ಇನ್ಮುಂದೆ ಕಾರ್ಡ್​ ಬಳಸದೇ 'ಎಟಿಎಂ'ನಿಂದ ಹಣ ಪಡೆಯಬಹುದು: ಹೇಗಂತೀರಾ?

ಈಗಾಗಲೇ ದೇಶದ ಪ್ರಮುಖ ಬ್ಯಾಂಕುಗಳಿಗೆ ಎಟಿಎಂ ಯಂತ್ರಗಳನ್ನು ಪೂರೈಸುತ್ತಿರುವ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜಿ ಹೊಸ ಎಟಿಎಂಗಳಲ್ಲಿ ಕ್ಯೂಆರ್​ ಕೋಡ್ ಅಳವಡಿಸಲು ನಿರ್ಧರಿಸಿದೆ.

zahir | news18
Updated:December 6, 2018, 3:51 PM IST
ಇನ್ಮುಂದೆ ಕಾರ್ಡ್​ ಬಳಸದೇ 'ಎಟಿಎಂ'ನಿಂದ ಹಣ ಪಡೆಯಬಹುದು: ಹೇಗಂತೀರಾ?
ATM
zahir | news18
Updated: December 6, 2018, 3:51 PM IST
ಡೆಬಿಟ್ ಕಾರ್ಡ್​ ಬಳಕೆದಾರರು ಇನ್ನು ಮುಂದೆ ಹಣ ವಿತ್​ಡ್ರಾ ಮಾಡಲು ಎಟಿಎಂನಲ್ಲಿ ಕಾರ್ಡ್​ ಸ್ವೈಪ್ ಮಾಡಬೇಕೆಂದಿಲ್ಲ. ಮೊಬೈಲ್ ಮೂಲಕವೇ ಸ್ಕ್ಯಾನ್ ಮಾಡಿ ಹಣ ಪಡೆಯಬಹುದಾಗಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಶೀಘ್ರದಲ್ಲೇ ಎಲ್ಲ ಪ್ರಮುಖ ಎಟಿಎಂ ಯಂತ್ರಗಳಲ್ಲಿ ಈ ಸೌಲಭ್ಯ ದೊರೆಯಲಿದೆ.

ಸ್ಯ್ಕಾನ್ ಮಾಡಿ ಹಣ ಪಡೆಯಬಹುದು ಹೇಗೆ?
ಸಾಮಾನ್ಯವಾಗಿ ಡಿಜಿಟಲ್​ ಪೇನಲ್ಲಿ ಬಳಸಲಾಗುವ ಕ್ಯೂಆರ್ ಕೋಡ್​ನ್ನು ಎಟಿಎಂಗಳಲ್ಲಿ ಅಳವಡಿಸಲಾಗುತ್ತದೆ. ಅಲ್ಲದೆ ಎಟಿಎಂ ಬಳಕೆದಾರರಿಗೆ ಹೊಸದೊಂದು ಆ್ಯಪ್ ಕೂಡ ಲಭ್ಯವಾಗಲಿದ್ದು, ಈ ಅಪ್ಲಿಕೇಶನ್​ ಮೂಲಕ ಎಟಿಎಂ ಯಂತ್ರದಲ್ಲಿರುವ ಕ್ಯೂಆರ್​ ಕೋಡ್​ನ್ನು ಸ್ಕ್ಯಾನ್ ಮಾಡಿ ಹಣ ವಿತ್​ಡ್ರಾ ಮಾಡಿಕೊಳ್ಳಬಹುದು. ಶೀಘ್ರದಲ್ಲೇ ಯುಪಿಐ ಆ್ಯಪ್ ಮೂಲಕ ವಹಿವಾಟು ನಡೆಸುತ್ತಿರುವವರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ತಿಳಿಸಲಾಗಿದೆ.

ಎಜಿಎಸ್ ಟ್ರಾನ್ಸಾಕ್ಟ್​ ಟೆಕ್ನಾಲಜಿಯ ಹೊಸ ಸಂಶೋಧನೆ
ಈಗಾಗಲೇ ದೇಶದ ಪ್ರಮುಖ ಬ್ಯಾಂಕುಗಳಿಗೆ ಎಟಿಎಂ ಯಂತ್ರಗಳನ್ನು ಪೂರೈಸುತ್ತಿರುವ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜಿ ಹೊಸ ಎಟಿಎಂಗಳಲ್ಲಿ ಕ್ಯೂಆರ್​ ಕೋಡ್ ಅಳವಡಿಸಲು ನಿರ್ಧರಿಸಿದ್ದು, ಇದಕ್ಕಾಗಿ ನ್ಯಾಷನಲ್ ಕಾರ್ಪೋರೇಷನ್ ಆಫ್ ಇಂಡಿಯಾದ ಅನುಮತಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಬಳಿಕ ಎಟಿಎಂ ನಲ್ಲಿ ಕಾರ್ಡ್​ ಸ್ವೈಪ್ ಮಾಡದೇ ಹಣವನ್ನು ಪಡೆದುಕೊಳ್ಳುವ ಸೌಲಭ್ಯ ಒದಗಿ ಬರಲಿದೆ.

ಇದನ್ನೂ ಓದಿ: 6400 ರೂ. ಬೆಲೆಯ ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಿ: ನಿಮ್ಮ ಹತ್ತಿರದ ಮೆಡಿಕಲ್ ಶಾಪ್​ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Loading...

ಹೊಸ ತಂತ್ರಜ್ಞಾನದ ಮೂಲಕ ಎಟಿಎಂ ವಂಚನೆಗಳನ್ನು ತಡೆಯಲು ಬ್ಯಾಂಕುಗಳು ಮುಂದಾಗಿದ್ದು, ಹೀಗಾಗಿ ಕ್ಯೂಆರ್ ಕೋಡ್ ವಿತ್​ಡ್ರಾ ಸೌಲಭ್ಯವನ್ನು ಎಲ್ಲ ಬ್ಯಾಂಕುಗಳು ಒಪ್ಪಿಕೊಳ್ಳಲಿದೆ ಎನ್ನಲಾಗಿದೆ. ಇದರಿಂದ ಡೆಬಿಟ್ ಕಾರ್ಡ್​ ಬಳಕೆ ವೇಳೆ ನಡೆಯುತ್ತಿರುವ ವಂಚನೆ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ ಎಂದು ಎಜಿಎಸ್ ಕಂಪೆನಿ ಹೇಳಿಕೊಂಡಿದೆ.

ಇದನ್ನೂ ಓದಿ: ಐತಿಹಾಸಿಕ ಸಾಧನೆ: 32 ಕಿ.ಮೀ ದೂರದಿಂದಲೇ ಶಸ್ತ್ರಚಿಕಿತ್ಸೆ ನಡೆಸಿದ ಭಾರತೀಯ ವೈದ್ಯರು

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626