HOME » NEWS » Tech » PAYTM NEW FACILITY TO PAY HOUSE RENT VIA CREDIT CARD HERE IS THE DETAILS STG SCT

Paytm: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ಸೌಲಭ್ಯ ನೀಡಿದ ಪೇಟಿಎಂ!

Paytm | ಮನೆ ಬಾಡಿಗೆ ಹಣ ನೀಡುವ ವ್ಯವಹಾರ ಸುಲಭಗೊಳಿಸಲು ಪೇಟಿಎಂ ಮುಂದಾಗಿದೆ. ಕ್ರೆಡಿಟ್ ಕಾರ್ಡ್ ಮೂಲಕವೇ ತಮ್ಮ ಮನೆ ಮಾಲೀಕರಿಗೆ ಬಾಡಿಗೆ ಹಣ ವರ್ಗಾಯಿಸುವ ಆಯ್ಕೆಯನ್ನ ಪೇಟಿಎಂ ತನ್ನ ಬಳಕೆದಾರರಿಗೆ ನೀಡಿದೆ.

news18-kannada
Updated:February 9, 2021, 2:50 PM IST
Paytm: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ಸೌಲಭ್ಯ ನೀಡಿದ ಪೇಟಿಎಂ!
ಪೇಟಿಯಂ
  • Share this:
ಭಾರತ ಇದೀಗ ಡಿಜಿಟಲ್ ಇಂಡಿಯಾ ಆಗಿ ಬದಲಾಗುತ್ತಿದೆ. ಹತ್ತು ವರ್ಷಗಳ ಹಿಂದೆ ಇಲ್ಲದ ಆನ್ಲೈನ್ ವಹಿವಾಟು ಈಗ ಚುರುಕಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಒಬ್ಬರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬೇಕಿದ್ದರೂ ಬ್ಯಾಂಕಿನಲ್ಲಿ ಗಂಟೆಗಟ್ಟಲೇ ಕ್ಯೂ ನಿಂತು ಹಣ ಕಟ್ಟಬೇಕಿತ್ತು. ಈಗ ಮೊಬೈಲ್ ಮತ್ತು ಇಂಟರ್ನೆಟ್ ಸೇವೆ ಇದ್ದರೆ ಸಾಕು ಕೆಲವೇ ಕ್ಷಣಗಳಲ್ಲಿ ಯಾರಿಗೆ ಬೇಕಾದರೂ ಕುಳಿತ ಜಾಗದಲ್ಲೇ ಹಣ ಕಳುಹಿಸಬಹುದು. ಈ ಸಮಯದಲ್ಲಿ ಪೇಟಿಎಂ ತನ್ನ ಬಳಕೆದಾರರಿಗೆ ಭಾರೀ ಗುಡ್​ನ್ಯೂಸ್ ನೀಡಿದೆ.

ಭಾರತದಲ್ಲಿ ಕೋಟಿಗಟ್ಟಲೇ ಜನರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇವರೆಲ್ಲರೂ ತಿಂಗಳಾದರೆ ಸಾಕು ಮನೆ ಮಾಲೀಕರಿಗೆ ಬಾಡಿಗೆ ಹಣ ನೀಡಬೇಕು. ಈ ಹಿನ್ನೆಲೆಯಲ್ಲಿ ಮನೆ ಬಾಡಿಗೆ ಹಣ ನೀಡುವ ವ್ಯವಹಾರ ಸುಲಭಗೊಳಿಸಲು ಪೇಟಿಎಂ ಮುಂದಾಗಿದೆ. ಹೌದು, ಕ್ರೆಡಿಟ್ ಕಾರ್ಡ್ ಮೂಲಕವೇ ತಮ್ಮ ಮನೆ ಮಾಲೀಕರಿಗೆ ಬಾಡಿಗೆ ಹಣ ವರ್ಗಾಯಿಸುವ ಆಯ್ಕೆಯನ್ನ ಪೇಟಿಎಂ ತನ್ನ ಬಳಕೆದಾರರಿಗೆ ನೀಡಿದೆ.

ಅಷ್ಟೇ ಅಲ್ಲದೆ, ಕ್ರೆಡಿಟ್ ಕಾರ್ಡ್ ಮೂಲಕ ತನ್ನ ಮನೆಯ ಬಾಡಿಗೆ ಹಣವನ್ನು ಪೇಟಿಎಂ ಮೂಲಕ ವರ್ಗಾಯಿಸುವ ಗ್ರಾಹಕರಿಗೆ ಕಂಪನಿ 1,000 ರೂ. ವರೆಗೆ ಕ್ಯಾಶ್​ಬ್ಯಾಕ್ ಆಫರ್ ಘೋಷಿಸಿದೆ. ಈ ನೂತನ ಸೇವೆಯನ್ನು ಪೇಟಿಎಂ ಮಂಗಳವಾರ ಪ್ರಕಟಿಸಿದೆ.
ಪೇಟಿಎಂ ಉಪಾಧ್ಯಕ್ಷ ನರೇಂದ್ರ ಯಾದವ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದಲ್ಲಿ ಅತೀ ಹೆಚ್ಚು ಜನರು ತಿಂಗಳ ಮನೆಯ ಬಾಡಿಗೆಯನ್ನು ಪಾವತಿಸುತ್ತಾರೆ. ಅದಕ್ಕಾಗಿ ಕ್ರೆಡಿಟ್ ಕಾರ್ಡ್ ಮೂಲಕ ತಮ್ಮ ಮನೆಯ ಬಾಡಿಗೆ ಕಟ್ಟಲು ಸುಲಭವಾಗಿರುವ ವ್ಯವಸ್ಥೆಯನ್ನು ಪೇಟಿಎಂ ನೀಡುತ್ತಿದೆ. 2021ರ ಮಾರ್ಚ್ 21ರ ವೇಳೆಗೆ ಪೆಟಿಎಂ ಪುನರಾವರ್ತಿತ ಪಾವತಿಗಳಾದ ಯುಟಿಲಿಟಿ ಬಿಲ್ಗಳು, ಕ್ರೆಡಿಟ್ ಕಾರ್ಡ್ ಬಿಲ್​ಗಳ ಮೂಲಕ 300 ಕೋಟಿ ರೂ. ವ್ಯವಹಾರ ನಡೆಸುವ ಗುರಿ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಪೇಟಿಎಂನಿಂದ ಬಾಡಿಗೆ ಹಣ ವರ್ಗಾಯಿಸುವುದು ಹೇಗೆ?:
ಪೇಟಿಎಂ ಆ್ಯಪ್ ಓಪನ್ ಮಾಡಿದಾಗ ನಿಮಗೆ ರಿಚಾರ್ಜ್ ಮತ್ತು ಪೇ ಬಿಲ್ಸ್ ಎಂಬ ಆಪ್ಷನ್​ಗಳು ನಿಮಗೆ ಪೇಟಿಎಂ ಹೋಂ ಸ್ಕ್ರೀನ್ ಅಲ್ಲಿ ಕಾಣಿಸುತ್ತದೆ. ರಿಚಾರ್ಜ್ ಮತ್ತು ಪೇ ಆಪ್ಷನ್ ಕ್ಲಿಕ್ ಮಾಡಿದಾಗ ನಿಮಗೆ ರೆಂಟ್ ಪೇಮೆಂಟ್ ಆಪ್ಷನ್ ಮೂಲಕ ನಿಮ್ಮ ಮನೆಯ ಮಾಲೀಕರಿಗೆ ಕ್ರೆಡಿಟ್ ಕಾರ್ಡ್​ನಿಂದ ನೇರವಾಗಿ ಹಣ ವರ್ಗಾವಣೆ ಮಾಡಬಹುದು.
ಒಂದು ವೇಳೆ ನೀವು ಕ್ರೆಡಿಟ್ ಕಾರ್ಡ್ ಹೊಂದಿಲ್ಲದೆ ಇದ್ದರೆ ಯುಪಿಐ, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್‌ನಂತಹ ಇತರ ಪಾವತಿ ವಿಧಾನಗಳ ಮೂಲಕ ಬಾಡಿಗೆ ಪಾವತಿಗಳನ್ನು ಮಾಡಲು ಪೇಟಿಎಂ ಆಯ್ಕೆಯನ್ನು ನೀಡುತ್ತದೆ.
Youtube Video

ರೆಂಟ್ ಪೇಮೆಂಟ್ ಅಲ್ಲಿ ಒಂದು ಬಾರಿ ನಿಮ್ಮ ಮನೆಯ ಮಾಲೀಕರ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿದರೆ ಮುಂದಿನ ನಿಮ್ಮ ಬಾಡಿಗೆಯನ್ನು ಪಾವತಿ ಬಾಕಿ ದಿನಾಂಕಗಳ ಬಗ್ಗೆ ನೆನಪಿಸುತ್ತದೆ. ನೀವು ಹಣ ವರ್ಗಾವಣೆ ಮಾಡಿದ ನಂತರ ನಿಮ್ಮ ಮಾಲೀಕರಿಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ಸಂದೇಶವನ್ನು ರವಾನಿಸುತ್ತದೆ.
Published by: Sushma Chakre
First published: February 9, 2021, 2:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories