ದೇಶಿಯ ಮಾರುಕಟ್ಟೆಯಲ್ಲಿ ‘ಒಪ್ಪೋ ರೆನೋ 2Z‘​ ಸೇಲ್​ ಆರಂಭ; ಭಾರತದಲ್ಲಿ ಇದರ ಬೆಲೆಯೆಷ್ಟು ಗೊತ್ತಾ?

ನೂತನ ಸ್ಮಾರ್ಟ್​ಫೋನ್​ 6.5 ಇಂಚಿನ ಅಮೋಲ್ಡ್​ ಡಿಸ್​ಪ್ಲೇ ಹೊಂದಿದ್ದು,​ ಒಕ್ಟಾಕೋರ್​ ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸುತ್ತಿದೆ​.  

news18-kannada
Updated:September 6, 2019, 7:37 PM IST
ದೇಶಿಯ ಮಾರುಕಟ್ಟೆಯಲ್ಲಿ ‘ಒಪ್ಪೋ ರೆನೋ 2Z‘​ ಸೇಲ್​ ಆರಂಭ; ಭಾರತದಲ್ಲಿ ಇದರ ಬೆಲೆಯೆಷ್ಟು ಗೊತ್ತಾ?
ಒಪ್ಪೋ ರೆನೋ 2Z
  • Share this:
ಚೀನಾದ ಒಪ್ಪೋ ಕಂಪೆನಿ ತಯಾರಿಸಿದ ರೆನೋ 2Z​ ಸ್ಮಾರ್ಟ್​ಫೋನ್ ಇಂದು​ ದೇಶಿಯಾ ಮಾರುಕಟ್ಟೆಯಲ್ಲಿ ಮಾರಾಟ ಆರಂಭಿಸಿದೆ. ವಿಶೇಷ ಕ್ಯಾಮೆರಾದ ಮೂಲಕ ಗ್ರಾಹಕರನ್ನು ಸೆಳೆದಿದ್ದ ರೆನೋ 2Z​ ಸ್ಮಾರ್ಟ್​ಫೋನ್​ ಇಂದಿನಿಂದ ಗ್ರಾಹಕರಿಗೆ ಲಭ್ಯವಿದೆ.

ನೂತನ ಸ್ಮಾರ್ಟ್​ಫೋನ್​ 6.5 ಇಂಚಿನ ಅಮೋಲ್ಡ್​ ಡಿಸ್​ಪ್ಲೇ ಹೊಂದಿದ್ದು,​ ಒಕ್ಟಾಕೋರ್​ ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸುತ್ತಿದೆ​.

ಒಪ್ಪೋ ರೆನೋ 2Z ಸ್ಮಾರ್ಟ್​ಫೋನ್​ 8GB RAM ಮತ್ತು 256GB ಸ್ಟೊರೇಜ್​ ಹೊಂದಿದೆ. ದೀರ್ಘಕಾಲದ ಬಳಕೆಗಾಗಿ 4,000mAh​ ಬ್ಯಾಟರಿಯನ್ನು ಅಳವಡಿಸಲಾಗಿದೆ. ಜೊತೆಗೆ Vooc 3.0 ಫ್ಲಾಶ್​​ ಚಾರ್ಜರ್​ ಟೆಕ್​ ಹೊಂದಿದೆ.

ವಿಶೇಷವೆಂದರೆ ಒಪ್ಪೋ ರೆನೋ 2Z ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ ಸೋನಿ IMX ​586 ಸೆನ್ಸಾರ್​ ಹೊಂದಿರುವ ಅಲ್ಟ್ರಾ ಕ್ಲೀಯರ್​ ಮೈನ್​ ಲೆನ್ಸ್​ 48 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ 8 ಮೆಗಾಫಿಕ್ಸೆಲ್​ ವೈಡ್​ ಆ್ಯಂಗಲ್​ ಲೆನ್ಸ್ ​+ 2 ಮೆಗಾಫಿಕ್ಸೆಲ್​ ಮೊನೊ ಲೆನ್ಸ್​ +2 ಮೆಗಾಫಿಕ್ಸೆಲ್​​ ಪೊಟ್ರೇಟ್​ ಲೆನ್ಸ್​ ನೀಡಲಾಗಿದೆ. ಸ್ಮಾರ್ಟ್​ಫೋನ್​ ಮುಂಭಾಗದಲ್ಲಿ 16 ಮೆಗಾಫಿಕ್ಸೆಲ್​ ಪಾಪ್​ ಅಪ್​ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

 ಇದನ್ನೂ ಓದಿ: ನೂತನ ಸ್ಮಾರ್ಟ್​ಫೋನ್​ 6.5 ಇಂಚಿನ ಅಮೋಲ್ಡ್​ ಡಿಸ್​ಪ್ಲೇ ಹೊಂದಿದ್ದು,​ ಒಕ್ಟಾಕೋರ್​ ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸುತ್ತಿದೆ​.  

ಒಪ್ಪೋ ರೆನೋ 2Zಸ್ಮಾರ್ಟ್ಫೋನ್ಬೆಲೆ

ಒಪ್ಪೋ ರೆನೋ 2Z ಸ್ಮಾರ್ಟ್​ಫೋನ್​ ಭಾರತದಲ್ಲಿ 29,990 ರೂ.ಗೆ ದೊರಕುತ್ತಿದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ ಕಪ್ಪು, ಬಿಳಿ, ಪೊಲಾರ್​ ಲೈಟ್​​ ಕಲರ್​ನಲ್ಲಿ ದೊರಕುತ್ತಿದೆ. ನೂತನ ಸ್ಮಾರ್ಟ್​ಫೋನ್​ ಆಫ್​ಲೈನ್​ ಸೋರ್​ನಲ್ಲೂ ಲಭ್ಯವಿದೆ. ಆನ್​ಲೈನ್​ ತಾಣವಾದ ಅಮೆಜಾನ್​ ಮತ್ತು ಫ್ಲಿಪ್​​ಕಾರ್ಟ್​ನಲ್ಲೂ ಗ್ರಾಹಕರಿಗೆ ದೊರಕುತ್ತಿದೆ.

First published:September 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ