iPhone 13 | ಪ್ಲಾಸ್ಟಿಕ್ ಹೊದಿಕೆ ರಹಿತ iPhone 13 ಸೀರೀಸ್ ಬಾಕ್ಸ್; ಪ್ಯಾಕೇಜ್ ಕುರಿತು ಆ್ಯಪಲ್ ತಿಳಿಸಿರುವ ಅಂಶಗಳೇನು?

iPhone 13: ಟ್ವಿಟ್ಟರ್‌ನಲ್ಲಿ ಐಫೋನ್ 13 ಸೀರೀಸ್ ಪ್ಯಾಕೇಜಿಂಗ್ ಫೋಟೋ ಲೀಕ್ ಆಗಿದ್ದು ಸ್ಟಿಕ್ಕರ್‌ನೊಂದಿಗೆ ಬಾಕ್ಸ್ ಅನ್ನು ಭದ್ರಪಡಿಸಲಾಗಿದೆ. ಇದರಿಂದ ಡಿವೈಸ್ ಬಾಕ್ಸ್‌ಗೆ ಯಾವುದೇ ದೋಷವಿಲ್ಲದೆ ಸುರಕ್ಷಿತವಾಗಿರುತ್ತದೆ.

ಐಫೋನ್ 13

ಐಫೋನ್ 13

  • Share this:

ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಆ್ಯಪಲ್ ತನ್ನ iPhone 13 ಸೀರೀಸ್ ಪ್ಯಾಕೇಜಿಂಗ್‌ನಲ್ಲಿ ಪ್ಲಾಸ್ಟಿಕ್ ಹೊದಿಕೆಯ ಬದಲಿಗೆ ಡಿವೈಸ್ ಅನ್ನು ನೇರವಾಗಿ ಬಾಕ್ಸ್‌ನಲ್ಲಿ ಇರಿಸಿದೆ. ಆ್ಯಪಲ್ ಕೈಗೊಂಡಿರುವ ಹೊಸ ಪ್ಯಾಕೇಜಿಂಗ್ ನಿರ್ಧಾರವು ಇದೀಗ ಬಹಿರಂಗಗೊಂಡಿದ್ದು ಲೀಕರ್ DuanRui ಟ್ವಿಟ್ಟರ್‌ನಲ್ಲಿ ಈ ಹೊಸ ಪ್ಯಾಕೇಜಿಂಗ್ ಚಿತ್ರವನ್ನು ಪ್ರಕಟಗೊಳಿಸಿದ್ದಾರೆ.


ಪ್ಲಾಸ್ಟಿಕ್ ಹೊದಿಕೆಯ ಬದಲಿಗೆ ಬಾಕ್ಸ್‌ ಮುಚ್ಚಳಕ್ಕೆ ಅಂಟಿಕೊಂಡಿರುವ ಹರಿಯಲು ಸುಲಭವಾಗಿರುವ ಪೇಪರ್ ಟ್ಯಾಬ್‌ನಲ್ಲಿ ಡಿವೈಸ್ ಇರಿಸಲಾಗಿದೆ. ಇದರಿಂದ ಪ್ಯಾಕೇಜ್‌ಗೆ ಹಾಗೂ ಡಿವೈಸ್‌ಗೆ ಯಾವುದೇ ಹಾನಿಯುಂಟಾಗುವುದಿಲ್ಲ ಹಾಗೂ ಡಿವೈಸ್ ತೆರೆಯುವ ಸಮಯದಲ್ಲಿಯೂ ಸುಲಭವಾಗಿ ಬಾಕ್ಸ್‌ನಿಂದ ಡಿವೈಸ್ ಹೊರತೆಗೆಯಬಹುದಾಗಿದೆ.


ಬಾಕ್ಸ್ ಅನ್ನು ಮೊದಲೇ ತೆರೆಯಲಾಗಿದ್ದರೆ ಸೀಲ್ ಹರಿದಿರುವುದನ್ನು ನಾವು ಕಾಣಬಹುದಾಗಿದೆ. ಈ ಸುದ್ದಿ ಕುರಿತಂತೆ ಆ್ಯಪಲ್ ಪ್ರಮುಖ ಮಾಹಿತಿಯೊಂದನ್ನು ತಿಳಿಸಿದ್ದು ಆ್ಯಪಲ್ ತನ್ನ 13 ಸೀರೀಸ್ ಬಾಕ್ಸ್‌ಗಳಲ್ಲಿ ಪ್ಲಾಸ್ಟಿಕ್ ಹೊದಿಕೆ ತೆಗೆದುಹಾಕಿರುವುದರಿಂದ 600 ಮೆಟ್ರಿಕ್ ಟನ್ ಪ್ಲಾಸ್ಟಿಕ್ ಉಳಿತಾಯವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದು ಪರಿಸರ ಸಂರಕ್ಷಣಾ ಅಭಿಯಾನದಲ್ಲಿ ಇದೊಂದು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ತಿಳಿಸಿದೆ. 2025ರ ಒಳಗೆ ತನ್ನ ಪ್ರಾಡಕ್ಟ್ ಪ್ಯಾಕ್‌ನಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ ಕೈಬಿಡುವ ತೀರ್ಮಾನ ಕೈಗೊಂಡಿದೆ.


ಟ್ವಿಟ್ಟರ್‌ನಲ್ಲಿ ಐಫೋನ್ 13 ಸೀರೀಸ್ ಪ್ಯಾಕೇಜಿಂಗ್ ಫೋಟೋ ಲೀಕ್ ಆಗಿದ್ದು ಸ್ಟಿಕ್ಕರ್‌ನೊಂದಿಗೆ ಬಾಕ್ಸ್ ಅನ್ನು ಭದ್ರಪಡಿಸಲಾಗಿದೆ. ಇದರಿಂದ ಡಿವೈಸ್ ಬಾಕ್ಸ್‌ಗೆ ಯಾವುದೇ ದೋಷವಿಲ್ಲದೆ ಸುರಕ್ಷಿತವಾಗಿರುತ್ತದೆ. ಇನ್ನು ಬಾಕ್ಸ್‌ನ ಒಳಭಾಗದಲ್ಲಿ ಹಾಗೂ ಬಾಕ್ಸ್‌ನ ಕೆಳಭಾಗದ ಹೊರವಲಯದಲ್ಲಿ ಪ್ರೊಟೆಕ್ಟೀವ್ ಲೇಬಲ್ ಅನ್ನು ಲಗತ್ತಿಸಲಾಗಿದೆ. ಸಾಗಣೆಯ ಸಮಯದಲ್ಲಿ ಬಾಕ್ಸ್‌ಗೆ ಹೆಚ್ಚು ಡ್ಯಾಮೇಜ್ ಆಗದಂತೆ ಸಂರಕ್ಷಿಸಲು ಇದು ಸಹಕಾರಿಯಾಗಿದೆ.




iphone 13

ಆ್ಯಪಲ್ ಪ್ಲಾಸ್ಟಿಕ್ ಸ್ಟಿಕ್ಕರ್‌ಗಳ ಅನ್ವಯಿಸುವಿಕೆಯನ್ನು ತನ್ನ ಸಣ್ಣ ಸಣ್ಣ ಪ್ರಾಡಕ್ಟ್‌ಗಳಿಗೆ ಮೊದಲು ಪರಿಚಯಿಸಿದ್ದು ಕೇಬಲ್‌ಗಳು ಹಾಗೂ ಆ್ಯಪಲ್ ವಾಚ್ ಬ್ರ್ಯಾಂಡ್‌ಗಳಲ್ಲಿ ಕಾಣಬಹುದಾಗಿದೆ. ಪೇಪರ್ ಆಧಾರಿತ ಲೇಬಲ್‌ಗಳನ್ನು ಐಫೋಣ್ 13 ಪ್ಯಾಕೇಜಿಂಗ್‌ನಲ್ಲಿ ಕಾಣಬಹುದಾಗಿದ್ದು ಎರಡು ಭಾಗವಿರುವ ಗಟ್ಟಿಯಾದ ಬಾಕ್ಸ್‌ಗಳೊಂದಿಗೆ ದೊಡ್ಡ ಪರಿಕರಗಳಿಗಾಗಿ ಕಾಯ್ದಿರಿಸಲಾಗಿದೆ. ಇಷ್ಟಲ್ಲದೆ ಆ್ಯಪಲ್ ತನ್ನ ವೆಬ್‌ಸೈಟ್‌ನಲ್ಲಿ ಐಫೋನ್ 13ಗಾಗಿ ಅದು ಅನುಸರಿಸಿರುವ ಇತರ ಕೆಲವೊಂದು ಪರಿಸರ ಸ್ನೇಹಿ ಅಂಶಗಳನ್ನು ಹೈಲೈಟ್ ಮಾಡಿದೆ.


Read Also ⇒ Reality Show ವೇದಿಕೆಯಲ್ಲಿ ಸ್ಪರ್ಧಿಗೆ ಕಿಸ್​ ಮಾಡಿ ಕೆನ್ನೆ ಕಚ್ಚಿದ ಕನ್ನಡದ ನಟಿ! ವಿಡಿಯೋ ವೈರಲ್​​

100% ಮರುಬಳಕೆ ಮಾಡಲಾದ ಅಯಸ್ಕಾಂತಗಳಲ್ಲಿರುವ ಅಪರೂಪದ ಭೂಮಿಯ ಅಂಶಗಳನ್ನು ಹ್ಯಾಂಡ್‌ಸೆಟ್ ಬಳಸಿದ್ದು ಮುಖ್ಯ ಲಾಜಿಕ್ ಬೋರ್ಡ್ ಹಾಗೂ ಹಾಗೂ ಬ್ಯಾಟರಿ ನಿರ್ವಹಣೆ ಯುನಿಟ್‌ನಲ್ಲಿ 100% ಮರುಬಳಕೆ ಮಾಡಬಹುದಾದ ಟಿನ್ ಬಳಸಿದೆ. ಅದೇ ರೀತಿ ಮುಖ್ಯ ಲಾಜಿಕ್ ಬೋರ್ಡ್ ಹಾಗೂ ಕ್ಯಾಮೆರಾ ವಯರ್‌ನಲ್ಲಿ 100% ಮರುಬಳಕೆ ಮಾಡಬಹುದಾದ ಚಿನ್ನದ ಪ್ಲೇಟಿಂಗ್ ಅಳವಡಿಸಿದೆ. ಐಫೋನ್‌ನ ಆ್ಯಂಟೆನಾ ಲೈನ್‌ಗಳನ್ನು ಸಂಯೋಜಿಸುವ ಡೈಎಲೆಕ್ಟ್ರಿಕ್ ಮಾಡಿದ ವಸ್ತುಗಳಿಗಾಗಿ ತ್ಯಜಿಸಲಾದ ನೀರಿನ ಬಾಟಲಿಗಳನ್ನು ಬಳಸಲಾಗಿದೆ ಎಂದು ತಿಳಿಸಿದೆ.


ಆ್ಯಪಲ್‌ ತನ್ನ ಉತ್ಪನ್ನಗಳಲ್ಲಿ ಪರಿಸರ ಸ್ನೇಹಿ ಅಂಶಗಳನ್ನು ಹೆಚ್ಚು ಬಳಸುತ್ತಿದೆ ಎಂಬ ಅಂಶಕ್ಕೆ ಪ್ರಾಶಸ್ತ್ಯ ನೀಡಿದ್ದು ಕಳೆದ ಬಾರಿ ಚಾರ್ಜಿಂಗ್ ಅಡಾಪ್ಟರ್ ಹಾಗೂ ಇಯರ್‌ಪಾಡ್‌ಗಳನ್ನು ಹೊರತುಪಡಿಸಿ ಸ್ಲಿಮ್ ಆಗಿರುವ ಐಫೋನ್ ಬಾಕ್ಸ್‌ಗಳನ್ನು ಹೊರತಂದಿತ್ತು. ಈ ಬಾರಿ ಬಾಕ್ಸ್‌ ಸುತ್ತಲಿರುವ ಪ್ಲಾಸ್ಟಿಕ್ ಹೊದಿಕೆ ಕೈಬಿಡುವ ಮೂಲಕ ಐಫೋನ್ 13 ಸೀರೀಸ್‌ನಲ್ಲಿ ಮಹತ್ತರ ಬದಲಾವಣೆ ತಂದಂತಿದೆ.


First published: