Paytm ಬಳಕೆದಾರರಿಗೆ ಸಿಹಿ ಸುದ್ದಿ! e-RUPI ವೋಚರ್ ಬಳಸಿ ಇನ್ಮುಂದೆ ಹಣ ಪಾವತಿಸಿ

e-RUPI ಒಂದು ನಗದುರಹಿತ ಮತ್ತು ಸಂಪರ್ಕವಿಲ್ಲದ ಡಿಜಿಟಲ್ ಪಾವತಿ ಮಾಧ್ಯಮವಾಗಿದ್ದು, ಇದನ್ನು ಎಸ್ಎಂಎಸ್ ಸ್ಟ್ರಿಂಗ್ ಅಥವಾ ಕ್ಯೂಆರ್ ಕೋಡ್ ರೂಪದಲ್ಲಿ ಫಲಾನುಭವಿಗಳ ಮೊಬೈಲ್ ಫೋನ್ಗಳಿಗೆ ಕಳುಹಿಸಲಾಗುತ್ತದೆ.

ಪೇಟಿಯಂ / Paytm

ಪೇಟಿಯಂ / Paytm

 • Share this:
  ಪೇಟಿಯಂ, ಪಾವತಿಗಳ ಬ್ಯಾಂಕ್ e-RUPI ಪ್ರಿಪೇಯ್ಡ್ ವೋಚರ್‌ಗಳನ್ನು ಸಕ್ರಿಯಗೊಳಿಸುತ್ತಿದೆ. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು, Paytm e-RUPI ಪ್ರಿಪೇಯ್ಡ್ ವೋಚರ್‌ಗಳನ್ನು ಸ್ವೀಕರಿಸಲು ವ್ಯಾಪಾರಿಗಳನ್ನು ಸಕ್ರಿಯಗೊಳಿಸಿದೆ. ‘ಇ-ರುಪಿ’ ಸಕ್ರಿಯಗೊಳಿಸಿದ ಆರಂಭದಲ್ಲಿ ಗ್ರಾಹಕರು, ಔಪಚಾರಿಕ ಬ್ಯಾಂಕಿಂಗ್ ಸೇವೆಗಳು ಅಥವಾ ಸ್ಮಾರ್ಟ್‌ಫೋನ್‌ಗಳಿಲ್ಲದೇಯೂ ಸಹ ‘ಇ-ರುಪಿ’ ಪ್ರಿಪೇಯ್ಡ್ ವೋಚರ್‌ಗಳನ್ನು ಬಳಸಿಕೊಂಡು ಹಣ ಪಾವತಿ ಮಾಡಬಹುದು.

  ಏನಿದು ಇ-ರುಪಿ?

  ಇ-ರುಪಿ ಒಂದು ನಗದುರಹಿತ ಮತ್ತು ಸಂಪರ್ಕವಿಲ್ಲದ ಡಿಜಿಟಲ್ ಪಾವತಿ ಮಾಧ್ಯಮವಾಗಿದ್ದು, ಇದನ್ನು ಎಸ್ಎಂಎಸ್ ಸ್ಟ್ರಿಂಗ್ ಅಥವಾ ಕ್ಯೂಆರ್ ಕೋಡ್ ರೂಪದಲ್ಲಿ ಫಲಾನುಭವಿಗಳ ಮೊಬೈಲ್ ಫೋನ್ಗಳಿಗೆ ಕಳುಹಿಸಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಇದು ಪ್ರಿಪೇಯ್ಡ್ ಗಿಫ್ಟ್ ವೋಚರ್ನಂತೆಯೇ ಇರುತ್ತದೆ. ಇದನ್ನು ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್, ಮೊಬೈಲ್ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲದೆ ನಿರ್ದಿಷ್ಟ ಸ್ವೀಕಾರ ಕೇಂದ್ರಗಳಲ್ಲಿ ಬಳಸಬಹುದು.

  ದೇಶದಲ್ಲಿ ಡಿಜಿಟಲ್ ಕರೆನ್ಸಿ ಜಾರಿಗೆ ತರುವತ್ತ ಪ್ರಧಾನಿ ನರೇಂದ್ರ ಮೋದಿ, ಎಲೆಕ್ಟ್ರಾನಿಕ್ ವೋಚರ್ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ ‘ಇ-ರುಪಿ’ಗೆ 2012ರಲ್ಲಿ ಚಾಲನೆ ನೀಡಿದ್ದರು. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ), ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಇ-ರುಪಿಯನ್ನು ಅಭಿವೃದ್ಧಿಪಡಿಸಿದ್ದಾರೆ.

  ಇದನ್ನೂ ಓದಿ: Electron Bot: ಎಚ್ಚರ..! ಈ ಮಾಲ್‌ವೇರ್ ನಿಮ್ಮ Facebook ಖಾತೆಯನ್ನು ಕಂಟ್ರೋಲ್ ಮಾಡುತ್ತಂತೆ!

  ಪೇಟಿಯಂನಲ್ಲಿ e-RUPI ಪ್ರಿಪೇಯ್ಡ್ ವೋಚರ್‌ ಸಕ್ರಿಯ

  1) ‘ಇ-ರುಪಿ’, ಭಾರತ ಸರ್ಕಾರದ (GOI) ಉಪಕ್ರಮವಾಗಿದೆ. ನಗದು ರಹಿತ ಪ್ರಿಪೇಯ್ಡ್ ವೋಚರ್ ಆಗಿದ್ದು,ಫಲಾನುಭವಿಗಳು SMS ಅಥವಾ QR ಕೋಡ್ ಮೂಲಕ ಪ್ರಸ್ತುತಪಡಿಸಬಹುದು. Paytmನ ವ್ಯಾಪಾರಿ ಪಾಲುದಾರ ಬಳಿ ಸ್ಕ್ಯಾನ್ ಮಾಡಿ ನಂತರ ಪಾವತಿಸಬೇಕಾದ ಮೊತ್ತವನ್ನು ನಮೂದಿಸಿ ಹಣ ಪಾವತಿಸಬಹುದು. ಮತ್ತು ಇದು ಅವರ ಬ್ಯಾಂಕ್ ಖಾತೆಗೆ ನೇರವಾಗಿ (NPCI) ಪಾವತಿಯನ್ನು ಸ್ವೀಕರಿಸುತ್ತದೆ.

  2) e-RUPI ವೋಚರ್‌ಗಳನ್ನು ಬಳಸುವ ಪ್ರಯೋಜನವೆಂದರೆ ಫಲಾನುಭವಿಗಳು ಅಥವಾ ಬಳಕೆದಾರರು, ಡಿಜಿಟಲ್‌ನ ಅನುಕೂಲತೆಯನ್ನು ಪಡೆಯಲು ಔಪಚಾರಿಕ ಬ್ಯಾಂಕಿಂಗ್ ಸೇವೆಗಳು ಅಥವಾ ಸ್ಮಾರ್ಟ್‌ಫೋನ್‌ಗಳು ಇಲ್ಲದವರೂ ಸಹ ಈ ವೋಚರ್ಗಳ ಮೂಲಕ ಹಣ ಪಾವತಿ ಮಾಡಬಹುದು.

  3) Paytm ಪೇಮೆಂಟ್ಸ್ ಬ್ಯಾಂಕ್ ಎಂಡಿ ಮತ್ತು ಸಿಇಒ ಸತೀಶ್ ಗುಪ್ತಾ ಅವರು ಹೇಳುವ ಪ್ರಕಾರ, “ನಮ್ಮ ದೇಶದ ಸ್ಥಿರ
  ಹಿಂದುಳಿದ ಮತ್ತು ಸೇವೆಯಿಲ್ಲದ ಜನರಿಗೆ ಡಿಜಿಟಲ್ ಬ್ಯಾಂಕಿಂಗ್‌ಗೆ ಪ್ರವೇಶ ಮಾಡಿಸುವುದು ನಮ್ಮ ಪ್ರಯತ್ನವಾಗಿದೆ ಎಂದಿದ್ದಾರೆ. e-RUPI ವೋಚರ್‌ಗಳ ಸ್ವೀಕಾರದೊಂದಿಗೆ, ದೇಶಾದ್ಯಂತ ನಗದು ರಹಿತ ಪಾವತಿಗಳನ್ನು ಉತ್ತೇಜಿಸಲು ವ್ಯಾಪಾರಿಗಳಿಗೆ ಸಾಧ್ಯವಾಗುತ್ತದೆ. ಡಿಜಿಟಲ್ ಆರ್ಥಿಕತೆಗೆ ಒತ್ತು ನೀಡುವ e-RUPIಯನ್ನು ಪರಿಚಯಿಸಿರುವ ಕೇಂದ್ರ ಸರ್ಕಾರವು ಸಹ ಇದೇ ಧ್ಯೇಯವನ್ನು ಹೊಂದಿದೆ.

  4) e-RUPI ವೋಚರ್‌ಗಳ ಮಿತಿಯನ್ನು RBI ಇತ್ತೀಚೆಗೆ 10,000ರೂ ರಿಂದ ರೂ. 1,00,000ವರೆಗೆ ಹೆಚ್ಚಿಸಿದೆ.
  ಈ ಮೂಲಕ ಡಿಜಿಟಲ್ ಆರ್ಥಿಕತೆಯ ಧ್ಯೇಯವನ್ನು ಪೂರೈಸಲು ನಗದು ರಹಿತ ಪಾವತಿಗಳಿಗೆ ಉತ್ತೇಜನ ನೀಡುತ್ತಿದೆ.

  ಇದನ್ನೂ ಓದಿ: BSNL: ವಿಐಪಿ ಸಂಖ್ಯೆಗಳನ್ನು ಪಡೆಯಲು ಬಯಸುವಿರಾ? ಹಾಗಿದ್ರೆ ಈ ಅವಕಾಶ ಮಿಸ್​ ಮಾಡ್ಬೇಡಿ

  5) ಕಂಪನಿಯ ಹಲವು ನವೀನತೆಯಿಂದಾಗಿ Paytm ಪೇಮೆಂಟ್ಸ್ ಬ್ಯಾಂಕ್ ತ್ವರಿತ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಪೇಟಿಯಂ ಪಾವತಿ ಬ್ಯಾಂಕ್ ಅತಿ ದೊಡ್ಡ UPI ಸೇವೆ ಆಗಿದ್ದು ಜೊತೆಗೆ ಫಾಸ್ಟ್‌ಟ್ಯಾಗ್ ವಿತರಣೆಯಲ್ಲೂ ಸಹ ಮುಂಚೂಣಿಯಲ್ಲಿದೆ. ಮೊಬೈಲ್ ವಹಿವಾಟಿನ ವಿಷಯದಲ್ಲೂ ಸಹ ಪೇಟಿಯಂ ಭಾರತದಲ್ಲಿ ಅತಿ ದೊಡ್ಡ ಪ್ರಮಾಣವನ್ನು ಹೊಂದಿದೆ.

  6) ಪೇಟಿಯಂ ಪೇಮೆಂಟ್ ಬ್ಯಾಂಕ್ ಬಳಕೆದಾರರಿಗೆ ನೇರ ಲಾಭ ವರ್ಗಾವಣೆಯ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ, ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ.

  LPG ಗ್ಯಾಸ್ ಸಬ್ಸಿಡಿ, ಉದ್ಯೋಗ ಖಾತ್ರಿ, ವೃದ್ದಾಪ್ಯ ಪಿಂಚಣಿ, ವಿದ್ಯಾರ್ಥಿವೇತನಗಳು ಸೇರಿ ವಿವಿಧ ಸಮಾಜ ಕಲ್ಯಾಣ ಯೋಜನೆಗಳ ಸಬ್ಸಿಡಿಗಳನ್ನು ವರ್ಗಾಯಿಸಲು ಭಾರತ ಸರ್ಕಾರ ಪೇಟಿಯಂ ಪೇಮೆಂಟ್ ಬ್ಯಾಂಕ್ ಬಳಸುತ್ತಿದ್ದು,ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಸೇರಲು ಸಹಕಾರಿಯಾಗಿದೆ.
  Published by:Harshith AS
  First published: