PayTM: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಹಣ; ನೂತನ ಕಾರ್ಯಕ್ಕೆ ಮುಂದಾದ ಪೇಟಿಎಂ

Paytm Payments Bank: ಲಾಕ್​ಡೌನ್​ ಅವಧಿಯಲ್ಲಿ ಬ್ಯಾಂಕ್​ಗಳು ಬೀಗ ಜಡಿದಿವೆ. ಮತ್ತೊಂದೆಡೆ ಎಟಿಎಂಗಳಲ್ಲೂ ಕ್ಯಾಶ್​ ಸಿಗುತ್ತಿಲ್ಲ. ಹೀಗಾಗಿ ಜನರು ಡಿಜಿಟಲ್​ ಪೇಮೆಂಟ್​ ಆ್ಯಪ್​​ಗಳ ಮೊರೆ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಪೇಟಿಎಂ ಆ್ಯಪ್​ ಗ್ರಾಹಕರ ಸಂಕಷ್ಟಕ್ಕೆ ಸ್ಪಂದಿಸಿ ‘ಕ್ಯಾಶ್​ ಎಟ್​ ಹೋಮ್​‘ ಫೀಚರ್​ ಅನ್ನು ಪರಿಚಯಿಸಿದೆ.

news18-kannada
Updated:May 15, 2020, 3:46 PM IST
PayTM: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಹಣ; ನೂತನ ಕಾರ್ಯಕ್ಕೆ ಮುಂದಾದ ಪೇಟಿಎಂ
ಪೇಟಿಎಂ ಆ್ಯಪ್​
  • Share this:
ಡಿಜಿಟಲ್​ ಪೇಮೆಂಟ್​ ಸೇವೆಯನ್ನು ಒದಗಿಸುವ ಪೇಟಿಎಂ ಆ್ಯಪ್​ ಇದೀಗ ಗ್ರಾಹಕರಿಗೆ ಹಣದ ಕೊರತೆಯನ್ನು ನೀಗಿಸಲು ‘ಕ್ಯಾಶ್​ ಎಟ್​ ಹೋಮ್​‘​ ಎಂಬ ಹೊಸ ಫೀಚರ್​ ಅನ್ನು ಬಿಡುಗಡೆ ಮಾಡಿದೆ. ಪೇಟಿಎಂ ಆ್ಯಪ್​ನಲ್ಲಿ ಈ ನೂತನ ಫೀಚರ್​ ಬಿಡುಗಡೆ ಮಾಡಿದೆ. ಹಣದ ಅವಶ್ಯಕೆ ಇರುವ ಗ್ರಾಹಕರು ‘ಕ್ಯಾಶ್​​ ಎಟ್​​ ಹೋಮ್‘​ ಟ್ಯಾಬ್​ ಮೇಲೆ ಕ್ಲಿಕ್​ ಮಾಡಿದರೆ ನೇರವಾಗಿ ಹಣ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಪೇಟಿಎಂ ಆ್ಯಪ್​ ಒದಗಿಸಲಿದೆ.

ಲಾಕ್​ಡೌನ್​ ಅವಧಿಯಲ್ಲಿ ಬ್ಯಾಂಕ್​ಗಳು ಬೀಗ ಜಡಿದಿವೆ. ಮತ್ತೊಂದೆಡೆ ಎಟಿಎಂಗಳಲ್ಲೂ ಕ್ಯಾಶ್​ ಸಿಗುತ್ತಿಲ್ಲ. ಹೀಗಾಗಿ ಜನರು ಡಿಜಿಟಲ್​ ಪೇಮೆಂಟ್​ ಆ್ಯಪ್​​ಗಳ ಮೊರೆ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಪೇಟಿಎಂ ಆ್ಯಪ್​ ಗ್ರಾಹಕರ ಸಂಕಷ್ಟಕ್ಕೆ ಸ್ಪಂದಿಸಿ ‘ಕ್ಯಾಶ್​ ಎಟ್​ ಹೋಮ್​‘ ಫೀಚರ್​ ಅನ್ನು ಪರಿಚಯಿಸಿದೆ.

ಲಾಕ್​ಡೌನ್​ ಅವಧಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಪೇಟಿಎಂ ಪೇಮೆಂಟ್​​ ಬ್ಯಾಂಕ್​ ಲಿಮಿಟೆಡ್​ ಸಹಾಯ ಮಾಡಲಿದೆ. ಪೇಟಿಎಂ ಆ್ಯಪ್​​ನಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ‘ಕ್ಯಾಶ್​ ಎಟ್​ ಹೋಮ್​‘ ಪೀಚರ್​ ಮೇಲೆ ಕ್ಲಿಕ್​ ಮಾಡಿ ತಮಗೆ ಬೇಕಾದಷ್ಟು ಹಣವನ್ನು ನಮೂದಿಸಿದರೆ ನೇರವಾಗಿ ಹಣವನ್ನು ಮನೆ ಬಾಗಿಲಿಗೆ ಬಂದು ತಲುಪಿಸುವ ಕಾರ್ಯವನ್ನು ಮಾಡುತ್ತದೆ.

ಸದ್ಯ ಲಾಕ್​ಡೌನ್​ನಿಂದಾಗಿ ದೇಶದ ಆರ್ಥಿಕ ಸ್ಥಿತಿ ನೆಲ ಕಚ್ಚಿದೆ. ಸಾಕಷ್ಟು ಜನರು ಹಣವಿಲ್ಲದೆ ಪರದಾಡುತ್ತಿದ್ದಾರೆ. ಮತ್ತೊಂದೆಡೆ ವ್ಯಾಪಾರ ವಹಿವಾಡುಗಳು ಕೂಡ ಸಾಗುತ್ತಿಲ್ಲ. ಹೀಗಾಗಿ  ಹಣದ ಅವಶ್ಯಕತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಪೇಟಿಎಂ ಆ್ಯಪ್​ ಜನರ ನೆರವಿಗೆ ದಾವಿಸಿದೆ.

ಸಿಲ್ವರ್​ ಜ್ಯೂಬಿಲಿ ಆಚರಿಸಿಕೊಳ್ಳುತ್ತಿರುವ ‘ಓಂ‘ ಸಿನಿಮಾ; ಶಿವಣ್ಣನ ಅಭಿಮಾನಿಗಳಿಂದ ಭರ್ಜರಿ ಪ್ಲಾನ್​
First published: May 15, 2020, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading