• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Budget Price Smartphones: ಬಜೆಟ್​​ ಬೆಲೆಯ ಸ್ಮಾರ್ಟ್​​​ಫೋನ್​ಗಳನ್ನು ಖರೀದಿಸುವ ಪ್ಲ್ಯಾನ್​ನಲ್ಲಿದ್ದೀರಾ? ಇಲ್ಲಿದೆ ನೋಡಿ

Budget Price Smartphones: ಬಜೆಟ್​​ ಬೆಲೆಯ ಸ್ಮಾರ್ಟ್​​​ಫೋನ್​ಗಳನ್ನು ಖರೀದಿಸುವ ಪ್ಲ್ಯಾನ್​ನಲ್ಲಿದ್ದೀರಾ? ಇಲ್ಲಿದೆ ನೋಡಿ

ಸ್ಮಾರ್ಟ್​​​ಫೋನ್ಸ್​

ಸ್ಮಾರ್ಟ್​​​ಫೋನ್ಸ್​

ಮಾರುಕಟ್ಟೆಯಲ್ಲಿ ಈಗ ದುಬಾರಿ ಬೆಲೆಗಿಂತ ಬಜೆಟ್​​ ಬೆಲೆಯ ಸ್ಮಾರ್ಟ್​​ಫೋನ್​ಗಳಿಗೆ ಹೆಚ್ಚು ಬೇಡಿಕೆಯಿದೆ. ಈ ಸಾಲಿನಲ್ಲಿ ಅನೇಕ ಮೊಬೈಲ್​ಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ಹಾಗಿದ್ರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಜೆಟ್​ ಬೆಲೆಯ ಉತ್ತಮ ಸ್ಮಾರ್ಟ್​​ಫೋನ್​ಗಳು ಯಾವುದೆಲ್ಲಾ ಎಂಬುದನ್ನು ನೋಡ್ಬೇಕಾದ್ರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್​​​​ಫೋನ್​ಗಳ (Smartphones) ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸ್ಮಾರ್ಟ್​​ಫೋನ್ ಎಂಬುದು ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ಸಾಧನವಾಗಿಬಿಟ್ಟಿದೆ. ಒಂದು ರೀತಿಯಲ್ಲಿ ಈ ಸ್ಮಾರ್ಟ್​​ಫೋನ್ ಅನ್ನು ಮಿನಿ ಲ್ಯಾಪ್​ಟಾಪ್ ಎಂದರೂ ತಪ್ಪಾಗದು. ಏಕೆಂದರೆ ಇತ್ತೀಚಿನ ಸ್ಮಾರ್ಟ್​​ಫೋನ್​ಗಳು ಬಹುತೇಕ ಲ್ಯಾಪ್​ಟಾಪ್ (Laptop) ​ನಂತೆಯೇ ಕೆಲ ಫೀಚರ್ಸ್​ಗಳನ್ನು ಹೊಂದಿದೆ. ಇದನ್ನು ಮನಗಂಡ ಗ್ರಾಹಕರು ಕೂಡ ಉತ್ತಮ ಗುಣಮಟ್ಟದ ಸ್ಮಾರ್ಟ್​​​ಫೋನ್​ಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಸಾಕಷ್ಟು ಸ್ಮಾರ್ಟ್​​​ಫೋನ್​ಗಳು ಲಭ್ಯವಿದೆ. ಇದರಲ್ಲಿ ಒಂದೊಂದು ಮೊಬೈಲ್​ ಅದರದೇ ಆದ ವೈಶಿಷ್ಟ್ಯದ ಮೂಲಕ ಮಾರುಕಟ್ಟೆಯಲ್ಲಿ (Smartphone Market) ಪ್ರಚಲಿತವಾಗಿದೆ.


    ಮಾರುಕಟ್ಟೆಯಲ್ಲಿ ಈಗ ದುಬಾರಿ ಬೆಲೆಗಿಂತ ಬಜೆಟ್​​ ಬೆಲೆಯ ಸ್ಮಾರ್ಟ್​​ಫೋನ್​ಗಳಿಗೆ ಹೆಚ್ಚು ಬೇಡಿಕೆಯಿದೆ. ಈ ಸಾಲಿನಲ್ಲಿ ಅನೇಕ ಮೊಬೈಲ್​ಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ಹಾಗಿದ್ರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಜೆಟ್​ ಬೆಲೆಯ ಉತ್ತಮ ಸ್ಮಾರ್ಟ್​​ಫೋನ್​ಗಳು ಯಾವುದೆಲ್ಲಾ ಎಂಬುದನ್ನು ನೋಡ್ಬೇಕಾದ್ರೆ ಈ ಲೇಖನವನ್ನು ಓದಿ.


    ರಿಯಲ್​ಮಿ 9ಐ 5ಜಿ ಸ್ಮಾರ್ಟ್​​ಫೋನ್​


    ರಿಯಲ್​ಮಿ 9ಐ 5ಜಿ ಸ್ಮಾರ್ಟ್​​ಫೋನ್​ ಅನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 14,999 ರೂಪಾಯಿ ಬೆಲೆಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 810 ಎಸ್​ಓಸಿ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.




    ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.


    ಐಕ್ಯೂ ಝಡ್​​6 ಸ್ಮಾರ್ಟ್​​​ಫೋನ್​


    ಐಕ್ಯೂ ಝಡ್​​6 ಸ್ಮಾರ್ಟ್​​​ಫೋನ್​ ಕೂಡ 14,489 ರೂಪಾಯಿ ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.44 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲ್ಡ್​ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 ಎಸ್​ಓಸಿ ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಈ ಮೊಬೈಲ್​ ಆಂಡ್ರಾಯ್ಡ್‌ 12 ಆಧಾರಿತ ಫನ್‌ಟಚ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ವಿಶೇಷವಾಗಿ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪಡೆದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಸಹ ಸೇರಿಸಲಾಗಿದೆ.


    ಪೋಕೋ ಎಕ್ಸ್​4 ಪ್ರೋ ಸ್ಮಾರ್ಟ್​​​ಫೋನ್​


    ಪೋಕೋ ಎಕ್ಸ್​4 ಪ್ರೋ ಸ್ಮಾರ್ಟ್​​​ಫೋನ್​ ಸಹ ಕಡಿಮೆ ಬೆಲೆಗೆ ಉತ್ತಮ ಫೀಚರ್ಸ್​ ಹೊಂದಿದ ಸ್ಮಾರ್ಟ್​​​ಫೋನ್ ಎಂದು ಗುರುತಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್​ 6ಜಿಬಿ ರ್‍ಯಾಮ್ ಮತ್ತು 64ಜಿಬಿ ಇಂಟರ್ನಲ್​ ಸ್ಟೋರೇಜ್‌ ಸಾಮರ್ಥ್ಯ ವನ್ನು ಹೊಂದಿದ್ದು, ಇದರ ಬೆಲೆ ಕೇವಲ 14,999 ರೂಪಾಯಿ ಆಗಿದೆ. ಇದು 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲ್ಡ್​​ ಡಿಸ್‌ಪ್ಲೇಯನ್ನು ಹೊಂದಿದೆ.


    ಇನ್ನು ಪೋಕೋನ ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 695 ಎಸ್​​ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64ಎಮ್​ಪಿ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ಇದು 67W ವೇಗದ ಚಾರ್ಜಿಂಗ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ.


    ಮೊಟೊರೊಲಾ ಜಿ62 ಸ್ಮಾರ್ಟ್​​ಫೋನ್​


    ಮೊಟೊರೊಲಾ ಜಿ62 ಸ್ಮಾರ್ಟ್​​ಫೋನ್​ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಎಸ್​​ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಇದು ಆಂಡ್ರಾಯ್ಡ್‌ 12 ಬೆಂಬಲವನ್ನು ಪಡೆದಿದೆ.


    ಇದನ್ನೂ ಓದಿ: ಒಟಿಪಿ ಶೇರ್ ಮಾಡಿ ಬರೋಬ್ಬರಿ 1 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ!


    ಇನ್ನು ಈ ಸ್ಮಾರ್ಟ್​​​ಫೋನ್​ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಒಳಗೊಂಡಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.ಈ ಸ್ಮಾರ್ಟ್‌ಫೋನ್‌ನ ಬೇಸ್‌ ಮಾಡೆಲ್‌ 6ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್​ ಸ್ಟೋರೇಜ್‌ ಆಯ್ಕೆಯು 14,999 ರೂ. ಬೆಲೆಗೆ ಖರೀದಿಗೆ ಲಭ್ಯವಿದೆ.

    Published by:Prajwal B
    First published: