Oppo Reno 8T 5G: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಒಪ್ಪೋ ಕಂಪೆನಿಯ ಹೊಸ ಸ್ಮಾರ್ಟ್​ಫೋನ್!

ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​​ಫೋನ್​

ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​​ಫೋನ್​

Oppo Smartphones: ಒಪ್ಪೋ ಕಂಪೆನಿಯಿಂದ ಇದೀಗ ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​​ಫೋನ್​ ಲಾಂಚ್ ಆಗಿದೆ. ಈ ಸ್ಮಾರ್ಟ್​​ಫೋನ್​ ಟ್ರಿಪಲ್​ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇನ್ನೂ ಹಲವಾರು ಫೀಚರ್ಸ್​ಗಳನ್ನು ಇದು ಹೊಂದಿದೆ. ಹಾಗಿದ್ರೆ ಈ ಸ್ಮಾರ್ಟ್​​ಫೋನ್​ನ ಇನ್ನುಳಿದ ಫೀಚರ್ಸ್​, ಬೆಲೆ ಹೇಗಿದೆ ಅನ್ನೋದನ್ನು ಈ ಲೇಖನಲ್ಲಿದೆ ಓದಿ.

ಮುಂದೆ ಓದಿ ...
 • Share this:

  ಒಪ್ಪೋ ಕಂಪೆನಿಯಿಂದ (Oppo Company) ಇತ್ತೀಚೆಗೆ ಒಪ್ಪೋ ರೆನೋ 8ಟಿ ಸೀರಿಸ್​ನ ಸ್ಮಾರ್ಟ್​​ಫೋನ್​ಗಳು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಅದೇ ರೀತಿ ಈ ಸ್ಮಾರ್ಟ್​ಫೋನ್​ಗಳ ಬಿಡುಗಡೆಗೆ ಗ್ರಾಹಕರು ಭಾರೀ ಕಾತುರದಿಮದ ಕಾಯುತ್ತಿದ್ದರು. ವಿಶೇಷವಾಗಿ ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​​ಫೋನ್​ (Oppo Reno 8T 5G) ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಒಪ್ಪೋ ಕಂಪೆನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಸಾಕಷ್ಟು ಸ್ಮಾರ್ಟ್​​ಫೋನ್​ಗಳನ್ನು ಇದುವರೆಗೆ ಬಿಡುಗಡೆ ಮಾಡಿದೆ. ಇವೆಲ್ಲದಕ್ಕೂ ಮಾರುಕಟ್ಟೆಯಲ್ಲಿ ಈಗಲೂ ತುಂಬಾ ಬೇಡಿಕೆಯಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಸ್ಮಾರ್ಟ್​​ಫೋನ್​ಗಳೆಲ್ಲವೂ (Smartphones) ಉತ್ತಮ ಕಾರ್ಯಕ್ಷಮತೆಯ ಜೊತೆಗೆ ಬಳಕೆದಾರರಿಗೂ ಉತ್ತಮ ಅನುಭವವನ್ನು ನೀಡುತ್ತದೆ. 


  ಒಪ್ಪೋ ಕಂಪೆನಿಯಿಂದ ಇದೀಗ ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​​ಫೋನ್​ ಲಾಂಚ್ ಆಗಿದೆ. ಈ ಸ್ಮಾರ್ಟ್​​ಫೋನ್​ ಟ್ರಿಪಲ್​ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇನ್ನೂ ಹಲವಾರು ಫೀಚರ್ಸ್​ಗಳನ್ನು ಇದು ಹೊಂದಿದೆ. ಹಾಗಿದ್ರೆ ಈ ಸ್ಮಾರ್ಟ್​​ಫೋನ್​ನ ಇನ್ನುಳಿದ ಫೀಚರ್ಸ್​, ಬೆಲೆ ಹೇಗಿದೆ ಅನ್ನೋದನ್ನು ಈ ಲೇಖನಲ್ಲಿದೆ ಓದಿ.


  ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​ಫೋನ್​ ಫೀಚರ್ಸ್


  ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್‌ಫೋನ್‌ 6.7 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಮೈಕ್ರೋ-ಕರ್ವ್ಡ್ ಅಮೋಲ್ಡ್​ ಡಿಸ್‌ಪ್ಲೇ ಆಗಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ವಿಶೇಷವಾಗಿ ಇದರಲ್ಲೊ ಡ್ರ್ಯಾಗನ್‌ಟ್ರೈಲ್‌-ಸ್ಟಾರ್‌2 ಪ್ರೊಟೆಕ್ಷನ್‌ ಅನ್ನು ನೀಡಲಾಗಿದೆ.
  ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​​ಫೋನ್​ನ ಕ್ಯಾಮೆರಾ ಸೆಟಪ್​


  ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್‌ಫೋನ್‌ ಮುಖ್ಯವಾಗಿ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ನೊಂದಿಗೆ ಲಭ್ಯವಿದೆ. ಹಾಗೆಯೇ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್​ಫೋನ್​ನಲ್ಲಿ ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್​ಗಾಗಿ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಕ್ಯಾಮೆರಾವು ಹೆಚ್​ಡಿಆರ್​, ಪೋರ್ಟ್ರೇಟ್ ಮತ್ತು ಡ್ಯುಯಲ್ ವ್ಯೂ ವಿಡಿಯೋದಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.


  ಪ್ರೊಸೆಸರ್ ಸಾಮರ್ಥ್ಯ


  ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್​ ಸ್ನಾಪ್‌ಡ್ರಾಗನ್ 695 5ಜಿ ಎಸ್​ಓಸಿ  ಪ್ರೊಸೆಸರ್‌ ವೇಗವನ್ನು ಹೊಂದಿದೆ. ಈ ಸ್ಮಾರ್ಟ್​ಫೋನ್ ಆಂಡ್ರಾಯ್ಡ್‌ 13 ಆಧಾರಿತ ಕಲರ್​ಓಎಸ್​ 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್​ ಸ್ಟೋರೇಜ್‌ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 1ಟಿಬಿ ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸುವಂತಹ ಅವಕಾಶವಿದೆ. ಇನ್ನು 8ಜಿಬಿ ವರೆಗೆ ಹೆಚ್ಚುವರಿ ವರ್ಚುವಲ್ ರ್‍ಯಾಮ್ ಅನ್ನು ವಿಸ್ತರಿಸುವುದಕ್ಕೆ ಕೂಡ ಅವಕಾಶ ನೀಡಿದೆ.


  ಬ್ಯಾಟರಿ ಫೀಚರ್ಸ್​


  ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್‌ಫೋನ್‌ 4,800mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಈ ಬ್ಯಾಟರಿಯು 67W ಸೂಪರ್‌ವೂಕ್‌ ವೇಗದ ಚಾರ್ಜಿಂಗ್‌ ಸಾಮರ್ಥ್ಯದಲ್ಲಿ ಬರುತ್ತದೆ. ಇದರಿಂದ ಈ ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​ಫೋನ್ ಅನ್ನು  ಕೇವಲ 45 ನಿಮಿಷಗಳಲ್ಲಿ 0 ರಿಂದ 100% ವರೆಗೆ ಫುಲ್ ಚಾರ್ಜ್‌ ಮಾಡಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 5 ಮತ್ತು ಬ್ಲೂಟೂತ್ 5.1 ವೈರ್​ಲೆಸ್​ ಸಂಪರ್ಕವನ್ನು ಬೆಂಬಲಿಸಲಿದೆ.


  ಬೆಲೆ ಮತ್ತು ಲಭ್ಯತೆ


  ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್‌ಫೋನ್‌ ಭಾರತದಲ್ಲಿ 29,999 ರೂಪಾಯಿ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಸ್ಮಾರ್ಟ್​​ಫೋನ್ ಇದೇ ಫೆಬ್ರವರಿ 10 ರಿಂದ ಫ್ಲಿಪ್‌ಕಾರ್ಟ್, ಒಪ್ಪೋ ಸ್ಟೋರ್ ಮತ್ತು ಇತರ ರಿಟೇಲ್‌ ಸ್ಟೋರ್‌ಗಳ ಮೂಲಕ ತನ್ನ ಸೇಲ್ ಅನ್ನು ಆರಂಭಿಸುತ್ತದೆ.


  ಇದನ್ನೂ ಓದಿ: ಐಫೋನ್​ 14 ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್​! 45 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ


  ಇನ್ನು ಒಪ್ಪೋ ರೆನೋ 8ಟಿ 5ಜಿ ಸ್ಮಾರ್ಟ್​​​ಫೋನ್ ಮಿಡ್‌ನೈಟ್ ಬ್ಲ್ಯಾಕ್ ಮತ್ತು ಸನ್‌ರೈಸ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ. ಹಾಗೆಯೇ ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ, ಯೆಸ್ ಬ್ಯಾಂಕ್ ಮತ್ತು ಎಸ್‌ಬಿಐ ಕಾರ್ಡ್‌ಗಳ ಮೂಲಕ ಖರೀದಿಸುವ ಗ್ರಾಹಕರು 10% ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು