Covid Booster‌ ಡೋಸ್‌ ಪಡೆಯಲು ಚಿಂತೆಬೇಡ! Paytm ಆ್ಯಪ್​ ಮೂಲಕ ಹೀಗೆ ನೋಂದಾಯಿಸಿ

Paytm ಅಪ್ಲಿಕೇಶನ್‌ನಲ್ಲಿರುವ ವ್ಯಾಕ್ಸಿನ್ ಫೈಂಡರ್ ಟೂಲ್ ಈಗ ಸರ್ಕಾರಿ ನಿಯಮಗಳ ಪ್ರಕಾರ ಅರ್ಹರಾಗಿರುವ ಎಲ್ಲಾ ನಾಗರಿಕರಿಗೆ ಕೋವಿಡ್ ಬೂಸ್ಟರ್ ಶಾಟ್ ನೋಂದಣಿಯನ್ನು ಸಕ್ರಿಯಗೊಳಿಸುತ್ತದೆ ಎಂದು ಮಾರ್ಚ್‌ 28ರಂದು ಪ್ರಕಟಿಸಿದೆ.

ಪೇಟಿಯಂ / Paytm

ಪೇಟಿಯಂ / Paytm

  • Share this:
    ಪೇಟಿಎಂ ಆ್ಯಪ್‌ (Paytm App) ಮೂಲಕ ನೀವು ಏನು ಮಾಡಬಹುದು ಅಂದ್ರೆ ಥಟ್ಟನೆ ನೆನಪಾಗೋದು ಹಣವನ್ನು ಟ್ರಾನ್ಸ್‌ಫರ್ (Transfer)‌ ಮಾಡುವುದು ಇಲ್ಲವೇ ಮೊಬೈಲ್‌ಗೆ ರೀಚಾರ್ಜ್ (Mobile Recharge)‌ ಮಾಡೋದು. ಆದ್ರೆ, ಇನ್ಮುಂದೆ ಪೇಟಿಎಂ ಅಪ್ಲಿಕೇಷನ್‌ ಮೂಲಕ ನೀವು ಕೋವಿಡ್ - 19 ಬೂಸ್ಟರ್‌ ಡೋಸ್ (Covid-19 Booster Dose)‌ ಲಸಿಕೆ ತೆಗೆದುಕೊಳ್ಳಲು ರಿಜಿಸ್ಟರ್‌ ಕೂಡ ಮಾಡಿಕೊಳ್ಳಬಹುದು. ಹೌದು, ಪೇಟಿಎಂ ಅಪ್ಲಿಕೇಶನ್‌ನಲ್ಲಿರುವ ವ್ಯಾಕ್ಸಿನ್ ಫೈಂಡರ್ ಟೂಲ್ ಈಗ ಸರ್ಕಾರಿ ನಿಯಮಗಳ ಪ್ರಕಾರ ಅರ್ಹರಾಗಿರುವ ಎಲ್ಲಾ ನಾಗರಿಕರಿಗೆ ಕೋವಿಡ್ ಬೂಸ್ಟರ್ ಶಾಟ್ ನೋಂದಣಿಯನ್ನು ಸಕ್ರಿಯಗೊಳಿಸುತ್ತದೆ ಎಂದು ಮಾರ್ಚ್‌ 28ರಂದು ಪ್ರಕಟಿಸಿದೆ.

    ಈ ಅಪ್ಲಿಕೇಶನ್‌ನಲ್ಲಿರುವ ವ್ಯಾಕ್ಸಿನ್ ಫೈಂಡರ್ ಟೂಲ್ ಮೂಲಕ ಪೇಟಿಎಂ ಬಳಕೆದಾರರು, ಭಾರತದಾದ್ಯಂತ ತಮ್ಮ ಹತ್ತಿರದ ಆಸ್ಪತ್ರೆಗಳು ಮತ್ತು ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಲಭ್ಯತೆಯನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಮತ್ತು ಅವರ ಆದ್ಯತೆಗೆ ಅನುಗುಣವಾಗಿ ಸ್ಲಾಟ್‌ಗಳನ್ನು ಬುಕ್ ಮಾಡಲು ಅನುಮತಿಸುತ್ತದೆ.

    ರಿಜಿಸ್ಟರ್‌ ಮಾಡುವುದು ಹೀಗೆ..

    ಪೇಟಿಎಂ ಆ್ಯಪ್‌ನ ಹೆಲ್ತ್ ಎಂಬ ವಿಭಾಗದಲ್ಲಿ, ಬಳಕೆದಾರರು 'ಬುಕ್ ಕೋವಿಡ್ ಲಸಿಕೆ' (Book Covid Vaccine) ಆಯ್ಕೆ ಮಾಡುವ ಮೂಲಕ ಮತ್ತು ಬೂಸ್ಟರ್ ಡೋಸ್ ಅನ್ನು ಆಯ್ಕೆ ಮಾಡುವ ಮೂಲಕ ಬೂಸ್ಟರ್ ಡೋಸ್‌ಗಾಗಿ ನೋಂದಾಯಿಸಿಕೊಳ್ಳಬಹುದು. ನಂತರ, ಬಳಕೆದಾರರು ನೀವು ಲಸಿಕೆ ಪಡೆಯುವ ದಿನಾಂಕವನ್ನು ಆಯ್ಕೆ ಮಾಡಬಹುದು ಮತ್ತು ಆ ಆಯ್ಕೆಯ ನಂತರ 'ಈಗ ಬುಕ್ ಮಾಡಿ' (Book Now) ಕ್ಲಿಕ್ ಮಾಡಿ. ಬಳಕೆದಾರರು ಬೂಸ್ಟರ್ ಡೋಸ್ ಅನ್ನು ತಮಗಾಗಿ ಅಥವಾ ಎರಡು ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿದ ಫಲಾನುಭವಿಗಾಗಿ ಬುಕ್ ಮಾಡಬಹುದು.

    ಇದನ್ನೂ ಓದಿ: Jio ಗ್ರಾಹಕರಿಗೆ 20% ಕ್ಯಾಶ್​​ಬ್ಯಾಕ್​ ಆಫರ್​! ಆದ್ರೆ ರೀಚಾರ್ಜ್​ ಮಾಡಿದ್ರೆ ಮಾತ್ರ ಸಿಗುತ್ತೆ

    ಲಸಿಕೆ ಪ್ರಮಾಣಪತ್ರವೂ ಸಿಗುತ್ತೆ..!

    ಕೋವಿಡ್-19 ಲಸಿಕೆಗಳಿಗೆ ನೋಂದಾಯಿಸಿಕೊಳ್ಳುವುದರ ಜೊತೆಗೆ, ಲಸಿಕೆ ಪಡೆದ ಪ್ರತಿಯೊಬ್ಬ ವ್ಯಕ್ತಿಗೆ ಲಸಿಕೆ ಪ್ರಮಾಣಪತ್ರಗಳನ್ನು ಕೆಲವೇ ಸೆಕೆಂಡುಗಳಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಸಹ ಪೇಟಿಎಂ ಅನುಮತಿಸುತ್ತದೆ. ಇನ್ನು, ಪೇಟಿಎಂ ಬಳಕೆದಾರರು ದೇಶದ ಹೊರಗೆ ಪ್ರಯಾಣಿಸುವಾಗ ಅವರಿಗೆ ಸಹಾಯ ಮಾಡುವ ಅಂತಾರಾಷ್ಟ್ರೀಯ ಪ್ರಯಾಣ ಲಸಿಕೆ ಪ್ರಮಾಣಪತ್ರಗಳನ್ನು ಸಹ ಪರಿಶೀಲನೆ ಮಾಡಬಹುದಾಗಿದೆ.

    ಹಲವು ಆರೋಗ್ಯ ಸೇವೆಗಳೂ ಪೇಟಿಎಂ ಆ್ಯಪ್‌ನಲ್ಲಿ ಲಭ್ಯ..!

    ಇನ್ನು, ಪೇಟಿಎಂ ಅಪ್ಲಿಕೇಷನ್‌ ಮೂಲಕ ಕೇವಲ ಕೋವಿಡ್ - 19 ವಿರುದ್ಧ ಹೋರಾಡಲು ಬೂಸ್ಟರ್‌ ಡೋಸ್‌ ಲಸಿಕೆ ಮಾತ್ರವಲ್ಲ ಇತರೆ ಹಲವು ಆರೋಗ್ಯ ಸೇವೆಗಳನ್ನು ಸಹ ಪಡೆಯಬಹುದಂತೆ.

    ಇದನ್ನೂ ಓದಿ: Smart shoes: ಇದು ಅಂತಿಂಥಾ ಶೂ ಅಲ್ಲ! ಸೆಲ್ಫಿ, ಟ್ರ್ಯಾಕಿಂಗ್​, ಫೋನ್​ ಚಾರ್ಚ್​ ಎಲ್ಲವೂ ಮಾಡಬಹುದು!

    ಹೌದು, ಪೇಟಿಎಂ ಬಳಕೆದಾರರು, ನಿಮ್ಮ ಮೊಬೈಲ್‌ ಆ್ಯಪ್‌ ಮೂಲಕವೇ ಆರೋಗ್ಯ ID ರಚನೆ, ಲಸಿಕೆ ಪ್ರಮಾಣಪತ್ರಗಳನ್ನು ಡೌನ್‌ಲೋಡ್ ಮಾಡುವುದು, ಬ್ಲಡ್‌ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಂಡುಹಿಡಿಯುವುದು, ಔಷಧಿಗಳ ಖರೀದಿ, ಆನ್‌ಲೈನ್ ವೈದ್ಯರ ಸಮಾಲೋಚನೆಗಳನ್ನು ಬುಕ್‌ ಮಾಡುವುದು, ಲ್ಯಾಬ್ ಪರೀಕ್ಷೆಗಳಿಗೆ ಬುಕ್‌ ಮಾಡಬಹುದು ಮತ್ತು ಹೆಲ್ತ್‌ ಹಾಗೂ ಕೋವಿಡ್ - 19 ಸಂಬಂಧಿತ ಇನ್ಶೂರೆನ್ಸ್ ಅಥವಾ ವಿಮೆ ಸೇರಿದಂತೆ ಹಲವಾರು ಆರೋಗ್ಯ ಸೇವೆಗಳಿಗೆ ತಡೆರಹಿತ ಪ್ರವೇಶವನ್ನು ನೀಡುವ ಮೂಲಕ Paytm ನಾಗರಿಕರಿಗೆ ಹಲವು ಸೇವೆಗಳನ್ನು ನೀಡುತ್ತಿದೆ.

    ಕೋವಿಡ್ - 19 ವಿರುದ್ಧ ಹೋರಾಡಲು ಬೂಸ್ಟರ್‌ ಲಸಿಕೆಗೆ ಪೇಟಿಎಂ ಆ್ಯಪ್‌ ಮೂಲಕ ನೋಂದಣಿ ಮಾಡಿಸಿಕೊಳ್ಳುವ ಬಗ್ಗೆ ಪೇಟಿಎಂ ವಕ್ತಾರರು ‘’ಪೇಟಿಎಂ ಅಪ್ಲಿಕೇಶನ್‌ನಲ್ಲಿ ಲಸಿಕೆ ಫೈಂಡರ್ ಟೂಲ್‌ನ ಏಕೀಕರಣದೊಂದಿಗೆ Covid-19 ಗಾಗಿ ಅತಿದೊಡ್ಡ ವ್ಯಾಕ್ಸಿನೇಷನ್ ಪ್ರೋಗ್ರಾಂನಲ್ಲಿ ನಾವು ಪಾತ್ರವನ್ನು ವಹಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ. ಇದು ಈಗ ಬಳಕೆದಾರರಿಗೆ ಬೂಸ್ಟರ್ ಡೋಸ್‌ಗಳನ್ನು ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ. ಇದು ಲಸಿಕೆ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಆರೋಗ್ಯಕರ ಹಾಗೂ ಸುರಕ್ಷಿತವಾಗಿರಲು ಭಾರತೀಯರಿಗೆ ಸಹಾಯ ಮಾಡುವ ಕಂಪನಿಯ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
    Published by:Harshith AS
    First published: