Google Maps ಮೂಲಕ ಹತ್ತಿರದ ಮಾರುಕಟ್ಟೆಯಲ್ಲಿ ಜನಸಂದಣಿ ಇದ್ಯಾ ಅಂತನೂ ಇನ್ಮುಂದೆ ಪತ್ತೆ ಹಚ್ಚಬಹುದು

ಹೌದು ಸ್ನೇಹಿತರೇ ಗೂಗಲ್‌ ಮ್ಯಾಪ್‌(Google Maps) ನಿಮ್ಮ ಶಾಂಪಿಂಗ್‌ ಸಮಯವನ್ನು ಉಳಿಸಲು ಹಾಗೂ ಹೆಚ್ಚಿನ ಜನಸಂದಣಿಯಿಂದ ದೂರವಿಡುವ ಸಲುವಾಗಿ ಈ ಹೊಸ ಮಾರ್ಗವನ್ನು ಪರಿಚಯಿಸುತ್ತಿದೆ.

ಗೂಗಲ್‌ ಮ್ಯಾಪ್‌

ಗೂಗಲ್‌ ಮ್ಯಾಪ್‌

 • Share this:
  ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಿಗೆ ಹೋದರೂ, ನಮ್ಮ ಜೊತೆ ಮೊಬೈಲ್‌ (mobile) ಕೂಡ ಇದ್ದ ಇರುತ್ತೆ, ಮೊಬೈಲ್‌ ಇಲ್ಲದೇ ನಾವಿಲ್ಲ ಅನ್ನುವ ಮಟ್ಟಿಗೆ ನಾವಿಂದು ಬದುಕುತ್ತಿದ್ದೇವೆ. ಇನ್ನು ಮೊಬೈಲ್‌ ನಲ್ಲಿರುವ ಅನೇಕ ಆಪ್‌ ಗಳು ನಮ್ಮ ಒಡನಾಡಿಯಾಗಿಬಿಟ್ಟಿದೆ. ಅದರಲ್ಲೂ ಗೂಗಲ್‌ ಮ್ಯಾಪ್‌(Google Maps) ಇದ್ದರೇ ಸಾಕು ಇಡೀ ಪ್ರಪಂಚವನ್ನು ನಿಂತಲ್ಲೇ ಸುತ್ತಿ ಬಂದುಬಿಡುತ್ತೇವೆ. ಹೌದು ಗೂಗಲ್‌ ಮ್ಯಾಪ್‌ ನಿಂದ ಸಾಕಷ್ಟು ಉಪಯೋಗಗಳನ್ನು ನಾವು ಪಡೆದುಕೊಳ್ಳುತ್ತಿದ್ದೇವೆ. ಗೂಗಲ್‌ ಮ್ಯಾಪ್‌ ಇರುವುದರಿಮದ ಇತರರನ್ನು ವಿಳಾಸ(address) ಕೇಳಿ ಮಾರ್ಗ ಹುಡುಕಬೇಕಾದ ಅನಿವಾರ್ಯತೆ ಕೂಡ ತಪ್ಪಿದೆ. ಇನ್ನು ಗೂಗಲ್‌ ಮ್ಯಾಪ್‌ ಅನ್ನು ಬಳಸಿ ಪ್ರಯಾಣಿಸಿದರೆ ನಿಮ್ಮ ಪ್ರಯಾಣದ ಸಮಯ ಕೂಡ ಉಳಿತಾಯವಾಗಲಿದೆ. ಸಾಧ್ಯವಾದಷ್ಟು ವೇಗವಾಗಿ ಸಾಗುವ ಮಾರ್ಗಗಳನ್ನ ಗೂಗಲ್‌ ಮ್ಯಾಪ್‌ ತೊರಿಸುವುದರಿಂದ ಇದು ಸಾಧ್ಯವಾಗಿದೆ. ಇನ್ನು ಗೂಗಲ್‌ ಮ್ಯಾಪ್‌ ಕೂಡ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೆ(introduced) ಇರುತ್ತದೆ. ಈಗ ಅದಕ್ಕೆ ಸೆರ್ಪಡೆ ಎಂದರೆ ನಿಮ್ಮ ಹತ್ತಿರದ ಯಾವ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಜನಸಂದಣಿ (planning to visit is crowded or not) ಇದೆ ಎಂಬುದರ ಬಗ್ಗೆ ಮಾಹಿತಿ ನೀಡುವ ಹೊಸ ಫೀಚರ್ಸ್‌ ನ್ನು ಪರಿಚಯಿಸುತ್ತಿದೆ.

  ಜನಜಂಗಳಿಯಿಂದ ಮುಕ್ತಿ
  ಹೌದು ಸ್ನೇಹಿತರೇ ಗೂಗಲ್‌ ಮ್ಯಾಪ್‌(Google Maps) ನಿಮ್ಮ ಶಾಂಪಿಂಗ್‌ ಸಮಯವನ್ನು ಉಳಿಸಲು ಹಾಗೂ ಹೆಚ್ಚಿನ ಜನಸಂದಣಿಯಿಂದ ದೂರವಿಡುವ ಸಲುವಾಗಿ ಈ ಹೊಸ ಮಾರ್ಗವನ್ನು ಪರಿಚಯಿಸುತ್ತಿದೆ. (introduced) ಕೋವಿಡ್‌ -19 ರ(covid-19) ಪರಿಸ್ಥಿತಿಯಲ್ಲಿ ಜನರು  ಜನಸಂದಣಿ ಇರುವ ಜಾಗಗಳಿಗೆ ಭೇಟಿ ನೀಡಲು ಇಂದಿಗೂ ಕೊಂಚ ಎದುರುತ್ತಿದ್ದಾರೆ. ಅಲ್ಲದೇ ಜನಜಂಗಳಿ ಹೆಚ್ಚಾಗಿ ಇರುವ ಕಡೆ  ಸರಿಯಾಗಿ ಕೊಂಡುಕೊಳ್ಳಲು ಸಾಧ್ಯವಾಗದೇ ಪರದಾಡಬಹುದು. ಅದಕ್ಕಾಗಿ ಈ ಫೀಚರ್ಸ್‌ ನಿಮ್ಮ ನೆರವಿಗೆ ಬರುವುದು.

  ಎಚ್ಚರಿಕೆ ನೀಡುವ ಗೂಗಲ್‌
  ಹಾಗದರೆ ಹತ್ತಿರದ ಮಾರುಕಟ್ಟೆಗಳಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೇ, ಕೂಡಲೇ ಜನಸಂದಣಿ ಇರುವ ಸ್ಥಳಗಳ ಕುರಿತು ನಿಮಗೆ ಎಚ್ಚರಿಕೆ ನೀಡುವ ಗೂಗಲ್‌ ಮ್ಯಾಪ್‌ ( Google Maps )ನ ಹೊಸ ವೈಶಿಷ್ಟ್ಯವನ್ನು ಪರಿಶೀಲಿಸಿ ನೋಡಿ. ಜನಸಂದಣಿ ಇರುವ ಸ್ಥಳಗಳಿಗೆ ಸಂಬಂಧಿಸಿದ ಒಳನೋಟಗಳನ್ನು ಬಳಕೆದಾರರಿಗೆ ಒದಗಿಸಿ, ನೀವು ಭೇಟಿ ನೀಡಲು ಯೋಜಿಸುತ್ತಿರುವ ಪ್ರದೇಶವು ಕಿಕ್ಕಿರಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.ಟೆಕ್ ದೈತ್ಯದ ಹೊಸ ವೈಶಿಷ್ಟ್ಯವು ರಜಾದಿನದ ಶಾಪರ್‌ಗಳಿಗೆ ಸಹಾಯ ಮಾಡುವ ನಿರೀಕ್ಷೆಯಿದೆ. ಇದು ಏರಿಯಾ ಬ್ಯುಸಿನೆಸ್ ಮತ್ತು ಡೈರೆಕ್ಟರಿಗಳನ್ನು( Directories) ಒಳಗೊಂಡಿದೆ. ಬಳಕೆದಾರರು ಏರಿಯಾ ಬ್ಯುಸಿನೆಸ್ ಅನ್ನು ಬಳಸಬಹುದು ಎಂದು ಗೂಗಲ್ ಹೇಳಿದೆ.

  ಇದನ್ನು ಓದಿ- Google Pixel 6 Series: ನಿಮ್ಮ ಹೃದಯ ಬಡಿತ ಮತ್ತು ಉಸಿರಾಟದ ದರವನ್ನು ಅಳೆಯುತ್ತೆ ಈ ಸ್ಮಾರ್ಟ್​ಫೋನ್​!

  ದೊಡ್ಡ ಕಟ್ಟಡಗಳ ಬಗ್ಗೆ ಮಾಹಿತಿ
  ಮುಂಬರುವ ವಾರಗಳನ್ನು ಒತ್ತಡದಿಂದ ಮುಕ್ತವಾಗಿಡಲು, ನೀವು ಸುರಕ್ಷಿತವಾಗಿರಲು, ಪ್ರೀತಿಪಾತ್ರರ ಜೊತೆಗೆ ನಿಮ್ಮ ಸಮಯವನ್ನು ಹೆಚ್ಚಿನ ಸಮಯ ಕಳೆಯಲು ಹಾಗೂ ಬ್ರಂಚ್ ಸ್ಪಾಟ್ ಅನ್ನು ಹುಡುಕಲು ನಾವು ಹೊಸ ಗೂಗಲ್‌ ನಕ್ಷೆಗಳ ಪರಿಕರಗಳನ್ನು ಪ್ರಾರಂಭಿಸುತ್ತಿದ್ದೇವೆ (launching) ಎಂದು ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ. ಇದಲ್ಲದೆ, ಗೂಗಲ್ ತನ್ನ ಡೈರೆಕ್ಟರಿ ಟ್ಯಾಬ್ ಅನ್ನು ಪ್ರಪಂಚದಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳು, ಮಾಲ್‌ಗಳು ಮತ್ತು ಸಾರಿಗೆ ನಿಲ್ದಾಣಗಳಿಗೆ ವಿಸ್ತರಿಸುತ್ತಿದೆ. ಇದು ಪ್ರಪಂಚದ ಎಲ್ಲಾ ಭಾಗಗಳಲ್ಲಿನ ಬಳಕೆದಾರರಿಗೆ ದೊಡ್ಡ ಕಟ್ಟಡಗಳನ್ನು ವೇಗವಾಗಿ ಹುಡುಕಲು ಅನುವು ಮಾಡಿಕೊಡುತ್ತದೆ. ಕಟ್ಟಡದಲ್ಲಿ ಯಾವ ರೀತಿಯ ಅಂಗಡಿಗಳಿವೆ (ಆಟಿಕೆ ಅಂಗಡಿಗಳು ಅಥವಾ ಆಭರಣದ ಅಂಗಡಿಗಳು), (like toy stores or jewellery boutiques), ಏರ್‌ಪೋರ್ಟ್ ಲಾಂಜ್‌ಗಳು, ಕಾರು ಬಾಡಿಗೆಗಳು, ಪಾರ್ಕಿಂಗ್ ಸ್ಥಳಗಳು ಮತ್ತು ಹೆಚ್ಚಿನವುಗಳನ್ನು ನೀವು ತ್ವರಿತವಾಗಿ ನೋಡಬಹುದು" ಎಂದು ಗೂಗಲ್ ಹೇಳಿದೆ.

  ಇದನ್ನು ಓದಿ: Google Search: ಗೂಗಲ್​ನಲ್ಲಿ ಈ ವಿಷಯಗಳನ್ನು ಸರ್ಚ್​ ಮಾಡುವ ಮುನ್ನ ಎಚ್ಚರ!

  ಅತಿಯಾದ ವೇಗಕ್ಕೆ ಬ್ರೇಕ್‌ ಹಾಕಲು ನೆರವು

  ವಾಹನ ಚಾಲನೆ ಮಾಡುವಾಗ ಸಂಚಾರ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಇದು ನಿಮ್ಮನ್ನು ಮತ್ತು ರಸ್ತೆಯ ಇತರ ಜನರನ್ನು ಅಪಘಾತಗಳಿಂದ ರಕ್ಷಿಸುತ್ತದೆ. ರಸ್ತೆಯಲ್ಲಿ ಅತಿಯಾದ ವೇಗವು ಅಜಾಗರೂಕತೆಯಾಗಿದೆ, ಇದನ್ನು ಜನರು ಹೆಚ್ಚಾಗಿ ಉತ್ಸಾಹದಲ್ಲಿ ಮರೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಗೂಗಲ್ ಮ್ಯಾಪ್‌ ನ ಅತಿಯಾದ ವೇಗಕ್ಕೆ ಬ್ರೇಕ್‌ ಹಾಕುವ ಸಲುವಾಗಿ ಈ ಹಿಂದೆ ವೇಗದ ಮಿತಿಯ ಬಗ್ಗೆ ಮಾಹಿತಿ ನೀಡುವ ಮೂಲಕ ಗಮನ ಸೆಳೆದಿತ್ತು. ಗೂಗಲ್ ಮ್ಯಾಪ್ಸ್ ಮೊದಲ ಬಾರಿಗೆ ಆನ್-ಸ್ಕ್ರೀನ್ ಸ್ಪೀಡೋಮೀಟರ್ ಕಾರ್ಯವನ್ನು 2019 ರಲ್ಲಿ ಆರಂಭಿಸಿತ್ತು. ನಂತರ ಅದನ್ನು ಕ್ರಮೇಣ ದೇಶದಾದ್ಯಂತ ಆರಂಭಿಸಲಾಯಿತು.
  Published by:vanithasanjevani vanithasanjevani
  First published: