Oppo K3: ಇಂದು ಮಾರುಕಟ್ಟೆಗೆ ‘ಒಪ್ಪೋ ಕೆ3‘ಸ್ಮಾರ್ಟ್​ಫೋನ್​: ಇದರಲ್ಲಿದೆ ಹೊಸ ಫೀಚರ್​

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಒಪ್ಪೋ ಕೆ3 ಸ್ಮಾರ್ಟ್​ಫೋನ್​ 6.5 ಇಂಚಿನ FHD+ ಅಮೋಲ್ಡ್​ ಡಿಸ್​ಪ್ಲೇಯನ್ನು ಅಳವಡಿಸಿಕೊಂಡಿದ್ದು, 1080 X​ 2340 ಪಿಕ್ಸೆಲ್​ ಹೊಂದಿದೆ. ಡಿಸ್​​ಪ್ಲೇ ಪ್ರೊಟೆಕ್ಷನ್​ಗಾಗಿ ಗೊರಿಲ್ಲಾ 5 ಪ್ರೊಟೆಕ್ಷನ್ ಗ್ಲಾಸ್​ ಅನ್ನು ನೀಡಲಾಗಿದೆ. ಅಂತೆಯೇ, ಈ ಸ್ಮಾರ್ಟ್​ಫೋನ್​ ಸ್ನಾಪ್​​ಡ್ರ್ಯಾಗನ್​ 710 ಚಿಪ್​ಸೆಟ್​​​ನಿಂದ ಕಾರ್ಯನಿರ್ವಹಿಸುತ್ತಿದೆ.

Harshith AS | news18
Updated:July 19, 2019, 4:49 PM IST
Oppo K3: ಇಂದು ಮಾರುಕಟ್ಟೆಗೆ ‘ಒಪ್ಪೋ ಕೆ3‘ಸ್ಮಾರ್ಟ್​ಫೋನ್​: ಇದರಲ್ಲಿದೆ ಹೊಸ ಫೀಚರ್​
ಒಪ್ಪೋ ಕೆ3
Harshith AS | news18
Updated: July 19, 2019, 4:49 PM IST
ಚೀನಾದ ಮೂಲಕದ ಒಪ್ಪೋ ಸ್ಮಾರ್ಟ್​ಫೋನ್​ ಸಂಸ್ಥೆ ಭಾರತದಲ್ಲಿ ಕೆ3 ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡುತ್ತಿದೆ. ವಿಶೇಷ ಫೀಚರ್​ ಅನ್ನು ಅಳವಡಿಸಿಕೊಂಡಿರುವ ಈ ಸ್ಮಾರ್ಟ್​ಫೋನ್​ ಇಂದು ಸಂಜೆ 6 ಕ್ಕೆ ದೇಶಿಯಾ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಒಪ್ಪೋ ಕೆ3 ಸ್ಮಾರ್ಟ್​ಫೋನ್​ 6.5 ಇಂಚಿನ FHD+ ಅಮೋಲ್ಡ್​ ಡಿಸ್​ಪ್ಲೇಯನ್ನು ಅಳವಡಿಸಿಕೊಂಡಿದ್ದು, 1080 X​ 2340 ಪಿಕ್ಸೆಲ್​ ಹೊಂದಿದೆ. ಡಿಸ್​​ಪ್ಲೇ ಪ್ರೊಟೆಕ್ಷನ್​ಗಾಗಿ ಗೊರಿಲ್ಲಾ 5 ಪ್ರೊಟೆಕ್ಷನ್ ಗ್ಲಾಸ್​ ಅನ್ನು ನೀಡಲಾಗಿದೆ. ಅಂತೆಯೇ, ಈ ಸ್ಮಾರ್ಟ್​ಫೋನ್​ ಸ್ನಾಪ್​​ಡ್ರ್ಯಾಗನ್​ 710 ಚಿಪ್​ಸೆಟ್​​​ನಿಂದ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಬಿಜೆಪಿಯಿಂದ ಅಪಹರಣಗೊಂಡಿಲ್ಲ; ಸ್ಪೀಕರ್​ಗೆ ಸಂದೇಶ ರವಾನಿಸಿದ ಶ್ರೀಮಂತ ಪಾಟೀಲ್​​

ಸ್ಮಾರ್ಟ್​ಫೋನ್​ ಮುಂಭಾಗದಲ್ಲಿ ಪಾಪ್​ ಅಪ್​ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, 16 ಮೆಗಾಫಿಕ್ಸೆಲ್​ ಹೊಂದಿದೆ. ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 16 ಮೆಗಾಫಿಕ್ಸೆಲ್​​ ಪ್ರೈಮರಿ ಕ್ಯಾಮೆರಾ ಜೊತೆಗೆ 2 ಮೆಗಾಫಿಕ್ಸೆಲ್​​ ಡೆಫ್ತ್​​ ಸೆನ್ಸಾರ್​​ ಕ್ಯಾಮೆರಾವನ್ನು ನೀಡಲಾಗಿದೆ. ಗ್ರಾಹಕರಿಗೆ ಬಳಕೆಗೆ ಯೋಗ್ಯವಾಗುವಂತೆ 3,765 mAh​ ಬ್ಯಾಟರಿಯನ್ನು ಅಳವಡಿಸಲಾಗಿದೆ

ಒಪ್ಪೋ ಕೆ3 ಸ್ಮಾರ್ಟ್​ಫೋನ್​ ಮೂರು ವೇರಿಯಂಟ್​ಗಳಲ್ಲಿ ಲಭ್ಯವಿದ್ದು, ಇದರ ಅನ್ವಯ ಬೆಲೆಯನ್ನು ನಿಗದಿ ಪಡಿಸಲಾಗಿದೆ. 6GB RAM ​ + 64 GB ಸ್ಟೊರೇಜ್​​ ಹೊಂದಿರುವ ಸ್ಮಾರ್ಟ್​ಫೋನ್​​ ಬೆಲೆ 16,000. 6GB RAM + 128 GB ಸ್ಟೊರೇಜ್​​ ಹೊಂದಿರುವ ಸ್ಮಾರ್ಟ್​ಫೋನ್​ ಬೆಲೆ 19,001. ಅಂತೆಯೇ, 8 GB RAM ​ ​+  256 GB ಸ್ಮಾರ್ಟ್​ಫೋನ್​ ಬೆಲೆ 23,200 ಎಂದು ಕಂಪೆನಿ ನಿಗದಿ ಪಡಿಸಿದೆ.

ಒಪ್ಪೋ ಕೆ3 ವಿಶೇಷತೆ:

ಡಿಸ್ಪ್ಲೇ: 6.5 ಇಂಚಿನ ಅಮೋಲ್ಡ್ ಡಿಸ್ಪ್ಲೇ

ಪ್ರೊಸೆಸರ್​: ಸ್ನಾಪ್​​ಡ್ರ್ಯಾಗನ್​ 710

RAM: 6 GB, 8GB

ಸ್ಟೊರೇಜ್​: 64 GB, 128 GB, 256 GB

ಸೆಲ್ಫಿ ಕ್ಯಾಮೆರಾ: 16 ಮೆಗಾಫಿಕ್ಸೆಲ್​​​​

ಹಿಂಭಾಗದ ಕ್ಯಾಮೆರಾ: 16 ಮೆಗಾಫಿಕ್ಸೆಲ್​ + 2 ಮೆಗಾಫಿಕ್ಸೆಲ್

ಬ್ಯಾಟರಿ3765 mAh

First published:July 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...