PhonePe QR Codeಗಳಿಗೆ ಬೆಂಕಿ; Paytm ಉದ್ಯೋಗಿಗಳ ವಿರುದ್ಧ ದೂರು

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ದೈತ್ಯ ಫೋನ್ ಪೇ ತನ್ನ ಪ್ರತಿಸ್ಪರ್ಧಿ ಪೇಟಿಎಂ ಮತ್ತು ತನ್ನ ಕಂಪನಿಯ ಮಾಜಿ ಉದ್ಯೋಗಿಗಳ ವಿರುದ್ಧ ದೂರು ದಾಖಲಿಸಿದೆ. ಫೋನ್ ಪೇನ ಕ್ಯೂಆರ್ ಕೋಡ್‌ಗಳನ್ನು ಸುಟ್ಟುಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ದೈತ್ಯ ಫೋನ್ ಪೇ (PhonePe) ತನ್ನ ಪ್ರತಿಸ್ಪರ್ಧಿ ಪೇಟಿಎಂ (Paytm) ಮತ್ತು ತನ್ನ ಕಂಪನಿಯ ಮಾಜಿ ಉದ್ಯೋಗಿಗಳ ವಿರುದ್ಧ ದೂರು ದಾಖಲಿಸಿದೆ. ಫೋನ್ ಪೇನ ಕ್ಯೂಆರ್ ಕೋಡ್‌ಗಳನ್ನು ಸುಟ್ಟುಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ (Police) ದೂರು ನೀಡಲಾಗಿದೆ. ಗ್ರೇಟರ್ ನೋಯ್ಡಾದಲ್ಲಿ (Greater Noida) ನಡೆದ ಘಟನೆ ಎನ್ನಲಾಗಿರುವ ಪ್ರಕರಣದಲ್ಲಿ ರಾಶಿ ರಾಶಿ ಕ್ಯೂಆರ್ ಕೋಡ್‌ ಗಳಿಗೆ ಬೆಂಕಿಹಚ್ಚಿ ಸುಟ್ಟು ಹಾಕಿದ ಒಂದು ವಿಡಿಯೋವನ್ನು (Video) ಆಧರಿಸಿ ಕಂಪನಿಯು ಸೂರಜ್‌ಪುರ ಲಖನವಾಲಿ ಪೊಲೀಸ್ ಠಾಣೆಯಲ್ಲಿ (Police Station) ದೂರು ನೀಡಿರುವುದಾಗಿ ಫೋನ್ ಪೇ ವಕ್ತಾರರು ತಿಳಿಸಿದ್ದಾರೆ.

ವಾಲ್‌ಮಾರ್ಟ್ ಮಾಲೀಕತ್ವದ ಫೋನ್‌ಪೇ ತನ್ನ ಕ್ಯೂಆರ್ ಕೋಡ್‌ಗಳ ರಾಶಿಯನ್ನು ಸುಟ್ಟುಹಾಕಿದ ವಿಡಿಯೋವನ್ನು ಆಧರಿಸಿ ದೂರು ದಾಖಲಿಸಿದೆ. ಪೇಟಿಎಂ ಏರಿಯಾ ಸೇಲ್ಸ್ ಮ್ಯಾನೇಜರ್ (ಎಎಸ್‌ಎಂ) ಸೇರಿದಂತೆ ಸಾಫ್ಟ್ ಬ್ಯಾಂಕ್ ಬೆಂಬಲಿತ ಪೇಟಿಎಂನ ಮೂವರು ಉದ್ಯೋಗಿಗಳನ್ನು ವಿಡಿಯೋದಲ್ಲಿ ಗುರುತಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಗುರುತಿಸಲಾದ ಮೂವರಲ್ಲಿ ಒಬ್ಬರು ಮಾಜಿ ಫೋನ್ ಪೇ ಉದ್ಯೋಗಿ ಎಂಬುವುದು ಸಹ ಬೆಳಕಿಗೆ ಬಂದಿದೆ.

ಘಟನೆಗೆ ಪೇಟಿಯಂನಿಂದಲೂ ಖಂಡನೆ
ಇನ್ನೂ ಪೇಟಿಎಂ ಕಂಪನಿ ಸಹ ಘಟನೆಯನ್ನು ಖಂಡಿಸಿದೆ. ಈ ಕೃತ್ಯ ಫೋನ್ ಪೇ ಮತ್ತು ಅದರ ಮಾಜಿ ಉದ್ಯೋಗಿಗಳಿಗೆ ಸಂಬಂಧಿಸಿದ್ದು ಎಂದಿದೆ. ಪೇಟಿಎಂ ವಕ್ತಾರರು ಮಾತನಾಡಿ ”ಈ ವಿಷಯವು ಫೋನ್ ಪೇ ಮತ್ತು ಅದರ ಮಾಜಿ ಉದ್ಯೋಗಿಗಳ ನಡುವೆ ಇದೆ. ಉದ್ಯೋಗಿಗಳು ಮಾಡಿದ ಕೃತ್ಯವನ್ನು ನಾವು ಸಹ ಖಂಡಿಸುತ್ತೇವೆ. ಈಗಾಗ್ಲೇ ಕಂಪನಿ ಆರೋಪಿ ಉದ್ಯೋಗಿಗಳನ್ನು ವಿಚಾರಣೆ ಸಲುವಾಗಿ ಅಮಾನತು ಮಾಡಿದೆ” ಎಂದಿದ್ದಾರೆ.

ಇದನ್ನೂ ಓದಿ: Apps Ban: ವಿದೇಶಕ್ಕೆ ಮಾಹಿತಿ ರವಾನಿಸುತ್ತಿದ್ದ 348 ಆ್ಯಪ್​​ಗಳು ಬ್ಯಾನ್: ನೀವೂ ಕೂಡಲೆ ಇವುಗಳನ್ನು ಅನ್​​ ಇನ್ಸ್​ಸ್ಟಾಲ್​​ ಮಾಡಿ

"ನಾವು ಯಾವುದೇ ದುಷ್ಕೃತ್ಯವನ್ನು ಸಹಿಸುವುದಿಲ್ಲ ಮತ್ತು ಯಾವಾಗಲೂ ಕೆಲಸದ ನೀತಿಯ ಉನ್ನತ ಗುಣಮಟ್ಟದಿಂದ ನಿಲ್ಲುತ್ತೇವೆ. ಪೇಟಿಎಂ ದೇಶದಲ್ಲಿ ಕ್ಯೂಆರ್ ಕೋಡ್ ಪಾವತಿಗಳ ಪ್ರವರ್ತಕವಾಗಿದೆ ಮತ್ತು ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡುವಲ್ಲಿ ಹೆಮ್ಮೆಪಡುತ್ತದೆ" ಎಂದು ವಕ್ತಾರರು ತಿಳಿಸಿದ್ದಾರೆ.

“ಫೋನ್ ಪೇ ಕಂಪನಿಗೆ ಧಕ್ಕೆ ತರಲು ನಡೆದ ಕೃತ್ಯ”
ಜುಲೈ 29ರಂದು ಫೋನ್ ಪೇ, ಪೇಟಿಎಂನ ಮೂರು ಉದ್ಯೋಗಿಗಳ ವಿರುದ್ಧ ಸಲ್ಲಿಸಿದ ದೂರು ಪತ್ರ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಅದರಲ್ಲಿ ಫೋನ್ ಪೇನ ಖ್ಯಾತಿ ಮತ್ತು ವ್ಯವಹಾರಕ್ಕೆ ಹಾನಿಯನ್ನುಂಟುಮಾಡುವ ಸಲುವಾಗಿ ಈ ಕೃತ್ಯವನ್ನು ನಡೆಸಲಾಗಿದೆ ಎಂದು ಪತ್ರದಲ್ಲಿ ಆರೋಪಿಸಿ ದೂರು ನೀಡಲಾಗಿದೆ. "ನಾವು ಪೊಲೀಸರ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದೇವೆ ಮತ್ತು ಅವರು ಈ ಸಮಯದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ" ಎಂದು ಫೋನ್ ಪೇ ವಕ್ತಾರರು ತಿಳಿಸಿದ್ದಾರೆ.ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಫೋನ್‌ಪೇ ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್, ಪೊಲೀಸರು ಈ ಕೃತ್ಯದ ಬಗ್ಗೆ ತನಿಖೆ ನಡೆಸಬೇಕು ಮತ್ತು ನ್ಯಾಯವು ಮೇಲುಗೈ ಸಾಧಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಯುಪಿಐ ವಹಿವಾಟುಗಳಲ್ಲಿ ಫೋನ್ ಪೇ ಸಿಂಹಪಾಲು
ಕ್ಯೂಆರ್ ಕೋಡ್‌ಗಳು ವ್ಯಾಪಾರಿಗಳಿಗೆ ಸಹಾಯ ಮಾಡುತ್ತವೆ ಅಂದರೆ ಅಂಗಡಿ ಮತ್ತು ವ್ಯಾಪಾರ ಮಾಲೀಕರು ಗ್ರಾಹಕರಿಂದ ಯುಪಿಐ ಪಾವತಿಗಳನ್ನು ಸ್ವೀಕರಿಸುತ್ತಾರೆ. ಒಟ್ಟಾರೆ ಮಾಸಿಕ UPI ವಹಿವಾಟುಗಳಲ್ಲಿ ಫೋನ್ ಪೇ ಶೇಕಡಾ 46 ರಷ್ಟು ಪಾಲನ್ನು ಹೊಂದಿದೆ, ನಂತರ ಗೂಗಲ್ ಪೇ ಶೇಕಡಾ 38 ಮತ್ತು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಶೇಕಡಾ 13ರಷ್ಟು ಮಾರುಕಟ್ಟೆ ಪಾಲು ಪಡೆದಿದೆ.

ಇದನ್ನೂ ಓದಿ:  Gmail ಈಗ ಹೊಸ ವೈಶಿಷ್ಟ್ಯಗಳೊಂದಿಗೆ ನಿಮ್ಮ ಮುಂದೆ; ಇಲ್ಲಿದೆ ಡೀಟೇಲ್ಸ್

ಸಾಂಕ್ರಾಮಿಕ ರೋಗದ ನಂತರ ಡಿಜಿಟಲ್ ಪಾವತಿಗಳ ಸ್ವೀಕಾರದಲ್ಲಿ ಉತ್ತೇಜನದಿಂದಾಗಿ ಕಳೆದ ವರ್ಷದಲ್ಲಿ ಯುಪಿಐ ವಹಿವಾಟುಗಳಲ್ಲಿನ ತೀವ್ರ ಏರಿಕೆಯು ಸಹ ಇದಕ್ಕೆ ಸಹಾಯ ಮಾಡಿದೆ. ಮಾಸಿಕ ವಹಿವಾಟಿನ ಮೌಲ್ಯಗಳು ಜೂನ್ 2021ರಲ್ಲಿ ರೂ 5.47 ಲಕ್ಷ ಕೋಟಿಗಳಿಂದ ದ್ವಿಗುಣಗೊಂಡಿದೆ, ಜೂನ್ 2022 ರಲ್ಲಿ ರೂ 10.14 ಲಕ್ಷ ಕೋಟಿ ಗಳಿಕೆಯಾಗಿದೆ.

ಫೋನ್ ಪೇ ತನ್ನ QR ಕೋಡ್‌ಗಳ ಮೂಲಕ ದೇಶಾದ್ಯಂತ 32 ಮಿಲಿಯನ್ ವ್ಯಾಪಾರಿ ಪಾಲುದಾರರನ್ನು ಹೊಂದಿದೆ. ಮಾರ್ಚ್ 31, 2022ರಂತೆ 26.7 ಮಿಲಿಯನ್ ವ್ಯಾಪಾರಿ ನೆಲೆಯನ್ನು ಪೇಟಿಎಂ ಹೊಂದಿದೆ.
Published by:Ashwini Prabhu
First published: