ರಹಸ್ಯ ಕ್ಯಾಮೆರಾ ಎಲ್ಲೇ ಇದ್ರೂ ಪತ್ತೆ; Oppo ಫೋನ್‌ಗಳಲ್ಲಿದೆ ಹೊಸ ಫೀಚರ್..!

ಒಪ್ಪೋ ತನ್ನ ಕಲರ್ ಒಎಸ್ ಆಪರೇಟಿಂಗ್ ಸಿಸ್ಟಂಗೆ ಹೊಸ ಅಪ್‌ಡೇಟ್‌ನಲ್ಲಿ ವಿಶೇಷವಾಗಿ  ಈ ಹೊಸ ಫೀಚರ್ ಪರಿಚಯಿಸಿದೆ.

Oppo ಫೋನ್‌

Oppo ಫೋನ್‌

 • Share this:
  ಸಾಮಾನ್ಯವಾಗಿ ಈ ಗೌಪ್ಯವಾಗಿ (Secrete ) ಇರಿಸಲಾಗಿರುವ ಅಥವಾ ಸ್ಪೈ ಕ್ಯಾಮೆರಾಗಳ (Spy Camera) ಬಗ್ಗೆ ಸಾರ್ವಜನಿಕರಲ್ಲಿ ಒಂದು ಭಯ ಮತ್ತು ಆತಂಕ ಇದ್ದೇ ಇರುತ್ತದೆ. ಉದಾಹರಣೆಗೆ ಒಂದು ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿಸುವ ಮುಂಚೆ ಆ ಬಟ್ಟೆಯನ್ನು ಹಾಕಿಕೊಂಡು ನೋಡಲು ಚೇಂಜಿಂಗ್ ರೂಂಗೆ ಹೋದರೆ ಅಲ್ಲಿ ಸಹ ಯಾವುದಾದರೂ ಕ್ಯಾಮರಾವನ್ನು (Camera) ಗೌಪ್ಯವಾಗಿ ಇರಿಸಿರುತ್ತಾರೆ ಎಂಬ ಆತಂಕದಲ್ಲಿಯೇ ಬಟ್ಟೆಯನ್ನು ಹಾಕಿಕೊಂಡು ನೋಡಬೇಕಾಗುತ್ತದೆ. ಇದಷ್ಟೇ ಅಲ್ಲದೆ ಸಾರ್ವಜನಿಕ ಶೌಚಾಲಯಗಳಲ್ಲಿ, ಸ್ಪಾ ಗಳಲ್ಲಿ, ಲಾಡ್ಜ್‌ ಕೋಣೆಗಳಲ್ಲಿ - ಹೀಗೆ ಅನೇಕ ಸ್ಥಳಗಳಲ್ಲಿ ಈ ಆತಂಕ ನಮಗೆ ಇದ್ದೇ ಇರುತ್ತದೆ.

  ಒಪ್ಪೊ ಪತ್ತೆ ಮಾಡುತ್ತೆ ಈ ರಹಸ್ಯ ಕ್ಯಾಮೆರಾ

  ದುಷ್ಕರ್ಮಿಗಳು ಯಾವುದೋ ಕೋಣೆಯಲ್ಲಿ ಯಾರ ಕಣ್ಣಿಗೂ ಬೀಳದಂತೆ ಒಂದು ಮೂಲೆಯಲ್ಲಿ ಸಣ್ಣ ಕ್ಯಾಮೆರಾಗಳನ್ನು ಇಡುತ್ತಾರೆ. ನಂತರ ಆ ಕೋಣೆಯನ್ನು ಬಳಸುವ ಜನರು ಬಲಿಪಶುಗಳಾಗುತ್ತಾರೆ. ಆದರೆ ಈಗ ಇಂತಹ ಗೌಪ್ಯವಾಗಿ ಇರಿಸಿರುವ ಕ್ಯಾಮರಾಗಳ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ. ಹೇಗೆ ಅಂತೀರಾ..? ಒಪ್ಪೋ ತನ್ನ ಕಲರ್ ಒಎಸ್ ಆಪರೇಟಿಂಗ್ ಸಿಸ್ಟಂಗೆ ಹೊಸ ಅಪ್‌ಡೇಟ್‌ನಲ್ಲಿ ವಿಶೇಷವಾಗಿ  ಈ ಹೊಸ ಫೀಚರ್ ಪರಿಚಯಿಸಿದೆ.

  ಇದರಲ್ಲಿದೆ ವಿಶೇಷ ಫಿಚರ್​​

  ಕಲರ್ ಒಎಸ್ 12.1 ನೊಂದಿಗೆ, ಒಪ್ಪೋ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ಯಾವುದೇ ಸುತ್ತುವರಿದ ಪ್ರದೇಶದಲ್ಲಿ ಈ ರೀತಿಯ ಕ್ಯಾಮರಾಗಳನ್ನು ಗೌಪ್ಯವಾಗಿರಿಸಿದರೆ, ಅವುಗಳನ್ನು ತಕ್ಷಣವೇ ಸ್ಕ್ಯಾನ್ ಮಾಡಲು ಅನುವು ಮಾಡಿಕೊಡುತ್ತದೆ. ಈ ವೈಶಿಷ್ಟ್ಯವು ಈಗಾಗಲೇ ಒಪ್ಪೋದ ಇತ್ತೀಚಿನ ಫ್ಲ್ಯಾಗ್‌ಶಿಪ್ ಫೋನ್‌ಗಳಾದ ಒಪ್ಪೋ ಫೈಂಡ್ ಎಕ್ಸ್5 ಮತ್ತು ಫೈಂಡ್ ಎಕ್ಸ್5 ಪ್ರೋನಲ್ಲಿ ಲಭ್ಯವಿದೆ ಎಂದು ಹೇಳಲಾಗುತ್ತಿದೆ.

  ತಕ್ಷಣಕ್ಕೆ ಪತ್ತೆ ಮಾಡುತ್ತೆ ಸಿಗ್ನಲ್​

  ಇಂತಹ ಕ್ಯಾಮರಾಗಳ ಬಗ್ಗೆ ತಿಳಿಯಲು ಜನರಿಗೆ ಸಹಾಯ ಮಾಡುತ್ತೆ ಈ ಒಪ್ಪೋನ ಹೊಸ ಫೋನ್‌ಗಳು ಎಂದು ಹೇಳಬಹುದು. ಹೊಸ ಕಲರ್ ಓಎಸ್ ಆವೃತ್ತಿಯು ಬಳಕೆದಾರರಿಗೆ ಕೋಣೆಯಲ್ಲಿ ನಿಸ್ತಂತು ಸಂಕೇತಗಳಿಗಾಗಿ ಸ್ಕ್ಯಾನ್ ಮಾಡುವ ಮೂಲಕ ಅಂತಹ ಸ್ಪೈ ಕ್ಯಾಮೆರಾಗಳ ಬಗ್ಗೆ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ಸಿಗ್ನಲ್ ಪತ್ತೆ ವಿಧಾನವನ್ನು ನಿರ್ದಿಷ್ಟವಾಗಿ ಬಳಕೆದಾರರ ಆಸುಪಾಸಿನಲ್ಲಿ ಗೌಪ್ಯವಾಗಿ ಇರಿಸಲಾದ ಎಲೆಕ್ಟ್ರಾನಿಕ್ ಸಾಧನಗಳನ್ನು ಕಂಡು ಹಿಡಿಯಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

  ಇದನ್ನು ಓದಿ: ಅದೃಷ್ಟ ಎಂದ್ರೆ ಇದು; ಸಿಗ್ನಲ್​ನಲ್ಲಿ ಬಲೂನ್​ ಮಾರುತ್ತಿದ್ದ ಹುಡುಗಿ ಇಂದು ಮಾಡೆಲ್​​​

  ವೀಬೋದ ಪೋಸ್ಟ್‌ನಲ್ಲಿ ಹೊಸ ವೈಶಿಷ್ಟ್ಯದ ವಿವರಗಳನ್ನು ಹಂಚಿಕೊಂಡ ಒಪ್ಪೋ, ಕಲರ್ ಒಎಸ್ 12.1 ಗೌಪ್ಯವಾಗಿ ಇರಿಸಿದ ಕ್ಯಾಮೆರಾಗಳನ್ನು ಹುಡುಕಲು ಹೊಸ ಮಾರ್ಗವನ್ನು ತಂದಿದೆ ಎಂದು ಉಲ್ಲೇಖಿಸಿದೆ. ಪ್ರಸ್ತುತ, ನಾವು ಇದನ್ನು ಫೈಂಡ್ ಎಕ್ಸ್5 ಸೀರೀಸ್‌ನಲ್ಲಿ ನೋಡಬಹುದು. ಆದರೆ ಹಿಡನ್ ಕ್ಯಾಮೆರಾ ಡಿಟೆಕ್ಷನ್ ಅಪ್ಲಿಕೇಶನ್ ಎಂಬ ಆ್ಯಪ್‌ ಮೂಲಕ ಮಾತ್ರ ಇದನ್ನು ತಿಳಿದುಕೊಳ್ಳಬಹುದು.

  ಈ ರೀತಿ ಚೆಕ್​ ಮಾಡಬಹುದು

  ಒಪ್ಪೋದ ಅಪ್ಲಿಕೇಶನ್ ಸದ್ಯಕ್ಕೆ ಒಪ್ಪೋ ಆ್ಯಪ್‌ ಮಾರುಕಟ್ಟೆಯಲ್ಲಿ ಬೀಟಾ ಆವೃತ್ತಿಯಲ್ಲಿದೆ ಎಂದು ಹೇಳಲಾಗಿದೆ. ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ಸ್ಪೈ ಕ್ಯಾಮೆರಾಕ್ಕಾಗಿ ಸ್ಕ್ಯಾನ್ ಅನ್ನು ಪ್ರಾರಂಭಿಸಲು ತಮ್ಮ ಫೋನ್‌ಗಳ ವೈ-ಫೈ ಮತ್ತು ಹಾಟ್‌ಸ್ಪಾಟ್ ಅನ್ನು ಆಫ್ ಮಾಡುವಂತೆ ಬಳಕೆದಾರರನ್ನು ಕೇಳುತ್ತದೆ. ಬಳಕೆದಾರರು ಕೋಣೆಯ ದೀಪಗಳನ್ನು ಆನ್ ಅಥವಾ ಆಫ್ ಮಾಡಬೇಕಾಗುತ್ತದೆ. ಆ್ಯಂಡ್ರಾಯ್ಡ್ ಅಥಾರಿಟಿ ವರದಿ ಮಾಡಿದಂತೆ, ಇದು ಯಾವುದೇ ಸ್ಪೈ ಕ್ಯಾಮೆರಾಗಳಿಂದ ಬರುವ ಇನ್ಫ್ರಾರೆಡ್‌ ಲೈಟನ್ನು ಪತ್ತೆ ಹಚ್ಚುವ ಉದ್ದೇಶವನ್ನು ಹೊಂದಿರುತ್ತದೆ.

  ಇದನ್ನು ಓದಿ: ಮಾರ್ಚ್​ 12 ರಿಂದ ಫ್ಲಿಪ್​ಕಾರ್ಟ್​ ಬಿಗ್ ಸೇವಿಂಗ್ ಡೇಸ್ ಮಾರಾಟ ಪ್ರಾರಂಭ!

  ಇದು ಸ್ಪೈ ಕ್ಯಾಮೆರಾವನ್ನು ಪತ್ತೆ ಹಚ್ಚಿದರೆ, ಅಪ್ಲಿಕೇಶನ್ ನಂತರ ಬಳಕೆದಾರರಿಗೆ ಸೂಚನೆಗಳ ಮೂಲಕ ಆ ಸ್ಥಳದ ಬಗ್ಗೆ ನಿರ್ದೇಶಿಸುತ್ತದೆ. ಇದರರ್ಥ ಬಳಕೆದಾರರು ಫೋನ್ ಅನ್ನು ಸ್ಪೈ ಕ್ಯಾಮೆರಾದ ಹತ್ತಿರ ಇರಿಸಿದರೆ ಸೂಚನೆಯ ತೀವ್ರತೆ ಜಾಸ್ತಿಯಾಗುತ್ತದೆ ಮತ್ತು ಅದರಿಂದ ದೂರ ಸರಿಸಿದರೆ ಆ ತೀವ್ರತೆಯನ್ನು ಕಳೆದುಕೊಳ್ಳುತ್ತದೆ. ಇದರ ಮೂಲಕ ಬಳಕೆದಾರರು ಫೋನ್ ಅದಕ್ಕೆ ಹತ್ತಿರವಾದ ನಂತರ ಸ್ಪೈ ಕ್ಯಾಮೆರಾವನ್ನು ಹುಡುಕಲು ಸಾಧ್ಯವಾಗುತ್ತದೆ.

  ಒಪ್ಪೋ ಹೊಸ ಕಲರ್ ಒಎಸ್ 12.1 ಅಪ್‌ಡೇಟ್ ಅನ್ನು ಪ್ರಪಂಚದಾದ್ಯಂತ ಹೆಚ್ಚಿನ ಸಾಧನಗಳಿಗೆ ಕಳುಹಿಸುವವರೆಗೂ ಈ ಬೀಟಾ ಸ್ಥಿತಿಯಲ್ಲಿರುವ ಅಪ್ಲಿಕೇಶನ್ ಫೈಂಡ್ ಎಕ್ಸ್5 ಮತ್ತು ಎಕ್ಸ್5 ಪ್ರೋ ದಲ್ಲಿ ಮಾತ್ರ ಲಭ್ಯವಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಅಪ್‌ಡೇಟ್ ಒಮ್ಮೆ ಮುಖ್ಯವಾಹಿನಿಗೆ ಬಂದರೆ ಕೇವಲ ಒಪ್ಪೋ ಬಳಕೆದಾರರಿಗೆ ಮಾತ್ರವಲ್ಲದೆ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಬಳಸುವವರಿಗೂ ಇದು ಪ್ರಯೋಜನಕಾರಿಯಾಗಬಹುದು.
  Published by:Seema R
  First published: