Oppo Reno 8T Series: ಒಪ್ಪೋ ರೆನೋ 8ಟಿ ಸ್ಮಾರ್ಟ್​​ಫೋನ್​ ಲಾಂಚ್​​! ಫೀಚರ್ಸ್​, ಬೆಲೆ ಬಗ್ಗೆ ಮಾಹಿತಿ ಇಲ್ಲಿದೆ

ಒಪ್ಪೋ ರೆನೋ 8ಟಿ ಸ್ಮಾರ್ಟ್​​ಫೋನ್

ಒಪ್ಪೋ ರೆನೋ 8ಟಿ ಸ್ಮಾರ್ಟ್​​ಫೋನ್

ಒಪ್ಪೋ ಕಂಪೆನಿಯಲ್ಲಿ ಮುಂಬರುವ ಸ್ಮಾರ್ಟ್​ಫೋನ್​ಗಳೆಂದರೆ ಒಪ್ಪೋ ರೆನೋ ಸೀರಿಸ್​ನ ಸ್ಮಾರ್ಟ್​ಫೋನ್​ಗಳು. ಇದರಲ್ಲಿ ಒಪ್ಪೋ ರೆನೋ 8ಟಿ ಸ್ಮಾರ್ಟ್​ಫೋನ್​ ಇದೇ ಫೆಬ್ರವರಿ 8ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. 

  • Share this:

    ಜಾಗತಿಕ ಮಾರುಕಟ್ಟೆಯಲ್ಲಿ (Global Market) ಒಪ್ಪೋ ಕಂಪೆನಿಯ ಸ್ಮಾರ್ಟ್​​ಫೋನ್​ಗಳಿಗೆ ಎಲ್ಲಿಲ್ಲದ ಬೇಡಿಕೆ. ಅದಕ್ಕಾಗಿಯೇ ಈ ಕಂಪೆನಿ ಕೂಡ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್​​ಫೋನ್​ಗಳನ್ನು ಪರಿಚಯಿಸುತ್ತಲೇ ಇದೆ. ಒಪ್ಪೋ ಕಂಪೆನಿಯಿಂದ (Oppo Company) ಇದುವರೆಗೆ ಸಾಕಷ್ಟು ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗಿದ್ದು, ಇವೆಲ್ಲವೂ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನವನ್ನು ಸಾಧಿಸಿದೆ. ಒಪ್ಪೋ ಕಂಪೆನಿ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯಿಮದ ಹಿಡಿದು ದುಬಾರಿ ಬೆಲೆಯವರೆಗೂ ಸ್ಮಾರ್ಟ್​ಫೋನ್​ಗಳನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಒಪ್ಪೋ ಕಂಪೆನಿ ತನ್ನ ರೆನೋ ಸೀರಿಸ್​ನ ಸ್ಮಾರ್ಟ್ (Oppo Reno 8T Series)​ಫೋನ್​ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಸ್ಮಾರ್ಟ್​ಫೋನ್​ಗಳು ಇದೇ ಫೆಬ್ರವರಿ 8ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.


    ಒಪ್ಪೋ ಕಂಪೆನಿಯಲ್ಲಿ ಮುಂಬರುವ ಸ್ಮಾರ್ಟ್​ಫೋನ್​ಗಳೆಂದರೆ ಒಪ್ಪೋ ರೆನೋ ಸೀರಿಸ್​ನ ಸ್ಮಾರ್ಟ್​ಫೋನ್​ಗಳು. ಇದರಲ್ಲಿ ಒಪ್ಪೋ ರೆನೋ 8ಟಿ ಸ್ಮಾರ್ಟ್​ಫೋನ್​ ಇದೇ ಫೆಬ್ರವರಿ 8ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಇನ್ನು ಒಪ್ಪೋ ಕಂಪೆನಿಯಿಂದ ಬಿಡುಗಡೆಯಾಗುತ್ತಿರುವ ಈ ಸ್ಮಾರ್ಟ್​ಫೋನ್​ನ ಫೀಚರ್ಸ್​ ಬಹಿರಂಗವಾಗಿದ್ದು, ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.


    ಒಪ್ಪೋ ರೆನೋ 8ಟಿ ಸ್ಮಾರ್ಟ್​ಫೋನ್ ಫೀಚರ್ಸ್


    ಒಪ್ಪೋ ರೆನೋ 8ಟಿ ಸ್ಮಾರ್ಟ್‌ಫೋನ್‌ 6.43 ಇಂಚಿನ ಅಮೋಲ್ಡ್​ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌, 120Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಮತ್ತು 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಡಿಸ್‌ಪ್ಲೇ 409 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿರುತ್ತದೆ.




    ಕ್ಯಾಮೆರಾ ಫೀಚರ್ಸ್


    ಒಪ್ಪೋ ರೆನೋ 8ಟಿ ಸ್ಮಾರ್ಟ್‌ಫೋನ್‌ ಮುಖ್ಯವಾಗಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 100 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್​​ಫೋನ್​ನಲ್ಲಿ ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್​ಗಳಿಗಾಗಿ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಮುಂಭಾಗದ ಕ್ಯಾಮೆರಾವನ್ನು ಅಳವಡಿಸಿದ್ದಾರೆ ಎಂದು ಅಂದಾಜಿಸಿದ್ದಾರೆ.


    ಪ್ರೊಸೆಸರ್​ ಸಾಮರ್ಥ್ಯ


    ಒಪ್ಪೋ ರೆನೋ 8ಟಿ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ ಜಿ99 ಎಸ್​ಓಸಿ ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್​​ಫೋನ್​ ಆಂಡ್ರಾಯ್ಡ್‌ 13 ಆಧಾರಿತ ಕಲರ್​ ಓಎಸ್​​ 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 8 ಜಿಬಿ ರ್‍ಯಾಮ್ ಮತ್ತು 128 ಜಿಬಿ ಇಂಟರ್ನಲ್​ ಸ್ಟೋರೇಜ್‌ ಅನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೆ ಈ ಸ್ಮಾರ್ಟ್​ಫೋನ್​ನಲ್ಲಿ ಎಸ್​ಡಿಇ ಕಾರ್ಡ್​ ಸ್ಲಾಟ್​ ಅನ್ನು ಹೊಂದಿದ್ದು, ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 1 ಟಿಬಿ ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.


    ಒಪ್ಪೋ ರೆನೋ 8ಟಿ ಸ್ಮಾರ್ಟ್​​ಫೋನ್


    ಬ್ಯಾಟರಿ ಫೀಚರ್ಸ್


    ಒಪ್ಪೋ ರೆನೋ 8ಟಿ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ನೊಂದಿಗೆ ಬಿಡುಗಡೆಯಾಗುತ್ತದೆ. ಈ ಬ್ಯಾಟರಿಯು 22W ಸೂಪ್​ವೂಕ್​ ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.


    ಇತರೆ ಫೀಚರ್ಸ್


    ಒಪ್ಪೋ ರೆನೋ 8ಟಿ ಸ್ಮಾರ್ಟ್​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಅಕ್ಸೆಲೆರೊಮೀಟರ್, ಗೈರೋ ಮೀಟರ್​, ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿರಲಿದೆ.


    ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ ಫೈರ್​ಬೋಲ್ಟ್​! ಏಕಕಾಲದಲ್ಲಿ 3 ಸ್ಮಾರ್ಟ್​​ವಾಚ್​ಗಳು ಲಾಂಚ್


    ಬೆಲೆ ಮತ್ತು ಲಭ್ಯತೆ


    ಒಪ್ಪೋ ರೆನೋ 8ಟಿ ಸ್ಮಾರ್ಟ್‌ಫೋನ್‌ ಇದೇ ಫೆಬ್ರವರಿ 8 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್‌ 28,999 ರೂಪಾಯಿ ಬೆಲೆಯಲ್ಲಿ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು