ಇಂದಿನ ದಿನಗಳಲ್ಲಿ ಕೋವಿಡ್ (Covid 19) ಸಾಂಕ್ರಾಮಿಕದ ಕಾರಣ ಶಾಲೆಗಳು ಆನ್‌ಲೈನ್ ಪಾಠ ಪ್ರವಚನಗಳಿಗೆ ಆದ್ಯತೆ ನೀಡುತ್ತಿವೆ. ಈ ಸಮಯದಲ್ಲಿ ಮಕ್ಕಳು ಹೆಚ್ಚಿನ ಸಮಯ ಸ್ಮಾರ್ಟ್‌ಫೋನ್‌ಗಳನ್ನೇ (Smartphone) ಬಳಸುವ ಅಗತ್ಯವಿರುತ್ತದೆ. ಆದರೆ ಮಗು ಸ್ಮಾರ್ಟ್‌ಫೋನ್ ಅನ್ನು ಕಲಿಕೆಗೆ ಮಾತ್ರವೇ ಬಳಸುತ್ತಿದೆಯೇ ಇಲ್ಲವೇ ಇನ್ನಿತರ ಚಟುವಟಿಕೆಗಳ ಕಡೆಗೆ ಕೂಡ ಗಮನ ಹೋಗಿದೆಯೇ ಎಂಬುದನ್ನು ಪೋಷಕರು ಗಮನಿಸಬೇಕಾಗುತ್ತದೆ. ಹೆಚ್ಚಿನ ಪೋಷಕರು ಮನೆಯಲ್ಲಿಯೇ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವುದರಿಂದ ಮಕ್ಕಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ತಂತ್ರಜ್ಞಾನವನ್ನೇ ಅವಲಂಬಿಸಬೇಕಾಗುತ್ತದೆ. ಹಾಗಾದರೆ ತಂತ್ರಜ್ಞಾನದ ವಿಧಾನವನ್ನು ಅನುಸರಿಸಿಕೊಂಡು ಮಗುವಿನ ಸ್ಮಾರ್ಟ್‌ಫೋನ್ ಬಳಕೆಯ ಮೇಲೆ ನಿಗಾ ಇರಿಸಲು ಸಹಾಯ ಮಾಡುವ ಕೆಲವೊಂದು ಆ್ಯಪ್‌ಗಳಿದ್ದು, ಅವುಗಳು ಯಾವುವು ಎಂಬುದನ್ನು ನೋಡೋಣ.
ಈ ಆ್ಯಪ್‌ಗಳು ಆ್ಯಂಡ್ರಾಯ್ಡ್ ಹಾಗೂ ಐಫೋನ್ ಎರಡರಲ್ಲೂ ಲಭ್ಯವಿದ್ದು ನೀವು ಗೂಗಲ್ ಪ್ಲೇ ಇಲ್ಲವೇ ಆ್ಯಪ್ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ.
1) ಫ್ಯಾಮಿಸೇಫ್
ಫ್ಯಾಮಿಸೇಫ್ ಆ್ಯಪ್ ಅತ್ಯುತ್ತನ ಪೋಷಕ ನಿಯಂತ್ರಣ ಆ್ಯಪ್‌ಗಳಲ್ಲಿ ಒಂದಾಗಿದ್ದು ಸ್ಕ್ರೀನ್ ಟೈಮ್ ನಿರ್ಬಂಧನೆ, ಮಕ್ಕಳ ವಯಸ್ಸಿಗನುಗುಣವಾಗಿ ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ಗಳಲ್ಲಿ ಬದಲಾವಣೆ ಹಾಗೂ ಮಕ್ಕಳು ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿದ್ದರೆ ಕೂಡಲೇ ಪೋಷಕರಿಗೆ ಸೂಚನೆಗಳನ್ನು ಕಳುಹಿಸುವುದು ಮೊದಲಾದ ಕಾರ್ಯಗಳನ್ನು ಇದು ಮಾಡುತ್ತದೆ.
2) ಕ್ವೆಸ್ಟೊಡಿಯೊ
ಇದೊಂದು ಉಚಿತ ಪೋಷಕ ನಿಯಂತ್ರಣ ಆ್ಯಪ್ ಆಗಿದ್ದು ವಿಂಡೋಸ್, ಮ್ಯಾಕ್, ಐಓಎಸ್, ಆ್ಯಂಡ್ರಾಯ್ಡ್ ಹಾಗೂ ಕಿಂಡಲ್ ಡಿವೈಸ್‌ಗಳಲ್ಲಿ ಲಭ್ಯವಿದೆ. ಮಗುವಿನ ಸಾಮಾಜಿಕ ತಾಣಗಳ ಚಟುವಟಿಕೆಯ ಮೇಲೆ ಈ ಆ್ಯಪ್ ನಿಗಾವಹಿಸುತ್ತದೆ.
3) ನ್ಯಾನಿ ಫ್ಯಾಮಿಲಿ ಪ್ರೊಟೆಕ್ಟ್ ಪಾಸ್
ಈ ಆ್ಯಪ್ ಮಗುವಿಗೆ ಪೂರಕವಾಗಿರುವ ಅಂಶಗಳನ್ನು ಫಿಲ್ಟರ್ ಮಾಡಲು ಅನುಕೂಲಕರವಾಗಿದೆ. ಮಗುವಿಗೆ ಅಗತ್ಯವಾಗಿರುವ ಮಾಹಿತಿಯನ್ನು ಮಾತ್ರವೇ ಈ ಆ್ಯಪ್ ಒದಗಿಸುತ್ತದೆ.
4) ಮಾಮಾಬೇರ್
ಈ ಆ್ಯಪ್ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ನಿಯಂತ್ರಣ ಮಾಡುತ್ತದೆ. ಸ್ಥಳ ಟ್ರ್ಯಾಕಿಂಗ್, ಸೂಚನೆಗಳು ಹೀಗೆ ಇನ್ನಷ್ಟು ಕೆಲಸಗಳನ್ನು ಆ್ಯಪ್ ಮೂಲಕ ಮಾಡಬಹುದಾಗಿದೆ.
5) ಸ್ಕ್ರೀನ್ ಟೈಮ್
ಮಕ್ಕಳು ಎಷ್ಟು ಸಮಯದವರೆಗೆ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಸ್ಕ್ರೀನ್ ಟೈಮ್ ಆ್ಯಪ್ ಮೂಲಕ ನಿಯಂತ್ರಿಸಬಹುದಾಗಿದೆ. ಇದರಿಂದ ಮಗುವು ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚು ಸಮಯ ವ್ಯರ್ಥಮಾಡುತ್ತಿದ್ದರೆ ಅದಕ್ಕೆ ಕಡಿವಾಣ ಹಾಕಬಹುದಾಗಿದೆ.
6) ಯೂಟ್ಯೂಬ್ ಕಿಡ್ಸ್
ಯೂಟ್ಯೂಬ್ ಅಂದರೆ ಮಕ್ಕಳಿಗೂ ಅಚ್ಚುಮೆಚ್ಚು. ಮಕ್ಕಳ ಹೆಚ್ಚಿನ ಕಾರ್ಟೂನ್ ಚಾನಲ್‌ಗಳು ಈ ಆ್ಯಪ್ ಮೂಲಕವೇ ದೊರೆಯುತ್ತಿರುತ್ತದೆ. ಯೂಟ್ಯೂಬ್ ಕಿಡ್ಸ್ ಆ್ಯಪ್ ಅನ್ನು ಯೂಟ್ಯೂಬ್ ಪರಿಚಯಿಸಿದ್ದು ಮಕ್ಕಳು ನೋಡಬೇಕಾದ ವಿಷಯವನ್ನು ಮಾತ್ರವೇ ಇದು ಚಿಣ್ಣರಿಗೆ ಒದಗಿಸುತ್ತದೆ. ಮಕ್ಕಳ ಪ್ರೊಫೈಲ್ ರಚನೆ, ಚಾನಲ್‌ಗಳನ್ನು ನಿರ್ಬಂಧಿಸುವುದು ಇಲ್ಲವೇ ವಿಡಿಯೋಗಳನ್ನು ಬ್ಲಾಕ್ ಮಾಡುವುದನ್ನು ಯೂಟ್ಯೂಬ್ ಕಿಡ್ಸ್ ಮೂಲಕ ಮಾಡಬಹುದಾಗಿದೆ.
7) ಬೌನ್ಸಿ
ಮಗು ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದಾದಲ್ಲಿ ಇದು ನಿಮಗೆ ಕೂಡಲೇ ಸೂಚನೆಯನ್ನು ಕಳುಹಿಸುತ್ತದೆ. ಉದಾಹರಣೆಗೆ ಮಕ್ಕಳು ಕಾರು ಡ್ರೈವ್ ಮಾಡುತ್ತಿದ್ದಲ್ಲಿ ನೀವು ಹೊಂದಿಸಿರುವ ವೇಗವನ್ನು ದಾಟಿ ಹೆಚ್ಚಿನ ವೇಗದಲ್ಲಿ ಮಕ್ಕಳು ಚಾಲನೆ ಮಾಡುತ್ತಿದ್ದಾರೆ ಎಂದಾದಲ್ಲಿ ಬೌನ್ಸಿ ಆ್ಯಪ್ ಕೂಡಲೇ ಮಗುವಿನ ಪೋಷಕರಿಗೆ ಸೂಚನೆಯನ್ನು ಕಳುಹಿಸುತ್ತದೆ.
8) ರೆಸ್ಪಾಂಡ್ ASAP
ನಿಮ್ಮ ಪಠ್ಯ ಸಂದೇಶಗಳು ಅಥವಾ ಕರೆಗಳನ್ನು ಮಕ್ಕಳು ನಿರ್ಲಕ್ಷಿಸುತ್ತಿದ್ದಾರೆಯೇ ಹಾಗೂ ಅವರಿಗೆ ಪಾಠ ಕಲಿಸುವ ಸಂದೇಶವನ್ನು ನೀವು ಕಳುಹಿಸಬೇಕು ಎಂದಾದಲ್ಲಿ ರೆಸ್ಪಾಂಟ್ ASAP ಆ್ಯಪ್ ಸಹಕಾರಿಯಾಗಿದೆ. ಇದರಿಂದ ಮಕ್ಕಳು ಪೋಷಕರಿಗೆ ಮರಳಿ ಕರೆಮಾಡಬೇಕು ಎಂಬ ಎಚ್ಚರಿಕೆಯನ್ನು ಈ ಆ್ಯಪ್ ನೀಡುತ್ತದೆ ಹಾಗೂ ಅಲಾರಂ ಮೊಳಗಿಸುತ್ತಿರುತ್ತದೆ.
9) ಬಾರ್ಕ್
ಬಾರ್ಕ್ ಆ್ಯಪ್ ನಿಮ್ಮ ಮಗುವಿನ ಆನ್‌ಲೈನ್ ಚಟುವಟಿಕೆಯನ್ನು ಪರಿಶೀಲಿಸುತ್ತದೆ. ಸೈಬರ್ ಕಿರುಕುಳದಂತಹ ಅಪಾಯಕಾರಿ ಅಂಶಗಳನ್ನು ಬೆಳಕಿಗೆ ತರಲು ಬಾರ್ಕ್ ಆ್ಯಪ್ ಸಹಕಾರಿಯಾಗಿದೆ.
10) ಚೆಕಿ
ಹದಿಹರೆಯದ ಮಕ್ಕಳು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಬಲಿಯಾಗುತ್ತಿದ್ದಾರೆ. ಆದರೆ ಮಗುವಿನ ಮೇಲೆ ರೇಗಾಡುವುದರ ಬದಲಿಗೆ ಅವರ ಸ್ಮಾರ್ಟ್‌ಫೋನ್ ಅಭ್ಯಾಸಗಳನ್ನು ಒಳಿತಿನ ಕಡೆಗೆ ಬದಲಾಯಿಸಬಹುದಾಗಿದೆ. ಚೆಕಿ ಆ್ಯಪ್ ಸ್ಮಾರ್ಟ್‌ಫೋನ್ ಬಳಕೆಯನ್ನು ಮಾನಿಟರ್ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ