Phonepe: ಬ್ಯಾನ್ ಆಗುತ್ತಾ ಫೋನ್​​ಪೇ; ಪೇಮೆಂಟ್ ಆ್ಯಪ್ ಬಗ್ಗೆ ಟ್ವಿಟ್ಟರ್​​​ನಲ್ಲಿ ಶುರುವಾಗಿದೆ #Uninstall ಅಭಿಯಾನ

Phonepe: ಭಾರತದಾದ್ಯಂತ ಅನೇಕರು ಈ ಪೇಮೆಂಟ್​ ಆ್ಯಪ್​​​ ಅನ್ನು ಬಳಸುತ್ತಿದ್ದು, ಇದೀಗ ಈ ಆ್ಯಪ್​ ಅನ್ನು ಅನ್​ಇನ್​ಸ್ಟಾಲ್​ ಮಾಡಬೇಕು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ. ಹಾಗಾದರೆ ಯಾಕಾಗಿ #UninstallPhonePe ಅಭಿಯಾನ ಪ್ರಾರಂಭಗೊಂಡಿದೆ? ಇದರ ಹಿಂದಿರುವ ಕಾರಣವೇನು? ಇಲ್ಲಿದೆ ಮಾಹಿತಿ.

news18
Updated:August 24, 2020, 1:57 PM IST
Phonepe: ಬ್ಯಾನ್ ಆಗುತ್ತಾ ಫೋನ್​​ಪೇ; ಪೇಮೆಂಟ್ ಆ್ಯಪ್ ಬಗ್ಗೆ ಟ್ವಿಟ್ಟರ್​​​ನಲ್ಲಿ ಶುರುವಾಗಿದೆ #Uninstall ಅಭಿಯಾನ
Phonepe
  • News18
  • Last Updated: August 24, 2020, 1:57 PM IST
  • Share this:
ಇತ್ತೀಚೆಗೆ ಕೇಂದ್ರ ಸರ್ಕಾರ ಚೀನಾ ಮೂಲಕ ಹಲವಾರು ಆ್ಯಪ್​ಗಳನ್ನು ಬ್ಯಾನ್​ ಮಾಡಿತ್ತು. ಜನಪ್ರಿಯ ಆ್ಯಪ್​ಗಳನ್ನು ಪ್ಲೇ ಸ್ಟೋರ್​ನಿಂದ ಕಿತ್ತು ಹಾಕಿತ್ತು. ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆ ದೃಷ್ಠಿಯಿಂದ ಕೇಂದ್ರ ಸರ್ಕಾರ ಈ ನಿರ್ಣಯವನ್ನು ಕೈಗೊಂಡಿತು. 

ಇದೀಗ ಭಾರತೀಯ ಮೂಲಕ ಡಿಜಿಟಲ್​ ಪೇಮೆಂಟ್​​ ಸೇವೆಯನ್ನು ಒದಗಿಸುತ್ತಿರುವ ಫೋನ್​ಪೇ ಆ್ಯಪ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೊಂದು ಪ್ರಾರಂಭಗೊಂಡಿದ್ದು, ಅನ್​ಇನ್​ಸ್ಟಾಲ್​​​ ಮಾಡಬೇಕೆಂದು ಅನೇಕರು ಟ್ವೀಟ್​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಫೋನ್​ಪೇ ಬೆಂಗಳೂರು ಮೂಲದ್ದಾಗಿದ್ದು, ಸಮೀರ್​ ನಿಗಮ್​ ಮತ್ತು ರಾಹುಲ್​ ಚಾರಿ ಇದರ ಮುಖ್ಯಸ್ಥರಾಗಿದ್ದಾರೆ. ಭಾರತದಾದ್ಯಂತ ಅನೇಕರು ಈ ಪೇಮೆಂಟ್​ ಆ್ಯಪ್​​​ ಅನ್ನು ಬಳಸುತ್ತಿದ್ದು, ಇದೀಗ ಈ ಆ್ಯಪ್​ ಅನ್ನು ಅನ್​ಇನ್​ಸ್ಟಾಲ್​ ಮಾಡಬೇಕು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ. ಹಾಗಾದರೆ ಯಾಕಾಗಿ #UninstallPhonePe ಅಭಿಯಾನ ಪ್ರಾರಂಭಗೊಂಡಿದೆ? ಇದರ ಹಿಂದಿರುವ ಕಾರಣವೇನು? ಇಲ್ಲಿದೆ ಮಾಹಿತಿ.

ಇತ್ತೀಚೆಗೆ ಬಾಲಿವುಡ್​ ನಟ ಸುಶಾಂತ್​ ಸಿಂಗ್​​ ರಜಪೂತ್​ ಆತ್ಮಹತ್ಯೆ ಮಾಡುವ ಮೂಲಕ ಸಾವನ್ನಪ್ಪಿದ್ದರು. ಆದರೆ ಅವರ ಅಭಿಮಾನಿಗಳು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಹಾಕಿದರು. ಸುಶಾಂತ್​ ಸಿಂಗ್​ ಫ್ಯಾಮಿಲಿ ಕೂಡ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಹೇಳಿದರು. ಅದರಂತೆ  ಪ್ರಕರಣವನ್ನು ಇದೀಗ ಸಿಬಿಐಗೆ ತನಿಖೆ ನಡೆಸುತ್ತಿದೆ.

ಮತ್ತೊಂದೆಡೆ ಬಾಲಿವುಡ್​ನಲ್ಲಿ ನೆಪೊಟಿಸಂ ತಾಂಡವವಾಡುತ್ತಿದೆ, ಸುಶಾಂತ್​ ಸಿಂಗ್ ಕೂಡ ಈ ನೆಪೊಟಿಸಂನಿಂದ ಬಳಲಿದ್ದರು. ಈ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಮಾತುಗಳು ಕೇಳಿಬಂದವು. ಅದರ ಜೊತೆಗೆ ಸಲ್ಮಾನ್​ ಖಾನ್​, ಆಲಿಯಾ ಭಟ್​, ಮಹೇಶ್​ ಭಟ್, ಕರಣ್​  ಜೋಹಾರ್​​ ಹೀಗೆ ಅನೇಕ ತಾರೆಯರು ಈ ನೆಪೊಟಿಸಂಗೆ ಕಾರಣಕರ್ತರಾಗಿದ್ದಾರೆ ಎಂಬ ಮಾತುಗಳು ಹರಿದಾಡಿದವು.









ಅದರಂತೆ ಜನಪ್ರಿಯ ಫೋನ್​ಪೇ ತನ್ನ ಜಾಹೀರಾತಿನಲ್ಲಿ ನಟಿ ಅಲಿಯಾ ಭಟ್ ಮತ್ತು ಅಮೀರ್​ ಖಾನ್​​ ಕಾಣಿಸಿಕೊಂಡಿರುವುದು ಈ ಅಭಿಯಾನದ ಹುಟ್ಟಿಗೆ ಕಾರಣವಾಗಿದೆ. ಅನೇಕರು ಟ್ವಿಟ್ಟರ್​ನಲ್ಲಿ ಫೋನ್​ಪೇ ಆ್ಯಪ್​ ಅನ್ನು ಅನ್​ ಇನ್​​ಸ್ಟಾಲ್  ಮತ್ತು #bycottphonepe​ ಎಂದು ಬರೆದುಹಾಕುತ್ತಿದ್ದಾರೆ. ಇನ್ನು ಕೆಲವರು ಅನ್​ಇನ್​ಸ್ಟಾಲ್​​​ ಮಾಡುತ್ತಿರುವುದನ್ನು ಸ್ಕ್ರೀನ್​ ಶಾಟ್​ ತೆಗೆದು ಶೇರ್​ ಮಾಡುತ್ತಿದ್ದಾರೆ.

ಫೋನ್​ಪೇ ಡಿಜಿಟಲ್​ ಪೇಮೆಂಟ್​ ಸೇವೆಯನ್ನು ಒದಗಿಸುವ ಕಂಪನಿಯಾಗಿದ್ದು, 2015ರಲ್ಲಿ ಪ್ರಾರಂಭವಾಯಿತು. ಸಮೀರ್​​ ನಿಗಮ್​ ಇದರ ಸಿಇಒ ಆಗಿದ್ದಾರೆ. ವರ್ಷಕ್ಕೆ 42.79 ಕೋಟಿ ಆದಾಯವನ್ನು ಫೋನ್​ ಪೇ ಗಳಿಸುತ್ತದೆ. ದೇಶದಾದ್ಯಂತ ಅನೇಕ ಬಳಕೆದಾರರನ್ನು ಹೊಂದಿರುವ ಈ ಆ್ಯಪ್​ ಗೂಗಲ್​ ಪ್ಲೇ ಸ್ಟೋರ್​ನಲ್ಲಿ 50 ಲಕ್ಷಕ್ಕೂ ಅಧಿಕ ಡೌನ್​ಲೋಡ್​ ಕಂಡಿದೆ

ಇತ್ತೀಚೆಗೆ ಮಹೇಶ್​ ಭಟ್​​ ನಿರ್ದೇಶನ ಸಡಕ್​ 2 ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿತ್ತು. ಆಲಿಯಾ ಭಟ್​  ಮತ್ತು ಆಕೆಯ ತಂಗಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಬಿಡುಗಡೆಗೊಂಡ ಟ್ರೇಲರ್​ ಅಧಿಕ ಡಿಸ್​ಲೈಕ್​ಗಳನ್ನು ಪಡೆದಿದೆ.
Published by: Harshith AS
First published: August 24, 2020, 1:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading