'ಪೇಟಿಎಂ'ನಲ್ಲಿ ಬರೀ ಆಫರ್​ ಮಾತ್ರವಲ್ಲ, ಉದ್ಯೋಗ ಕೂಡ ಸಿಗಲಿದೆ

ಡಿಜಿಟಲ್​ ಮನಿ ಮೂಲಕ ಮುನ್ನಲೆಗೆ ಬಂದ ಪೇಟಿಎಂ, ಬಳಿಕ ಪೇಟಿಎಂ ಮಾಲ್ ಮೂಲಕ ಆನ್​ಲೈನ್​ ಶಾಪಿಂಗ್ ಸೇವೆಯನ್ನು ಪ್ರಾರಂಭಿಸಿತ್ತು.

zahir | news18
Updated:April 8, 2019, 11:22 PM IST
'ಪೇಟಿಎಂ'ನಲ್ಲಿ ಬರೀ ಆಫರ್​ ಮಾತ್ರವಲ್ಲ, ಉದ್ಯೋಗ ಕೂಡ ಸಿಗಲಿದೆ
ಡಿಜಿಟಲ್​ ಮನಿ ಮೂಲಕ ಮುನ್ನಲೆಗೆ ಬಂದ ಪೇಟಿಎಂ, ಬಳಿಕ ಪೇಟಿಎಂ ಮಾಲ್ ಮೂಲಕ ಆನ್​ಲೈನ್​ ಶಾಪಿಂಗ್ ಸೇವೆಯನ್ನು ಪ್ರಾರಂಭಿಸಿತ್ತು.
zahir | news18
Updated: April 8, 2019, 11:22 PM IST
ಚೀನಾದ ಇ-ಕಾಮರ್ಸ್​ ದೈತ್ಯ ಅಲಿಬಾಬಾ ಬೆಂಬಲಿತ ಪೇಟಿಎಂ ಮಾಲ್​ ಶೀಘ್ರದಲ್ಲೇ ಭಾರತದಲ್ಲಿ 300 ಕ್ಕೂ ಹೆಚ್ಚಿನ ಜನರಿಗೆ ಉದ್ಯೋಗವಕಾಶ ನೀಡಲಿದೆ. ಇತ್ತೀಚೆಗಷ್ಟೇ 200 ಕ್ಕೂ ಅಧಿಕ ಜನರಿಗೆ ವಿವಿಧ ವಿಭಾಗಗಳಲ್ಲಿ ಉದ್ಯೋಗ ಸೃಷ್ಟಿಸಿದ್ದ ಪೇಟಿಎಂ ಸಂಸ್ಥೆ ಇದೀಗ ಮತ್ತೊಮ್ಮೆ ಉದ್ಯೋಗ ನೇಮಕಾತಿ ಪ್ರಕಟಣೆ ಹೊರಡಿಸುವುದಾಗಿ ತಿಳಿಸಿದೆ.

ಭಾರತದಲ್ಲಿ ಅಲಿಬಾಬಾ ಸಂಸ್ಥೆಯೊಂದಿಗೆ ಪೇಟಿಎಂ ಆನ್​ಲೈನ್ ಮತ್ತು ಆಫ್​ಲೈನ್ (O2O)​ ಸೇವೆಯನ್ನು ನೀಡುತ್ತಿದ್ದು ಈ ವಿಭಾಗಗಳಲ್ಲಿ ಮತ್ತಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಕಳೆದ ಆರು ತಿಂಗಳಲ್ಲಿ ಕಂಪೆನಿಯ O2O ವ್ಯವಹಾರದಲ್ಲಿ ಪ್ರಬಲ ಬೆಳವಣಿಗೆ ಕಂಡಿದ್ದು, ಹೀಗಾಗಿ ಈ ಸೇವೆಗಾಗಿ ಇನ್ನಷ್ಟು ನೌಕರರ ಗುಂಪುಗಳನ್ನು ಪುನರ್ರಚನೆ ಮಾಡಲು ಸಂಸ್ಥೆ ಆಸಕ್ತಿವಹಿಸಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ತಿಂಗಳುಗಳಲ್ಲಿ ಬಿಸಿನೆಸ್, ತಂತ್ರಜ್ಞಾನ ಮತ್ತು ಪ್ರೊಡಕ್ಟ್​ ವಿಭಾಗದಲ್ಲಿ 300 ಕ್ಕೂ ಅಧಿಕ ಜನರ ನೇಮಕಾತಿ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಪೇಟಿಎಂ ಮಾಲ್ ಉಪಾಧ್ಯಕ್ಷ ಶ್ರೀನಿವಾಸ್ ಮೋಥೆ ತಿಳಿಸಿದ್ದಾರೆ.

ಡಿಜಿಟಲ್​ ಮನಿ ಮೂಲಕ ಮುನ್ನಲೆಗೆ ಬಂದ ಪೇಟಿಎಂ, ಬಳಿಕ ಪೇಟಿಎಂ ಮಾಲ್ ಮೂಲಕ ಆನ್​ಲೈನ್​ ಶಾಪಿಂಗ್ ಸೇವೆಯನ್ನು ಪ್ರಾರಂಭಿಸಿತ್ತು. ಈ ಸಂಸ್ಥೆಯೊಂದಿಗೆ ಅಲಿಬಾಬಾ ಕಂಪೆನಿ ಕೈಜೋಡಿಸುವ ಮೂಲಕ ಭಾರತದಲ್ಲಿ ಆನ್​ಲೈನ್​ ಮಾರುಕಟ್ಟೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದೆ. ಅದರಂತೆ ಇದೀಗ ಭಾರತದಲ್ಲಿ ಪೇಟಿಎಂ ಮಾಲ್ ಆನ್​ಲೈನ್-ಆಫ್​ಲೈನ್​ ಸೇವೆಯನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: ಎಚ್ಚರಿಕೆ: ನಿಂತು ನೀರು ಕುಡೀತೀರಾ? ಹಾಗಿದ್ರೆ ನಿಮ್ಮ ಆರೋಗ್ಯದಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುವುದು ಖಚಿತ!
First published:April 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626