• Home
  • »
  • News
  • »
  • tech
  • »
  • LinkedIn Bio: ಲಿಂಕ್ಡ್​ ಇನ್ ಬಯೋ ಬದಲಿಸಿದ ಪರಾಗ್‌ ಅಗ್ರವಾಲ್! ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

LinkedIn Bio: ಲಿಂಕ್ಡ್​ ಇನ್ ಬಯೋ ಬದಲಿಸಿದ ಪರಾಗ್‌ ಅಗ್ರವಾಲ್! ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಪರಾಗ್‌ ಅಗ್ರವಾಲ್‌

ಪರಾಗ್‌ ಅಗ್ರವಾಲ್‌

ಈ ಎಲ್ಲಾ ಸಂದರ್ಭಗಳನ್ಮನು ನೋಡಿಕೊಂಡು ಪರಾಗ್ ಅಗ್ರವಾಲ್ ಅವರು ತಮ್ಮ ಲಿಂಕ್ಡ್​ ಇನ್ ಪ್ರೊಫೈಲ್‌ನ ಬಯೋವನ್ನು ಬದಲಾಯಿಸಿದ್ದಾರೆ. ಈ ಬದಲಾವಣೆಗೆ ಪರಾಗ್‌  ಅಗ್ರವಾಲ್‌ ಅವರಿಗೆ ಜನರಿಂದ ಬಹಳಷ್ಟು ಉತ್ತಮ ಪ್ರತಿಕ್ರಿಯೆಗಳೂ ಬಂದಿವೆ.

  • Share this:

    ಇತ್ತೀಚಿಗೆ ಕೆಲವು ದಿನಗಳ ಹಿಂದೆ ಟ್ವಿಟರ್‌ನ (Twitter) ವಿಷಯದಲ್ಲಿ ಕೆಲವೊಂದು ಚರ್ಚೆಗಳಾಗಿತ್ತು. ಆದರೆ ಎಲಾನ್‌ ಮಸ್ಕ್‌ (Elon Musk) ಈ ಸಮಸ್ಯೆಯನ್ನು ಬಗೆಹರಿಸಿದರು. ಜೊತೆಗೆ ಟ್ವಿಟರ್‌ ಸಿಇಒ ಆಗಿದ್ದ ಪರಾಗ್‌ ಅಗ್ರವಾಲ್‌ (Parag Agrawal) ಮತ್ತು ಮತ್ತೆ ನಾಲ್ಕು ಮಂದಿಯನ್ನು ವಜಾ ಮಾಡಲಾಗಿತ್ತು.  ಟ್ವಿಟ್ಟರ್‌ನಿಂದ ಹೊರಬರುತ್ತಿದ್ದಂತೆ ಪರಾಗ್‌ ಅಗ್ರವಾಲ್ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನ ಬಯೋವನ್ನು ಬದಲಾಯಿಸಿಕೊಂಡಿದ್ದಾರೆ. ಟ್ವಿಟ್ಟರ್‌ನ ಸಿಇಒ (CEO) ಆಗಿ ನೇಮಕಗೊಂಡ ಸುಮಾರು 11 ತಿಂಗಳಲ್ಲಿಯೇ ಹುದ್ದೆಯಿಂದ ವಜಾಗೊಂಡಿದ್ದಾರೆ. ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮ‌ (Social Media) ಕಂಪನಿ ಟ್ವಿಟರ್ ಅನ್ನು ಅಕ್ಟೋಬರ್ 27 ರಂದು 44 ಶತಕೋಟಿಗೆ ಖರೀದಿಸಿದ ನಂತರ ಟ್ವಿಟ್ಟರ್ ಸಿಇಒ ಆಗಿದ್ದ ಪರಾಗ್ ಅಗ್ರವಾಲ್ ಅವರಿಗೆ ಗೇಟ್‌ ಪಾಸ್‌ ನೀಡಿದ್ದಾರೆ.


    ಈ ಎಲ್ಲಾ ಸಂದರ್ಭಗಳನ್ಮನು ನೋಡಿಕೊಂಡು ಪರಾಗ್ ಅಗ್ರವಾಲ್ ಅವರು ತಮ್ಮ ಲಿಂಕ್‌ಡಿನ್‌ ಪ್ರೊಫೈಲ್‌ನ ಬಯೋವನ್ನು ಬದಲಾಯಿಸಿದ್ದಾರೆ. ಈ ಬದಲಾವಣೆಗೆ ಪರಾಗ್‌  ಅಗ್ರವಾಲ್‌ ಅವರಿಗೆ ಜನರಿಂದ ಬಹಳಷ್ಟು ಉತ್ತಮ ಪ್ರತಿಕ್ರಿಯೆಗಳೂ ಬಂದಿವೆ. ಏನೆಲ್ಲಾ ಇವೆ ಎಂಬುದು ಈ ಕೆಳಗೆ ನೀಡಲಾಗಿದೆ.


    ಹೆಚ್ಚಾಗಿದೆ ಪರಾಗ್‌ ಪ್ರೊಪೈಲ್‌ ವೀಕ್ಷಣೆಗಳ ಸಂಖ್ಯೆ


    ಪ್ರಸ್ತುತ ಕಂಪನಿಯಿಂದ ಹೊರಬಂದ ಮೇಲೆ ಪರಾಗ್‌ ಅವರನ್ನು ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಅವರ ಪ್ರೊಫೈಲ್‌ ಅನ್ನು ಪರಿಶೀಲಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆಯಂತೆ. ಎಲೋನ್‌ ಮಸ್ಕ್‌ ನಂತರ ವ್ಯಾಪಾರ ನೆಟ್‌ವರ್ಕ್‌ನಲ್ಲಿ ಪರಾಗ್‌ ಅವರ ಪ್ರೊಫೈಲ್‌ನ ವೀಕ್ಷಣೆಗಳು 36% ಹೆಚ್ಚಾಗಿದೆಯಂತೆ.


    ಇದನ್ನೂ ಓದಿ: ಟ್ವಿಟರ್ ಉದ್ಯೋಗಿಗಳಿಗೆ ಇನ್ನು ದಿನದ 12 ಗಂಟೆ, ವಾರದ 7 ದಿನ ಕೆಲಸ, ಮಾಡದವರು ವಜಾ!


    ಲಿಂಕ್ಡ್‌ಇನ್ ಪ್ರೊಪೈಲ್‌ ಬಯೋವನ್ನು ಬದಲಿಸಿಕೊಂಡ ಪರಾಗ್


    ಈ ಬಗ್ಗೆ ಸ್ವತಃ ಡೇಟಾ ಚಾರ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಪರಾಗ್‌ "ಟ್ವಿಟ್ಟರ್ ಸಿಇಒ ಸ್ಥಾನದಿಂದ ವಜಾಗೊಳಿಸಿದ ನಂತರ, ನನ್ನ ಪ್ರೊಫೈಲ್ ವೀಕ್ಷಣೆಗಳು 36 ಪ್ರತಿಶತದಷ್ಟು ಹೆಚ್ಚಾಗಿದೆ. ಆದ್ದರಿಂದ, ಸರಿಯಾಗಿ ಪರಾಗ್ ಅನ್ನು ಹುಡುಕುವಲ್ಲಿ ಜನರಿಗೆ ಸಹಾಯ ಮಾಡಲು, ನಾನು ನನ್ನ ಪ್ರೊಫೈಲ್ ಪೇಜ್‌ನ ಟೈಟಲ್‌ಅನ್ನು ಬದಲಾಯಿಸಿದ್ದೇನೆ" ಎಂದು ಡೇಟಾವನ್ನು ಹಂಚಿಕೊಂಡು ಈ ರೀತಿಯಾಗಿ ಬರೆದುಕೊಂಡಿದ್ದಾರೆ.


    Parag Agrawal Changed Link Bio What is the reason
    ಪರಾಗ್‌ ಅಗ್ರವಾಲ್‌ ಲಿಂಕ್ಡ್​ ಇನ್ ಬಯೋ


    ಏನೆಂದು ಬಯೋ ಬದಲಾಯಿಸಿದ್ದಾರೆ?


    ಅಗ್ರವಾಲ್ ಅವರು ತಮ್ಮ ಲಿಂಕ್ಡ್‌ಇನ್ ಬಯೋವನ್ನು ಅಪ್‌ಡೇಟ್ ಮಾಡಿದ್ದು, "ನೀವು ಹುಡುಕುತ್ತಿರುವ CEO ಅಲ್ಲ" ಎಂದು ತಮ್ಮ ಹೆಸರಿನ ಕೆಳಗೆ ಲಿಂಕ್ಡ್‌ಇನ್‌ ಬಯೋದಲ್ಲಿ ಉಲ್ಲೇಖಿಸಿದ್ದಾರೆ.


    ಪರಾಗ್‌ ಅಗ್ರವಾಲ್‌ ಅವರಿಗೆ ಜನರ ಹಾರೈಕೆ:


    "ನಾನು ನಿಮ್ಮ ಪ್ರೊಫೈಲ್‌ ಅನ್ನು ಹುಡುಕುವ ವೇಳೆ, ಇತರೆ ಪರಾಗ್ ಅಥವಾ ಅಗ್ರವಾಲ್‌ ಎಂಬ ಯಾವುದೇ ಪ್ರೊಫೈಲ್ ನನಗೆ ಸಿಗಲಿಲ್ಲ ನೇರವಾಗಿ ನಿಮ್ಮ ಪ್ರೊಫೈಲೇ ಕಾಣಿಸಿಕೊಂಡಿದೆ ಎಂದು ಅವರ ಬಳಕೆದಾರರು ಬರೆದುಕೊಂಡಿದ್ದಾರೆ. ನಿಮ್ಮ ಸಾಧನೆಯನ್ನು ಹೀಗೆ ಮುಂದುವರಿಸಿ ಎಂದು ಪರಾಗ್‌ ಅವರಿಗೆ ವಿಶ್ವಾಸ ಮತ್ತು ಬೆಂಬಲ ತುಂಬಿದ್ದಾರೆ. ಇನ್ನೊಬ್ಬ ಬಳಕೆದಾರರು ಖಂಡಿತಾ ನೀವು ಜಗತ್ತು ಹುಡುಕುವ ಸಿಇಒ ಆಗುತ್ತೀರಿ ಎಂದು ಶುಭ ಹಾರೈಸಿದ್ದಾರೆ.


    ಪರಾಗ್‌ ಸೇರಿ ಹಲವು ಅಧಿಕಾರಿಗೆ ಗೇಟ್‌ ಪಾಸ್


    ಪರಾಗ್‌ ಅಗ್ರವಾಲ್ ಮತ್ತು ಎಲೋನ್‌ ಮಸ್ಕ್‌ ನಡುವೆ ಇತ್ತೀಚಿಗೆ ಮುಸುಕಿನ ಗುದ್ದಾಟಗಳು ನಡೆಯುತ್ತಿದ್ದವು. ಟ್ವಿಟರ್‌ ಖರೀದಿಯಲ್ಲಿ ಪರಾಗ್‌ ಬಹುಮುಖ್ಯ ಪಾತ್ರ ವಹಿಸಿದ್ದರಂತೆ. ಆದರೆ ನಂತರದ ಕೆಲ ಘಟನೆಗಳು ಇಬ್ಬರ ಅಸಮಾಧಾನಕ್ಕೆ ಕಾರಣವಾದವು. ಇದಕ್ಕೆ ಸಾಕ್ಷಿ ಎನ್ನುವಂತೆ ಪರಾಗ್‌ ಅವರನ್ನು ಸೇರಿ ಹಲವು ಉನ್ನತ ಅಧಿಕಾರಿಗಳನ್ನು ಮಸ್ಕ್‌ ಸಂಸ್ಥೆಯಿಂದ ವಜಾಗೊಳಿಸಿದ್ದಾರೆ. ‌


    Parag Agrawal Changed Link Bio What is the reason
    ಟ್ವಿಟರ್‌


    ಟ್ವಿಟರ್‌ನ ಸಿಇಒ ಆಗ್ತಾರಾ  ಎಲಾನ್ ಮಸ್ಕ್?


    ಸದ್ಯಕ್ಕೆ, ಟ್ವಿಟರ್ ಅಧಿಕೃತ ಸಿಇಒ ಅನ್ನು ಹೊಂದಿಲ್ಲ, ಆದರೂ ‌ಎಲಾನ್ ಮಸ್ಕ್ ಬದಲಿಯಾಗಿ ಕಾರ್ಯನಿರ್ವಹಿಸಬಹುದು ಎನ್ನಲಾಗಿದೆ. ಅಕ್ಟೋಬರ್ 31 ರಂದು ಎಲಾನ್ ಮಸ್ಕ್ ಅವರು 44 ಬಿಲಿಯನ್ ಡಾಲರ್‌ಗೆ ಖರೀದಿಸಿದ ಸಾಮಾಜಿಕ ಮಾಧ್ಯಮ ಟ್ವಿಟರ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ.


    ವಾಲ್ ಸ್ಟ್ರೀಟ್ ವಿಶ್ಲೇಷಕರು ಈ ನಿರ್ಧಾರವು ಬಿಲಿಯನೇರ್ ಅನ್ನು ಸಂಕಷ್ಟಕ್ಕೆ ಸಿಲುಕಿಸಬಹುದು ಎಂದು ಎಚ್ಚರಿಸಿದ್ದಾರೆ. ಎಲಾನ್ ಮಸ್ಕ್‌ ಈಗಾಗ್ಲೇ ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾದಂತಹ ಕಂಪನಿಗಳ ಸಿಇಒ ಕೂಡ ಆಗಿದ್ದಾರೆ. ‌


    ಇದನ್ನೂ ಓದಿ: ಟ್ವಿಟರ್‌ಗೆ ಮತ್ತೆ ಮರಳಲಿದ್ದಾರೆ ಶ್ರೀರಾಮ್‌ ಕೃಷ್ಣನ್‌, ಎಲಾನ್​ ಮಸ್ಕ್​ ಪ್ಲ್ಯಾನ್​ ಗೆಸ್ಸ್​​​ ಮಾಡೋದೇ ಕಷ್ಟ!


    ಎಲಾನ್ ಮಸ್ಕ್ ಬ್ರೈನ್-ಚಿಪ್ ಸ್ಟಾರ್ಟ್ಅಪ್ ನ್ಯೂರಾಲಿಂಕ್ ಕಂಪನಿಯನ್ನು ಸಹ ನಡೆಸುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಜವಾಬ್ದಾರಿ ಎಲಾನ್ ಮಸ್ಕ್‌ ಅವರನ್ನು ಕೊಂಚ ಇಕ್ಕಟ್ಟಿಗೆ ಸಿಲುಕಿಸಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    Published by:shrikrishna bhat
    First published: