• Home
 • »
 • News
 • »
 • tech
 • »
 • WhatsApp Ban: ನೀವು ವಾಟ್ಸಾಪ್ ಬಳಸುವಾಗ ಹೀಗೆಲ್ಲಾ ಮಾಡ್ತೀರಾ? ಹಾಗಿದ್ರೆ ಬ್ಲಾಕ್ ಆಗಬಹುದು ಹುಷಾರ್!

WhatsApp Ban: ನೀವು ವಾಟ್ಸಾಪ್ ಬಳಸುವಾಗ ಹೀಗೆಲ್ಲಾ ಮಾಡ್ತೀರಾ? ಹಾಗಿದ್ರೆ ಬ್ಲಾಕ್ ಆಗಬಹುದು ಹುಷಾರ್!

ವಾಟ್ಸಾಪ್ ಬಳಕೆದಾರರೇ ಹುಷಾರ್

ವಾಟ್ಸಾಪ್ ಬಳಕೆದಾರರೇ ಹುಷಾರ್

ವಾಟ್ಸಾಪ್ ಸಂಸ್ಥೆ ಹೇಳುವಂತೆ, "ಉದ್ದೇಶಪೂರ್ವಕವಾಗಿ, ಕಂಪನಿಯ ನಿಯಮಗಳನ್ನು ಉಲ್ಲಂಘಿಸುವ ಚಟುವಟಿಕೆಯನ್ನು ಒಳಗೊಂಡಿರುವ ಖಾತೆಗಳನ್ನು ನಿಷೇಧಿಸುವ ಅಪಾಯವಿದೆ. ಹಾಗಾಗಿ ನೀವು ಬಳಸುವಾಗ ಹುಷಾರ್!

 • Share this:

  ವಾಟ್ಸಾಪ್ ಸಂಸ್ಥೆ (WhatsApp Company) ಹೇಳುವಂತೆ, "ಉದ್ದೇಶಪೂರ್ವಕವಾಗಿ, ಕಂಪನಿಯ ನಿಯಮಗಳನ್ನು(Company Rules) ಉಲ್ಲಂಘಿಸುವ ಚಟುವಟಿಕೆಯನ್ನು ಒಳಗೊಂಡಿರುವ ಖಾತೆಗಳನ್ನು(Account) ನಿಷೇಧಿಸುವ (Ban) ಅಪಾಯವಿದೆ. ಅಸಹಜ ನಡವಳಿಕೆಯಲ್ಲಿ ತೊಡಗಿರುವ ವಾಟ್ಸಾಪ್ ಖಾತೆಗಳನ್ನು(Whats App Account) ಗುರುತಿಸಲು ಮತ್ತು ಕ್ರಮ ತೆಗೆದುಕೊಳ್ಳಲು ವಾಟ್ಸಾಪ್ ಸ್ಪ್ಯಾಮ್ ಪತ್ತೆ ತಂತ್ರಜ್ಞಾನವನ್ನು ಬಳಸುತ್ತದೆ. ಆದ್ದರಿಂದ, ನೀವು ಹಲವಾರು "ಗುಡ್ ಮಾರ್ನಿಂಗ್" ಸಂದೇಶಗಳನ್ನು ಫಾರ್ವರ್ಡ್ (Forward) ಮಾಡಿದರೂ ಸಹ, ನಿಮ್ಮ ವಾಟ್ಸಾಪ್ ಖಾತೆಯನ್ನು ಬ್ಯಾನ್ ಮಾಡುವ ಅಪಾಯವಿದೆ. ಹಾಗಾದರೆ, ನಿಮ್ಮ ವಾಟ್ಸಾಪ್ ಖಾತೆಯನ್ನು ಬ್ಯಾನ್ (Ban) ಆಗದಂತೆ ತಡೆಯಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ.


  ಅಕ್ರಮ, ಅಶ್ಲೀಲ, ಮಾನಹಾನಿಕರ ಮತ್ತು ಬೆದರಿಕೆ ಸಂದೇಶದ ಬಗ್ಗೆ ವಾಟ್ಸಾಪ್ ನಲ್ಲಿ ಯೋಚಿಸಲೇ ಬೇಡಿ


  ವಾಟ್ಸಾಪ್ ಪ್ರಕಾರ, ನೀವು ಅಶ್ಲೀಲ, ಅಕ್ರಮ, ಅನಗತ್ಯ, ಬೆದರಿಕೆ ಮತ್ತು ಮಾನಹಾನಿಕಾರಕ ಸಂದೇಶಗಳನ್ನು ಕಳುಹಿಸುವಂತಿಲ್ಲ. ಕಳುಹಿಸಿದರೆ ನಿಮ್ಮ ಆಕೌಂಟ್ ಬ್ಯಾನ್ ಆಗುವುದು ಪಕ್ಕಾ


   ಹಿಂಸಾಚಾರಕ್ಕೆ ಪ್ರಚೋದನೆ ನಿಡುವಂತಿಲ್ಲ


  ಯಾವುದೇ ರೀತಿಯ ಹಿಂಸಾಕೃತ್ಯಗಳಿಗೆ ಪ್ರಚೋದನೆ ನೀಡುವ ಪೋಸ್ಟ್ ಅನ್ನು ನೀವು ತಯಾರಿಸಿದರೆ ಅಥವಾ ಹಂಚಿಕೊಂಡರೆ ಮತ್ತು ಶೇರ್ ಮಾಡಲು ಮುಂದಾದ್ರೆ ನಿಮ್ಮ ಖಾತೆ ಬ್ಲಾಕ್ ಆಗಬಹುದು.


  ಇದನ್ನೂ ಓದಿ: WhatsApp ಬಳಕೆದಾರರಿಗೆ ಬ್ಯಾಡ್ ನ್ಯೂಸ್, ದೀಪಾವಳಿಯಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪ್​ ಬಂದ್!


  ನಕಲಿ ಖಾತೆ ಮಾಡುವಂತಿಲ್ಲ


  ಇನ್ನೊಬ್ಬರ ಹೆಸರಿನಲ್ಲಿ ನಕಲಿ ಖಾತೆ ತಯಾರಿಸಬೇಡಿ. ಯಾರದೋ ಫೋಟೋ ವಾಟ್ಸಾಪ್ ಡಿಪಿ, ಹೆಸರು ಬಳಸಿಕೊಂಡು ಇನ್ನೊಬ್ಬರ ಹೆಸರಿನಲ್ಲಿ ನೀವು ವಾಟ್ಸಾಪ್ ಬಳಸುವುದು ಮಾಡಿದರೆ. ಇದಕ್ಕೆ ಸೂಕ್ತ ಕ್ರಮವನ್ನು ವಾಟ್ಸಪ್ ಕೈಗೊಳ್ಳುತ್ತದೆ.


  ಗುರುತು ಪರಿಚಯ ಇಲ್ಲದವರಿಗೆ ಸಂದೇಶ ಕಳುಹಿಸಬೇಡಿ


  ನಿಮ್ಮ ಕಾಂಟಾಕ್ಟ್‌ನಲ್ಲಿ ಇಲ್ಲದೇ ಇರುವವರಿಗೆ, ಯಾವುದೇ ಗುರುತು ಪರಿಚಯವೇ ಇಲ್ಲದ ವ್ಯಕ್ತಿಗೆ ನೀವು ಅನಗತ್ಯವಾಗಿ ವಾಟ್ಸಪ್ ಮೂಲಕ ಮೆಸೇಜ್ ಕಳುಹಿಸುವುದು, ಕಿರಿಕಿರಿ ಉಂಟುಮಾಡುವುದು, ಪದೇಪದೇ ಮೆಸೇಜ್, ವಾಟ್ಸಪ್ ಕಾಲ್ ಮಾಡುವುದು ಕೂಡ ನಿಮಗೆ ಸಮಸ್ಯೆ ತರುತ್ತದೆ.


  ವಾಟ್ಸಾಪ್ ಪ್ಲಸ್ ಬಳಕೆ ಮಾಡ್ತಿರಾ?


  ವಾಟ್ಸಾಪ್ ಪ್ಲಸ್ ಎನ್ನುವ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಕೆ, ವಾಟ್ಸಾಪ್ ಗೋಲ್ಡ್, ವಾಟ್ಸಾಪ್ ಪ್ರೊ ಎನ್ನುವ ಅಪ್ಲಿಕೇಶನ್ ಬಳಕೆ ಕೂಡ ನಿಯಮಕ್ಕೆ ವಿರುದ್ಧವಾಗಿದೆ. ವಾಟ್ಸಾಪ್ ಮತ್ತು ವಾಟ್ಸಾಪ್ ಬಿಜಿನೆಸ್ ಎನ್ನುವ ಎರಡು ಅಪ್ಲಿಕೇಶನ್ ಹೊರತುಪಡಿಸಿ, ಬೇರಾವುದೇ ಅಪ್ಲಿಕೇಶನ್ ಅನ್ನು ವಾಟ್ಸಾಪ್ ಹೊಂದಿಲ್ಲ. ಈ ಬಗ್ಗೆ ಕಂಪನಿ ಕೂಡ ಅಧಿಕೃತವಾಗಿ ತಿಳಿಸಿದೆ. ಹೀಗಾಗಿ ವಾಟ್ಸಾಪ್ ಹೆಸರಿನ ನಕಲಿ ಮತ್ತು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಕೆ ಸಮಸ್ಯೆ ಸೃಷ್ಟಿಸಬಹುದು.


  ನಿಮ್ಮನ್ನುಯಾರಾದರೂ ಬ್ಲಾಕ್ ಮಾಡಿದ್ದಾರಾ?


  ನಿಮ್ಮ ವಾಟ್ಸಾಪ್ ಖಾತೆ ಕುರಿತು ಹಲವರು ಜನ ರಿಪೋರ್ಟ್‌ ಮಾಡಿದ್ದರೆ, ಅಥವಾ ಬಹಳಷ್ಟು ಮಂದಿ ನಿಮ್ಮನ್ನು ವಾಟ್ಸಾಪ್‌ನಲ್ಲೂ ಬ್ಲಾಕ್ ಮಾಡಿದ್ದರೆ, ನಿಮ್ಮ ಖಾತೆಯ ವಿರುದ್ಧ ವಾಟ್ಸಾಪ್ ಸೂಕ್ತ ಕ್ರಮ ಕೈಗೊಳ್ಳಬಹುದು. ನಿಮ್ಮ ಖಾತೆಯನ್ನೇ ಬ್ಯಾನ್ ಮಾಡುವ ಅಧಿಕಾರ ವಾಟ್ಸಾಪ್‌ಗಿದೆ. ಹಾಗಾಗಿ ಎಚ್ಚರವಹಿಸಿ.


  ನಿಮ್ಮ ವಿರುದ್ಧ ದೂರು ಬಂದರೆ ನಿಮ್ಮ ಕಥೆ  ಮುಗಿಯಿತು   


  ವಾಟ್ಸಪ್ ಖಾತೆಯ ಮೂಲಕ ನೀವು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದರೆ, ಅಥವಾ ನಿಮ್ಮ ವಿರುದ್ಧ ವಾಟ್ಸಪ್ ಬಳಕೆದಾರರು ದೂರು ದಾಖಲಿಸಿದ್ದರೆ, ಅಂತಹ ದೂರನ್ನು ವಾಟ್ಸಪ್ ಪರಿಶೀಲಿಸುತ್ತದೆ. ನಿಮ್ಮ ಖಾತೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತದೆ.


   ವಾಟ್ಸಾಪ್ ಕೋಡ್ ತಿದ್ದುವ ಕೆಲಸ ಮಾಡಬೇಡಿ


  ವಾಟ್ಸಾಪ್‌ ಕೋಡ್ ಅನ್ನು ತಿದ್ದುವ ಅಥವಾ ಬದಲಾಯಿಸುವ ಕೆಲಸ  ಮಾಡಿದ್ರೆ. ಕೋಡ್ ತೆಗೆದು ಅದನ್ನು ದುರುದ್ದೇಶಕ್ಕೆ ಬಳಸುವ, ರಿವರ್ಸ್ ಇಂಜಿನಿಯರ್ ಹೀಗೆ ಸಮ್ಮತವಲ್ಲದ ಕೆಲಸ ಮಾಡಿದರೆ, ವಾಟ್ಸಾಪ್ ನಿಯಮಕ್ಕೆ ವಿರುದ್ಧವಾಗಿದ್ದು, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು.


  ಇದನ್ನೂ ಓದಿ: Facebook: ಈ ಆ್ಯಪ್ಸ್ ನಿಮ್ ಮೊಬೈಲ್​ನಲ್ಲಿದ್ರೆ ತಕ್ಷಣ ಡಿಲೀಟ್ ಮಾಡಿ! ಫೇಸ್ಬುಕ್ ಸೆಕ್ಯುರಿಟಿ ಅಲರ್ಟ್ 


  ವಾಟ್ಸಾಪ್ ಸರ್ವರ್ ಹ್ಯಾಕ್ ಮಾಡಲು ಯತ್ನಿಸಬೇಡಿ


  ವಾಟ್ಸಾಪ್‌ನ ಸರ್ವರ್‌ ಅನ್ನು ಹ್ಯಾಕ್ ಮಾಡಲು ಯತ್ನಿಸಿದರೆ, ಅಥವಾ  ಮತ್ತೊಬ್ಬರ    ಖಾತೆಯನ್ನು ಹ್ಯಾಕ್ ಮಾಡಿ ಅವರ ಮಾಹಿತಿಯನ್ನು ಕದಿಯಲು ನಿಮಗೆ ವಾಟ್ಸಾಪ್ ನಿಯಮದ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

  Published by:Harshith AS
  First published: