• Home
  • »
  • News
  • »
  • tech
  • »
  • UPI Payments: ಗೂಗಲ್ ಪೇ, ಫೋನ್​ ಪೇ ಯಲ್ಲಿ ನಿಗದಿತ ಮೊತ್ತಕ್ಕಿಂತ ಜಾಸ್ತಿ ಕಳುಹಿಸಿದ್ರೆ ದಂಡ!

UPI Payments: ಗೂಗಲ್ ಪೇ, ಫೋನ್​ ಪೇ ಯಲ್ಲಿ ನಿಗದಿತ ಮೊತ್ತಕ್ಕಿಂತ ಜಾಸ್ತಿ ಕಳುಹಿಸಿದ್ರೆ ದಂಡ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಗೂಗಲ್ ಪೇ, ಫೋನ್​ ಪೇ ಆ್ಯಪ್​ಗಳಲ್ಲಿ ಯಾವುದೇ ಹಣಕಾಸು, ಬ್ಯಾಂಕಿನ ವ್ಯವಹಾರಗಳನ್ನು ಸುಲಭದಲ್ಲಿ ಮಾಡಬಹುದು. ಆದರೆ ಇದರಲ್ಲಿ ಒಂದು ದಿನದಲ್ಲಿ ಎಷ್ಟು ಬಾರಿ ಮತ್ತು ಎಷ್ಟು ಹಣವನ್ನು ಮತ್ತೊಬ್ಬರಿಗೆ ಶೇರ್ ಮಾಡಬಹುದೆಂದು ಕೆಲವರಿಗೆ ತಿಳಿದಿಲ್ಲ. ಇದರ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

  • Share this:

    ಸದ್ಯದಲ್ಲಿ ಪ್ರಪಂಚದಾದ್ಯಂತ ಹಾರ್ಡ್​​ ಕ್ಯಾಶ್​ನಿಂದ (Hard Cash) ಸಾಫ್ಟ್​ ಕ್ಯಾಶ್ (Soft Cash) ಎಂಬ ಪದಕ್ಕೆ ಬದಲಾವಣೆಯಾಗುತ್ತಿದ್ದಾರೆ. ಇತ್ತೀಚೆಗೆ ಎಲ್ಲಿ ಹೋದರೂ ಜನರು ಕೈಯಲ್ಲಿ ಹಣವನ್ನು ಹಿಡಿದುಕೊಳ್ಳುವ ಬದಲು ಡಿಜಿಟಲ್ (Digital) ಆಗಿಯೇ ವ್ಯವಹಾರ ನಡೆಸುತ್ತಾರೆ. ಇತ್ತೀಚೆಗೆ ಸಣ್ಣ ವ್ಯಾಪಾರಿಯಿಂದ ಹಿಡಿದು ದೊಡ್ಡ ಮಟ್ಟದ ವ್ಯವಹಾರವನ್ನು ನಡೆಸುವವರು ಕೂಡ ಯುಪಿಐ ಪೇಮೆಂಟ್ (UPI Payment) ವಿಧಾನವನ್ನು ಅನುಸರಿಸುತ್ತಾರೆ. ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ವ್ಯವಸ್ತೇ ಬಹಳಷ್ಟು ಪ್ರಸಿದ್ಧಿಯಲ್ಲಿದೆ. ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ (PhonePe), ಗೂಗಲ್‌ ಪೇ (Google Pay), ಪೇಟಿಎಂ (Paytm) ನಂತಹ ಆ್ಯಪ್‌ಗಳು ನೀಡುತ್ತಿವೆ.


    ಗೂಗಲ್ ಪೇ, ಫೋನ್​ ಪೇ ಆ್ಯಪ್​ಗಳಲ್ಲಿ ಯಾವುದೇ ಹಣಕಾಸು, ಬ್ಯಾಂಕಿನ ವ್ಯವಹಾರಗಳನ್ನು ಸುಲಭದಲ್ಲಿ ಮಾಡಬಹುದು. ಆದರೆ ಇದರಲ್ಲಿ ಒಂದು ದಿನದಲ್ಲಿ ಎಷ್ಟು ಬಾರಿ ಮತ್ತು ಎಷ್ಟು ಹಣವನ್ನು ಮತ್ತೊಬ್ಬರಿಗೆ ಶೇರ್ ಮಾಡಬಹುದೆಂದು ಕೆಲವರಿಗೆ ತಿಳಿದಿಲ್ಲ. ಇದರ ಕಂಪ್ಲೀಟ್​ ಮಾಹಿತಿ ಇಲ್ಲಿದೆ.


    ಎನ್​ಪಿಸಿಐ ಸ್ಥಾಪಿಸಿದ ವ್ಯವಸ್ಥೆ:


    ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಎಂಬುದು ಆರ್‌ಬಿಐ ನಿಯಂತ್ರಿತ ಘಟಕವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ವೇಗದ ಪಾವತಿ ವ್ಯವಸ್ಥೆಯಾಗಿದೆ.


    ಇದನ್ನೂ ಓದಿ: 1000ರೂಪಾಯಿಯ ಕಡಿಮೆ ಬೆಲೆಯ ಉತ್ತಮ ಇಯರ್​​ಬಡ್ಸ್​​ಗಳ ಪಟ್ಟಿ ಇಲ್ಲಿದೆ.


    ಕೆಲವೊಂದು ಬ್ಯಾಂಕ್​ಗಳ ಮಿತಿ 1 ಲಕ್ಷ ರೂಪಾಯಿ:


    ಯುಪಿಐ ಮೂಲಕ ಯಾವುದೇ ಎರಡು ಬ್ಯಾಂಕ್​ ಖಾತೆಗಳ ನಡುವೆ ತಕ್ಷಣವೇ ವೇಗವಾಗಿ ಹಣವನ್ನು ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಈ ಯುಪಿಐ ವಹಿವಾಟಿನ ಮಿತಿಯನ್ನು ಕಂಪನಿ ವರ್ಷದಿಂದ ವರ್ಷಕ್ಕೆ ಬದಲಾಯಿಸುತ್ತಿರುತ್ತದೆ. ಸದ್ಯಕ್ಕೆ ಯುಪಿಐ ಬಳಸಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಬ್ಬರಿಗೆ 1 ಲಕ್ಷ ರೂಪಾಯಿ ಮಾತ್ರ ಹಂಚಿಕೊಳ್ಳಬಹುದಾಗಿದೆ. ಆದರೆ ಈ ಆಯ್ಕೆ ಕೆಲವೊಂದು ಬ್ಯಾಂಕ್​ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಕೆಲವೊಂದು ಬ್ಯಾಂಕ್​ಗಳಲ್ಲಿ ಅದರದೇ ಆದಂತಹ ಕೆಲವೊಂದು ನಿಯಮಗಳಿವೆ.


    ಸಾಂಕೇತಿಕ ಚಿತ್ರ


    ಭೀಮ್​ ಯುಪಿಐ ನಲ್ಲಿ ಕೇವಲ 40 ಸಾವಿರ ರೂಪಾಯಿ ವರ್ಗಾವಣೆ ಮಿತಿ:


    ಇನ್ನು ಭೀಮ್ ಯುಪಿಐ ವಹಿವಾಟು ಮಿತಿ ಪ್ರತಿ ವಹಿವಾಟಿಗೆ 40 ಸಾವಿರ ರೂಪಾಯಿಯಾಗಿದೆ. ಈ ವಹಿವಾಟು ಮಿತಿ ಭೀಮ್ ಯುಪಿಐಗೆ ಲಿಂಕ್ ಆಗಿರುವ ಖಾತೆಗಳಿಗೆ ಲಭ್ಯವಿರುತ್ತದೆ. ಅಂತೆಯೇ ವ್ಯಾಪಾರಿಗಳ ನಡೆಸುವ ವಹಿವಾಟಿನ ಗರಿಷ್ಠ ಮೊತ್ತ 24 ಗಂಟೆಯಲ್ಲಿ 2 ಲಕ್ಷ ರೂ. ಆಗಿದೆ. ಎಲ್ಲಾದರು ನೀವು ಪಾವತಿ ಮಾಡಿದ ಸಂದರ್ಭದಲ್ಲಿ ಹಣ ನಿಮ್ಮ ಖಾತೆಯಿಂದ ಕಡಿತವಾಗಿ ವರ್ಗಾವಣೆ ಮಾಡಿದ ಖಾತೆಗೆ ಜಮೆ ಆಗದಿದ್ದರೆ ಆ ಹಣವು ಮೂರು ದಿನಗಳ ಒಳಗೆ ರಿಫಂಡ್ ಆಗುತ್ತದೆ. ಅದು ರಿಫಂಡ್ ಆಗದಿದ್ದರೆ ನಿಮ್ಮ ಬ್ಯಾಂಕ್ ಖಾತೆಯ ಬ್ರಾಂಚ್​ ಅನ್ನು ಸಂಪರ್ಕಿಸಬಹುದು.


    ಕೆಲವೊಂದು ಬ್ಯಾಂಕುಗಳ ಹಣ ವರ್ಗಾವಣೆ ಮಿತಿ ಬೇರೆ ಬೇರೆ ರೀತಿಯಲ್ಲಿದೆ. ಅವುಗಳ ಪಟ್ಟಿ ಇಲ್ಲಿದೆ.


    • ಐಸಿಐಸಿಐ ಬ್ಯಾಂಕ್:  ಈ ಬ್ಯಾಂಕ್ ಖಾತೆ ಮೂಲಕ ಯುಪಿಐನಲ್ಲಿ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದು. ಐಸಿಐಸಿಐ ಬ್ಯಾಂಕಿನ ಖಾತೆದಾರರು 24 ಗಂಟೆಗಳಲ್ಲಿ 20 ಬಾರಿ ಹಣ ವರ್ಗಾವಣೆ ಮಾಡಬಹುದು.

    • ಎಸ್‌ಬಿಐ ಬ್ಯಾಂಕ್: ಈ ಬ್ಯಾಂಕ್ ಖಾತೆ ಮೂಲಕ ಯುಪಿಐನಲ್ಲಿ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದು. 24 ಗಂಟೆಗಳಲ್ಲಿ ಗರಿಷ್ಠ 10 ಬಾರಿ ವಹಿವಾಟು ಮಾಡಬಹುದು.

    • ಎಚ್‌ಡಿಎಫ್‌ಸಿ ಬ್ಯಾಂಕ್: ಪ್ರತಿ ವಹಿವಾಟಿಗೆ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.

    • ಬ್ಯಾಂಕ್ ಆಫ್ ಇಂಡಿಯಾ: ಪ್ರತಿ ವಹಿವಾಟಿಗೆ 10 ಸಾವಿರ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.


    ಸಾಂಕೇತಿಕ ಚಿತ್ರ


    • ಸೆಂಟ್ರಲ್ ಬ್ಯಾಂಕ್: ಪ್ರತಿ ವಹಿವಾಟಿಗೆ 25 ಸಾವಿರ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.

    • ಐಡಿಎಫ್‌ಸಿ ಫಸ್ಟ್ ಬ್ಯಾಂಕ್: ಪ್ರತಿ ವಹಿವಾಟಿಗೆ 25 ಸಾವಿರ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.

    • ಕೊಟಕ್ ಮಹೀಂದ್ರಾ ಬ್ಯಾಂಕ್: ಪ್ರತಿ ವಹಿವಾಟಿಗೆ 25 ಸಾವಿರ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ. ದಿನಕ್ಕೆ 2 ಬಾರಿ ಮಾತ್ರ ವರ್ಗಾವಣೆ ಮಾಡಬಹುದಾಗಿದೆ.

    • ಕೆನರಾ ಬ್ಯಾಂಕ್ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.


    ಸಾಂಕೇತಿಕ ಚಿತ್ರ


    • ಆಕ್ಸಿಸ್ ಬ್ಯಾಂಕ್ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.

    • ಕಾರ್ಪೊರೇಶನ್ ಬ್ಯಾಂಕ್ 50 ಸಾವಿರ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.

    • ಆಂಧ್ರ ಬ್ಯಾಂಕ್ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.

    • ಸಿಟಿ ಬ್ಯಾಂಕ್ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.

    • ಬ್ಯಾಂಕ್ ಆಫ್ ಬರೋಡಾ 25 ಸಾವಿರ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.

    • ಬ್ಯಾಂಕ್ ಆಫ್ ಮಹಾರಾಷ್ಟ್ರ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.

    • ಸಿಟಿ ಯೂನಿಯನ್ ಬ್ಯಾಂಕ್ 1 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದಾಗಿದೆ.


    ಪೇಟಿಯಂನಲ್ಲೂ 1 ಲಕ್ಷ ಹಣ ವರ್ಗಾವಣೆ ಮಿತಿ:


    ಗೂಗಲ್ ಪೇ, ಫೋನ್ ಪೇಗಳಂತೆ ಪೇಟಿಎಂನಲ್ಲಿ ಕೂಡ ಪ್ರತಿ ವಹಿವಾಟಿನಲ್ಲಿ 1 ಲಕ್ಷ ಹಣ ವರ್ಗಾವಣೆ ಮಾಡುವ ಆಯ್ಕೆ ನೀಡಲಾಗಿದೆ. ಆದರೆ 24 ಗಂಟೆಗಳಲ್ಲಿ ನೀವು 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಕಳುಹಿಸಲು ಸಾಧ್ಯವಿಲ್ಲ.

    Published by:Prajwal B
    First published: