ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ Oppo K10 ಮತ್ತು Enco Air 2; ಇವುಗಳ ಬೆಲೆ, ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ

Oppo K10 ಫೋನ್ ದೊಡ್ಡ ಡಿಸ್​ಪ್ಲೇ, 50 ಮೆಗಾ ಪಿಕ್ಸೆಲ್ ತ್ರಿವಳಿ ಕ್ಯಾಮೆರಾಗಳು (Triple Camera), ವಿಸ್ತರಿಸಬಹುದಾದ ರ‍್ಯಾಮ್‌ಗೆ ಬೆಂಬಲಿಸುವ ಮತ್ತು ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5000 mAh ಬ್ಯಾಟರಿಯನ್ನ ಹೊಂದಿದೆ ಎಂದು ತಿಳಿದುಬಂದಿದೆ.

Oppo K10 / ಒಪ್ಪೋ ಕೆ10

Oppo K10 / ಒಪ್ಪೋ ಕೆ10

 • Share this:
  ಒಪ್ಪೋ (Oppo) ಸ್ಮಾರ್ಟ್‌ಫೋನ್ (Smartphone) ಪ್ರಿಯರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ, ಒಪ್ಪೋ ಕೆ10 (Oppo K10) ಸ್ಮಾರ್ಟ್‌ಫೋನ್ ಭಾರತದಲ್ಲಿ ಇಂದು ಬಿಡುಗಡೆಯಾಗಿದೆ. ಚೀನಾ(China)ದಲ್ಲಿ ದೀರ್ಘಕಾಲದಿಂದ ಲಭ್ಯವಿರುವ ಕೆ ಸಿರೀಸ್ ನ ಮೊದಲ ಫೋನ್ ಕೆ10 ಇಂದು ಭಾರತಕ್ಕೆ ಕಾಲಿಟ್ಟಿದೆ. ಒಪ್ಪೋ ಕೆ10 ಫೋನ್ ದೊಡ್ಡ ಡಿಸ್​ಪ್ಲೇ, 50 ಮೆಗಾ ಪಿಕ್ಸೆಲ್ ತ್ರಿವಳಿ ಕ್ಯಾಮೆರಾಗಳು (Triple Camera), ವಿಸ್ತರಿಸಬಹುದಾದ ರ‍್ಯಾಮ್‌(RAM)ಗೆ ಬೆಂಬಲಿಸುವ ಮತ್ತು ಫಾಸ್ಟ್ ಚಾರ್ಜಿಂಗ್‌(Fast Charging)ನೊಂದಿಗೆ 5000 mAh ಬ್ಯಾಟರಿಯನ್ನ ಹೊಂದಿದೆ ಎಂದು ತಿಳಿದುಬಂದಿದೆ.

  ಆದಾಗ್ಯೂ, ಕೆ10 ಸಿರೀಸ್ ನ ಫೋನ್ 5ಜಿ ಫೋನ್ ಆಗಿರುತ್ತದೆ ಎಂದು ನೀವು ಆಶಿಸುತ್ತಿದ್ದರೆ, ನೀವು ಸ್ವಲ್ಪ ನಿರಾಶೆಗೆ ಒಳಗಾಗುವುದು ಗ್ಯಾರಂಟಿ. ಏಕೆಂದರೆ ಕೆ10 ಫೋನ್ 4ಜಿ ಫೋನ್ ಆಗಿರಲಿದೆ ಎಂದು ಒಪ್ಪೋ ದೃಢಪಡಿಸಿದೆ.

  ಕೆ10 ಸೀರೀಸ್ ಜೊತೆಗೆ, ಒಪ್ಪೋ ತನ್ನ ಹೊಸ ಎನ್ಕೋ ಏರ್ 2 ವೈರ್‌ಲೆಸ್ ಇಯರ್ ಬಡ್ ಗಳನ್ನು ಸಹ ಬಿಡುಗಡೆ ಮಾಡಿದೆ. ಈ ಇಯರ್ ಬಡ್‌ಗಳನ್ನು ಜನವರಿಯಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಯಿತು, ಆದರೆ ಅದು ಚೀನಾದ ಮಾರುಕಟ್ಟೆಗೆ ಮಾತ್ರವಾಗಿತ್ತು. ಒಪ್ಪೋದ ಎನ್ಕೋ ಏರ್ 2 ಇಯರ್ ಬಡ್‌ಗಳು ವೈರ್‌ಲೆಸ್ ಇಯರ್ ಬಡ್ಸ್ ಮಾರುಕಟ್ಟೆಗೆ ಅರೆ ಪಾರದರ್ಶಕ "ಜೆಲ್ಲಿ" ಕೇಸ್ ವಿನ್ಯಾಸದಲ್ಲಿ ಬರುತ್ತಿದೆ. ಎನ್ಕೋ ಏರ್ 2 ನ ಕೆಲವು ವೈಶಿಷ್ಟ್ಯಗಳನ್ನು ಒಪ್ಪೋ ದೃಢಪಡಿಸಿದೆ, ಇದರಲ್ಲಿ 24 ಗಂಟೆಗಳ ಬ್ಯಾಟರಿ ಬಾಳಿಕೆಯೂ ಸೇರಿದೆ.

  ಒಪ್ಪೋ ಕೆ10 ಬೆಲೆ ಎಷ್ಟು ಗೊತ್ತೇ?

  ಒಪ್ಪೋ ಕೆ10 ನ ಬೆಲೆ ಭಾರತದಲ್ಲಿ 20,000 ರೂಪಾಯಿಗಿಂತಲೂ ಕಡಿಮೆ ಇರಲಿದೆ ಎಂದು ವರದಿ ಹೇಳುತ್ತಿತ್ತು. ಇದೇ ರೀತಿ, 6 ಜಿಬಿ ರ‍್ಯಾಮ್‌ಗೆ 14,999 ರೂ. ಇದ್ದರೆ, 8 ಜಿಬಿ ರ‍್ಯಾಮ್‌ಗೆ 22,999 ರೂ.ಗೆ ಸಿಗಲಿದೆ. ಮಾರ್ಚ್‌ 29ರಿಂದ ಈ ಫೋನ್‌ಗಳು ಭಾರತದಲ್ಇ ಲಭ್ಯವಾಗಲಿದೆ.

  ಸ್ನ್ಯಾಪ್‌ಡ್ರ್ಯಾಗನ್ 680 ಪ್ರೊಸೆಸರ್‌ನಿಂದ ಚಾಲಿತವಾಗಿರುವ ರಿಯಲ್ ಮೀ 9ಐ 12,999 ರೂಪಾಯಿಗಳ ಬೆಲೆಯಿಂದ ಪ್ರಾರಂಭವಾಗುತ್ತದೆ. ಆದರೆ ರೆಡ್ಮಿ 10, ಅದೇ ಪ್ರೊಸೆಸರ್ ಅನ್ನು ಹೊಂದಿದ್ದು 10,999 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಬರುತ್ತದೆ.

  ಒಪ್ಪೋ ಕೆ10 ಫೋನ್‌ನ ವಿಶೇಷತೆಗಳು

  ಒಪ್ಪೋ ಕೆ10 6.5 ಇಂಚಿನ ಎಲ್‌‌ಸಿಡಿಯೊಂದಿಗೆ 1080x1920 ಪಿಕ್ಸೆಲ್ ಗಳ ರೆಸಲ್ಯೂಶನ್ ಮತ್ತು 90ಹರ್ಟ್ಜ್ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಕ್ವಾಲ್ಕಮ್ ಸ್ನ್ಯಾಪ್ ಡ್ರ್ಯಾಗನ್ 680 ಪ್ರೊಸೆಸರ್‌ನೊಂದಿಗೆ ಬರಲಿದೆ ಎಂದು ಒಪ್ಪೋ ವೆಬ್‌ಸೈಟ್ ತಿಳಿಸಿದೆ, ಅಂದರೆ ಈ ಫೋನ್ 5ಜಿ ಅನ್ನು ಬೆಂಬಲಿಸುವುದಿಲ್ಲ.

  ಇದನ್ನೂ ಓದಿ: Astrology Apps: ನಿಮಗೆ ಭವಿಷ್ಯದ ಬಗ್ಗೆ ತಿಳದುಕೊಳ್ಳಬೇಕಾ? ಹಾಗಿದ್ರೆ ಈ ಆ್ಯಪ್​ಗಳನ್ನು ಡೌನ್ಲೋಡ್ ಮಾಡಿ

  ಫೋನ್‌ನಲ್ಲಿ ನೀವು 8ಜಿಬಿ ರ‍್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಅನ್ನು ನಿರೀಕ್ಷಿಸಬಹುದು. ಆದರೆ ನಿಮಗೆ ಹೆಚ್ಚಿನ ರ‍್ಯಾಮ್ ಸಾಮರ್ಥ್ಯದ ಅಗತ್ಯವಿದೆ ಎಂದು ನೀವು ಭಾವಿಸಿದರೆ, ಕೆ10 ವಿಸ್ತರಿಸಬಹುದಾದ ರ‍್ಯಾಮ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ ಎಂದು ಒಪ್ಪೋ ದೃಢಪಡಿಸಿದೆ, ಇದರಲ್ಲಿ ನೀವು ಡೈನಾಮಿಕ್ ರ‍್ಯಾಮ್ ಆಗಿ ಕಾರ್ಯನಿರ್ವಹಿಸಲು ಬಳಸದ ಕೆಲವು ಸ್ಟೋರೇಜ್ ಅನ್ನು ಹಂಚಿಕೆ ಮಾಡಬಹುದು.

  ಒಪ್ಪೋ ಕೆ10 ನ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾಗಳು ಇರಲಿವೆ. ಒಪ್ಪೋ ಕೆ10 ನಲ್ಲಿ 50 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರಲಿದೆ ಎಂದು ಬಹಿರಂಗಪಡಿಸಿದೆ. ಆದರೂ, ಇತರ ಎರಡು ಕ್ಯಾಮೆರಾಗಳ ನಿರ್ದಿಷ್ಟತೆಗಳನ್ನು ಬಹಿರಂಗಪಡಿಸಿಲ್ಲ. ಆದರೆ ಇತ್ತೀಚಿನ ವರದಿಯೊಂದು ಫೋನ್ ನ ಹಿಂಭಾಗದಲ್ಲಿ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 2 ಮೆಗಾ ಪಿಕ್ಸೆಲ್ ಡೆಪ್ತ್-ಸೆನ್ಸಿಂಗ್ ಕ್ಯಾಮೆರಾ ಇರಲಿದೆ ಎಂದು ಹೇಳಿದೆ. ಸೆಲ್ಫಿಗಾಗಿ, ಎಐ ವೈಶಿಷ್ಟ್ಯಗಳನ್ನು ಹೊಂದಿರುವ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎಂದು ಒಪ್ಪೋ ದೃಢಪಡಿಸಿದೆ.

  ಇದನ್ನೂ ಓದಿ: Apple Watch Series 3 ಈ ವರ್ಷ ಸ್ಥಗಿತಗೊಳ್ಳುವ ಸಾಧ್ಯತೆ!

  ಈ ಫೋನ್ 5000 ಎಂಎಎಚ್ ಬ್ಯಾಟರಿಯೊಂದಿಗೆ ಬರುವುದು ಮತ್ತು ಇದು 33 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕೆ10 ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಅನ್ನು ಸಹ ಹೊಂದಿರುತ್ತದೆ.

  ಒಪ್ಪೋ ಎನ್ಕೋ ಏರ್ 2 ನ ಬೆಲೆ

  ಒಪ್ಪೋ ಎನ್ಕೋ ಏರ್ 2 ಬೆಲೆ ಒಪ್ಪೋ ವೆಬ್‌ಸೈಟ್‌ನ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಮುಂಬರುವ ಟಿಡಬ್ಲ್ಯೂಎಸ್ ಇಯರ್ ಬಡ್‌ಗಳ ಬೆಲೆ 2,499 ರೂಪಾಯಿಗಳಾಗಿದೆ ಎಂದು ವೆಬ್‌ಸೈಟ್ ತಿಳಿಸಿದೆ. ವಿಶೇಷವಾಗಿ ಇಯರ್ ಬಡ್‌ಗಳು ಸಕ್ರಿಯ ಶಬ್ದ ರದ್ದತಿಯಂತಹ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರದಿರಬಹುದು.
  Published by:Harshith AS
  First published: