ಇಂದಿನ ದಿನಮಾನಗಳು ಮುಂಚಿನಂತೆ ಸಾಮಾನ್ಯವಾಗಿಲ್ಲ. ತಂತ್ರಜ್ಞಾನ (Technology) ಹಿಂದೆಂದಿಗಿಂತಲೂ ಸಾಕಷ್ಟು ಅಭಿವೃದ್ಧಿಗೊಂಡಿದೆ ಅಂತೆಯೇ ಸಾಮಾಜಿಕ ಮಾಧ್ಯಮಗಳು ಇಂದು ಬಹು ಪ್ರಭಾವಶಾಲಿಗಳಾಗಿದ್ದು ಲಕ್ಷಾನುಗಟ್ಟಲೆ ಜನರು ಅದರಿಂದ ಪ್ರಭಾವಿತರಾಗಿದ್ದಾರೆ. ನಿತ್ಯ ಏನಾದರೊಂದು ಜೀವನಶೈಲಿ, ಬದುಕು, ಮನಸ್ಥಿತಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ವಿಷಯಗಳು ಟ್ರೆಂಡ್ (Trend) ಆಗುತ್ತಲೇ ಇರುತ್ತವೆ. ಹಲವು ಜನರು ವಿಶಿಷ್ಟವಾಗಿ ಕೆಲ ಕೆಲಸಗಳನ್ನು ಹೇಗೆ ಸುಲಭವಾಗಿ ಮಾಡಿಕೊಳ್ಳಬಹುದು ಅಥವಾ ಮಾಡಿಸಿಕೊಳ್ಳಬಹುದು ಎಂಬುದರ ಬಗ್ಗೆ ವಿಡಿಯೋ ಮಾಡಿ ಹಂಚಿಕೊಳ್ಳುತ್ತಿರುತ್ತಾರೆ.
ಹೀಗೆ ನಿತ್ಯ ಏನಾದರೊಂದು ಮೂಡ್ ಅಥವಾ ಮೋಡ್ ಟ್ರೆಂಡ್ ಆಗುತ್ತಿರುತ್ತವೆ. ಇದೀಗ ಮಾಂಕ್ ಮೋಡ್ ಸಾಕಷ್ಟು ಟ್ರೆಂಡ್ ಆಗಿದ್ದು ಗಮನಸೆಳೆಯುತ್ತಿದೆ ಎನ್ನಬಹುದು.
ಈ ಹಿಂದೆ ಡೈನಮಿಕ್ ಅನ್ನಬಹುದಾಗಿದ್ದ ಗಾಬ್ಲಿನ್ ಮೋಡ್ ಚಾಲ್ತಿಯಲ್ಲಿತ್ತು. ಆದರೆ ಇದೀಗ ಗಾಬ್ಲಿನ್ ಬದಲು ಮಾಂಕ್ ಮೋಡ್ ಜನಪ್ರೀಯತೆ ಪಡೆಯುತ್ತಿದೆ. ಅಯ್ಯಯ್ಯೊ ಇದೇನು ಮಾಂಕ್ ಮೋಡ್? ಇದರಲ್ಲಿ ಹಿಮಾಲಯಕ್ಕೇನಾದರೂ ಹೋಗಬೇಕಾ? ಇಲ್ಲವೆ ಆಸ್ತಿ ಸಂಪತ್ತುಗಳನ್ನೆಲ್ಲ ದಾನ ಮಾಡಬೇಕಾ ಎಂದು ಗಾಬರಿಗೊಳ್ಳದಿರಿ.
ಹಾಗಾದರೆ ಮಾಂಕ್ ಮೋಡ್ ಎಂದರೇನು?
* ಮಾಂಕ್ ಮೋಡ್ ಅಡಿಯಲ್ಲಿ ಸಿದ್ಧಾಂತ ಎಂಬುದು ಹೊಸದಾಗೇನಿಲ್ಲ, ಆದರೆ ಈ ಪದ ಬಳಕ್ಕೆ ಸಾಕಷ್ಟು ವಿಶೇಷತೆಯನ್ನು ಒದಗಿಸಿದೆ ಅಷ್ಟೆ.
* ಈ ಮೋಡ್ ಅಡಿಯಲ್ಲಿ ಏಕಾಂತತೆ ಹಾಗೂ ಸನ್ಯಾಸಿಗಳ ಜೀವನ ಶಿಸ್ತನ್ನು ಕೆಲ ಆಯಾಮಗಳಾಗಿ ಅಳವಡಿಸಿಕೊಳ್ಳುವುದಾಗಿದೆ
* ಈ ಮೋಡ್ ನಲ್ಲಿ ನೀವೊಂದು ಗುರಿಯನ್ನು ಗೊತ್ತುಅಪಡಿಸಿಕೊಂಡು ಅದನ್ನು ಸಾಧಿಸುವಲ್ಲಿ ಮಾಂಕ್ ರೀತಿಯಲ್ಲಿ ನಿಮ್ಮ ಜೀವನದಲ್ಲಿ ಕೆಲ ಬದಲಾವಣೆ ಹಾಗೂ ಶಿಸ್ತನ್ನು ರೂಢಿಸಿಕೊಂಡು ಪ್ರಯತ್ನಿಸುವುದೇ ಇದರ ಹೈಲೈಟ್.
ಮಾಂಕ್ ಮೋಡ್ ಅನ್ನು ಪ್ರಯತ್ನಿಸುವುದು ಹೇಗೆ?
ಮೊದಲನೇಯದಾಗಿ ಇದು ಶಾಶ್ವತ ಅಂತೇನಿಲ್ಲ. ಇದನ್ನು ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಅಭ್ಯಸಿಸಬಹುದಾಗಿದೆ. ಅದು ದಿನದಲ್ಲಿ ಕೆಲ ಸಮಯ ಇರಬಹುದು, ಇಲ್ಲವೇ ವಾರಗಳಿರಬಹುದು ಅಥವಾ ತಿಂಗಳಾಗಿರಬಹುದು.
* ಮೊದಲಿಗೆ ದಿನದಲ್ಲಿ ಇಂತಿಷ್ಟು ಅಂದರೆ ಒಂದು ಗಂಟೆಯೋ ಅಥವಾ ಎರಡು ಗಂಟೆಯೋ ಮಾಂಕ್ ಮೋಡ್ ಹೊಂದುವ ಗುರಿ ಹಾಕಿಕೊಳ್ಳಿ.
* ಕೆಲವೊಮ್ಮೆ ನೀವು ಏನಾದರೊಂದನ್ನು ಮಾಡಬೇಕೆಂದುಕೊಂಡು ಪ್ರತಿ ಬಾರಿ ಅದನ್ನು ಮುಂದೂಡುತ್ತಿರುತ್ತೀರಿ. ಅದನ್ನು ತಡೆಯಲು ಹಾಗೂ ಆ ಕೆಲಸ ಮಾಡಬೇಕೆಂಬ ಗುರಿ ಇಟ್ಟುಕೊಂಡು ಮಾಂಕ್ ಮೋಡ್ ಪ್ರವೇಶಿಸಿ.
ಇದನ್ನೂ ಓದಿ: ಅತಿಯಾಗಿ ಮೊಬೈಲ್ ಬಳಸ್ಬೇಡಿ ಎಂದಿದ್ಯಾಕೆ ಸೆಲ್ ಫೋನ್ ಪಿತಾಮಹ ಮಾರ್ಟಿನ್ ಕೂಪರ್? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್
* ಒಂದೊಮ್ಮೆ ಮಾಂಕ್ ಮೋಡ್ ಗೆ ಹೋದ ಬಳಿಕ ಯಾವ ಯಾವ ಕೆಲಸಗಳನ್ನು ಮಾಡಬೇಕೆಂದು ಪಟ್ಟಿ ಮಾಡಿಕೊಂಡು ಅದರಂತೆ ಆ ಕೆಲಸಗಳಿಗೆ ಆದ್ಯತೆ ನೀಡಿ.
* ಮಾಂಕ್ ಮೋಡ್ ನಲ್ಲಿದ್ದಾಗ ನೀವು ನಿಮ್ಮೆಲ್ಲ ದುರ್ಬಲತೆಗಳ ಮೇಲೆ ನಿಯಂತ್ರಣ ಹೊಂದಬೇಕು. ಶಾಂತ ಪರಿಸರ ಮಾಡಿಕೊಳ್ಳಿ ಹಾಗು ನಿಮಗೆ ಅಡಚಣೆ ಉಂಟು ಮಾಡಬಹುದಾದ ಜನ, ಫೋನ್ ಗಳಿಂದ ದೂರವಿರಿ.
* ಈ ಸಂದರ್ಭದಲ್ಲಿ ನೀವು ಪ್ರೋಮೋಡೊರೊ ತಂತ್ರವನ್ನು ಸಹ ಬಳಸಬಹುದು. ಅಂದರೆ ಇಪ್ಪತ್ತೈದು ನಿಮಿಷಗಳ ಕಾಲ ಸತತ ಕೆಲಸ ಮಾಡಿ ಐದು ನಿಮಿಷ ವಿಶ್ರಾಂತಿ ಪಡೆಯುವುದು.
* ಪ್ರತಿ ಬಾರಿ ನೀವು ಮಾಂಕ್ ಮೋಡ್ ಗೆ ಹೋದಾಗ ನೀವು ಏನೆಲ್ಲ ಸಾಧಿಸುತ್ತಿರುವಿರಿ ಎಂಬುದರ ಮೇಲೆ ನಿಗಾವಹಿಸಿ.
* ಒಂದು ಬಾರಿ ಮಾಡಿ ಬಿಡುವುದನ್ನು ಮಾಡದೆ ನಿಯಮಿತವಾಗಿ ಇದನ್ನು ಅಭ್ಯಾಸ ಮಾಡಿ
ಈಗ ಮಾಂಕ್ ಮೋಡ್ ಜನಪ್ರೀಯವಾಗುತ್ತಿರುವುದೇಕೆ?
ಕೇವಲ ಇಪ್ಪತ್ತು ವರ್ಷಗಳ ಹಿಂದೆ ನಾವು ಹೇಗಿದ್ದೇವು ಎಂಬುದನ್ನು ಒಮ್ಮೆ ಸ್ಮರಿಸಿಕೊಳ್ಳಿ. ಆಗ ಟಿಕ್ ಟಾಕ್, ಯುಟ್ಯೂಬ್ ಅಥವಾ ಇತರೆ ವಿಡಿಯೋ ಮಾಧ್ಯಮಗಳಿರಲಿಲ್ಲ. ಹಾಗಾಗಿ ನಾವು ಫೋನ್ ಬಳಸುತ್ತಿದ್ದರೂ ಅಷ್ಟೊಂದಾಗಿ ಅದರಲ್ಲಿ ಸಮಯ ಕಳೆಯುತ್ತಿರಲಿಲ್ಲ.
ಆದರೆ ಇಂದು ಎಲ್ಲವೂ ಬದಲಾಗಿದೆ. ನಾವು ನಿತ್ಯ ಇನ್ನೂ ಸ್ವಲ್ಪ, ಇನ್ನೂ ಸ್ವಲ್ಪ ಅಂತ ಸಾಕಷ್ಟು ಪ್ರಮಾಣದ ನಮ್ಮ ಸಮಯವನ್ನು ಈ ವಿಡಿಯೋಗಳನ್ನು ನೋಡುವುದರಲ್ಲಿ ವ್ಯರ್ಥ ಮಾಡುತ್ತೇವೆ. ಇದರಿಂದಾಗಿ ಎಷ್ಟೋ ಕೆಲಸಗಳನ್ನು ಮಾಡಲು ಸಫಲರಾಗುತ್ತೇವೆ. ಅಲ್ಲದೆ ಇದರಿಂದ ಮುಂದೆ ಮಾನಸಿಕ ಆರೋಗ್ಯದ ಮೇಲೆಯೂ ಪ್ರಭಾವ ಬೀರಬಹುದು.
ಇದನ್ನೂ ಓದಿ: ಇನ್ಮುಂದೆ ಬೆಂಕಿ ಇಲ್ಲದೇ ಅನ್ನ-ಮೊಟ್ಟೆ ಬೇಯಿಸಬಹುದು! ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕುಕ್ಕರ್
ಹಾಗಾಗಿ ನಮ್ಮ ಸಮಯವನ್ನು ಈ ಮಾಯೆಯ ಇಂಟರ್ನೆಟ್ ಲೋಕದಿಂದ ಉಳಿಸಲು ಅನುಕೂಲವಾಗುವಂತೆ ಮಾಂಕ್ ಮೋಡ್ ಟ್ರೆಂಡ್ ಬಂದಿದ್ದು ಇದು ಒಂದು ಡಿಜಿಟಲ್ ಡಿಟಾಕ್ಸ್ ಆಗಿದೆ ಅಂತಾನೂ ಹೇಳಬಹುದು.
ಇಲ್ಲಿ ಮಾಂಕ್ ಮೋಡ್ ಎಂದರೆ ನಮ್ಮನ್ನು ನಾವು ಮಾಂಕ್ ಅನ್ನಾಗಿ ಪರಿವರ್ತಿಸಿಕೊಳ್ಳುವುದಲ್ಲ ಬದಲಾಗಿ ಮಾಂಕ್ ಅಂದರೆ ಸನ್ಯಾಸಿಗಳಲ್ಲಿರುವ ಕೆಲ ಸಿದ್ಧಾಂತ ಹಾಗೂ ಶಿಸ್ತಿನ ಅಭ್ಯಾಸಗಳನ್ನು ನಾವು ನಮ್ಮ ಜೀವನದ ಕೆಲ ಭಾಗಗಳಲ್ಲಿ ಅಳವಡಿಸಿಕೊಳ್ಳುವುದಾಗಿದೆ ಅಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ