ಹೊಸ ಸ್ಮಾಟ್​​ಫೋನ್​​ ಖರೀದಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ, ಈ ಅಂಶವನ್ನು ನೆನಪಿಡಿ

ಸ್ಮಾರ್ಟ್​​ಫೋನ್​ನಲ್ಲಿರುವ ಪ್ರೊಸೆಸರ್​ ಅನ್ನು ಜಿಗಾಹರ್ಟ್ಸ್​​​​ನಿಂದ ಅಳೆಯಲಾಗುತ್ತದೆ. ಪ್ರೊಸೆಸರ್​ ಅಧಾರದ ಮೇಲೆ ನಿಮ್ಮ ಸ್ಮಾರ್ಟ್​ಫೋನ್​ ಬಳಕೆಯ ವೇಗವನ್ನು ತಿಳಿಯಬಹುದು. ಹೆಚ್ಚಿನ ಸ್ಮಾರ್ಟ್​ಫೋನ್​ ಬಳಕೆದಾರರು ಸ್ನಾಪ್​ ಡ್ರಾಗನ್​ 652 ಮತ್ತು ಸ್ನಾಪ್​ಡ್ರಾಗನ್​  820/821 ಅಳವಡಿಸಿರುವ ಫೋನ್​ ಅನ್ನು ಖರೀದಿಸುತ್ತಾರೆ.

news18
Updated:July 2, 2019, 5:45 PM IST
ಹೊಸ ಸ್ಮಾಟ್​​ಫೋನ್​​ ಖರೀದಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ, ಈ ಅಂಶವನ್ನು ನೆನಪಿಡಿ
ಸ್ಮಾಟ್​​ಫೋನ್​​
  • News18
  • Last Updated: July 2, 2019, 5:45 PM IST
  • Share this:
ಸ್ಮಾರ್ಟ್​ಫೋನ್​ ಖರೀದಿಸುತ್ತಿದ್ದೀರಾ.? ಹಾಗಿದ್ದರೆ, ಫೋನ್​ ಖರೀದಿಸುವ ಮುನ್ನ ಕೆಲ ಸಂಗತಿಗಳನ್ನು ಗಮನದಲ್ಲಿ ಇಡುವುದು ಒಳಿತು. ಸ್ಮಾರ್ಟ್​ಫೋನ್​​ ಖರೀದಿಸುವ ಮುನ್ನ ಯಾವ ಕಂಪೆನಿಯ ಸ್ಮಾರ್ಟ್​ಫೋನ್.? ಅದರ ವಿಶೇಷತೆ ಎನು? ತಿಳಿದು ಖರೀದಿಸಿ.

ಕೆಲವೊಮ್ಮೆ ಸ್ಮಾರ್ಟ್​ಫೋನ್​ ಖರೀದಿಸುವ ಗೋಜಿನಲ್ಲಿ ಅದರ ವಿಶೇಷತೆ? ಬಗೆಗೆ ತಿಳಿದೇ ಇರುವುದಿಲ್ಲ. ನಂತರ ತಲೆಕೆಡಿಸಿಕೊಳ್ಳುವ ಪ್ರಸಂಗಗಳು ಎದರುರಾಗುತ್ತದೆ. ಹಾಗಾಗಿ, ಸ್ಮಾರ್ಟ್​ಫೋನ್​ ಖರೀದಿಗೂ ಮುನ್ನ ಅದರಲ್ಲಿ ಅಳವಡಿಸಿಕೊಂಡಿರುವ ಪ್ರೊಸೆಸರ್​, ಬ್ಯಾಟರಿ, ಕ್ಯಾಮೆರಾ, ಸ್ಟೊರೇಜ್​ ಮುಂತಾದವುಗಳ ಕುರಿತು ತಿಳಿದು ಕೊಳ್ಳುವುದು ಉತ್ತಮ.

ಪ್ರೊಸೆಸರ್​

ಸ್ಮಾರ್ಟ್​ಫೋನ್​ ಖರೀದಿಸುವ ಮುನ್ನ ಯಾವ ಪ್ರೊಸೆಸರ್​ ಅಳವಡಿಸಲಾಗಿದೆ ಎಂಬುದು ತಿಳಿದುಕೊಳ್ಳುವುದು ಉತ್ತಮ. ನಿಮ್ಮ ಸ್ಮಾರ್ಟ್​ಫೋನ್​ ಅಳವಡಿಸಿಕೊಂಡಿರುವ ಪ್ರೊಸೆಸರ್​ನಿಂದ ಫೋನ್​ ವೇಗವನ್ನು ಗಮನಿಸಬಹುದಾಗಿದೆ.

ಸ್ಮಾರ್ಟ್​​ಫೋನ್​ನಲ್ಲಿರುವ ಪ್ರೊಸೆಸರ್​ ಅನ್ನು ಜಿಗಾಹರ್ಟ್ಸ್​​​​ನಿಂದ ಅಳೆಯಲಾಗುತ್ತದೆ. ಪ್ರೊಸೆಸರ್​ ಅಧಾರದ ಮೇಲೆ ನಿಮ್ಮ ಸ್ಮಾರ್ಟ್​ಫೋನ್​ ಬಳಕೆಯ ವೇಗವನ್ನು ತಿಳಿಯಬಹುದು. ಹೆಚ್ಚಿನ ಸ್ಮಾರ್ಟ್​ಫೋನ್​ ಬಳಕೆದಾರರು ಸ್ನಾಪ್​ ಡ್ರಾಗನ್​ 652 ಮತ್ತು ಸ್ನಾಪ್​ಡ್ರಾಗನ್​  820/821 ಅಳವಡಿಸಿರುವ ಫೋನ್​ ಅನ್ನು ಖರೀದಿಸುತ್ತಾರೆ.

ಬ್ಯಾಟರಿ

ಸ್ಮಾರ್ಟ್​ಫೋನ್​ ಖರೀದಿಸುವ ಮುನ್ನ ಬ್ಯಾಟರಿಯ ಬಗೆಗೆ ಗಮನ ಹರಿಸಿರಿ. ನಿಮ್ಮ ಸ್ಮಾರ್ಟ್​ಪೋನ್​ ಅನ್ನು ಹೆಚ್ಚು ಕಾಲ ಬಳಕೆ ಮಾಡಬೇಕಾದರೆ ಅದರಲ್ಲಿ ಅಳವಡಿಸಿರುವ ಬ್ಯಾಟರಿ ಕೂಡ ಒಂದು ಕಾರಣವಾಗುತ್ತದೆ. ಹೆಚ್ಚಿನ ಸ್ಮಾರ್ಟ್​ಫೋನ್​ಗಳು 3500 ಬ್ಯಾಟರಿ ಅಥವಾ 4245 ಬ್ಯಾಟರಿಯನ್ನು ಅಳವಡಿಸಿರುತ್ತಾರೆ.
Loading...

ಇದನ್ನೂ ಓದ: ಕಾಂಗ್ರೆಸ್​ ಈಗ ಅಡ್ರಸ್ಸೇ ಇಲ್ಲದ ಪಕ್ಷವಾಗಿದೆ: ಗೋವಿಂದ ಕಾರಜೋಳ

ಮೆಮೊರಿ

ಸ್ಮಾರ್ಟ್​ಫೋನ್​ ಖರೀದಿಗೂ ಮುನ್ನ ಹೆಚ್ಚು ರ‍್ಯಾಮ್​ ಮತ್ತು ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​​ಗಳನ್ನು ಖರೀದಿಸಿ. ಕೆಲವೊಮ್ಮೆ ಸ್ಮಾರ್ಟ್​ಫೋನ್​ನಲ್ಲಿ ಸ್ಟೊರೇಜ್​​ ಸಮಸ್ಯೆ ಬೇಗ ಉದ್ಭವಿಸುತ್ತದೆ. ಇಂತಹ ಸಮಸ್ಯೆಯನ್ನು ಎದುರಿಸುವ ಮುನ್ನ ಹೆಚ್ಚಿನ ಸ್ಟೊರೇಜ್​ವುಳ್ಳ  ಮತ್ತು ಅಧಿಕ ಮೆಮೊರಿ ಹೊಂದಿರುವ ಸ್ಮಾರ್ಟ್​ಫೋನ್​ ಅನ್ನು ಖರೀದಿಸಿ.

ಕ್ಯಾಮೆರಾ

ಸ್ಮಾರ್ಟ್​ಫೋನ್​ ಖರೀದಿಸುವಾಗ ಅದರಲ್ಲಿರುವ ಕ್ಯಾಮೆರಾದ ಮೇಲೂ ಕಣ್ಣು ಹಾಯಿಸಿ. ಕೆಲವೊಮ್ಮೆ ಕಡಿಮೆ ಬೆಲೆಗೆ ಹೆಚ್ಚಿನ ಮೆಗಾಫಿಕ್ಸೆಲ್​​ ಹೊಂದಿರುವ ಸ್ಮಾರ್ಟ್​ಪೋನ್​ಗಳು ಮಾರುಕಟ್ಟೆಯಲ್ಲಿವೆ. ಹಾಗಾಗಿ, ಸ್ಮಾರ್ಟ್​ಫೋನ್​ ಖರೀದಿಗಾರರು ಫೋನ್​ ಅಳವಡಿಸಿಕೊಂಡಿರುವ ಕ್ಯಾಮೆರಾದ ಬಗೆಗೆ ಗಮನಿಸಿ.

ಸ್ಮಾರ್ಟ್​ಫೋನ್​ ಗುಣಮಟ್ಟ

ಇತ್ತೀಚೆಗೆ ಸ್ಮಾರ್ಟ್​ಫೋನ್​ ಕಂಪೆನಿಗಳು ತಾವು ತಯಾರರಿಸುತ್ತಿರುವ ಫೋನಿನ ಶೈಲಿಯನ್ನು ಬದಲಾಯಿಸುತ್ತಿದೆ. ಬೇರೆ ಕಂಪೆನಿಗಳಿಗೆ ಪೈಪೋಟಿಯನ್ನು ನೀಡಲು ಸ್ಮಾರ್ಟ್​ಫೋನ್​ ವೈಶಿಷ್ಟ್ಯದಲ್ಲಿ ಬದಲಾವಣೆಯನ್ನು ತರುತ್ತಿದ್ದಾರೆ. ಹಾಗಾಗಿ ಸ್ಮಾರ್ಟ್​ಫೋನ್​ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನದಲ್ಲಿರಿಸಿ ಖರೀದಿಸಿ.
First published:July 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...