OPPO Reno 10X: ತ್ರಿವಳಿ ಕ್ಯಾಮೆರಾವಿರುವ ನೂತನ ‘ರೆನೋ 10ಎಕ್ಸ್​​‘ ಸ್ಮಾರ್ಟ್​ಫೋನ್​ ಬಿಡುಗಡೆ!

OPPO Reno 10X: ರೆನೋ 10 ಎಕ್ಸ್​ ಟ್ರಿಪಲ್​ ಕ್ಯಾಮೆರಾವನ್ನು ಹೊಂದಿದೆ. 48 ಮೆಗಾಫಿಕ್ಸೆಲ್​​ ಸೋನಿ IMX​​​586 ಸೆನ್ಸಾರ್​ + 13 ಮೆಗಾಫಿಕ್ಸೆಲ್​​ ಟೆಲಿಫೋಟೊ + 8 ಮೆಗಾಫಿಕ್ಸೆಲ್​ ಅಲ್ಟ್ರಾ ವೈಡ್​​ ಸೆನ್ಸಾರ್​ ನೀಡಲಾಗಿದೆ

Harshith AS | news18
Updated:May 28, 2019, 3:13 PM IST
OPPO Reno 10X: ತ್ರಿವಳಿ ಕ್ಯಾಮೆರಾವಿರುವ ನೂತನ ‘ರೆನೋ 10ಎಕ್ಸ್​​‘ ಸ್ಮಾರ್ಟ್​ಫೋನ್​ ಬಿಡುಗಡೆ!
Oppo Reno 11
Harshith AS | news18
Updated: May 28, 2019, 3:13 PM IST
ಚೀನಾ ಸ್ಮಾರ್ಟ್​ಫೋನ್​ ಕಂಪೆನಿಗಳಲ್ಲೊಂದಾದ ಓಪ್ಪೋ ಸ್ಮಾರ್ಟ್​ಫೋನ್​ ರೆನೋ 10ಎಕ್ಸ್​ ಹೆಸರಿನ ಸ್ಮಾರ್ಟ್​ಫೋನ್​ ಬಿಡುಗಡೆಯಾಗಿದೆ. ಸೆಲ್ಫಿಗೆ ಹೆಸರುವಾಸಿಯಾದ ಓಪ್ಪೋ ಈ ಬಾರಿ ಹೊಸ ವಿಶೇಷತೆಯನ್ನು ಅಳವಡಿಸಿಕೊಂಡು ಗ್ರಾಹಕರ ಮುಂದಿರಿಸಿದೆ.

ರೆನೋ 10ಎಕ್ಸ್​ ಸ್ಮಾರ್ಟ್​ಫೋನ್​ನಲ್ಲಿ 6.6 ಇಂಚಿನ​ ಅಮೋಲ್ಡ್​​ ಡಿಸ್​ಪ್ಲೇ ಅಳವಡಿಸಲಾಗಿದೆ. ಇದು  FHD+ ಫುಲ್​ ಸ್ಕ್ರೀನ್ 19.5:9 ಅನುಪಾತ ಹೊಂದಿದೆ. 6th ಜನರೇಷನ್​ಗೆ ಅನುಗುಣವಾದ ಗೋರಿಲ್ಲಾ ಗ್ಲಾಸ್​ ಕೂಡ ನೀಡಲಾಗಿದೆ.

ಓಪ್ಲೋ ಸಂಸ್ಥೆ VOOC 3.0 ತಂತ್ರಜ್ನಾನವನ್ನು ಅಭಿವೃದ್ಧಿ ಪಡಿಸಿದ್ದು, ಇದೀಗ ನೂತನ ರೆನೋ ಸ್ಮಾರ್ಟ್​ಫೋನ್​ನಲ್ಲೂ VOOC 3.0 ಅಳವಡಿಸಲಾಗಿದೆ. ಅಂತೆಯೇ,​ ಸ್ನಾಪ್​​ ಡ್ರಾಗನ್​ 855 ನಿಂದ ಕಾರ್ಯ ನಿರ್ವಹಿಸುತ್ತಿದೆ. ದೀರ್ಫ ಕಾಲದ ಬ್ಯಾಟರಿ 4050 mAh ನೀಡಲಾಗಿದೆ.​​ ಮಾತ್ರವಲ್ಲದೆ,  L1+L5 ಡುವೆಲ್​​ ಪ್ರೀಕ್ವೆನ್ಸಿ GPS ಆಯ್ಕೆಯನ್ನು ನೀಡಿದೆ.



ಇದನ್ನೂ ಓದಿ: ಪ್ರತಿದಿನ ಎಳೆದಾಟ ಸಾಧ್ಯವಿಲ್ಲ, ಸರ್ಕಾರ ಬೇಕೋ ಬೇಡವೋ ಹೇಳಿ; ಕಾಂಗ್ರೆಸ್​​ಗೆ ದೇವೇಗೌಡ ಖಡಕ್​ ಸಂದೇಶ

ಮುಖ್ಯವಾಗಿ ರೆನೋ 10 ಎಕ್ಸ್​ ಟ್ರಿಪಲ್​ ಕ್ಯಾಮೆರಾವನ್ನು ಹೊಂದಿದೆ. 48 ಮೆಗಾಫಿಕ್ಸೆಲ್​​ ಸೋನಿ IMX​​​586 ಸೆನ್ಸಾರ್​,  13 ಮೆಗಾಫಿಕ್ಸೆಲ್​​ ಟೆಲಿಫೋಟೋ ಮತ್ತು 8 ಮೆಗಾಫಿಕ್ಸೆಲ್​ ಅಲ್ಟ್ರಾ ವೈಡ್​​ ಸೆನ್ಸಾರ್​ ನೀಡಲಾಗಿದೆ. ವಿಡಿಯೋ ಚಿತ್ರಿಕರಣಕ್ಕೆ ಅನುಗುಣವಾಗಿ 4K ತಂತ್ರಜ್ಞಾನವನ್ನು ಅಳವಡಿಸಲಾಡಿಗೆ. ಅಂತೆಯೇ, 360 ಡಿಗ್ರಿ ಆಡಿಯೋ ತಂತ್ರಜ್ಞಾನ ಬಳಸಲಾಗಿದೆ. ಇನ್ನು ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದ್ದು ಬೆಳಕನ್ನು ಹಿಡಿದಿಟ್ಟುಕೊಂಡು ಸೆಲ್ಫಿ ಕ್ಲಿಕ್ಕಿಸಲು ಸಹಾಯಕವಾಗಿದೆ.


Loading...

ಇಷ್ಟೇ ಅಲ್ಲದೆ ಓಪ್ಪೋ ನೂತನ ಸ್ಮಾರ್ಟ್​ಫೋನ್​ನಲ್ಲಿ 2.0 ಹಿಡನ್​ ಫಿಂಗರ್​ ಪ್ರಿಂಟ್​ ಅನ್​ಲಾಕ್ ಸೆನ್ಸಾರ್​ ಅಳವಡಿಸಲಾಗಿದೆ. ಜೊತೆಗೆ OLED ಸೆಲ್ಫ್​​ ಲೈಟಿಂಗ್​ ಫೀಚರ್​ ಇದರಲ್ಲಿದೆ. ಇದು 6th ಜನರೇಷನ್​ಗೆ ಅನುಗುಣವಾಗಿ​​ 2​0% ನಿಂದ 30% ವೇಗದಲ್ಲಿ ಕಾರ್ಯನಿರ್ವಹಿಸಲಿದೆಯಂತೆ.

ಒಪ್ಪೋ ರೆನೋ 10 ಎಕ್ಸ್ ವೈಶಿಷ್ಯ:

ಡಿಸ್​​ಪ್ಲೇ: 6.6 ಇಂಚಿನ​ ಅಮೋಲ್ಡ್​​ ಡಿಸ್​ಪ್ಲೇ

ಪ್ರೊಸೆಸರ್​: ಸ್ನಾಪ್​​ ಡ್ರಾಗನ್​ 855

 ಹಿಂಭಾಗದ ಕ್ಯಾಮೆರಾ: 48 ಮೆಗಾಫಿಕ್ಸೆಲ್​​ ಸೋನಿ IMX​​​586 ಸೆನ್ಸಾರ್​ + 13 ಮೆಗಾಫಿಕ್ಸೆಲ್​​ ಟೆಲಿಫೋಟೊ + 8 ಮೆಗಾಫಿಕ್ಸೆಲ್​ ಅಲ್ಟ್ರಾ ವೈಡ್​​ ಸೆನ್ಸಾರ್

ಸೆಲ್ಫೀ ಕ್ಯಾಮೆರಾ: 16 ಮೆಗಾಫಿಕ್ಸೆಲ್​ ಕ್ಯಾಮೆರಾ

ಬ್ಯಾಟರಿ: 4050mAh

First published:May 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...