ಭಾರತದಲ್ಲಿ ಬಿಡುಗಡೆಯಾದ Oppo Watch Free ಸ್ಮಾರ್ಟ್‌ವಾಚ್‌: ಬೆಲೆ ಎಷ್ಟು?

Oppo Watch Free: ಇನ್ನೊಂದೆಡೆ, ಚೀನಾ ಮೂಲದ ಕಂಪನಿಯಾದ ಒಪ್ಪೋಗೆ ಭಾರತದಲ್ಲಿ ಸಖತ್‌ ಡಿಮ್ಯಾಂಡ್‌ ಇದೆ. ಇಂತಹ Oppo ಕಂಪನಿ ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳ ಜತೆಗೆ Oppo ವಾಚ್ ಫ್ರೀ ಎಂಬ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ.

Oppo ವಾಚ್ ಫ್ರೀ

Oppo ವಾಚ್ ಫ್ರೀ

 • Share this:

  ಇತ್ತೀಚಿನ ಕೆಲ ವರ್ಷಗಳಿಂದ ಸ್ಮಾರ್ಟ್‌ಫೋನ್ (Smartphone)‌, ಹೆಡ್‌ಫೋನ್‌(Headphone), ಇಯರ್‌ಬಡ್ಸ್ (Earbuds)‌ ಮುಂತಾದ ಸಾಧನಗಳ ಜತೆಗೆ ಸ್ಮಾರ್ಟ್‌ವಾಚ್‌ಗಳಿಗೂ ಡಿಮ್ಯಾಂಡ್‌ ಹೆಚ್ಚುತ್ತಿದೆ. ಭಾರತಕ್ಕೆ ಇತ್ತೀಚೆಗೆ ಸ್ಮಾರ್ಟ್‌ಫೋನ್‌ ಕಂಪನಿಗಳ ಬ್ರ್ಯಾಂಡ್‌ಗಳು (Brands) ಸ್ಮಾರ್ಟ್‌ವಾಚ್‌ಗಳನ್ನು (Smartwatch) ಬಿಡುಗಡೆ ಮಾಡುತ್ತಿರುವುದು ಹೆಚ್ಚುತ್ತಿದ್ದು, ಅದರ ಗುಣಮಟ್ಟವೂ ಉತ್ತಮಗೊಳ್ಳುತ್ತಿದೆ. ಒಟ್ಟಾರೆ ಸ್ಮಾರ್ಟ್‌ಫೋನ್‌ ಕಂಪನಿಗಳಲ್ಲಿ ಈಗ ಸ್ಮಾರ್ಟ್‌ವಾಚ್‌ಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ (Market) ಬಿಡುಗಡೆ ಮಾಡುವ ಹಾಗೂ ಮತ್ತಷ್ಟು ಹೆಸರು ಗಳಿಸುವ ಜಿದ್ದಾ ಜಿದ್ದಿ ಹೆಚ್ಚಾಗುತ್ತಿದೆ.


  ಇನ್ನೊಂದೆಡೆ, ಚೀನಾ ಮೂಲದ ಕಂಪನಿಯಾದ ಒಪ್ಪೋಗೆ ಭಾರತದಲ್ಲಿ ಸಖತ್‌ ಡಿಮ್ಯಾಂಡ್‌ ಇದೆ. ಇಂತಹ Oppo ಕಂಪನಿ ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳ ಜತೆಗೆ Oppo ವಾಚ್ ಫ್ರೀ ಎಂಬ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ.


  Oppo Reno 7 5G ಮತ್ತು Reno 7 Pro 5G ಸ್ಮಾರ್ಟ್‌ಫೋನ್‌ಗಳ ಜೊತೆಗೆ, ಕಂಪನಿಯು Oppo ವಾಚ್ ಫ್ರೀ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. Oppo ವಾಚ್ ಫ್ರೀ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾಗಿತ್ತು ಮತ್ತು ಅಂತಿಮವಾಗಿ ಈಗ ಇದನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.


  ಈ ಮಧ್ಯೆ, Oppo ಕಳೆದ ತಿಂಗಳು ಕಪ್ಪು ಬಣ್ಣದಲ್ಲಿ ಬಿಡುಗಡೆಯಾದ ನೆಕ್‌ಬ್ಯಾಂಡ್ ಶೈಲಿಯ ವೈರ್‌ಲೆಸ್ ಇಯರ್‌ಫೋನ್‌ಗಳಾದ Oppo Enco M32ನಲ್ಲಿ ಹಸಿರು ಬಣ್ಣದ ಆಯ್ಕೆಯನ್ನು ಘೋಷಣೆ ಮಾಡಿದೆ.


  Oppo Watch Free ವೈಶಿಷ್ಟ್ಯತೆಗಳು ಹೀಗಿವೆ..


  Oppo ಸ್ಮಾರ್ಟ್‌ವಾಚ್ ಒಂದೇ ಚಾರ್ಜ್‌ನಲ್ಲಿ 14-ದಿನಗಳ ಬ್ಯಾಟರಿ ಅವಧಿಯನ್ನು ಭರವಸೆ ನೀಡುತ್ತದೆ. ಮತ್ತು 5 ನಿಮಿಷಗಳ ಕಾಲ ಚಾರ್ಜ್‌ ಮಾಡಿದರೂ ಸಾಕು ಒಂದು ದಿನ ಅಂದ್ರೆ 24 ಗಂಟೆಗಳ ಕಾಲ ಈ ಸ್ಮಾರ್ಟ್‌ವಾಚ್‌ ಬಳಕೆ ಮಾಡಬಹುದು. ಅಂತಹ ವೇಗದ ಚಾರ್ಜಿಂಗ್ ಬೆಂಬಲವನ್ನು ಇದು ಹೊಂದಿದೆ.


  Oppo ವಾಚ್‌ ಫ್ರೀ 1.64-ಇಂಚಿನ AMOLED ಡಿಸ್ಪ್ಲೇ ಜೊತೆಗೆ ಟಚ್ ಸಪೋರ್ಟ್ ಮತ್ತು DCI-P3 ಕಲರ್ ಗ್ಯಾಮಟ್ ಹಾಗೂ 280 x 456 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದರ ಡಿಸ್ಪ್ಲೇ 2.5D ಕರ್ವ್‌ ಗ್ಲಾಸ್‌ನಿಂದ ರಕ್ಷಿಸಲ್ಪಟ್ಟಿದೆ ಮತ್ತು ಈ ವಾಚ್ ಬ್ಲೂಟೂತ್ v5.0 ಅನ್ನು ಬೆಂಬಲಿಸುತ್ತದೆ. ಇದು Android 6.0 ಮತ್ತು ಮೇಲಿನ ಎಲ್ಲಾ ಸಾಧನಗಳು ಮತ್ತು iOS 10.0 ಹಾಗೂ ನಂತರದ iOS ಸಾಧನಗಳೊಂದಿಗೆ ಹೊಂದಿಕೊಳ್ಳುತ್ತದೆ.


  ಇದನ್ನು ಓದಿ: Instagram ಪರಿಚಯಿಸಿದೆ ‘ಟೇಕ್ ಎ ಬ್ರೇಕ್’ ವೈಶಿಷ್ಟ್ಯ

  ಇನ್ನು, ಈ ಸ್ಮಾರ್ಟ್‌ವಾಚ್ ಕ್ರಿಕೆಟ್, ಬ್ಯಾಡ್ಮಿಂಟನ್, ಇತ್ಯಾದಿ ಸೇರಿದಂತೆ 100ಕ್ಕೂ ಹೆಚ್ಚು ಕ್ರೀಡಾ ಮೋಡ್‌ಗಳನ್ನು ಸಪೋರ್ಟ್‌ ಮಾಡುತ್ತದೆ. ಜತೆಗೆ, ಇದು ಹೃದಯ ಬಡಿತ ಸಂವೇದಕ ಮತ್ತು ರಕ್ತ ಆಮ್ಲಜನಕದ ಮಾನಿಟರಿಂಗ್ ಬೆಂಬಲವನ್ನು ಸಹ ಹೊಂದಿದೆ. ಅದಷ್ಟೇ ಅಲ್ಲ, Oppo ವಾಚ್ ಫ್ರೀ ನಿಮ್ಮ ನಿದ್ರೆ ಮತ್ತು ಗೊರಕೆಯನ್ನು ಸಹ ಟ್ರ್ಯಾಕ್ ಮಾಡಬಹುದು ಮತ್ತು ಈ ಬಗ್ಗೆ ನಿಮಗೆ ರಿಮೈಂಡರ್‌ಗಳನ್ನೂ ನೀಡುತ್ತದೆ.


  Oppo ವಾಚ್ ಫ್ರೀ 5ATM (50 mts) ವರೆಗೆ ಜಲನಿರೋಧಕವಾಗಿದೆ ಮತ್ತು ಸುತ್ತುವರಿದ ಬೆಳಕಿನ ಸಂವೇದಕವನ್ನು ಒಳಗೊಂಡಿದೆ. ಇದು 230mAh ಬ್ಯಾಟರಿಯಿಂದ ಚಾಲಿತವಾಗಿದೆ ಎಂದು ತಿಳಿದುಬಂದಿದೆ.


  ಇದನ್ನು ಓದಿ: Jio: 84GB ಉಚಿತ ಡೇಟಾ, ಅನಿಯಮಿತ ಕರೆ ಸೌಲಭ್ಯ.. ಜಿಯೋದ ಅಗ್ಗದ ಈ ಪ್ರಿಪೇಯ್ಡ್​ ಪ್ಲಾನ್​ ರೀಚಾರ್ಜ್​ ಮಾಡಿ ನೋಡಿ

  Oppo Watch Free ಬೆಲೆ ಎಷ್ಟು ಗೊತ್ತಾ..?


  Oppo ವಾಚ್ ಫ್ರೀ ಗೆ 5,999 ರೂ. ಬೆಲೆಯಂತೆ. ಸದ್ಯ ಒಂದೇ ಬಣ್ಣದ ಆಯ್ಕೆಯಲ್ಲಿ ಇದು ಲಭ್ಯವಿರಲಿದೆ. ಇದನ್ನು ಕಪ್ಪು ಬಣ್ಣದ ಆಯ್ಕೆಯಲ್ಲಿ ಕಂಪನಿ ಬಿಡುಗಡೆ ಮಾಡಿದೆ. ಆದರೆ, ಈ ಸ್ಮಾರ್ಟ್‌ವಾಚ್‌ ನಮ್ಮ ದೇಶದಲ್ಲಿ ಮಾರಾಟಕ್ಕೆ ಯಾವಾಗ ಲಭ್ಯವಾಗಲಿದೆ ಎಂಬುದನ್ನು Oppo ಇನ್ನೂ ಬಹಿರಂಗಪಡಿಸಿಲ್ಲ.

  Published by:Harshith AS
  First published: