• Home
  • »
  • News
  • »
  • tech
  • »
  • Facebook Update: ಅಪ್ಪಿತಪ್ಪಿಯೂ ಫೇಸ್​ಬುಕ್​ನಲ್ಲಿ ಬಯೋ ಈ ರೀತಿ ಹಾಕ್ಬೇಡಿ! ಡಿಸೆಂಬರ್ 1 ರಿಂದ ನಿಯಮ ಜಾರಿ

Facebook Update: ಅಪ್ಪಿತಪ್ಪಿಯೂ ಫೇಸ್​ಬುಕ್​ನಲ್ಲಿ ಬಯೋ ಈ ರೀತಿ ಹಾಕ್ಬೇಡಿ! ಡಿಸೆಂಬರ್ 1 ರಿಂದ ನಿಯಮ ಜಾರಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇದು ಫೇಸ್​ಬುಕ್​ ಪರಿಚಯಿಸುತ್ತಿರುವ ಹೊಸ ಫೀಚರ್ಸ್​ ಆಗಿದೆ. ಇದರಿಂದ ಇನ್ಮುಂದೆ ಬಳಕೆದಾರರು ತಮ್ಮ ಪ್ರೊಫೈಲ್​ ಬಯೋದಲ್ಲಿ ಧಾರ್ಮಿಕ ಮಾಹಿತಿ, ರಾಜಕೀಯ ವಿಷಯ, ವಿಳಾಸ, ಮತ್ತು ಆಸಕ್ತಿಗಳನ್ನು ಸೂಚಿಸುವ ವಿಷಯಗಳನ್ನು ಹಾಕಿದ್ದರೆ ಸ್ವಯಂಚಾಲಿತವಾಗಿ ತೆಗೆದುಹಾಕುವ ಕ್ರಮಕ್ಕೆ ಫೇಸ್‌ಬುಕ್ ಸಂಸ್ಥೆ ನಿಯಮವನ್ನು ಜಾರಿ ಮಾಡಿದೆ.

ಮುಂದೆ ಓದಿ ...
  • Share this:

    ಇತ್ತೀಚೆಗೆ ಸೋಷಿಯಲ್​ ಮೀಡಿಯಾಗಳು ತನ್ನ ಅಸ್ಥಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಹಕರಿಕೆ ಏನಾದರೊಂದು ಅಪ್​​ಡೇಟ್​ಗಳನ್ನು ಮಾಡುತ್ತಲೇ ಇದೆ. ಆದರೆ ಕೆಲವೊಂದು ಫೀಚರ್ಸ್​ಗಳು ಕೆಲವೊಬ್ಬರಿಗೆ ಇಷ್ಟವಾಗ್ಬಹುದು ಅಥವಾ ಆಗದೆಯೂ ಇರಬಹುದು. ಆದರೆ ಈಗ ಮೆಟಾ ಒಡೆತನದಲ್ಲಿರುವ ವಾಟ್ಸಪ್, ಫೇಸ್​ಬುಕ್ ಕಂಪನಿಗಳು ದಿನದಿಂದ ದಿನಕ್ಕೆ ತನ್ನ ಅಪ್ಲಿಕೇಶನ್​ನಲ್ಲಿ ಅಪ್​​ಡೇಟ್​ ಅನ್ನು ಮಾಡುತ್ತಲೇ ಇದೆ. ವಾಟ್ಸಪ್ ಇತ್ತೀಚೆಗೆ ಡು ನಾಟ್ ಡಿಸ್ಟರ್ಬ್​ ಮೋಡ್, ಲಾಸ್ಟ್​ ಸೀನ್​ ಅಪ್​​ಡೇಟ್​ ಮಾಡಿತ್ತು. ಅದೇ ರೀತಿ ಈಗ ಫೇಸ್​ಬುಕ್​ನಲ್ಲೊಂದು ಹೊಸ ನಿಯಮ ಜಾರಿಗೆ ಬರುತ್ತಿದೆ. ಇದು ಡಿಸೆಂಬರ್ 1 ರಿಂದ ಪ್ರಾರಂಭವಾಗಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.


    ಇದು ಫೇಸ್​ಬುಕ್​ ಪರಿಚಯಿಸುತ್ತಿರುವ ಹೊಸ ಫೀಚರ್ಸ್​ ಆಗಿದೆ. ಇದರಿಂದ ಇನ್ಮುಂದೆ ಬಳಕೆದಾರರು ತಮ್ಮ ಪ್ರೊಫೈಲ್​ ಬಯೋದಲ್ಲಿ ಧಾರ್ಮಿಕ ಮಾಹಿತಿ, ರಾಜಕೀಯ ವಿಷಯ, ವಿಳಾಸ, ಮತ್ತು ಆಸಕ್ತಿಗಳನ್ನು ಸೂಚಿಸುವ ವಿಷಯಗಳನ್ನು ಹಾಕಿದ್ದರೆ ಸ್ವಯಂಚಾಲಿತವಾಗಿ ತೆಗೆದುಹಾಕುವ ಕ್ರಮಕ್ಕೆ ಫೇಸ್‌ಬುಕ್ ಸಂಸ್ಥೆ ನಿಯಮವನ್ನು ಜಾರಿ ಮಾಡಿದೆ.


    ಫೇಸ್​ಬುಕ್​ನಲ್ಲಿನ ಹೊಸ ಬದಲಾವಣೆ:


    ಫೇಸ್‌ಬುಕ್‌ ಅಪ್ಲಿಕೇಶನ್ ನಲ್ಲಿ ಹೊಸದೊಂದು ಬದಲಾವಣೆಯೊಂದನ್ನು ತರಲಾಗುತ್ತಿದ್ದು, ಖಾಸಗಿ ಮತ್ತು ದೃಷ್ಟಿಕೋನಗಳುಳ್ಳ ಮಾಹಿತಿಗಳನ್ನು ಭರ್ತಿ ಮಾಡಿದ ಜನರಿಗೆ ನಾವು ನೋಟಿಫಿಕೇಶನ್ ಅನ್ನು ಕಳುಹಿಸುತ್ತೇವೆ, ಈ ನೋಟಿಫಿಕೇಶನ್​​ನಲ್ಲಿ ಈ ಮಾಹಿತಿಯನ್ನು ತೆಗೆದುಹಾಕಲಾಗುವುದು ಎಂದು ಅವರಿಗೆ ಮಾಹಿತಿ ನೀಡುತ್ತೇವೆ ಎಂದು ಫೇಸ್‌ಬುಕ್ ಸಂಸ್ಥೆಯ ತಂತ್ರಜ್ಞರು ತಿಳಿಸಿದ್ದಾರೆ.


    ಇದನ್ನೂ ಓದಿ: RIP ಅಂತ ಟ್ವೀಟ್ ಮಾಡಿದ ಎಲಾನ್ ಮಸ್ಕ್! ಮುಗಿದೇ ಹೋಯ್ತಾ ಟ್ವಿಟರ್ ಕಥೆ?


    ಈ ನಿಯಮದ ಉದ್ದೇಶ:


    ಫೇಸ್​ಬುಕ್​ನ ವರದಿಯ ಪ್ರಕಾರ ಈ ಧರ್ಮ, ರಾಜಕೀಯ, ವಿಳಾಸ ಮತ್ತು ತಮ್ಮ ಆಸಕ್ತಿಗಳನ್ನು ಹಂಚಿಕೊಳ್ಳುವ ವಿಷಯಗಳು ಅನವಶ್ಯಕವಾದ ವಿಚಾರಗಳಾಗಿವೆ. ಆದ್ದರಿಂದ ಈ ಎಲ್ಲಾ ಬದಲಾವಣೆಗಳನ್ನು ಮಅಡುವ ನಿಟ್ಟಿನಲ್ಲಿ ಫೇಸ್​ಬುಕ್​ ಕೂಡ ತನ್ನನ್ನು ತಾನು ಅಪ್ಡೇಟ್ ಮಾಡಿಕೊಂಡು ಬಳಕೆದಾರರ ಯೋಚನೆಯನ್ನು ಬದಲಾಯಿಸಲು ಪ್ರಯತ್ನಿಸಿದೆ.


    ಆದರೆ, ಫೇಸ್‌ಬುಕ್ ಸಂಸ್ಥೆಯ ವಕ್ತಾರರು ಹೇಳುವಂತೆ, ಈ ಹೊಸ ಬದಲಾವಣೆಯು ಫೇಸ್‌ಬುಕ್ ಅಪ್ಲಿಕೇಶನ್ ನ್ಯಾವಿಗೇಟ್ ಮಾಡಲು ಮತ್ತು ಬಳಸಲು ಸುಲಭಗೊಳಿಸುವ ನಮ್ಮ ಪ್ರಯತ್ನಗಳ ಭಾಗವಾಗಿದೆ ಎಂದಷ್ಟೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


    ಕೆಲವೊಂದು ವಿಚಾರಗಳು ಮಾತ್ರ ಹಾಕುವಂತಿಲ್ಲ:


    ಫೇಸ್‌ಬುಕ್ ಫ್ರೊಫೈಲ್ ಬಯೋ‌ದಲ್ಲಿ ಹೊಸ ಬದಲಾವಣೆಯು ಇದೇ ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ. ಪ್ರೊಫೈಲ್‌ನಿಂದ ಇಂತಹ ಮಾಹಿತಿಯನ್ನು ತೆಗೆಯುವುದರಿಂದ ಖಾತೆಯ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಎಂದು ಫೇಸ್‌ಬುಕ್ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ನಾವು ಕೆಲವು ಪ್ರೊಫೈಲ್ ಕ್ಷೇತ್ರಗಳನ್ನು ತೆಗೆದುಹಾಕುತ್ತಿದ್ದೇವೆ. ಈ ಬದಲಾವಣೆಗಳಲ್ಲಿ ಆಸಕ್ತಿ, ಧಾರ್ಮಿಕ , ರಾಜಕೀಯ ಮತ್ತು ವಿಳಾಸಗಳು ಸೇರಿವೆ.  ಈ ವಿಷಯಗಳನ್ನು ಬಿಟ್ಟು ಬೇರೆ ಯಾವುದೇ ವಿಷಯಗಳನ್ನು ನಿಮ್ಮ ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.


    ಇನ್ಸ್ಟಾಗ್ರಾಮ್​, ಟ್ವಿಟರ್​​ನಂತೆ ಅಲ್ಲ ಇನ್ಮುಂದೆ ಫೇಸ್​ಬುಕ್:


    ಇನ್ಸ್ಟಾಗ್ರಾಮ್​ ಮತ್ತು ಟ್ವಿಟರ್​ನಲ್ಲಿ ಬಳಕೆದಾರರು ತಮ್ಮ ಪ್ರೊಫೈಲ್​ನಲ್ಲಿ ಬಯೋ ಹಾಕಬೇಕಿದ್ದರೆ ಇಂತಿಷ್ಟು ಮತ್ತು ಸರಳವಾಗಿ ಮಾತ್ರ ಹಾಕಲು ಅವಕಾಶವಿತ್ತು. ಈ ಪ್ಲಾಟ್​ಫಾರ್ಮ್​ಗಳಲ್ಲಿ ಬಳಕೆದಾರರು ರಾಜಕೀಯ ಅಥವಾ ಧಾರ್ಮಿಕ ವಿಷಯಗಳ ನಿರ್ದಿಷ್ಟ ವಿವರಗಳನ್ನು ನೀಡದೆ ತಮ್ಮ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಲುವ ಅವಕಾಶವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫೇಸ್​ಬುಕ್ ಈ ವಿಚಾರಗಳಲ್ಲಿ ಕೆಲವೊಂದು ಚರ್ಚೆಗಳಿಗೆ ಅವಕಾಶವನ್ನು ನೀಡುತ್ತಿದೆ. ಆದ್ದರಿಂದ ಈ ಎಲ್ಲ ಅಪವಾದಗಳಿಂದ ಮುಕ್ತವಾಗಲು ಫೇಸ್​ಬುಕ್​ ತನ್ನ ಅಸ್ಥಿತ್ವದಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ಇದರ ಸಂಪೂರ್ಣ ಮಾಹಿತಿ ಇನ್ನು ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ.

    Published by:Prajwal B
    First published: