ಸೋಶಿಯಲ್ ಮೀಡಿಯಾಗಳು (Social Media) ಇತ್ತೀಚೆಗೆ ವ್ಯಾಪಕವಾಗಿ ಬೆಳವಣಿಗೆಯಾಗಿದೆ. ಇದು ಟೆಕ್ನಾಲಜಿ ಯುಗ. ಇಲ್ಲಿ ಪ್ರತಿಯೊನಬ್ಬರ ಕೈಯಲ್ಲೂ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ.ಯಾರೆಲ್ಲಾ ಸ್ಮಾರ್ಟ್ಫೋನ್ಗಳನ್ನು ಹೊಂದಿರುತ್ತಾರೋ ಅವರೆಲ್ಲರೂ ಸೋಶಿಯಲ್ ಮೀಡಿಯಾಗಳನ್ನು ಬಳಸೇ ಬಳಸುತ್ತಾರೆ. ಇತ್ತೀಚೆಗಂತೂ ಎಲ್ಲಾ ವಯಸ್ಸಿನವರು ಸಹ ಸೋಶಿಯಲ್ ಮೀಡಿಯಾಗಳನ್ನು ಬಳಸುತ್ತಾರೆ. ಇದರಲ್ಲಿ ಫೇಸ್‌ಬುಕ್ ಮಾತ್ರ ಭಾರೀ ಹಿಂದಿನಿಂದ ಪ್ರಚಲಿತದಲ್ಲಿದೆ. ಫೇಸ್‌ಬುಕ್ (Facebook) ಅಪ್ಲಿಕೇಶನ್ ಅನ್ನು ಬಳಸದವರೇ ಇಲ್ಲ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಮೆಟಾ (Meta) ಒಡೆತನದ ಫೇಸ್‌ಬುಕ್ ಅನೇಕ ಫೀಚರ್ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಹಾಗೆಯೇ ಎಫ್ಬಿಯಲ್ಲಿ ಹಂಚಿಕೊಳ್ಳುವ ಫೋಟೋ (Photo), ವಿಡಿಯೋ ಅಥವಾ ಯಾವುದೇ ಡೇಟಾವನ್ನು ಇತರೆ ಮೀಡಿಯಾಗಳಿಗೂ ವರ್ಗಾವಣೆ ಮಾಡಿಕೊಳ್ಬಹುದು.
ಹೌದು, ಈಗ ನಾವು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ ಮಾಡಿದ ವಿಡಿಯೋ, ಫೋಟೋವನ್ನು ಇತರೆ ಮೀಡಿಯಾಗಳಿಗೂ ವರ್ಗಾವಣೆ ಮಾಡ್ಬಹುದು. ಅದ್ರಲ್ಲೂ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಎಲ್ಲಾ ಡೇಟಾವನ್ನು ಸಹ ಗೂಗಲ್ ಫೋಟೋಸ್ಗೆ ವರ್ಗಾವಣೆ ಮಾಡ್ಬಬಹುದು. ಹಾಗಿದ್ರೆ ಇದು ಹೇಗೆ ಮಾಡುವುದು ಎಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಫೇಸ್ಬುಕ್ನಿಂದ ಗೂಗಲ್ ಫೋಟೋಸ್ಗೆ ವರ್ಗಾವಣೆ ಮಾಡುವುದು ಹೇಗೆ?
ಫೇಸ್ಬುಕ್ನಲ್ಲೂ ಬ್ಲೂಟಿಕ್ಗೆ ಹಣ ಪಾವತಿಸಿ
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎನ್ನುವಂತೆ ಟ್ವಿಟರ್ ಅನುಸರಿಸಿದ ಒಂದು ವಿರೋಧದ ಕ್ರಮವನ್ನು ಈಗ ಮೆಟಾ ಮಾಲಿಕತ್ವದ ಇನ್‌ಸ್ಟಾಗ್ರಾಮ್ (Instagram) ಮತ್ತು ಫೇಸ್‌ಬುಕ್ ಅನುಸರಿಸಲು ಸಿದ್ಧವಾಗಿದೆ. ಹೌದು ಟ್ವಿಟರ್ ಹಣ ಪಾವತಿಸಿ ಬ್ಲೂಟಿಕ್ ಪಡೆಯುವ ಕ್ರಮವನ್ನು ಜಾರಿಗೆ ತಂದ ನಂತರ ಇದೇ ನೀತಿಯನ್ನು ಮೆಟಾ ತನ್ನ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಬಳಕೆದಾರರಿಗೆ ತರುತ್ತಿದೆ. ಈ ಬಗ್ಗೆ ಪೋಷಕ ಕಂಪನಿ ಮೆಟಾ ಘೋಷಣೆಯನ್ನು ಹೊರಡಿಸಿದೆ.
ಎಷ್ಟಿರಲಿದೆ ಸೇವೆಯ ಬೆಲೆ?
ಇನ್ನು ಮೆಟಾ ತರುತ್ತಿರುವ ಈ ಚಂದಾದಾರಿಕೆ ಸೇವೆಯ ಬೆಲೆ ಎಷ್ಟು ಎಂಬ ಬಗ್ಗೆ ಕಂಪನಿಯು ಬಹಿರಂಗ ಪಡಿಸಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಖಾತೆ ದೃಢೀಕರಣ ತಿಂಗಳಿಗೆ $11.99 ರಿಂದ ಪಾವತಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ, ಯಾರಾದರೂ ತಿಂಗಳಿಗೆ 900 ರೂ. ಪಾವತಿಸಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗೆ 'ಬ್ಲೂ ಟಿಕ್' ಪಡೆಯಬಹುದಾಗಿದೆ. ವೆಬ್ ಬಳಕೆದಾರರಿಗೆ ಮಾಸಿಕ $11.99 ಆದರೆ ಇನ್ನೂ ಐಫೋನ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಈ ವೆಚ್ಚ $14.99 (1,241 ರೂಪಾಯಿ) ಪಾವತಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ