2022ರ ಫಿಫಾ ವಿಶ್ವಕಪ್ ( Fifa World Cup 2022) ಈ ಬಾರಿ ದಾಖಲೆಯ ಮೇಲೆ ದಾಖಲೆಯನ್ನು ಸೃಷ್ಟಿಸುತ್ತಿದೆ. ಕತಾರ್ನ ಹಲವು ನಗರಗಳಲ್ಲಿ ನಡೆದಂತಹ ಮೊದಲ ವಿಶ್ವಕಪ್ ಫುಟ್ಬಾಲ್ ( Football World Cup) ಪಂದ್ಯಾಟವೆಂದು ಕೀರ್ತಿಯನ್ನು ಪಡೆದಿದ್ದ ಫಿಫಾ ವರ್ಲ್ಡ್ಕಪ್ ಈಗ ಮತ್ತೊಂದು ದಾಖಲೆಯನ್ನು ಸೃಷ್ಟಿಸಿದೆ. ಗೂಗಲ್ನಲ್ಲಿ ಈ ಬಾರಿ ಫಿಫಾ ವಿಶ್ವಕಪ್ ಬಗ್ಗೆ 100 ಕೋಟಿಗೂ ಹೆಚ್ಚು ಜನರು ಹುಡುಕಾಟ ನಡೆಸಿದ್ದಾರೆ, ಜೊತೆಗೆ ಇದು ಗೂಗಲ್ನ ಟ್ರಾಫಿಕ್ ( Google Traffic) ಅನ್ನು ಇನ್ನಷ್ಟು ಹೆಚ್ಚಿದೆ ಎಂದು ಗೂಗಲ್ ಸಿಇಒ (Google CEO Sundar Pichai) ಸುಂದರ್ ಪಿಚೈಯವರು ಟ್ವೀಟ್ ಮಾಡುವ ಮೂಲಕ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಗೂಗಲ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ 2022ರ ಬಗ್ಗೆ ಈ ರೀತಿಯ ಸಂಖ್ಯೆಯಲ್ಲಿ ಹುಡುಕಾಟ ನಡೆಸಿದ್ದಾಗಿದೆ.
ಗೂಗಲ್ನ 25 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಒಂದು ದಾಖಲೆಯನ್ನು ಸೃಷ್ಟಿಸಿದೆ. ಫಿಫಾ ವಿಶ್ವಕಪ್ 2022ರ ಫೈನಲ್ ಪಂದ್ಯಾಟದ ಬಗ್ಗೆ ಗೂಗಲ್ನಲ್ಲಿ ಅತೀಹೆಚ್ಚು ಜನರು ಸರ್ಚ್ ಮಾಡಿದ್ದು, ಇದರಿಂದ ಗೂಗಲ್ನ ಟ್ರಾಫಿಕ್ ಕೂಡ ಹೆಚ್ಚಾಗಿದೆ ಎಂದು ಗೂಗಲ್ ಸಿಇಒ ಟ್ವಿಟರ್ ಮೂಲಕ ಅಚ್ಚರಿಯ ಸಂಗತಿಯೊಂದನ್ನು ಟ್ವೀಟ್ ಮಾಡಿದ್ದಾರೆ.
ಇಡೀ ವಿಶ್ವದ ನೋಟ ಫಿಫಾ ವಿಶ್ವಕಪ್ನತ್ತ
ಹೌದು, ಇದೇ ಡಿಸೆಂಬರ್ 18, ಭಾನುವಾರದಂದು ಫ್ರಾನ್ಸ್ ಮತ್ತು ಅರ್ಜೆಂಟೀನಾದ ಮಧ್ಯೆ ಫೈನಲ್ ಪಂದ್ಯಾಟ ನಡೆಯಿತು. ಈ ಬಗ್ಗೆ ಇಡೀ ಜಗತ್ತೇ ಹುಡುಕಾಟ ನಡೆಸಿರಬಹುದು ಎಂದು ಯುಎಸ್ನ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಸಂಶೋಧನಾ ವಿಜ್ಞಾನಿ ಲೆಕ್ಸ್ ಫ್ರಿಡ್ಮಾ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: ದಾಖಲೆ ನಿರ್ಮಿಸಿದ ಜಿಯೋ ಸಿನೆಮಾ! ಡೌನ್ಲೋಡ್ ಆ್ಯಪ್ ಲೀಸ್ಟ್ನಲ್ಲಿ ನಂ.1
ಗೂಗಲ್ ಸಿಇಒ ಟ್ವೀಟ್
ಗೂಗಲ್ನ 25 ವರ್ಷಗಳ ಇತಿಹಾಸದಲ್ಲಿ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯಾಟದ ಬಗ್ಗೆ 100 ಕೋಟಿಗೂ ಹೆಚ್ಚು ಜನರು ಹುಡುಕಿರುವುದು ಇದೇ ಮೊದಲ ಬಾರಿಗೆ. ಇದು ಗೂಗಲ್ ಇತಿಹಾಸದಲ್ಲಿ ಆದಂತಹ ಒಂದು ದಾಖಲೆ ಅಂತಾನೂ ಹೇಳ್ಬಹುದು. ಈ ಮೂಲಕ ಗೂಗಲ್ನ ಟ್ರಾಫಿಕ್ ರೇಟ್ ಕೂಡ ಹೆಚ್ಚಾಗಿದೆ ಎಂದು ಸುಂದರ್ ಪಿಚೈ ಅವರು ಟ್ವೀಟ್ ಮೂಲಕ ಬರೆದಿದ್ದಾರೆ.
ಸುಂದರ್ ಪಿಚೈ ಅವರ ಟ್ವೀಟ್ಗೆ ಅಭಿಮಾನಿಗಳ ಪ್ರತಿಕ್ರಿಯೆ
ಸುಂದರ್ ಪಿಚೈ ತಮ್ಮ ಟ್ವಿಟರ್ನಲ್ಲಿ ಗೂಗಲ್ ದಾಖಲೆ ಬಗ್ಗೆ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಫುಟ್ಬಾಲ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಗಳು ಬಂದಿದೆ. ಇದರಲ್ಲಿ ಕೆಲವರು ಇದೊಂದು ಅದ್ಭುತ ವಿಷಯ, ಈ ಬಗ್ಗೆ ನಮಗೆ ಹೆಮ್ಮೆ ಇದೆ. ಫುಟ್ಬಾಲ್ ಎಲ್ಲರನ್ನೂ ಈ ಮೂಲಕ ಒಗ್ಗೂಡಿಸಿದೆ ಎಂದು ಹೇಳಿದ್ದಾರೆ. ಒಟ್ಟಾಗಿ ಗೂಗಲ್ ಸಿಇಒ ಅವರ ಟ್ವೀಟ್ಗೆ ಒಟ್ಟಾಗಿ ಒಂದು ಬಿಲಿಯನ್ಗಿಂತಲೂ ಹೆಚ್ಚು ಜನರು ಪ್ರತಿಕ್ರಿಯೆ ನೀಡಿದ್ದಾರೆ ಎಮದು ಹೇಳಲಾಗಿದೆ.
"ಇಯರ್ ಇನ್ ಸರ್ಚ್ 2022" ಲೀಸ್ಟ್ನಲ್ಲಿ ಟಾಪ್ 3 ಸ್ಥಾನ
ಇನ್ನು ಗೂಗಲ್ ಪ್ರತೀ ಬಾರಿ ವರ್ಷಾಂತ್ಯದಲ್ಲಿ ಆ ವರ್ಷ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದೆಮದು ಎನಲೈಸ್ ಮಾಡುತ್ತದೆ. ಅದೇ ರೀತಿ ಈ ಬಾರಿಯ ವಿಶ್ಲೇಷಣೆ ಪ್ರಕಾರ ಗೂಗಲ್ನಲ್ಲಿ ಇಯರ್ ಇನ್ ಸರ್ಚ್ 2022 ಪಟ್ಟಿಯಲ್ಲಿ ಟಾಪ್ ಮೂರನೇ ಸ್ಥಾನದಲ್ಲಿ ಫಿಫಾ ವಿಶ್ವಕಪ್ 2022 ಇದೆ ಎಂದು ಹೇಳಲಾಗಿದೆ.
ಸೋಶಿಯಲ್ ಮೀಡಿಯಾದಲ್ಲೂ ಟ್ರೆಂಡಿಂಗ್
ಡಿಸೆಂಬರ್ 18, ಭಾನುವಾರದಂದು ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡಗಳ ನಡುವೆ ಫೈನಲ್ ಪಂದ್ಯಾಟ ನಡೆಯಿತು. ಈ ಪಂದ್ಯಾಟದ ಭಾಗವಾಗಿ ಮೆಸ್ಸಿ, ಎಂಬಾಪ್ಪೆ ಮತ್ತು ಫಿಫಾ ವಿಶ್ವಕಪ್ ಫೈನಲ್ ಎಂಬ ಮೂರು ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಟ್ರೆಂಡಿಂಗ್ನಲ್ಲಿತ್ತು ಎನ್ನಲಾಗಿದೆ. ಜೊತೆಗೆ ಫೈನಲ್ ಪಂದ್ಯಾಟವನ್ನು ಟ್ರ್ಯಾಕ್ ಮಾಡುವ ಮೂಲಕ ಆಟಗಾರರನ್ನು, ಪಂದ್ಯಾಟದ ವಿಚಾರಗಳನ್ನೂ ಹುಡುಕಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ