PM Kisan Samman Nidhi Yojana app: ಸರ್ಕಾರವು ರೈತರಿಗೆ ಕನಿಷ್ಠ ವಾರ್ಷಿಕ ಆದಾಯವನ್ನು ಖಾತ್ರಿಪಡಿಸುವ ಸಲುವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎಂಬ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. 2019 ರಲ್ಲಿ ಪಿಎಂ ಕಿಸಾನ್ ಯೋಜನೆ ಅಪ್ಲಿಕೇಶನ್ ಪರಿಚಯಿಸಿದಾಗಿನಿಂದ, ಅರ್ಹ ರೈತರಿಗೆ ಕನಿಷ್ಠ ಆದಾಯವಾಗಿ ವರ್ಷಕ್ಕೆ 6,000 ರೂ ಆದಾಯದ ಭರವಸೆ ನೀಡುತ್ತಿದೆ. ಮೊತ್ತವನ್ನು ಮೂರು ಕಂತುಗಳಲ್ಲಿ ಪಾವತಿಸಲಾಗುತ್ತದೆ ಮತ್ತು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಇಲ್ಲಿಯವರೆಗೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಬಹಳಷ್ಟು ರೈತರಿಗೆ ಪ್ರಯೋಜನ ಸಿಕ್ಕಿದೆ. ನೀವು ಕೂಡ ರೈತರಾಗಿದ್ದು, ಈ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದರೆ, ನಿಮ್ಮ ಸ್ಮಾರ್ಟ್ಫೋನ್ ಮೂಲಕ ಅಧಿಕೃತ PM ಕಿಸಾನ್ ಯೋಜನೆ ಆಪ್ ಅನ್ನು ಡೌನ್ಲೋಡ್ ನೋಂದಣಿ ಮಾಡಬಹುದಾಗಿದೆ.
ಭಾರತ ಸರ್ಕಾರವು ಗೂಗಲ್ ಪ್ಲೇ ಸ್ಟೋರ್ನಲ್ಲಿ PM ಕಿಸಾನ್ ಯೋಜನೆ ಆಪ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಬಳಸುವ ಆಯ್ಕೆಯನ್ನು ನಿಡಿದೆ. ಇದರ ಮೂಲಕ ರೈತರು ನೋಂದಾಯಿಸಿಕೊಳ್ಳುವುದರ ಮೂಲಕ ಪ್ರಯೋಜನವನ್ನು ಪಡೆಬಹುದಾಗಿದೆ.
PM Kisan app:
ಅರ್ಹ ಮತ್ತು ಬಡ ರೈತರಿಗೆ PM ಕಿಸಾನ್ ಆಪ್ ಸೇವೆಗೆ ನೋಂದಾಯಿಸಲು ಮತ್ತು ಎಲ್ಲಾ ವಿವರಗಳ ಮೇಲೆ ಟ್ಯಾಬ್ ಇರಿಸಿಕೊಳ್ಳಲು ಅನುಮತಿಸುತ್ತದೆ. ರೈತರು ತಮ್ಮ ಸ್ಮಾರ್ಟ್ಫೋನ್ಗಳಿಂದ ನೇರವಾಗಿ ಸೇವೆಗೆ ನೋಂದಾಯಿಸಿಕೊಳ್ಳಲು ಅನುಮತಿಸುತ್ತದೆ.
ಪಿಎಂ ಕಿಸಾನ್ ಆ್ಯಪ್ ಮೂಲಕ ಸ್ಕೀಮ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳ ಬಹುದಾಗಿದೆ ಮತ್ತು ಅದರಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದು, ತ್ವರಿತವಾಗಿ ಪ್ರವೇಶಿಸಲು ಆಪ್ ಸದಸ್ಯರಿಗೆ ಅವಕಾಶ ನೀಡುತ್ತದೆ.
ಹತ್ತಿರದ ಪೋಸ್ಟ್ ಆಫೀಸ್ CSC ಕೌಂಟರ್ ಮತ್ತು ಅಧಿಕೃತ ವೆಬ್ಸೈಟ್ ಮೂಲಕವೂ ನೋಂದಣಿ ಮಾಡಬಹುದಾಗಿದೆ.
ಇದನ್ನು ಓದಿ ⇒ Redmi Smart TV | ಇಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ರೆಡ್ಮಿ ಟಿವಿ; ಬೆಲೆ, ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ
PM ಕಿಸಾನ್ ಅಪ್ಲಿಕೇಶನ್ ನೋಂದಣಿ ಪ್ರಕ್ರಿಯೆ:
- Google Play Store ಗೆ ಹೋಗಿ ಮತ್ತು PMKISAN GoI ಎಂದು ಟೈಮ್ ಮಾಡಿ ಹುಡುಕಿ. ಪತ್ತೆಯಾದ ನಂತರ, ಅದನ್ನು ಡೌನ್ಲೋಡ್ ಮಾಡಿ.
- ಅಪ್ಲಿಕೇಶನ್ ತೆರೆಯಿರಿ ಮತ್ತು ಹೊಸ ರೈತ ನೋಂದಣಿಯ ಮೇಲೆ ಕ್ಲಿಕ್ ಮಾಡಿ.
- ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕು. ನಂತರ " Continue " ಕ್ಲಿಕ್ ಮಾಡಿ.
- ಮುಂದಿನ ಹಂತವು ನಿಮ್ಮ ಹೆಸರು, ವಿಳಾಸ, ಬ್ಯಾಂಕ್ ಖಾತೆ ವಿವರಗಳು, IFSC ಕೋಡ್ ಮತ್ತು ಇತರ ಅಗತ್ಯ ವಿವರಗಳನ್ನು ನಮೂದಿಸಬೇಕು.
- ಎಲ್ಲಾ ಮಾಹಿತಿಗಳನ್ನು ಪೂರ್ತಿ ಮಾಡಿ ಭರ್ತಿ ಮಾಡಿದ ನಂತರ ‘‘submit‘‘ ಬಟನ್ ಕ್ಲಿಕ್ ಮಾಡಿ. ಇವಿಷ್ಟು ಆದರೆ ಕಿಸಾನ್ ಸಮ್ಮಾನ್ ನಿಧಿ ಯೋಜನಯ ನೋಂದಣಿ ಪೂರ್ಣಗೊಳ್ಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ