• Home
 • »
 • News
 • »
 • tech
 • »
 • 5G Smartphone: ಸ್ಮಾರ್ಟ್​​ಫೋನ್​ ಖರೀದಿ ಮಾಡುವ ಪ್ಲಾನ್​ನಲ್ಲಿದ್ದೀರಾ? ಇಲ್ಲಿದೆ ನೋಡಿ ಬೆಸ್ಟ್​ 5ಜಿ ಮೊಬೈಲ್​​ಗಳು.

5G Smartphone: ಸ್ಮಾರ್ಟ್​​ಫೋನ್​ ಖರೀದಿ ಮಾಡುವ ಪ್ಲಾನ್​ನಲ್ಲಿದ್ದೀರಾ? ಇಲ್ಲಿದೆ ನೋಡಿ ಬೆಸ್ಟ್​ 5ಜಿ ಮೊಬೈಲ್​​ಗಳು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೊಬೈಲ್ ಕಂಪನಿಗಳು ದಿನದಿಂದ ದಿನಕ್ಕೆ ಹೊಸ ಸ್ಮಾರ್ಟ್​​ಫೋನ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದಲ್ಲದೆ 5ಜಿ ನೆಟ್​ವರ್ಕ್​ ಬಂದಾಗಿನಿಂದ 5ಜಿ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿವೆ. ಇದೀಗ ನೀವು ಖರೀದಿಸಬಹುದಾದ 5 ಉತ್ತಮ ಸ್ಮಾರ್ಟ್​ಫೋನ್​​ಗಳ ಲೀಸ್ಟ್​​ ಇಲ್ಲಿದೆ.

ಮುಂದೆ ಓದಿ ...
 • Share this:

  ಭಾರತದಲ್ಲಿ 5G ನೆಟ್‌ವರ್ಕ್ (5G Network) ಆಗಮನದೊಂದಿಗೆ ಟಾಪ್ ಮೊಬೈಲ್ ಬ್ರ್ಯಾಂಡ್‌ಗಳು (Top Mobile Brands) 5ಜಿ ಫೋನ್​ಗಳಲ್ಲಿ ಹೆಚ್ಚು ಪರಿಚಯಿಸುತ್ತಿದೆ. ಕೆಲವು ಕಂಪನಿಗಳು ಈಗಾಗಲೇ ವಿವಿಧ ವಿಭಾಗಗಳಲ್ಲಿ 5G ಅನ್ನು ಬೆಂಬಲಿಸುವ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಫೀಚರ್ಸ್​​​ಗಳೊಂದಿಗೆ 5G ಫೋನ್​ಗಳು ಲಾಂಚ್ (5G Mobile Launch) ಮಾಡುತ್ತಿದ್ದಾರೆ. ಆದರೆ ಈಗ ಇತ್ತೀಚಿನ ತಂತ್ರಜ್ಞಾನದ ಬೆಂಬಲದೊಂದಿಗೆ ಬೆಲೆ ಉತ್ತಮವಾಗಿದ್ದು ಗುಣಮಟ್ಟದ ಫೋನ್​​ಗಳು ಕೂಡ ಸಿಗುತ್ತವೆ. ನಿಮ್ಮ ಬಜೆಟ್ ಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಮೊಬೈಲ್​​ಗಳು ಲಭ್ಯವಿದೆ. ಕೆಲವು ಉತ್ತಮ ಫೀಚರ್ಸ್​​ ಹೊಂದಿದ 5ಜಿ ಸ್ಮಾರ್ಟ್​​ಫೋನ್​ ಅನ್ನು ಇಲ್ಲಿ ನೀಡಲಾಗಿದೆ.


  ಮೊಬೈಲ್ ಕಂಪನಿಗಳು ದಿನದಿಂದ ದಿನಕ್ಕೆ ಹೊಸ ಸ್ಮಾರ್ಟ್​​ಫೋನ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದಲ್ಲದೆ 5ಜಿ ನೆಟ್​ವರ್ಕ್​ ಬಂದಾಗಿನಿಂದ 5ಜಿ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿವೆ. ಇದೀಗ ನೀವು ಖರೀದಿಸಬಹುದಾದ 5 ಉತ್ತಮ ಸ್ಮಾರ್ಟ್​ಫೋನ್​​ಗಳ ಲೀಸ್ಟ್​​ ಇಲ್ಲಿದೆ.


  ಸ್ಯಾಮ್​ಸಂಗ್ ಗ್ಯಾಲಕ್ಸಿ ಎಮ್33 5ಜಿ


  ಇದು 5ಜಿ ಸ್ಮಾರ್ಟ್​​​ಫೋನ್​ 6GB + 128GB ರೂಪಾಂತರವು 16,999 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು 120Hz ರಿಫ್ರೆಶ್ ರೇಟ್​​ನೊಂದಿಗೆ ಕಾರ್ನಿಂಗ್ ಗೊರಿಲ್ಲಾ  5 ಗ್ಲಾಸ್​​ನೊಂದಿಗೆ 6.6 ಇಂಚಿನ FHD+ ಡಿಸ್​​ಪ್ಲೇಯೊಮದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು Android 12, One UI 4 OS ನಲ್ಲಿ ಕಾರ್ಯನಿರ್ವಹಿಸುತ್ತದೆ.

  ಸ್ಯಾಮ್​​ಸಂಗ್ ಮೊಬೈಲ್


  ಇದನ್ನೂ ಓದಿ: ಕೇವಲ 3299 ರೂಪಾಯಿಗೆ ಅಮೇಜ್​​​ಫಿಟ್​ ಸ್ಮಾರ್ಟ್​ವಾಚ್! ನವೆಂಬರ್​ 22 ರಿಂದ ಬಿಡುಗಡೆ


  ಫೋನ್ 50MP ಕ್ಯಾಮೆರಾ 5MP ಅಲ್ಟ್ರಾ ವೈಡ್, 2MP ಮ್ಯಾಕ್ರೋ, 2MP ಡೆಪ್ತ್ ಲೆನ್ಸ್‌ನೊಂದಿಗೆ ಹಿಂದಿನ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 8MP ಮುಂಭಾಗದ ಸೆಲ್ಫಿ ಕ್ಯಾಮೆರಾ ಇದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 6000mAh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಕೂಡ ಅಳವಡಿಸಲಾಗಿದೆ.


  ರೆಡ್ಮಿ ನೋಟ್ 11ಟಿ 5ಜಿ


  ಶಿಯೋಮಿಯ ರೆಡ್ಮಿ ನೋಟ್​ 11ಟಿ 5ಜಿ ಫೋನ್ ಪ್ರಸ್ತುತ 17,999 ರೂಪಾಯಿಗೆ ಲಭ್ಯವಿದೆ. ಸ್ಮಾರ್ಟ್​​ಫೋನ್​ 6.6-ಇಂಚಿನ FHD +  ಡಿಸ್​​ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್​​ನೊಂದಿಗೆ ಇದನ್ನು ತಯಾರಿಸಲಾಗಿದೆ. ಇದು 33W ಪ್ರೊ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಹೊಂದಿದೆ. ಇದು 50MP AI ಮುಖ್ಯ + 8MP ಅಲ್ಟ್ರಾ-ವೈಡ್ ಜೊತೆಗೆ ಹಿಂಭಾಗದ ಡ್ಯುಯಲ್ ಕ್ಯಾಮೆರಾ ಸೆಟಪ್ ಜೊತೆಗೆ 16MP ಮುಂಭಾಗದ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.


  ಸಾಂಕೇತಿಕ ಚಿತ್ರ


  CE 2 Lite 5G


  ಒನ್​ಪ್ಲಸ್​ ಮೊಬೈಲ್ 18,999 ರೂಪಾಯಿಯಲ್ಲಿ ಲಭ್ಯವಿದೆ. ಇದು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್ 6.59-ಇಂಚಿನ 401 PPI, IPS LCD ಡಿಸ್​ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್​​ನೊಂದಿಗೆ ಬರುತ್ತದೆ. ಆಕ್ಟಾ ಕೋರ್ 2.2 GHz, ಡ್ಯುಯಲ್ ಕೋರ್ + 1.7 GHz, ಹೆಕ್ಸಾ ಕೋರ್, ಸ್ನಾಪ್‌ಡ್ರಾಗನ್ 695 ಈ ಹ್ಯಾಂಡ್‌ಸೆಟ್‌ನ ಅತ್ಯುತ್ತಮ ಫೀಚರ್ಸ್​ ಅನ್ನು ಹೊಂದಿದೆ. ಈ ಫೋನ್‌ನ ಕ್ಯಾಮೆರಾ ಸೆಟಪ್ ಅನ್ನು ಹೇಳುವುದಾದರೆ 64 MP + 2 MP + 2 MP ಜೊತೆಗೆ 16 MP ಮುಂಭಾಗದ ಕ್ಯಾಮೆರಾದೊಂದಿಗೆ ಹಿಂಭಾಗದ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿವೆ.


  ಐಕ್ಯೂ Z6 5G


  ಈ 5G ಸ್ಮಾರ್ಟ್‌ಫೋನ್‌ನ ಬೆಲೆ 15,499 ರೂಪಾಯಿಯಿಂದ  ಪ್ರಾರಂಭವಾಗುತ್ತದೆ. ಇದು 20Hz ರಿಫ್ರೆಶ್ ರೇಟ್​ನೊಂದಿಗೆ 6.5-ಇಂಚಿನ FHD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇದು 50MP+ 2MP +2MP ಹಿಂಭಾಗದ ಟ್ರಿಪಲ್ ಕ್ಯಾಮೆರಾ ಸೆಟಪ್, 16MP ಮುಂಭಾಗದ ಕ್ಯಾಮೆರಾದಂತಹ ಫೀಚರ್ಸ್​ ಅನ್ನು ಒಳಗೊಂಡಿದೆ.


  ಒಪ್ಪೊ ಎ74 5G


  ಒಪ್ಪೊ ಸ್ಮಾರ್ಟ್‌ಫೋನ್ 14,990 ರೂಪಾಯಿಗೆ ಲಭ್ಯವಿದೆ. ಈ ಫೋನ್ 6.5 ಇಂಚಿನ FHD+ ಹೈಪರ್-ಕಲರ್ ಸ್ಕ್ರೀನ್, 90Hz ರಿಫ್ರೆಶ್ ದರದೊಂದಿಗೆ ಪಂಚ್-ಹೋಲ್ ಡಿಸ್​​ಪ್ಲೇಯನ್ನು ಒಳಗೊಂಡಿದೆ. ಇದು 5000mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್​ನ ವಿಶಿಷ್ಟ ಲಕ್ಷಣಗಳು 48MP ಮುಖ್ಯ + 2MP ಮ್ಯಾಕ್ರೋ + 2MP ಡೆಪ್ತ್ ಲೆನ್ಸ್‌ನೊಂದಿಗೆ ಹಿಂದಿನ ಟ್ರಿಪಲ್ ಕ್ಯಾಮೆರಾ ಸೆಟಪ್, 8MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.

  Published by:Prajwal B
  First published: