Phone scams: ಆ ನಂಬರ್​​​ನಿಂದ ಬಂದ ಕರೆ ಸ್ವೀಕರಿಸಿದ್ರೆ ಮೋಸ ಹೋಗ್ತೀರ.. ಬಚಾವ್ ಆಗೋದು ಹೇಗೆ?

cell phone fraud: ಸೆಲ್‌ಫೋನ್ ಗೆ ಯಾವುದಾದರೂ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದು ಅದನ್ನು ಮಾತಾಡಲು ಕರೆಯನ್ನು ಸ್ವೀಕರಿಸಿದರೆ ಸಾಕು ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ಒಂದು ಕರೆಯ ಮೂಲಕ ನಮ್ಮ ಮೊಬೈಲ್ ಫೋನ್ ಅನ್ನು ಹ್ಯಾಕ್ ಮಾಡುವಂತಹ ಸೈಬರ್ ಕಳ್ಳರಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಅಪರಿಚಿತ ಸಂಖ್ಯೆಯಿಂದ ನಿಮ್ಮ ಮೊಬೈಲ್ ಫೋನ್ ಗೆ ಕರೆ ಬಂದರೆ ಸ್ವೀಕರಿಸಬೇಡಿ, ಏಕೆಂದರೆ ಅದರಲ್ಲಿ ಎಷ್ಟೋ ಕರೆಗಳು ವಂಚಕರ ಸಂಖ್ಯೆಯಿಂದ ಬರುತ್ತಿದ್ದು, ಕರೆ ಸ್ವೀಕರಿಸಿದರೆ ನಿಮ್ಮ ಮೊಬೈಲ್ ನಲ್ಲಿರುವ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಸೈಬರ್ ಕಳ್ಳರು ಕದಿಯುತ್ತಾರೆ. ಈ ಬಗ್ಗೆ ಹುಷಾರಾಗಿರಿ ಎಂದು ಅನೇಕ ಸೂಚನೆಗಳನ್ನು ನೀಡುತ್ತಿದ್ದರೂ ಸಹ ಅಂತಹ ಕರೆಗಳನ್ನು ಸ್ವೀಕರಿಸಿ ಎಡವಟ್ಟು ಮಾಡಿಕೊಳ್ಳುತ್ತೇವೆ. ಈಗಂತೂ ಕೈಗೆ ಮೊಬೈಲ್ ಫೋನ್ (Mobile) ಬಂದ ನಂತರ ದಿನಕ್ಕೆ ಕಡಿಮೆ ಎಂದರೂ 10 ರಿಂದ 20 ಕರೆಗಳು ಬೇರೆ ಬೇರೆ ತರಹದ ನಂಬರ್‌ಗಳಿಂದ ಬರುತ್ತಿದ್ದು, ನಾವು ಅಪರಿಚಿತ ಸಂಖ್ಯೆಯಿಂದ ಬಂದ ಕರೆಯನ್ನು ಸ್ವೀಕರಿಸುವುದಕ್ಕೂ ಮುಂಚೆ ಎರಡು ಬಾರಿ ಯೋಚನೆ ಮಾಡಿ.


ಅಮೆರಿಕಾದವರನ್ನೇ ಬಿಡದ ಸೈಬರ್​ ಕಳ್ಳರು..!

ತಮ್ಮ ಸೆಲ್‌ಫೋನ್ ಗೆ ಯಾವುದಾದರೂ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದು ಅದನ್ನು ಮಾತಾಡಲು ಕರೆಯನ್ನು ಸ್ವೀಕರಿಸಿದರೆ ಸಾಕು ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ಒಂದು ಕರೆಯ ಮೂಲಕ ನಮ್ಮ ಮೊಬೈಲ್ ಫೋನ್ ಅನ್ನು ಹ್ಯಾಕ್ ಮಾಡುವಂತಹ ಸೈಬರ್ ಕಳ್ಳರಿದ್ದಾರೆ ಎಂದರೆ ತಪ್ಪಾಗಲಾರದು. ಈ ಪರಿಸ್ಥಿತಿಯು ಅಮೆರಿಕದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ದೂರವಾಣಿ ಕಂಪನಿಗಳ ಬಳಕೆದಾರರಿಗೆ ಈ ವಂಚನೆಗಳ ಜಾಲಕ್ಕೆ ಸಿಲುಕುತ್ತೇವೆ ಎಂಬ ಆತಂಕ ಸದಾ ಅವರ ಮನಸ್ಸಿನಲ್ಲಿರುತ್ತದೆ.


ಕರೆ ಹಿಂದಿರುತ್ತಾರೆ ಕಳ್ಳರು..!

ಇಂತಹ ಪತ್ತೆಯಾದ ಸುಳ್ಳು ಕರೆಗಳು ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳೊಂದಿಗೆ ಸಂಬಂಧ ಹೊಂದಿರುವುದು ಕಂಡು ಬಂದಿವೆ ಎಂದು ಫೆಡರಲ್ ಕಮ್ಯುನಿಕೇಷನ್ಸ್ ಆಯೋಗ ಹೇಳಿದೆ. ಇದರಲ್ಲಿ ವಂಚನೆ ಮಾಡುವವರು ಹೆಚ್ಚಾಗಿ ಜನರನ್ನು ತಮ್ಮ ಬಲಿಪಶುಗಳಾಗಿ ಮಾಡಿಕೊಳ್ಳಲು ತಾವು ಆ್ಯಪಲ್, ಅಮೆಜಾನ್ ಮತ್ತು ಇತರೆ ಕಂಪೆನಿಗಳ ಸಿಬ್ಬಂದಿಯಂತೆ ನಟಿಸುತ್ತಾರೆ ಎಂದು ತಿಳಿದು ಬಂದಿದೆ.


ಟ್ರೂ ಕಾಲರ್ ಫೋನ್ ಸಂಖ್ಯೆ ಗುರುತಿಸುವ ಅಪ್ಲಿಕೇಷನ್ ನೀಡಿದ ಮಾಹಿತಿಯ ಪ್ರಕಾರ, ಜೂನ್ 2020 ರಿಂದ 2021 ರ ನಡುವೆ, ಈ ಸೆಲ್‌ಫೋನ್ ವಂಚನೆಗಳು ಅಮೆರಿಕದಲ್ಲಿನ 59 ಮಿಲಿಯನ್ ಕ್ಕಿಂತಲೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದ್ದು, ಒಟ್ಟು 29.8 ಬಿಲಿಯನ್ ಡಾಲರ್ ಹಣವನ್ನು ಈ ಸೆಲ್‌ಫೋನ್ ವಂಚನೆಯಲ್ಲಿ ಕಳೆದುಕೊಂಡಿದ್ದು ಬೆಳಕಿಗೆ ಬಂದಿದೆ.


ಮೊಬೈಲ್​ನಲ್ಲಿ ಮಾಹಿತಿ ಕದಿಯುತ್ತಾರೆ ಎಚ್ಚರ..!

ಈ ನಿಟ್ಟಿನಲ್ಲಿ ಮಾಡಲಾದ ತನಿಖೆಯಿಂದ ತಿಳಿದು ಬಂದಂತಹ ವಿಷಯ ಎಂದರೆ ಕೆಲವು ರೋಬೊಕಾಲರ್ ಗಳು ಹೊಸ ಕಾರು ಅಥವಾ ಕಾರಿನ ರೂಫ್ ಅನ್ನು ಕಾನೂನು ಬಾಹಿರವಾದ ಮಾರ್ಗದ ಮೂಲಕ ಮಾರಾಟ ಮಾಡಲು ಪ್ರಯತ್ನಿಸಿದ್ದು ಮತ್ತು ಇತರರು ನಿಮ್ಮ ಸಾಮಾಜಿಕ ಭದ್ರತಾ ಸಂಖ್ಯೆ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದಿಯಲು ಪ್ರಯತ್ನಿಸಿದ್ದು ತಿಳಿದು ಬಂದಿದೆ.


ಇಂತಹ ಹಗರಣಗಳನ್ನು ತಪ್ಪಿಸಲು, ದೂರವಾಣಿ ಇಲಾಖೆಯವರು ಜನರು ಸ್ವೀಕರಿಸುವ ಕರೆಯು ಅವರ ಮೊಬೈಲ್ ಪರದೆಯ ಮೇಲೆ ಮೂಡಿದ ಸಂಖ್ಯೆಯಿಂದಲೇ ಬರುತ್ತಿದೆಯೋ ಅಥವಾ ಇಲ್ಲವೂ ಎನ್ನುವುದರ ಬಗ್ಗೆ ಮಾಹಿತಿಯನ್ನು ಕೊಡುವುದು ಈ ರೀತಿಯ ಹಗರಣಗಳಲ್ಲಿ ತಮ್ಮ ಹಣವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಲು ಸಹಾಯಕವಾಗಿರುತ್ತದೆ.


ಇದನ್ನೂ ಓದಿ: Mobile Radiation: ಈ ಮೊಬೈಲ್​ ಫೋನ್​ಗಳನ್ನು ಬಳಸುತ್ತಿದ್ದರೆ ಎಚ್ಚರ..! ನಿಮ್ಮ ಜೀವಕ್ಕೆ ಕುತ್ತು ತರಬಹುದು ಈ ಫೋನ್​ಗಳು

ಈಗಾಗಲೇ ವೇರಿಝೋನ್, ಎಟಿ ಅಂಡ್ ಟಿ ಯಿಂದ ಹಿಡಿದು ಟಿ-ಮೊಬೈಲ್ ವರೆಗಿನ ದೊಡ್ಡ ದೊಡ್ಡ ದೂರವಾಣಿ ಆಪರೇಟರ್‌ಗಳಿಗೆ ಕೆಲವು ಹೊಸ ಮಾನದಂಡಗಳನ್ನು ಜೂನ್ 30 ರ ಮೊದಲು ಜಾರಿಗೆ ತರಬೇಕೆಂದು ಫೆಡರಲ್ ಸಂಸ್ಥೆ ಹೇಳಿತ್ತು. ಆದಾಗ್ಯೂ 1 ಲಕ್ಷಕ್ಕಿಂತಲೂ ಕಡಿಮೆ ಗ್ರಾಹಕರನ್ನು ಹೊಂದಿದ್ದಂತಹ ದೂರವಾಣಿ ಆಪರೇಟರ್‌ಗಳಿಗೆ ಇನ್ನೂ ಸಮಯವನ್ನು ನೀಡಲಾಗಿದೆ.


ಈ ರೀತಿಯ ವಂಚನೆಗಳಿಗೆ ಜನರು ಬಲಿಪಶುವಾಗದಂತೆ ತಡೆಯಲು ಅನೇಕ ಪ್ರಯತ್ನಗಳು ನಡೆಯುತ್ತಿವೆ, ಆದರೂ ಈ ಸೈಬರ್ ಕಳ್ಳರು ಬೇರೆ ಬೇರೆ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಈ ರೀತಿಯ ಕರೆಗಳಿಗೆ ಉತ್ತರಿಸುವಾಗ ಬಳಕೆದಾರರು ತುಂಬಾ ಜಾಗರೂಕರಾಗಿರಬೇಕು ಎಂದು ತಿಳಿಸಲಾಗಿದೆ. ವೈಯಕ್ತಿಕ ಮಾಹಿತಿಯನ್ನು ನೀವು ಕರೆಯ ಮೂಲಕ ಯಾರೊಂದಿಗೂ ಹಂಚಿಕೊಳ್ಳಬೇಡಿ.

Published by:Kavya V
First published: