Paytm App: ಮತ್ತೆ ಗೂಗಲ್ ಪ್ಲೇ ಸ್ಟೋರ್ಗೆ ಮರಳಿದ ಪೇಟಿಯಂ ಆ್ಯಪ್
Google Play Store: ಪ್ಲೇ ಸ್ಟೋರ್ನ ನಿಯಮವನ್ನು ಮೀರಿದ ಕಾರಣಕ್ಕಾಗಿ ಪೇಟಿಯಂ ಆ್ಯಪ್ ಅನ್ನು ತೆಗೆದು ಹಾಕಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲೇ ಪೇಟಿಯಂ ಆ್ಯಪ್ ಗೂಗಲ್ ಪ್ಲೇ ಸ್ಟೋರ್ಗೆ ಮತ್ತೆ ಮರಳಿದೆ.
ಆನ್ಲೈನ್ ಪೇಮೆಂಟ್ ಸೇವೆಯನ್ನು ಒದಗಿಸುವ ಪೇಟಿಯಂ ಆ್ಯಪ್ ಗೂಗಲ್ ಪ್ಲೇ ಸ್ಟೋರ್ಗೆ ಮತ್ತೆ ಮರಳಿದೆ. ಆ ಮೂಲಕ ಬಳಕೆದಾರರ ಮನದಲ್ಲಿ ಮಂದಹಾಸ ಮೂಡಿಸಿದೆ. ಪ್ಲೇ ಸ್ಟೋರ್ನ ನಿಯಮವನ್ನು ಮೀರಿದ ಕಾರಣಕ್ಕಾಗಿ ಪೇಟಿಯಂ ಆ್ಯಪ್ ಅನ್ನು ತೆಗೆದು ಹಾಕಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲೇ ಪೇಟಿಯಂ ಆ್ಯಪ್ ಗೂಗಲ್ ಪ್ಲೇ ಸ್ಟೋರ್ಗೆ ಮತ್ತೆ ಮರಳಿದೆ. ಮಾತ್ರವಲ್ಲದೆ, ಈ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ಪೇಟಿಎಂ ಆ್ಯಂಡ್ರಾಯ್ಡ್ ಆ್ಯಪ್ ತಾತ್ಕಲಿಕವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ. ಮಾತ್ರವಲ್ಲದೆ ಯಾವುದೇ ಹೊಸ ಅಪ್ಡೇಟ್ಗಳು ಕೂಡ ದೊರಕುವುದಿಲ್ಲ. ಶೀಘ್ರದಲ್ಲಿ ವಾಪಾಸಾಗುತ್ತೇವೆ. ನಿಮ್ಮ ಎಲ್ಲಾ ಪಾವತಿ ಸೇವೆಗಳು ಸಂಪೂರ್ಣ ಭದ್ರವಾಗಿದೆ’ ಎಂದು ಟ್ವೀಟ್ ಮಾಡಿತ್ತು.
ಗೂಗಲ್ ಪ್ಲೇ ಸ್ಟೋರ್ ಗೆ ಮತ್ತೆ ಮರಳಿದ ನಂತರ ಟ್ವೀಟ್ ಮಾಡಿರುವ ಪೇಟಿಯಂ ‘ಅಪ್ಡೇಟ್ ಆಗಿದೆ ಮತ್ತೆ ಹಿಂತಿರುಗಿದ್ದೇವೆ’ ಎಂದಿದೆ.
ಗೂಗಲ್ ಪ್ಲೇ ಸ್ಟೋರ್ ಬಳಕೆದಾರರನ್ನು ರಕ್ಷಿಸುವ ಮಿಟ್ಟಿನಲ್ಲಿ ಹೊಸ ನೀತಿಗಳನ್ನು ಜಾರಿಗೆ ತಂದಿದೆ. ಹಾಗಾಗಿ ಯಾವುದೇ ಅಪ್ಲಿಕೇಶನ್ ಗಳು ಈ ನೀತಿಗಳನ್ನು ಉಲ್ಲಂಘಿಸಿದಾಗ, ಅದರ ಡೆವಲಪರ್ಗೆ ಮಾಹಿತಿ ತಿಳಿಸುತ್ತದೆ. ಆದರೇ ಆ್ಯಪ್ ಡೆವಲಪರ್ಗಳು ಗೂಲ್ ಪ್ಲೇ ಸ್ಟೋರ್ ಹಾಕಿಕೊಟ್ಟ ನೀತಿಗಳನ್ನು ಅನುಸರಿಸದಿದ್ದರೇ ಅವನ್ನು ರಿಮೂವ್ ಮಾಡುತ್ತದೆ. ಹೊಸ ನೀತಿಗಳನ್ನು ಅನುಸರಿದರೆ ಮಾತ್ರ ಪ್ಲೇ ಸ್ಟೋರ್ನಲ್ಲಿ ಅಂತಹ ಆ್ಯಪ್ಗಳು ಕಾಣಸಿಗುತ್ತವೆ. ಹಾಗಾಗಿ ಈ ನಿಯಮನುಸಾರ ಪೇಟಿಯಂ ಅನ್ನು ತೆಗೆದು ಹಾಕಲಾಗಿತ್ತು.
ಗೂಗಲ್ ಪ್ಲೇ ಸ್ಟೋರ್ ಆನ್ಲೈನ್ ಕ್ಯಾಸಿನೋ, ಜೂಜು ಅಥವಾ ಬೆಟ್ಟಿಂಗ್ ಕುರಿತಾದ ಆ್ಯಪ್ಗಳನ್ನು ಪ್ರೊತ್ಸಾಹಿಸುವುದಿಲ್ಲ. ಮಾತ್ರವಲ್ಲದೆ, ಜಾಹೀರಾತು ಮತ್ತು ಥರ್ಡ್ ಪಾರ್ಟಿ ಆ್ಯಪ್ಗಳಿಗೆ ಬಳಕೆದಾರರನ್ನು ಸೆಳೆಯುವುದು ಗೂಗಲ್ ಪಾಲಿಸಿಯ ಉಲ್ಲಂಘನೆಯಾಗಿರುವ ಕಾರಣಕ್ಕೆ ತೆಗೆದು ಹಾಕಿತ್ತು. ಇದೀಗ ಅವೆಲ್ಲವನ್ನು ಸರಿಪಡಿಸಿಕೊಂಡು ಪೇಟಿಯಂ ಪ್ಲೇ ಸ್ಟೋರ್ಗೆ ಮತ್ತೆ ಮರಳಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ