ನಿಮ್ಮ ಸ್ಮಾರ್ಟ್​ಫೋನ್​ ಸ್ಲೋ ಆಗಲು ಈ ಆ್ಯಪ್​ಗಳು ಕೂಡ ಕಾರಣವಾಗಿರಬಹುದು..!

ಸಾಮಾನ್ಯವಾಗಿ ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳಲ್ಲಿ ಪ್ರಿ ಇನ್​ಸ್ಟಾಲ್ಡ್​ ಆ್ಯಪ್​ಗಳನ್ನು ತೆಗೆದು ಹಾಕುವ ಆಯ್ಕೆಗಳಿರುವುದಿಲ್ಲ. ಆದರೆ ಫೋನಿನ ಕೆಲ ಸೆಟ್ಟಿಂಗ್ಸ್​​ಗಳನ್ನು ಬಳಸಿಕೊಳ್ಳುವ ಮೂಲಕ ಸ್ಮಾರ್ಟ್​ಫೋನ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ, ನೀವು ಅನುಸರಿಸಬೇಕಾದ ಕೆಲ ಹಂತಗಳನ್ನು ಇಲ್ಲಿ ತಿಳಿಸಲಾಗಿದೆ.

zahir | news18
Updated:June 15, 2019, 2:54 PM IST
ನಿಮ್ಮ ಸ್ಮಾರ್ಟ್​ಫೋನ್​ ಸ್ಲೋ ಆಗಲು ಈ ಆ್ಯಪ್​ಗಳು ಕೂಡ ಕಾರಣವಾಗಿರಬಹುದು..!
@MashTips
  • News18
  • Last Updated: June 15, 2019, 2:54 PM IST
  • Share this:
ಇದಕ್ಕಿದ್ದಂತೆ ನನ್ನ ಫೋನ್ ಹ್ಯಾಂಗ್ ಆಗಿ ಬಿಡುತ್ತದೆ. ಇನ್ನು ಕೆಲ ಬಾರಿ ತುಂಬಾ ಸ್ಲೋ ಆಗಿ ಕಾರ್ಯ ನಿರ್ವಹಿಸುತ್ತದೆ. ಅದರಲ್ಲೂ ಕೆಲ ಆ್ಯಪ್​ಗಳ ಮೇಲೆ ಕ್ಲಿಕ್ ಮಾಡಿದರೆ ಒಪನ್ ಆಗಲು ಐದಾರು ನಿಮಿಷಗಳೇ ಬೇಕು. ಫುಲ್ ಚಾರ್ಜ್​ ಮಾಡಿದರೂ ಬ್ಯಾಟರಿ ನಿಲ್ಲುತ್ತಿಲ್ಲ ಎಂಬಿತ್ಯಾದಿಗಳ ದೂರುಗಳನ್ನು ನೀವು ಹೇಳಿರುತ್ತೀರಿ ಅಥವಾ ಕೇಳಿರುತ್ತೀರಿ.

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್​ಫೋನ್​ಗಳಲ್ಲಿ ಇಂತಹ ಸಮಸ್ಯೆ ಸಮಾನ್ಯವಾಗಿ ಬಿಟ್ಟಿದೆ. ಆದರೆ ಇದಕ್ಕೆ ನಿಮ್ಮ ಮೊಬೈಲ್​ನಲ್ಲಿರುವ ಕೆಲ ಆ್ಯಪ್​ಗಳೂ ಕೂಡ ಕಾರಣ ಎನ್ನುತ್ತಾರೆ ಸ್ಮಾರ್ಟ್​ಫೋನ್ ತಜ್ಞರು.  ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್​ಫೋನ್​ಗಳಲ್ಲಿ ಹಲವು ಅಪ್ಲಿಕೇಶನ್​ಗಳನ್ನು ಮೊದಲ ಇನ್​ಸ್ಟಾಲ್ ಮಾಡಿರಲಾಗಿರುತ್ತವೆ. ಇದರಲ್ಲಿ ಕೆಲವೊಂದನ್ನು ಬಳಸಿರುವುದೇ ಇಲ್ಲ. ಆದರೂ ಕಂಪೆನಿ ನೀಡಿದ್ದು ಎಂದು ಹಾಗೆಯೇ ಉಳಿಸಿಕೊಂಡಿರುತ್ತೀರಿ.

ಇಂತಹ ಆ್ಯಪ್​ಗಳು ಫೋನಿನ ಬ್ಯಾಟರಿ ಮತ್ತು ಪ್ರೊಸೆಸರ್ ಮೇಲೆ ಪರಿಣಾಮ ಬೀರುತ್ತವೆ. ಹೀಗೆ ಪರಿಣಾಮ ಬೀರುವ ಅಪ್ಲಿಕೇಶನ್​ಗಳನ್ನು ಬ್ಲೋಟ್​ವೆಯರ್ ಎಂದು ಕರೆಯಲಾಗುತ್ತದೆ. ಪ್ರಿ ಇನ್​ಸ್ಟಾಲ್ ಆಗಿರುವ ಈ ಅಪ್ಲಿಕೇಶನ್​ಗಳನ್ನು ಅನ್​ಇನ್​ಸ್ಟಾಲ್ ಮಾಡುವ ಅವಕಾಶವಿರುವುದಿಲ್ಲ. ಆದರೆ ಇವುಗಳನ್ನು ನಿರ್ಬಂಧಿಸುವ ಮೂಲಕ ನಿಮ್ಮ ಮೊಬೈಲ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಸಾಮಾನ್ಯವಾಗಿ ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳಲ್ಲಿ ಪ್ರಿ ಇನ್​ಸ್ಟಾಲ್ಡ್​ ಆ್ಯಪ್​ಗಳನ್ನು ತೆಗೆದು ಹಾಕುವ ಆಯ್ಕೆಗಳಿರುವುದಿಲ್ಲ. ಆದರೆ ಫೋನಿನ ಕೆಲ ಸೆಟ್ಟಿಂಗ್ಸ್​​ಗಳನ್ನು ಬಳಸಿಕೊಳ್ಳುವ ಮೂಲಕ ಸ್ಮಾರ್ಟ್​ಫೋನ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ, ನೀವು ಅನುಸರಿಸಬೇಕಾದ ಕೆಲ ಹಂತಗಳನ್ನು ಇಲ್ಲಿ ತಿಳಿಸಲಾಗಿದೆ.

ಮೊಬೈಲ್ ಸೆಟ್ಟಿಂಗ್ಸ್​:

. ನಿಮ್ಮ ಸ್ಮಾರ್ಟ್​ಫೋನ್​ ಸೆಟ್ಟಿಂಗ್‌ನಲ್ಲಿರುವ  'ಜನರಲ್' ಆಯ್ಕೆಗೆ ಹೋಗಿ. ಇಲ್ಲಿ 'ಆ್ಯಪ್ಸ್ ಅ್ಯಂಡ್ ನೋಟಿಫಿಕೇಶನ್' ಆಯ್ಕೆ ಮಾಡಿ.
. ಇಲ್ಲಿ, ಅಪ್ಲಿಕೇಶನ್ ಆಯ್ಕೆ ಮಾಡಿದರೆ 'ಅನ್​ಇನ್​ಸ್ಟಾಲ್' ಮತ್ತು 'ಫೋರ್ಸ್ ಸ್ಟಾಪ್' ಎಂಬ ಎರಡು ಆಯ್ಕೆಗಳು ಕಾಣಿಸುತ್ತದೆ.. ಹಾಗೆಯೇ ಕೆಲ ಪ್ರಿ ಇನ್​ಸ್ಟಾಲ್ ಅಪ್ಲಿಕೇಶನ್​ಗಳಲ್ಲಿ ಅನ್​ಇನ್​ಸ್ಟಾಲ್ ಆಯ್ಕೆಗಳಿರುವುದಿಲ್ಲ.
. ಇನ್ನು ಪ್ರಿ ಇನ್​ಸ್ಟಾಲ್ ಆ್ಯಪ್​ಗಳನ್ನು ಟ್ಯಾಪ್ ಮಾಡಿದಾಗ ಡಿಸೆಬಲ್(ನಿಷ್ಕ್ರಿಯ) ಆಯ್ಕೆಯೊಂದು ಕಾಣಿಸುತ್ತದೆ.
. ಇಲ್ಲಿ ನೀವು ಅಪ್ಲಿಕೇಶನ್​ಗಳನ್ನು ಡಿಸೆಬಲ್ ಮಾಡಿಕೊಳ್ಳಬಹುದು. ಇದರಿಂದ ಆ್ಯಪ್​ಗಳು ಒಂದಾರ್ಥದಲ್ಲಿ ಸ್ವಿಚ್ ಆಫ್ ಆಗುತ್ತದೆ ಮತ್ತು ಫೋನ್‌ನಲ್ಲಿ ಗೋಚರಿಸುವುದಿಲ್ಲ.

Google ಪ್ಲೇ ಸ್ಟೋರ್ ಸೆಟ್ಟಿಂಗ್ಸ್​:

ಇನ್ನು ನೀವು ಸೆಟ್ಟಿಂಗ್ಸ್​ನಲ್ಲಿ ಅಪ್ಲಿಕೇಶನ್​ಗಳನ್ನು ನಿಷ್ಕ್ರೀಯಗೊಳಿಸಲು ಸಾಧ್ಯವಾಗದಿದ್ದರೆ Google Play store ಗಳಿಂದ ನೇರವಾಗಿ ಡಿಸಬೆಲ್ ಮಾಡಿಕೊಳ್ಳಬಹುದು.
. ಗೂಗಲ್ ಪ್ಲೇ ಸ್ಟೋರ್ ಆ್ಯಪ್ ಒಪನ್ ಮಾಡಿ. ಮೇಲೆ ಎಡಭಾಗದಲ್ಲಿರುವ ಐಕಾನ್‌ ಮೂಲಕ ಮೆನು ಆಯ್ಕೆಯನ್ನು ತೆರೆಯಿರಿ.
. ಇಲ್ಲಿ ನೀವು 'ಮೈ ಆ್ಯಪ್ಸ್​ ಅ್ಯಂಡ್ ಗೇಮ್ಸ್​' ಆಯ್ಕೆ ಮೇಲೆ ಕ್ಲಿಕ್ ಮಾಡಿ.
. ಆ ಬಳಿಕ ನೀವು ಬಯಸುವ ಆ್ಯಪ್​ನ್ನು ಆಯ್ಕೆ ಮಾಡಿ. ಅದರ ಮೇಲೆ ಕ್ಲಿಕ್ ಮಾಡಿಕೊಳ್ಳುವ ಮೂಲಕ ಅನ್​ಇನ್​ಸ್ಟಾಲ್ ಅಥವಾ ಡಿಸೆಬಲ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: 'ಕೊಡಗು ಆಸ್ಪತ್ರೆ ಅಭಿಯಾನ'ಕ್ಕೆ ಕೈ ಜೋಡಿಸಿದ ರಶ್ಮಿಕಾ ಮಂದಣ್ಣ
First published:June 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ