ಗೂಗಲ್​ನ ಹೊಸ ಆಪರೇಟಿಂಗ್​ ಸಿಸ್ಟಂಗೆ ಪಿಸ್ತಾ ಹೆಸರು?

news18
Updated:July 13, 2018, 2:39 PM IST
ಗೂಗಲ್​ನ ಹೊಸ ಆಪರೇಟಿಂಗ್​ ಸಿಸ್ಟಂಗೆ ಪಿಸ್ತಾ ಹೆಸರು?
XDA Developers
news18
Updated: July 13, 2018, 2:39 PM IST
ಆಪರೇಟಿಂಗ್​ ಸಿಸ್ಟಂಗಳಿಗೆ ಐಸ್​ಕ್ರೀಂ, ಕಿಟ್​ಕ್ಯಾಟ್​ ನಂತಹ ಹೆಸರಿಡುವುದರ ಮೂಲಕ ಫೇಮಸ್​ ಆಗಿದ್ದ ಗೂಗಲ್​ ಇದೀಗ ನೂತನ ಆಪರೇಟಿಂಗ್​ ಸಿಸ್ಟಂ Android P (Android 9.0)ಯನ್ನು ಮಾರುಕಟ್ಟೆಗೆ ಬಿಡಲು ತೀರ್ಮಾನಿಸಿದ್ದು, ಲೀಕ್​ ಆಗಿರುವ ಮಾಹಿತಿಗಳ ಪ್ರಕಾರ ಹೊಸ ಒಎಸ್​ ಹೆಸರನ್ನು ಪಿಸ್ತಾಚಿಯೋ ಐಸ್​ ಕ್ರೀಂ ಎಂದು ನಮೂಧಿಸಲು ತೀರ್ಮಾನಿಸಿದೆ.

2009 ರಲ್ಲಿ ಗೂಗಲ್ ಹೊಸ ಸಂಪ್ರದಾಯವೊಂದನ್ನು ಆರಂಭಿಸಿತು. ಪ್ರತಿ ಹೊಸ ವರ್ಶನ್​ ಒಎಸ್​ ಅಪ್​ಡೇಟ್​ ಬಿಡುಗಡೆಯಾದಗ ಇಂಗ್ಲೀಷ್ ವರ್ಣಮಾಲೆಯ ಅಕ್ಷರಗಳ ಅನುಕ್ರಮದಲ್ಲಿ ಹೆಸರನ್ನು ಇಡುತ್ತಾ ಬರಲಾಗಿದೆ. ಕಪ್ ಕೇಕ್ , ಡೋನಟ್ , ಎಕ್ಲೆರ್ , ಫ್ರೋಯೋ , ಜಿಂಜರ್ ಬ್ರೆಡ್ , ಹನಿಕೊಂಬ್ , ಐಸ್ ಕ್ರೀಮ್ ಸ್ಯಾಂಡ್ ವಿಚ್, ಜೆಲ್ಲಿ ಬೀನ್ , ಕಿಟ್ ಕ್ಯಾಟ್ , ಲಾಲಿ ಪಾಪ್, ಹೀಗೆಲ್ಲಾ ಇಡುತ್ತಲೇ ಬಂದಿತ್ತು. ಇದೀಗ ಪಿ ಸರದಿ ಬಂದಿದ್ದು, ಪಿಸ್ತಾಚಿಯೋ ಐಸ್​ ಕ್ರೀಂನ್ನು ಪರಿಚಯಿಸಲು ತೀರ್ಮಾನಿಸಿದೆ.

tabletowo ಎಂಬ ವೆಬ್​ಸೈಟ್​ ಈ ಕುರಿತು ಮಾಹಿತಿ ನೀಡಿದ್ದು, ಗೂಗಲ್​ ಪಾಲುದಾರ ಸಂಸ್ಥೆ ಹುವಾವೆ ತನ್ನ ಗ್ರಾಹಕರೊಂದಿಗೆ ನಡೆಸಿದ ಸಂವಾದದ ಸಂದರ್ಭದಲ್ಲಿ ಈ ಮಾಹಿತಿ ಹೊರಬಿದ್ದಿದ್ದು, ಆಂತರಿಕವಾಗಿ ಸಂವಾದ ನಡೆಸಲು ಈ ಹೆಸರನ್ನು ಗೂಗಲ್​ ಇಟ್ಟುಕೊಂಡಿರ ಬಹುದು ಎಂಬ ಗುಮಾನಿಯೂ ಕೇಳಿಬರುತ್ತಿದೆ.

ಈಗಿರುವ ಮಾಹಿತಿಗಳ ಪ್ರಕಾರ ಆಗಷ್ಟ್​ನಲ್ಲಿ ಗೂಗಲ್​ ಹೊಸ ಅಪ್​ಡೇಟ್​ನ್ನು ಹುವಾವೆ ಮೊಬೈಲ್​ ಸೇರಿದಂತೆ ಎಲ್ಲಾ ಆ್ಯಂಡ್ರಾಯ್ಡ್​ ಮೊಬೈಲ್​ಗಳಿಗೆ ಬಿಡಲಿದೆ.
First published:July 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...