ಪಾಸ್​ಪೋರ್ಟ್​ ಪರಿಶೀಲನೆ: mPassport ಆ್ಯಪ್​ ಆರಂಭಿಸಿದ ಗುರುಗ್ರಾಮ ಪೊಲೀಸ್​


Updated:May 1, 2018, 11:04 AM IST
ಪಾಸ್​ಪೋರ್ಟ್​ ಪರಿಶೀಲನೆ: mPassport ಆ್ಯಪ್​ ಆರಂಭಿಸಿದ ಗುರುಗ್ರಾಮ ಪೊಲೀಸ್​

Updated: May 1, 2018, 11:04 AM IST
ಗುರುಗ್ರಾಮ: ಪ್ರತಿಯೊಬ್ಬರಿಗೂ ಒಂದಲ್ಲೊಂದು ಕಾರಣಕ್ಕೆ ಪಾಸ್ ಪೋರ್ಟ್ ಅಗತ್ಯ. ಹಿಂದೆ ಎಲ್ಲಾ , ಪಾಸ್ ಪೋರ್ಟ್ ಪಡೆಯುವುದಕ್ಕಾಗಿ ಸಾಕಷ್ಟು ಅಲೆದಾಡಬೇಕಾಗಿತ್ತು. ಆದರೆ ಈ ಅಲೆದಾಟಕ್ಕೆ ಬ್ರೇಕ್​ ಹಾಕಲು ಮುಂದಾದ ಗುರುಗ್ರಾಮ ಪೊಲೀಸರು ಎಮ್​ ಪಾಸ್​ಪೋರ್ಟ್​ ಎಂಬ ಸ್ಮಾರ್ಟ್​ ಫೋನ್​ ಅಪ್ಲಿಕೇಶನ್​ ಆರಂಭಿಸಿದ್ದಾರೆ.

ಈ ಹಿಂದೆ ಪಾಸ್​ಪೋರ್ಟ್​ ದಾಖಲೆಗಳ ಪೊಲೀಸರ ಪರಿಶೀಲನೆಗೆ ಬಹಳಷ್ಟು ಸಮಯ ತೆಗದುಕೊಳ್ಳುತ್ತಿತ್ತು. ಇದರಿಂದ ಪೊಲೀಸ್​ ಇಲಾಖೆ ಹಾಗೂ ಪಾಸ್​ಪೋರ್ಟ್​ ಅರ್ಜಿದಾರರಿಗೆ ಹೆಚ್ಚಿನ ಒತ್ತಡ ಬೀಳುತ್ತಿತ್ತು. ಹೀಗಾಗಿ ಪರಿಹಾರ ಕಂಡು ಹಿಡಿದ ಗುರುಗ್ರಾಮ ಪೊಲೀಸರು ಎಮ್​ ಪಾಸ್​ಪೋರ್ಟ್​ ಎಂಬ ಅಪ್ಲಿಕೇಶನ್​ನ್ನು ಆರಂಭಿಸಿದ್ದಾರೆ.

'ಕಾಗದ ರಹಿತ ಪೊಲೀಸ್​ ಪರಿಶೀಲನೆಗಾಗಿ ನಾವು ಸ್ಮಾರ್ಟ್​ಫೋನ್​ ಮೂಲಕ ಎಮ್​ ಪಾಸ್​ಪೋರ್ಟ್​ ಸೌಲಭ್ಯ ಆರಂಭಿಸಿದ್ದು, ಈ ಸೌಲಭ್ಯದಿಂದ ಪೊಲೀಸರ ಮೇಲಿನ ಒತ್ತಡಕ್ಕೆ ಬ್ರೇಕ್​ ಬೀಳಲಿದೆ ಎಂದು ಪೊಲೀಸ್​ ಆಯುಕ್ತ ಸಂದೀಪ್​ ಕಿರ್ವಾರ್ ಹೇಳಿದ್ದಾರೆ.

ಪೊಲೀಸರು ಪಾಸ್​ಪೋರ್ಟ್​ ಅರ್ಜಿದಾರರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ದಾಖಲೆಗಳನ್ನು ಸ್ಮಾರ್ಟ್​ಫೋನ್​ನಲ್ಲಿ ಅಪ್ಲೋಡ್​ ಮಾಡುತ್ತಾರೆ. ಸದ್ಯ ಗುರುಗ್ರಾಮದ ಎಲ್ಲಾ ಪೊಲೀಸ್​ ಇಲಾಕೆಗೂ ಅಪ್ಲಿಕೇಶ್​ನ್​ ಜತೆಗೆ ಸ್ಮಾರ್ಟ್​ಫೋನ್​ ನೀಡಲಾಗಿದೆ. ಅಪ್ಲಿಕೇಶನ್​ ಬಳಸಿ ಪೊಲೀಸರು ದಾಖಲೆಗಳ ಚಿತ್ರ ತೆಗೆದು ಅಪ್ಲೋಡ್​ ಮಾಡಿದರೆ ಕ್ಷಣಾರ್ಧದಲ್ಲೇ ಕೆಲಸ ಮುಗಿದು ಬಿಡುತ್ತದೆ.
First published:May 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...