ಭಾರತಕ್ಕೆ ಹಲೋ ಎಂದು ಮರಳಿ ಬರುತ್ತಿದೆ ಆರ್ಕುಟ್

news18
Updated:April 14, 2018, 6:01 PM IST
ಭಾರತಕ್ಕೆ ಹಲೋ ಎಂದು ಮರಳಿ ಬರುತ್ತಿದೆ ಆರ್ಕುಟ್
news18
Updated: April 14, 2018, 6:01 PM IST
ನ್ಯೂಸ್ 18 ಕನ್ನಡ

ನವದೆಹಲಿ (ಏ14) :  ಇಂದಿನ ಯುಗದಲ್ಲಿ ಫೆಸ್​ಬುಕ್ ಅಂದರೇ ಯಾರಿಗೆ ಗೊತ್ತಿಲ್ಲ .  ಚಿಕ್ಕಮಕ್ಕಳಿಂದ ಹಿಡಿದು ಮುದುಕರವರೆಗೂ ಫೆಸ್​ಬುಕ್ ಬಗ್ಗೆ ಮಾತಾಡುತ್ತಾರೆ.

ಬೆಳಿಗ್ಗೆ  ಎದ್ದ ಕೂಡಲೇ ಒಮ್ಮೆ, ರಾತ್ರಿ  ಮಲಗುವ ಮುನ್ನ ಒಮ್ಮೆ  ಫೆಸ್​​ಬುಕ್  ಚೆಕ್ ಮಾಡದೇ ಇರೊದಕ್ಕೆ ಆಗಲ್ಲ. ಯಾವಾಗ ಫೆಸ್​ಬುಕ್  ಬಳಕೆ  ಹೆಚ್ಚಾಗುತ್ತಾ ಹೋಯಿತೊ  ಇತರ ಕೆಲವು ತಾಣಗಳು ಹಲವಾ ಕಡಿಮೆಯಾಗಿ ಹೋದವು.

ಫೇಸ್​ಬುಕ್​ ಜನಪ್ರಿಯವಾಗುವುದಕ್ಕೂ ಮುಂಚೆ ಜನರು ಹೆಚ್ಚಾಗಿ ಬಳಸುತ್ತಿದ್ದದ್ದು ಆರ್ಕುಟ್  ಸೆಪ್ಟೆಂಬರ್ 30 2014 ರಂದು  ಮುಚ್ಚಿಹೊಯಿತು.

ಇತ್ತೀಚೆಗೆ  ಖಾತೆದಾರರ ಮಾಹಿತಿ ದುರ್ಬಳಕೆ  ಬಗ್ಗೆ ವ್ಯಾಪಕ ಸುದ್ದಿಯಿಂದ ಫೆಸ್​ಬುಕ್  ಜನಪ್ರಿಯತೆ ಕುಗ್ಗಿದೆ.  ಇದೇ ಹೊತ್ತಲ್ಲ ಆರ್ಕೂಟ್ ಹಲೋ ಎಂಬ ಹೊಸ  ಸಾಮಾಜಿಕ ಜಾಲತಾಣ ಹೊಸ ರೂಪದಲ್ಲಿ ಬರುತ್ತಿದೆ.

ಇದು ಆರ್ಕುಟ್​​.ಕಾಮ್​​​​ನ ನೆಕ್ಸ್ಟ್​​​ ಎವಲ್ಯೂಷನ್. ಇದು ಆರ್ಕುಟ್​​ ನಂತೆಯೇ ಇರಲ್ಲ. ನಿಮ್ಮ ಹಳೇ ಫೋಟೋ ಹಾಗೂ ಕಮ್ಯೂನಿಟಿಗಳು ಸಿಗುತ್ತವೆ ಎಂದು ಭಾವಿಸಬೇಡಿ. ಆದರೇ ಅನೇಕ ಹೊಸ ಕಮ್ಯೂನಿಟಿಗಳು, ಜನರು ಹಾಗೂ ನೀವು ಇಷ್ಟ ಪಡುವ  ಫೀಚರ್​​ಗಳು ಸಿಗುತ್ತವೆ ಅಂತ ಆರ್ಕೂಟ್​​ ಬಳಕೆದಾರರಿಗೆ ಹಲೋ ಸಂದೇಶ ನೀಡಿದೆ.
ಸಾಮಾಜಿಕ ಜಾಲತಾಣಗಳು ಜನರನ್ನ ಒಗ್ಗೂಡಿಸುವ ಬದಲು ಅವರನ್ನ ಒಂಟಿಯಾಗಿ ಮಾಡ್ತಿದೆ. ಹಂಚಿಕೆಗಿಂತ ಪ್ರಚಾರವೇ ಹೆಚ್ಚಾಗಿದೆ. ನಮಗೊಂದು ಹೊಸ ಆರಂಭ ಬೇಕಾಗಿದೆ.

- ಆರ್ಕುಟ್ ನ ಸಂಸ್ಥಾಪಕ  ಆರ್ಕುಟ್ಬುಯುಕ್ಕೊಕ್ಟೇನ್


 
First published:April 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ