Super Computer: ಇದು ಸೂಪರ್ ಫಾಸ್ಟ್ ಕಂಪ್ಯೂಟರ್, ಹೇಗಿದೆ ಗೊತ್ತಾ ಇದರ 'ಪರಮ್ ಪ್ರವೇಗ'?

ಐಐಎಸ್‍ಸಿ ಹಲವಾರು ವರ್ಷಗಳ ಹಿಂದೆಯೇ ಅಭಿವೃದ್ಧಿಪಡಿಸಲಾಗಿರುವ ಅತ್ಯುನ್ನತ ಕಂಪ್ಯೂಟರ್ ಸೌಲಭ್ಯ ಹೊಂದಿದೆ. 2015ರಲ್ಲಿ ಸಂಸ್ಥೆಯು ಸಹಸ್ರ ಟಿ-ಸೂಪರ್ ಕಂಪ್ಯೂಟರ್‌ ಅನ್ನು ಖರೀದಿಸಿ, ಸ್ಥಾಪಿಸಿತ್ತು. ಇದೀಗ 'ಪರಮ್ ಪ್ರವೇಗ' ಹೊಸ ಸೇರ್ಪಡೆ.

IIScಯಲ್ಲಿ ಅಳವಡಿಸಿಕೊಂಡಿರುವ ಪರಮ್ ಪ್ರವೇಗ

IIScಯಲ್ಲಿ ಅಳವಡಿಸಿಕೊಂಡಿರುವ ಪರಮ್ ಪ್ರವೇಗ

  • Share this:
ಭಾರತದಲ್ಲೇ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ (Super Computer) ಆದ ‘ಪರಮ್ ಪ್ರವೇಗ’ವನ್ನು (Param Pravega) ರಾಷ್ಟ್ರೀಯ ಅತ್ಯುನ್ನತ ಗಣಕ ಅಭಿಯಾನ (NSM) ಅಡಿಯಲ್ಲಿ ಬೆಂಗಳೂರಿನ (Bengaluru) ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISC) ಅಳವಡಿಸಲಾಗಿದೆ. ಭಾರತದ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಅಳವಡಿಸಲಾಗಿರುವ ದೊಡ್ಡ ಸೂಪರ್ ಕಂಪ್ಯೂಟರ್ ಇದಾಗಿದೆ. ಈ ವ್ಯವಸ್ಥೆಯು ಶಕ್ತಿ ವೈವಿಧ್ಯತೆಯ ಸಂಶೋಧನೆ ಮತ್ತು ಶೈಕ್ಷಣಿಕ ವೃತ್ತಿಪರವಾಗಿ ಕೆಲಸ ಮಾಡುವ ನಿರೀಕ್ಷೆ ಇದ್ದು, ಇದು ಒಟ್ಟು 3.3 ಪೆಟಾಫ್ಲಾಪ್ಸ್ (Petaflops) (ಒಂದು ಪೆಟಾಫ್ಲಾಪ್ 1015 ಕ್ವಾಡ್ರಿಲಿಯನ್‍ಗೆ  (Quadrillion) ಸಮ ಅಥವಾ ಒಂದು ಸೆಕೆಂಡಿಗೆ 1015 ಕೆಲಸಗಳನ್ನು ಮಾಡುವ ಸಾಮರ್ಥ್ಯ) ಅತ್ಯುನ್ನತ ಗಣಕ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಬೆಂಗಳೂರು ಮೂಲದ ಪ್ರತಿಷ್ಠಿತ ವಿಜ್ಞಾನ ಸಂಶೋಧನಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಿ-ಡ್ಯಾಕ್ ಅಭಿವೃದ್ಧಿಪಡಿಸಿದ ಕಂಪ್ಯೂಟರ್

ಈ ಅತ್ಯುನ್ನತ ಗಣಕ ವ್ಯವಸ್ಥೆಯನ್ನು ಸಿ-ಡ್ಯಾಕ್ ಅಭಿವೃದ್ಧಿಪಡಿಸಿದೆ. ಮೇಕ್‍ ಇನ್ ಇಂಡಿಯಾ ಅಭಿಯಾನದಡಿ, ಈ ವ್ಯವಸ್ಥೆಯ ಬಹುತೇಕ ಬಿಡಿಭಾಗಗಳನ್ನು ಭಾರತದಲ್ಲೇ ತಯಾರಿಸಿ ಜೋಡಿಸಲಾಗಿದ್ದು, ಇದರೊಂದಿಗೆ ಸ್ವದೇಶಿ ನಿರ್ಮಿತ ಸಾಫ್ಟ್‌ವೇರ್ ಸ್ಟ್ಯಾಕ್‌ ಅನ್ನು ಸಿ-ಡ್ಯಾಕ್ ಅಭಿವೃದ‍್ಧಿಪಡಿಸಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

ರಾಷ್ಟ್ರೀಯ ಅತ್ಯುನ್ನತ ಗಣಕ ಯೋಜನೆಯು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಶುರು ಮಾಡಲಾಗಿತ್ತು ಮತ್ತು ಈ ಯೋಜನೆಯನ್ನು ಸಿ-ಡ್ಯಾಕ್ ಮತ್ತು ಐಐಎಸ್‍ಸಿ ಜಾರಿಗೊಳಿಸಿದ್ದವು. ಈ ಅಭಿಯಾನವು ಈವರೆಗೆ 10 ಅತ್ಯುನ್ನತ ಗಣಕ ವ್ಯವಸ್ಥೆಗಳನ್ನು ಐಐಎಸ್‍ಸಿ, ಐಐಟಿಸ್, ಐಐಎಸ್‍ಇಆರ್‌ ಪುಣೆ, ಜೆಎನ್‍ಸಿಎಎಸ್‍ಆರ್‌, ಎನ್‍ಎಬಿಐ-ಮೊಹಾಲಿ ಮತ್ತು ಸಿ-ಡ್ಯಾಕ್‍ಗಳಲ್ಲಿ ಒಟ್ಟು17 ಪೆಟಾಫ್ಲಾಪ್ಸ್‌ ಸಾಮರ್ಥ್ಯದೊಂದಿಗೆ ಅಳವಡಿಸಲು ನೆರವು ನೀಡಿದೆ.

26 ಸಾವಿರ ಸಂಶೋಧಕರಿಂದ ಕೆಲಸ

ಇಲ್ಲಿಯವರೆಗೆ 2,600 ಸಂಶೋಧಕರು ದೇಶಾದ್ಯಂತ 31 ಲಕ್ಷ ಗಣಕ ಉದ್ಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಜೆನೋಮ್ ಹಾಗೂ ಔಷಧಿಗಳ ಆವಿಷ್ಕಾರಗಳು, ನಗರ ಪ್ರದೇಶದ ಪರಿಸರ ಸಮಸ್ಯೆಗಳು ಕುರಿತ ಅಧ್ಯಯನ, ನೆರೆ ಎಚ್ಚರಿಕೆ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳ ಅಭವೃದ್ಧಿ ಹಾಗೂ ದೂರವಾಣಿ ಸಂಪರ್ಕ ಜಾಲಗಳ ಉನ್ನತೀಕರಣದಂತಹ ಅಭಿವೃದ್ಧಿ ವೇದಿಕೆಗಳು, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿರುವ ಸಿಬ್ಬಂದಿ ಸದಸ್ಯರು ಹಾಗೂ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆಯಿಂದ ದೊಡ್ಡ ನೆರವು ದೊರೆತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Realme 9 Pro ಸ್ಮಾರ್ಟ್‌ಫೋನ್ ಬಿಡುಗಡೆಗೆ 12 ದಿನಗಳು ಬಾಕಿ..! ವಿವರ ಇಲ್ಲಿದೆ ನೋಡಿ

‘ಪರಮ್ ಪ್ರವೇಗ’ದಲ್ಲಿ ಏನಿದೆ?

ಐಐಎಸ್‍ಸಿಯಲ್ಲಿ ಅಳವಡಿಸಲಾಗಿರುವ ಪರಮ್ ಪ್ರವೇಗ ಸೂಪರ್ ಕಂಪ್ಯೂಟರ್ ಹೆಟೆರೋಜೀನಿಯಸ್ ನೋಡ್ಸ್, ಸಿಪಿಯು ನೋಡ್ಸ್‌ಗೆ ಇಂಟೆಲ್ ಕ್ಸಿಯಾನ್ ಕ್ಯಾಸ್ಕೇಡ್ ಲೇಕ್ ಪ್ರೊಸೆಸರ್ಸ್ ಹಾಗೂ ಜಿಪಿಯು ನೋಡ್ಸ್ ಮೇಲೆ ಎನ್‍ವಿಐಡಿಐಎ ಟೆಸ್ಲಾ ವಿ ಕಾರ್ಡ್ಸ್‌ ಅಳವಡಿಸಲಾಗಿದೆ.

ಈ ಹಾರ್ಡ್‍ವೇರ್‌ ಸಮಗ್ರ ಗರಿಷ್ಠ 3.3 ಪೆಟಾಫ್ಲಾಪ್ಸ್‌ ಸಾಮರ್ಥ್ಯದ ಬುಲ್‍ಸೀಕ್ವಾನಾ ಎಕ್ಸ್‌ಎಚ್‍2000 ಸರಣಿ ವ್ಯವಸ್ಥೆಯನ್ನು ಒಳಗೊಂಡಿದೆ. ಹಾರ್ಡ್‍ವೇರ್ ಮೇಲೆ ಅಳವಡಿಸಲಾಗಿರುವ ಸಾಫ್ಟ್‌ವೇರ್‌ ಸ್ಟ್ಯಾಕ್‌ ಅನ್ನು ಸಿ-ಡ್ಯಾಕ್ ಒದಗಿಸಿ ನೆರವು ನೀಡಿದೆ.

ಈ ಯಂತ್ರವು ಕಾರ್ಯಕ್ರಮ ಅಭಿವೃದ್ಧಿ ಸಾಧನಗಳು, ಉಪಯುಕ್ತತೆಗಳು ಹಾಗೂ ಭಾರಿ ಪ್ರದರ್ಶನದ ಗಣಕ ತಂತ್ರಾಂಶಗಳನ್ನು ನಿರ್ವಹಿಸಲು ಹಾಗೂ ಅಭಿವೃದ್ಧಿಪಡಿಸಲು ಬೇಕಾದ ಗ್ರಂಥಾಲಯವನ್ನು ಒಳಗೊಂಡಿದೆ ಎಂದು ಐಐಎಸ್‍ಸಿ ಹೇಳಿದೆ.

ಇದು ಅತಿ ವೇಗದ ಕಂಪ್ಯೂಟರ್

ಐಐಎಸ್‍ಸಿ ಈಗಾಗಲೇ ಹಲವಾರು ವರ್ಷಗಳ ಹಿಂದೆಯೇ ಅಭಿವೃದ್ಧಿಪಡಿಸಲಾಗಿರುವ ಅತ್ಯುನ್ನತ ಗಣಕ ಸೌಲಭ್ಯವನ್ನು ಹೊಂದಿದೆ. 2015ರಲ್ಲಿ ಸಂಸ್ಥೆಯು ಸಹಸ್ರ ಟಿ ಸೂಪರ್ ಕಂಪ್ಯೂಟರ್‌ ಅನ್ನು ಖರೀದಿಸಿ, ಸ್ಥಾಪಿಸಿತ್ತು. ಆ ವೇಳೆಯಲ್ಲಿ ಭಾರತದಲ್ಲಿದ್ದ ಅತಿ ವೇಗದ ಸೂಪರ್ ಕಂಪ್ಯೂಟರ್‌ ಅದಾಗಿತ್ತು.

ಇದನ್ನೂ ಓದಿ: Google Doodle Games: ಬೇಸರವಾದ ಈ 7 ಆಟವನ್ನ ಗೂಗಲ್​ನಲ್ಲಿ ಆಡ್ಬೋದು.. ಇಲ್ಲಿದೆ ಲಿಂಕ್​

ಸಿಬ್ಬಂದಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಹಲವಾರು ಪರಿಣಾಮಕಾರಿ ಹಾಗೂ ಸಾಮಾಜಿಕ ಪ್ರಾಮುಖ್ಯತೆ ಹೊಂದಿರುವ ವಲಯಗಳಲ್ಲಿ ಸಂಶೋಧನೆ ನಡೆಸಲು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ.

ಈ ಸಂಶೋಧನೆಯು ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ವೈರಾಣು ಪ್ರವೇಶ, ಜೋಡಣೆ, ಬ್ಯಾಕ್ಟೀರಿಯಾ ಮತ್ತು ವೈರಸ್ ರೋಗಗಳಲ್ಲಿ ಜೀವಕೋಶಗಳ ಒಡನಾಟ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಮತ್ತು ವೈರಸ್ ನಿರೋಧಕ ಗುಣ ಹೊಂದಿರುವ ಹೊಸ ಕಣಗಳನ್ನು ವಿನ್ಯಾಸವನ್ನು ಒಳಗೊಂಡಿತ್ತು.
Published by:Annappa Achari
First published: