HOME » NEWS » Tech » PIAGGIO ONE ELECTRIC SCOOTER VARIANT DETAILS REVEALED SPECIFICATIONS STG HG

Piaggio: ಪಿಯಾಜಿಯೋದ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ಮಾಹಿತಿ ಬಿಡುಗಡೆ: ವೈಶಿಷ್ಟ್ಯಗಳು ಹೀಗಿದೆ

Piaggio Electric Scooter: ಸಾಮಾಜಿಕ ಮಾಧ್ಯಮವಾದ ಟಿಕ್ ಟಾಕ್ ಮೂಲಕ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2021ರ ಮೇ ತಿಂಗಳಲ್ಲಿ ಪರಿಚಯಿಸಿದ್ದ ಪಿಯಾಜಿಯೊ, ಅದರ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಚೀನಾದ ವಾಹನ ಮಾರುಕಟ್ಟೆಯಯನ್ನು ಅದರಲ್ಲೂ ಮುಖ್ಯವಾಗಿ ಚೀನಾದ ಯುವ ಜನತೆಯನ್ನು ಗುರಿಯಾಗಿಟ್ಟುಕೊಂಡು ಈ ವಾಹನದ ವಿನ್ಯಾಸ ಮಾಡಲಾಗಿದೆ.

news18-kannada
Updated:June 11, 2021, 2:31 PM IST
Piaggio: ಪಿಯಾಜಿಯೋದ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ಮಾಹಿತಿ ಬಿಡುಗಡೆ: ವೈಶಿಷ್ಟ್ಯಗಳು ಹೀಗಿದೆ
Piaggio Electric Scooter
  • Share this:

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನಡುವೆ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳು ಅದರಲ್ಲೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬೇಡಿಕೆ ಪಡೆದುಕೊಳ್ಳಲಾರಂಭಿಸಿವೆ. ಅದಕ್ಕೆ ಪೂರಕವಾಗಿ ತಯಾರಕ ಸಂಸ್ಥೆಗಳು ಹೊಸ ಹೊಸ ವಿದ್ಯುತ್ ಚಾಲಿತ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಆರಂಭಿಸಿವೆ. ಕಳೆದ ತಿಂಗಳು ಸ್ಕೂಟರ್ ಇಟಲಿ ಮೂಲದ ವಾಹನ ತಯಾರಿಕಾ ಸಂಸ್ಥೆ ಪಿಯಾಜಿಯೊದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸಾಮಾಜಿಕ ಮಾಧ್ಯಮದ ಮೂಲಕ ಗ್ರಾಹಕರಿಗೆ ಪರಿಚಯವಾಗಿತ್ತು. ಆದರೆ ಅಧಿಕೃತವಾಗಿ ಇದರ ಬಗ್ಗೆ ಸಂಸ್ಥೆಯು ಮಾತನಾಡಿದ್ದು, ಇದೀಗ ಆ ಸ್ಕೂಟರ್ ನ ವೈಶಿಷ್ಟ್ಯಗಳು, ಮಾದರಿಗಳ ವಿವರಗಳನ್ನು ಬಹಿರಂಗಪಡಿಸಿದೆ.


ಯುವ ಗ್ರಾಹಕರ ಕಡೆ ನೋಟವಿಟ್ಟ ಪಿಯಾಜಿಯೊ:ಸಾಮಾಜಿಕ ಮಾಧ್ಯಮವಾದ ಟಿಕ್ ಟಾಕ್ ಮೂಲಕ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2021ರ ಮೇ ತಿಂಗಳಲ್ಲಿ ಪರಿಚಯಿಸಿದ್ದ ಪಿಯಾಜಿಯೊ, ಅದರ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಚೀನಾದ ವಾಹನ ಮಾರುಕಟ್ಟೆಯಯನ್ನು ಅದರಲ್ಲೂ ಮುಖ್ಯವಾಗಿ ಚೀನಾದ ಯುವ ಜನತೆಯನ್ನು ಗುರಿಯಾಗಿಟ್ಟುಕೊಂಡು ಈ ವಾಹನದ ವಿನ್ಯಾಸ ಮಾಡಲಾಗಿದೆ. ಅದೇ ಕಾರಣದಿಂದ ಅದರ ಮೊದಲ ನೋಟವನ್ನು ಚೀನಾದ ಟಿಕ್ ಟಾಕ್ ಮೂಲಕ ಬಿಡುಗಡೆ ಮಾಡಿತ್ತು.


ಸದ್ಯ ಮಾರುಕಟ್ಟೆಯಲ್ಲಿ ವೆಸ್ಪಾ ಎಲೆಕ್ಟ್ರಿಕಾದ ಕಡಿಮೆ ಬೆಲೆಗೆ ಇದನ್ನು ಮಾರುಕಟ್ಟೆಯಲ್ಲಿ ಬಿಡಲಿದ್ದು, ಪಿಯಾಜಿಯೊ ಸ್ಕೂಟರ್​​ನ ಮೂರು ಮಾದರಿಗಳು ಹಾಗೂ ಅದರ ವೈಶಿಷ್ಟ್ಯಗಳ ವಿವರವನ್ನು ಬಹಿರಂಗಪಡಿಸಿದೆ. ಒನ್, ಒನ್ + ಹಾಗೂ ಒನ್ ಆ್ಯಕ್ಟೀವ್‌ ಎಂಬ ಮೂರು ಮಾದರಿಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ತನ್ನದೇ ವಿಶೇಷತೆಗಳನ್ನು ಹೊಂದಿರಲಿವೆ.


ವೈಶಿಷ್ಟ್ಯಗಳು ಏನೇನು ಇರಲಿವೆ..?


ಈಗಾಗಲೇ ಸಿಕ್ಕಿರುವ ಮಾಹಿತಿಗಳ ಪ್ರಕಾರ ಏನೇನು ವೈಶಿಷ್ಟ್ಯಗಳು ಇರಲಿವೆ ನೋಡೋಣ. ಪಿಯಾಜಿಯೊ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ ಎಲ್ಲಾ ಮೂರು ಮಾದರಿಗಳು ಒಂದೇ ರೀತಿಯ ವಿನ್ಯಾಸವನ್ನು ಹೊಂದಿರುತ್ತವೆ. ವೈಶಿಷ್ಟ್ಯಗಳು ಕೂಡ ಒಂದೇ ರೀತಿ ಇರುತ್ತವೆ. ಈ ಮೂರೂ ಮಾದರಿಗಳ ವ್ಯತ್ಯಾಸ ಇರುವುದು ಅವುಗಳ ಬ್ಯಾಟರಿ ಮತ್ತು ಮೋಟರ್ಗಳ ವೈವಿಧ್ಯತೆಯಲ್ಲಿ.


ಬೇಸ್ ಒನ್ ಮಾದರಿಯು 48 ವೋಲ್ಟ್ 1.8 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ 1.2 ಕಿಲೋ ವ್ಯಾಟ್ ಮೋಟರ್ ಅನ್ನು ಹೊಂದಿದೆ. ಈ ಸ್ಕೂಟರ್ ಗರಿಷ್ಠ 45 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಜತೆಗೆ 85 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಅಂದಹಾಗೆ ಒಂದು ಸಲ ಚಾರ್ಜ್‌ ಮಾಡಿದರೆ 55 ಕಿ.ಮೀ. ಸಾಗುವ ಸಾಮರ್ಥ್ಯ ಇದಕ್ಕಿದೆ.

ಇನ್ನು ಟಾಪ್-ಸ್ಪೆಕ್ ಒನ್ + ಮಾದರಿಯು ಸ್ವಲ್ಪ ದೊಡ್ಡದಾದ 2.3 ಕಿಲೋವ್ಯಾಟ್ ಬ್ಯಾಟರಿ ಘಟಕ ಹೊಂದಿದ್ದರೂ ಮೋಟರ್ ಮಾತ್ರ ಬೇಸ್ ಒನ್ ಮಾದರಿಯದ್ದೇ ಇರುತ್ತದೆ. ಈ ಮಾದರಿಯ ಸ್ಕೂಟರ್ ಗರಿಷ್ಠ 55 ಕಿ.ಮೀ. ವೇಗದಲ್ಲಿ ಸಾಗಬಲ್ಲದು. ಜತೆಗೆ ಒಂದು ಸಲ ಚಾರ್ಜ್‌ ಮಾಡಿದರೆ 100 ಕಿ.ಮೀ. ಸಾಗುವ ಸಾಮರ್ಥ್ಯ ಇದಕ್ಕಿದೆ.Youtube Video

ಕೊನೆಯದಾಗಿ ಒನ್ ಆ್ಯಕ್ಟೀವ್‌ ಮಾದರಿಯನ್ನು ನೋಡೋಣ. ಇದೂ ಕೂಡ 2.3 ಕಿಲೋವ್ಯಾಟ್ ಬ್ಯಾಟರಿ ಹೊಂದಿದೆ. ದೊಡ್ಡದಾದ 2 ಕಿಲೋವ್ಯಾಟ್ ಮೋಟರ್ 95 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಮತ್ತು ಗರಿಷ್ಠ 60 ಕಿಲೋಮೀಟರ್ ವೇಗವನ್ನು ಸಾಧಿಸಬಲ್ಲ ಕ್ಷಮತೆ ಈ ಸ್ಕೂಟರ್‌ಗೆ ಇದೆ. ಈ ಮಾದರಿಯ ಸ್ಕೂಟರ್ ಅನ್ನು ಒಂದು ಸಲ ಚಾರ್ಜ್ ಮಾಡಿದರೆ ಒಂದೇ ಚಾರ್ಜ್‌ನಲ್ಲಿ ಗರಿಷ್ಠ 85 ಕಿ.ಮೀ ದೂರವನ್ನು ಕ್ರಮಿಸಬಲ್ಲದು. ಅಂದಹಾಗೆ ಈ ಎಲ್ಲಾ ಮಾದರಿಗಳ ಚಾರ್ಜಿಂಗ್ ಅವಧಿ 6 ಗಂಟೆ ಆಗಿರುತ್ತದೆ.


First published: June 11, 2021, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories