TATA Nexon EV ಖರೀದಿಸಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಿದ್ರೆ ಒಮ್ಮೆ ಇಲ್ಲಿ ನೋಡಿ, ಮಿಸ್​ ಮಾಡ್ಬೇಡಿ

ಭಾರತೀಯ ಮಾರುಕಟ್ಟೆಯಲ್ಲಿ ನೆಕ್ಸಾನ್‌ ಇವಿ ಮತ್ತು ನೆಕ್ಸಾನ್‌ ಇವಿ ಮ್ಯಾಕ್ಸ್‌ ಅತ್ಯಂತ ಪ್ರಮುಖವಾದ ಎಲೆಕ್ಟ್ರಿಕ್ ಕಾರುಗಳಾಗಿವೆ. ಈ ಎರಡು ಎಲೆಕ್ಟ್ರಿಕ್‌ ಕಾರುಗಳು, ಟಾಟಾ ಕಂಪನಿಯ ಟೈಗರ್‌ ಕಾರ್‌ ಜೊತೆಗೆ ಭಾರತದಲ್ಲಿ ನೆಕ್ಸಾನ್‌ ಇವಿ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯನ್ನು ಅಗ್ರ ಸ್ಥಾನದಲ್ಲಿ ಇರಿಸಿದೆ. ನೆಕ್ಸಾನ್ ಇವಿ ಮತ್ತು ಇವಿ ಮ್ಯಾಕ್ಸ್ ಕಾರ್‌ಗಳ ಬಗ್ಗೆ ಕಾರ್‌ ಪ್ರಿಯರು ಕೇಳುವ ಪ್ರಶ್ನೆಗಳಿಗೆ ಈ ಲೇಖನದಲ್ಲಿಂದು ಉತ್ತರ ಪಡೆಯೋಣ.

ಟಾಟಾ ನೆಕ್ಸಾನ್ ಇವಿ

ಟಾಟಾ ನೆಕ್ಸಾನ್ ಇವಿ

  • Share this:
ಭಾರತೀಯ ಮಾರುಕಟ್ಟೆಯಲ್ಲಿ ನೆಕ್ಸಾನ್‌ ಇವಿ (Nexon EV) ಮತ್ತು ನೆಕ್ಸಾನ್‌ ಇವಿ ಮ್ಯಾಕ್ಸ್‌ ಅತ್ಯಂತ ಪ್ರಮುಖವಾದ ಎಲೆಕ್ಟ್ರಿಕ್ ಕಾರುಗಳಾಗಿವೆ (Electric Car). ಈ ಎರಡು ಎಲೆಕ್ಟ್ರಿಕ್‌ ಕಾರುಗಳು, ಟಾಟಾ ಕಂಪನಿಯ ಟೈಗರ್‌ ಕಾರ್‌ ಜೊತೆಗೆ ಭಾರತದಲ್ಲಿ ನೆಕ್ಸಾನ್‌ ಇವಿ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯನ್ನು (Tata Company) ಅಗ್ರ ಸ್ಥಾನದಲ್ಲಿ ಇರಿಸಿದೆ.  ಈ ಎಲೆಕ್ಟ್ರಿಕ್‌ ಕಾರುಗಳ ಬಗ್ಗೆ ಕಾರನ್ನು ಇಷ್ಟಪಡುವ ಮತ್ತು ಇನ್ನೇನು, ಕಾರು ಕೊಂಡುಕೊಳ್ಳಬೇಕೆಂಬವರಿಗೆ ಇರುವ ದೊಡ್ಡ ಪ್ರಶ್ನೆ ಎಂದರೆ ಈ ಕಾರುಗಳಿಗೆ ಪ್ರತಿ ತಿಂಗಳು ಎಷ್ಟು ವಿದ್ಯುತ್‌ ಬಿಲ್‌ (Electricity bill) ಬರುತ್ತದೆ? ಹಾಗೂ ಇದರ ನಿರ್ವಹಣಾ ವೆಚ್ಚ ಎಷ್ಟು? ಈ ಎರಡೂ ಪ್ರಶ್ನೆಗಳಿಗೆ ನೆಕ್ಸಾನ್‌ ಇವಿ ಮಾಲೀಕರಿಂದ ಉತ್ತರ ಇಲ್ಲಿದೆ.

ನೆಕ್ಸಾನ್‌ ಇವಿ ಕಾರಿನ ಬಗ್ಗೆ ಏನು ಹೇಳಿದ್ದಾರೆ ಮಾಲೀಕರು 
ಈ ನೆಕ್ಸಾನ್‌ ಇವಿಯ ಮಾಲೀಕರು ಯೂಟ್ಯೂಬ್‌ ವ್ಲಾಗರ್‌ ಆಗಿದ್ದಾರೆ. ಆದ್ದರಿಂದ ಈ ಟಾಟಾ ನೆಕ್ಸಾನ್‌ ಇವಿ ಎಂಬ ಎಲೆಕ್ಟ್ರಿಕ್‌ ಕಾರಿನ ವಿವರಗಳನ್ನು ವಿವರಿಸುವ ವೀಡಿಯೊವನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಈ ಕಾರಿನ ವ್ಲಾಗರ್, ಪಾವತಿಸಬೇಕಾದ ಪ್ರಸ್ತುತ ವಿದ್ಯುತ್ ಬಿಲ್ ತೋರಿಸುತ್ತಿರುವ ಮತ್ತು ಅವರ ಸ್ನೇಹಿತನ ನಡುವಿನ ಈ ಕಾರುಗಳ ಬಗ್ಗೆ ಚರ್ಚೆ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋದಲ್ಲಿ ಟಾಟಾ ನೆಕ್ಸಾನ್‌ ಇವಿಯ ಮಾಲೀಕರು ಈ ಕಾರನ್ನು ಬಳಸಲು ಪ್ರಾರಂಭಿಸಿದಾಗಿನಿಂದ ತಿಂಗಳಿಗೆ 2,900 ರೂಪಾಯಿಗಳ ವಿದ್ಯುತ್‌ ಬಿಲ್‌ ಬರುತ್ತದೆ. ಈ ಕಾರನ್ನು ಮನೆಯಲ್ಲಿ ಚಾರ್ಜ್‌ ಮಾಡಲಾಗುತ್ತದೆ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ:  Ola New Electric Car: ಸಿಂಗಲ್​ ಚಾರ್ಜ್​ನಲ್ಲಿ 500km ಕ್ರಮಿಸುತ್ತೆ! 4 ಸೆಕೆಂಡ್​ಗಳಲ್ಲಿ 100km ವೇಗದಲ್ಲಿ ಸಾಗುತ್ತೆ ಈ ಕಾರು!

ಪ್ರತಿ ತಿಂಗಳಿಗೆ 2,900 ರೂ. ವಿದ್ಯುತ್‌ ಬಿಲ್‌ ಜಾಸ್ತಿಯಾಯಿತು ಎಂದು ಗಾಬರಿ ಪಡುವವರಿಗೆ ಇಲ್ಲಿದೆ ಸಂತಸದ ವಿಚಾರ. ಈ ವಿದ್ಯುತ್‌ ಬಿಲ್‌ನಲ್ಲಿ ನೆಕ್ಸಾನ್ ಇವಿ ಚಾರ್ಜಿಂಗ್ ವೆಚ್ಚ ಸೇರಿದಂತೆ ಅವರ ಮನೆಯ ಮಾಸಿಕ ವಿದ್ಯುತ್‌ ವೆಚ್ಚವು ಸೇರಿದೆ. ಈ ವಿದ್ಯುತ್‌ ಬಿಲ್‌ನಲ್ಲಿ ಇವಿ ಚಾರ್ಜ್ ಮಾಡುವ ವೆಚ್ಚ ಮಾತ್ರವಲ್ಲದೆ ಅವರು ಮನೆಯಲ್ಲಿ ಬಳಸುವ ಸಾಮಾನ್ಯ ವಿದ್ಯುತ್‌ನ ವೆಚ್ಚವೂ ಸೇರಿದೆ ಎಂದು ವ್ಲಾಗರ್ ತನ್ನ ಸ್ನೇಹಿತನಿಗೆ ಹೇಳುತ್ತಾರೆ. ಇದರಲ್ಲಿ ಫ್ಯಾನ್‌ಗಳು, ಲೈಟ್‌ಗಳು, ಏರ್ ಕಂಡಿಷನರ್, ರೆಫ್ರಿಜರೇಟರ್ ಮತ್ತು ಮುಂತಾದ ಎಲ್ಲಾ ಸಾಮಾನ್ಯ ವಿದ್ಯುತ್ ಉಪಕರಣಗಳ ವಿದ್ಯುತ್‌ ವೆಚ್ಚವನ್ನು ಸಹ ಹೊಂದಿರುತ್ತದೆ ಎಂದು ವ್ಲಾಗರ್‌ ಹೇಳಿದ್ದಾರೆ.

ಅವರು ಈ ಎಲೆಕ್ಟ್ರಿಕ್‌ ಕಾರುಗಳನ್ನು ಖರೀದಿಸುವ ಮೊದಲು ವಿದ್ಯುತ್‌ ಬಿಲ್ ಎಷ್ಟಾಗಿತ್ತು?
ಆದರೆ ಈ ಪ್ರಶ್ನೆಗೆ ಅವರು ಸ್ಪಷ್ಟವಾಗಿ ಉತ್ತರಿಸಿಲ್ಲ. ಆದರೆ ನೆಕ್ಸಾನ್‌ ಇವಿಯ ವೆಚ್ಚವನ್ನು ಹೊರತುಪಡಿಸಿ ವಿದ್ಯುತ್ ವೆಚ್ಚವನ್ನು ಅಂದಾಜು ಮಾಡಿದ ನಂತರ, ವ್ಲಾಗರ್ ಅವರು ಸರಿಸುಮಾರು ಕಾರಿಗೆ ಕಿಲೋಮೀಟರ್‌ಗೆ 1ರೂ. ವೆಚ್ಚದಲ್ಲಿ ವಿದ್ಯುತ್‌ ಬಿಲ್‌ ಬರುತ್ತದೆ ಎಂದು ಹೇಳಿದ್ದಾರೆ.

ಈ ಕಾರುಗಳ ನಿರ್ವಹಣೆ ಮಾಡುವುದು ಹೇಗೆ?
ವೆಚ್ಚದ ಪ್ರಕಾರ, ಚಾಲನೆಯಲ್ಲಿರುವ ಎಲೆಕ್ಟ್ರಿಕ್ ಕಾರುಗಳು ಬಹಳಷ್ಟು ಹಣವನ್ನು ಉಳಿತಾಯ ಮಾಡುತ್ತವೆ. ನೀವು ಹೆಚ್ಚು ಚಾಲನೆ ಮಾಡಿದರೆ, ನೀವು ಹೆಚ್ಚು ಹಣವನ್ನು ಉಳಿಸುತ್ತೀರಿ. ಕಡಿಮೆ ಚಾಲನೆ ಮಾಡುವ ಖರೀದಿದಾರರಿಗೆ ಇದು ಅಷ್ಟೊಂದು ಸೂಕ್ತವಾದ ಕಾರ್‌ ಆಗಿಲ್ಲ ಎಂದೇ ಹೇಳಬಹುದು.

ಇದನ್ನೂ ಓದಿ:  Hyundai ವಾಹನಗಳಲ್ಲಿ ಕಾಣಿಸಿಕೊಂಡ ಸಮಸ್ಯೆ! ದೋಷಪೂರಿತ ಭಾಗಗಳನ್ನು ಸರಿಪಡಿಸಲು ವಾಹನಗಳನ್ನು ಹಿಂಪಡೆದುಕೊಂಡ ಕಂಪನಿ

ನೆಕ್ಸಾನ್‌ ಇವಿಯಲ್ಲಿ ಕಡಿಮೆ ಚಲಿಸುವ ಭಾಗಗಳ ಕಾರಣದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಸೇವಾ ವೆಚ್ಚವು ಆಂತರಿಕ ದಹನ ಚಾಲಿತ ವಾಹನಗಳಿಗಿಂತ ಯಾವಾಗಲೂ ಕಡಿಮೆಯಿರುವುದರಿಂದ ಇವಿ ಮಾಲೀಕರು ಈ ವಿಷಯದಲ್ಲಿ ಕಾರು ಖರೀದಾರರ ಮನಸ್ಸನ್ನು ಗೆಲ್ಲುತ್ತಾರೆ.
Published by:Ashwini Prabhu
First published: