ಭಾರ್​​​ ಭಾರತ್​​​ ಕಾರ್ಯಕ್ರಮದ ಮೂಲಕ ದೇಶಿಯ ಆ್ಯಪ್​​ಗಳನ್ನು ಅಭಿವೃದ್ಧಿ ಪಡಿಸುವಂತೆ ಕರೆ ನೀಡಿದ್ದಾರೆ.

ಈ ವಿಚಾರವಾಗಿ ಮೋದಿ ಅವರು ತಮ್ಮ ಲಿಂಕ್ಡ್​ಇನ್​​ನಲ್ಲಿ ವಿಚಾರವಾಗಿ ಹಂಚಿಕೊಂಡಿದ್ದಾರೆ. ಜೊತೆಗೆ ಆ್ಯಪ್​ ಸಿದ್ಧಪಡಿಸಿದವರಿಗೆ 2 ಲಕ್ಷ ರೂ. ಯಿಂದ 20 ಲಕ್ಷ ವರೆಗೆ ಬಹುಮಾನ ಸಿಗಲಿದೆ.

 




ಇನ್ನೂ ಆಸಕ್ತಿದಾಯಕ ಆ್ಯಪ್​ ಡೆವಲಪರ್ಸ್​​​ ಹೊಸ ಆ್ಯಪ್​ಗಳನ್ನು ಅಭಿವೃದ್ಧಿ ಪಡಿಸಲು ಇದೊಂದು ವೇದಿಕೆಯಾಗಿದೆ. ಇದರಲ್ಲಿ  ಸೋಶಿಯಲ್​ ನೆಟ್​ವರ್ಕ್​, ಇ-ಲರ್ನಿಂಗ್​, ಹೆಲ್ತ್​​​​​, ಬ್ಯುಸಿನೆಸ್​, ನ್ಯೂಸ್​​, ಗೇಮ್ಸ್​​ ವಿಭಾಗಗಳಿವೆ. innovate.mygov.in ವೆಬ್​ಸೈಟ್​ಗೆ ತೆರಳಿ ಆ್ಯಪ್​ ಕುರಿತ ಮಾಹಿತಿ ಪಡೆಯಬಹುದಾಗಿದೆ.

 
Published by: Harshith AS
First published: July 4, 2020, 10:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading