• Home
 • »
 • News
 • »
 • tech
 • »
 • Social Media: ಸೋಷಿಯಲ್ ಮೀಡಿಯಾದಲ್ಲಿ ಅನಗತ್ಯ ಸಂದೇಶ ಕಳುಹಿಸಿದರೆ ದಂಡ! ಇದಕ್ಕಂತನೇ ಸರ್ಕಾರದಿಂದ ಸಮಿತಿ ರಚನೆ

Social Media: ಸೋಷಿಯಲ್ ಮೀಡಿಯಾದಲ್ಲಿ ಅನಗತ್ಯ ಸಂದೇಶ ಕಳುಹಿಸಿದರೆ ದಂಡ! ಇದಕ್ಕಂತನೇ ಸರ್ಕಾರದಿಂದ ಸಮಿತಿ ರಚನೆ

ಸೋಷಿಯಲ್‌ ಮೀಡಿಯಾ

ಸೋಷಿಯಲ್‌ ಮೀಡಿಯಾ

ಕೇಂದ್ರ ಸರ್ಕಾರ  ಸದ್ಯದಲ್ಲೇ ʼ ಸಾಮಾಜಿಕ ಮಾಧ್ಯಮ ಕುಂದುಕೊರತೆ ಮೇಲ್ಮನವಿ ಸಮಿತಿ’ಗಳನ್ನು ರಚಿಸಲಿದೆ.  ಈ ಸಮಿತಿ ಸೋಷಿಯಲ್‌ ಮೀಡಿಯಾದಲ್ಲಾಗುವ ತೊಂದರೆಗಳ ಬಗ್ಗೆ ಬಳಕೆದಾರರು ದೂರುಗಳನ್ನು ನೀಡಿದಾಗ ತಕ್ಷಣ ಸ್ಪಂದಿಸುತ್ತದೆ.

 • Share this:

  ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾಗಳನ್ನು (Social Media) ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಇಲ್ಲಿ ಸಮಸ್ಯೆಗಳು ಕೂಡ ಹೆಚ್ಚಾಗಿವೆ. ಇನ್ನು ಮುಂದೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಕೇಂದ್ರ ಸರ್ಕಾರ (Central Government) ಒಂದು ಯೋಜನೆಯನ್ನು ಕೈಗೊಂಡಿದೆ. ಟ್ವಿಟರ್‌ (Twitter), ಫೇಸ್‌ಬುಕ್‌ (Facebook)ನಂತಹ ಹಲವಾರು ಸೋಷಿಯಲ್‌ ಮೀಡಿಯಾಗಳನ್ನು ಬಳಸುವ ಜನರಿಗೆ ತಮ್ಮ ಖಾತೆಯ (Account) ಅಥವಾ ಮೀಡಿಯಾದ ತೊಂದರೆಗಳನ್ನು ಎದುರಿಸುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ  ಸದ್ಯದಲ್ಲೇ ʼ ಸಾಮಾಜಿಕ ಮಾಧ್ಯಮ ಕುಂದುಕೊರತೆ ಮೇಲ್ಮನವಿ ಸಮಿತಿ’ಗಳನ್ನು ರಚಿಸಲಿದೆ.  ಈ ಸಮಿತಿ ಸಾಮಾಜಿಕ ಮಾಧ್ಯಮ ಕೊರತೆಗಳ ಬಗ್ಗೆ ಬಳಕೆದಾರರು ದೂರುಗಳನ್ನು ನೀಡಿದಾಗ ತಕ್ಷಣ ಸ್ಪಂದಿಸುತ್ತದೆ.


  ಮೆಟಾದ ಒಡೆತನದಲ್ಲಿರುವ ಫೇಸ್​ಬುಕ್, ವಾಟ್ಸ್​ಆ್ಯಪ್ ಅಪ್ಲಿಕೇಶನ್‌ಗಳು ಹಾಗೂ ಮೈಕ್ರೋಬ್ಲಾಗಿಂಗ್ ವೇದಿಕೆಯಾಗಿರುವಂತಹ ಟ್ವಿಟರ್ ಸಂಸ್ಥೆಗಳು ತಮ್ಮಸ್ವಂತ ಉದ್ದೇಶದಿಂದ ಈ ಸಮಸ್ಯೆಗಳನ್ನು ನಿಯಂತ್ರಿಸುವ ಮಾರ್ಗಸೂಚಿಗಳನ್ನು ಸಿದ್ದಪಡಿಸುವ ಯೋಜನೆಯಲ್ಲಿತ್ತು.​ ಆದರೆ ಈಗ ಈ ಮೂವರು ಸದಸ್ಯರನ್ನೊಳಗೊಂಡ ‘ಕುಂದುಕೊರತೆ ಮೇಲ್ಮನವಿ ಸಮಿತಿ’ಗಳನ್ನು ರಚಿಸಲು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಉದ್ದೇಶಿಸಿದೆ.


  ಈ ಯೋಜನೆಯನ್ನು ಮೊದಲೇ ಮಾಡುವುದೆಂದು ನಿರ್ಧರಿಸಲಾಗಿತ್ತು. ಇದರ ಕರುಡು ಪ್ರತಿಯನ್ನು ಅಂತಿಮಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


  ಇದನ್ನೂ ಓದಿ: ಸಾವಿನ ನಂತರ ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಏನಾಗುತ್ತೆ? ಶಾಕ್​ ಆಗ್ತೀರಾ ನೋಡಿ


  ಯಾವೆಲ್ಲ ದೂರುಗಳ ಮೇಲೆ ಕ್ರಮ?


  ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಚಾರಗಳು, ಪೇಟೆಂಟ್ ಉಲ್ಲಂಘನೆ, ತಪ್ಪು ಮಾಹಿತಿಯನ್ನು ರವಾನಿಸುವುದು, ದೇಶದ ಭದ್ರತೆಗೆ ಧಕ್ಕೆ ತರುವಂಥ ಸಂದೇಶ ಪ್ರಕಟಿಸುವುದು ಇತ್ಯಾದಿಗಳಿಗೆ ಸಂಬಂಧಿಸಿದ ದೂರುಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ಪರಿಹರಿಸಬೇಕಿದೆ. ಇದರಿಂದ ದೊರೆತ ಪರಿಹಾರದ ಬಗ್ಗೆ ಬಳಕೆದಾರರಿಗೆ ಅಸಮಾಧಾನವಿದ್ದಲ್ಲಿ ನಂತರ ಅವರು ‘ಕುಂದುಕೊರತೆ ಮೇಲ್ಮನವಿ ಸಮಿತಿ’ಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.


  Penalty for sending unwanted messages on social media For this purpose the committee has been formed by the government
  ಸೋಷಿಯಲ್‌ ಮೀಡಿಯಾ


  30 ದಿನಗಳ ಒಳಗೆ ಪರಿಹಾರ


  ಬಳಕೆದಾರರು ಈ ಸಮಿತಿಗೆ ಸಲ್ಲಿಸಿದ ನಂತರ  ಮೇಲ್ಮನವಿ ಸಮಿತಿ ತೆಗೆದುಕೊಳ್ಲುತ್ತದೆ. ಆ ದೂರನ್ನು ಸ್ವೀಕರಿಸಿದ ನಂತರ 30 ದಿನಗಳ ಒಳಗಾಗಿ ಮೇಲ್ಮನವಿ ಸಮಿತಿ ಇತ್ಯರ್ಥಪಡಿಸಬೇಕು. ಈ ಸಮಿತಿ ನೀಡುವ ತೀರ್ಪಿಗೆ ಸಾಮಾಜಿಕ ಮಾಧ್ಯಮ ಕಂಪನಿಗಳು, ಮಧ್ಯವರ್ತಿಗಳು ಹಾಗೂ ಬಳಕೆದಾರರು ಬದ್ಧರಾಗಿರಬೇಕು ಎಂಬುದನ್ನು ಕರಡು ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ.


  ಕರುಡು ತಿದ್ದುಪಡಿಯ ಪ್ರಕಾರ


  ಸಾಮಾಜಿಕ ಮಾಧ್ಯಮಗಳ ಕುಂದುಕೊರತೆ ಅಧಿಕಾರಿಯ ತೀರ್ಮಾನದ ಮೇಲೆ ಅಸಮಾಧಾನವಿದ್ದರೆ ಅವರು ನೀಡಿದ ತೀರ್ಪು ಆದೇಶದ ಪ್ರತಿ ಕೈಸೇರಿದ ಬಳಿಕ 30 ದಿನಗಳ ಒಳಗಾಗಿ ಬಳಕೆದಾರರು ಮೇಲ್ಮನವಿ ಸಮಿತಿಗೆ ಮನವಿ ಸಲ್ಲಿಸಬಹುದು. ಒಂದು ಅಥವಾ ಅದಕ್ಕಿಂತ ಹೆಚ್ಚು ಮೇಲ್ಮನವಿ ಸಮಿತಿಗಳನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ಕರಡು ತಿದ್ದುಪಡಿಯಲ್ಲಿ ಹೇಳಲಾಗಿದೆ.


  Penalty for sending unwanted messages on social media For this purpose the committee has been formed by the government
  ಸೋಷಿಯಲ್‌ ಮೀಡಿಯಾ


  ಇದನ್ನೂ ಓದಿ: ಮೆಟಾವರ್ಸ್ ವಿಫಲತೆಯಿಂದ ಕುಸಿದ ಬಳಕೆದಾರರ ಸಂಖ್ಯೆ! ಜುಕರ್‌ಬರ್ಗ್ ಮುಂದಿನ ನಡೆ ಏನು?


  ಇದು ಈಗಿನ ಆಧುನಿಕ ಜಗತ್ತಿನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಇರುವಂತಹ ಹೊಸ ಯೋಜನೆ ಅಂತ ಹೇಳಬಹುದು. ಪ್ರತಿಯೊಬ್ಬರೂ ಈ ಸೋಷಿಯಲ್‌ ಮೀಡಿಯಾಗಳನ್ನು ಬಳಸುತ್ತಾರೆ ಆದರೆ ಕೆಲವೊಂದು ಬಾರಿ ಅದು ಗೊತ್ತಿಲ್ಲದೆಯೇ ಸಮಸ್ಯೆಗೆ ಸಿಲುಕಿಸುತ್ತೆ. ಆದರೆ ಇದನ್ನೆಲ್ಲಾ ನಿಯಂತ್ರಿಸುವ ಸಲುವಾಗಿ ಈ ಸಮಿತಿ ರಚಿಸಿದ್ದಾರೆ.


  ಈಗಿನ ವ್ಯವಹಾರಕ್ಕೆ, ಶಿಕ್ಷಣಕ್ಕೆ ಇತ್ಯಾದಿ ಕಾರ್ಯಚಟುವಟಿಕೆಗಳಿಗೆ ಮುಖ್ಯವಾಗಿ ಈ ಮೊಬೈಲ್‌ ಎಂಬುದು ಬಹಳಷ್ಟು ಮುಖ್ಯವಾಗಿದೆ. ಇದರಿಂದ ಎಷ್ಟು ಲಾಭವಿದೆಯೋ ಅಷ್ಟೇ ನಷ್ಟವೂ ಇದೆ. ಯಾವುದೇ ಸೋಷಿಯಲ್‌ ಮೀಡಿಯಾಗಳನ್ನು ಬಳಸುವ ಮುನ್ನ ಎಚ್ಚರವಹಿಸಿ.

  Published by:Harshith AS
  First published: