• Home
  • »
  • News
  • »
  • tech
  • »
  • Oppo New Smartphone: 108 ಮೆಗಾಫಿಕ್ಸೆಲ್ ಕ್ಯಾಮರಾ ಇರೋ ಹೊಸ ಫೋನ್​ ಬರ್ತಿದೆ! ನಿಮ್ಗೂ ಬೇಕಾ?

Oppo New Smartphone: 108 ಮೆಗಾಫಿಕ್ಸೆಲ್ ಕ್ಯಾಮರಾ ಇರೋ ಹೊಸ ಫೋನ್​ ಬರ್ತಿದೆ! ನಿಮ್ಗೂ ಬೇಕಾ?

ಒಪ್ಪೊ ಎ98

ಒಪ್ಪೊ ಎ98

ಒಪ್ಪೋ ತನ್ನ A ಸರಣಿಯಲ್ಲಿ ಒಪ್ಪೋ ಎ98 ಎಂಬ ಹೊಸ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲು ಸಿದ್ಧತೆ ನಡೆಸುತ್ತಿದೆ. ಇದರಲ್ಲಿ ಆಕರ್ಷಕವಾದ ಫೀಚರ್ಸ್‌ಗಳನ್ನು ಹೊಂದಿದ್ದು ಕೆಲವೊಂದು ಫೀಚರ್ಸ್‌, ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ.

  • Share this:

    ಇದು ಆಧುನಿಕ ಜಗತ್ತು. ಇಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು (Technology) ಅಪ್ಡೇಟ್‌ ಆಗುತ್ತಲೇ ಇರುತ್ತದೆ. ಅದ್ರಲ್ಲೂ ಮೊಬೈಲ್‌ (Mobile) ಮಾರುಕಟ್ಟೆಯಲ್ಲಿ ಹೊಸ ಸೀರಿಸ್‌ ನಲ್ಲಿ (Series) ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಈಗ ಒಪ್ಪೊ (Oppo) ತಮ್ಮ ಗ್ರಾಹಕರಿಗಾಗಿ ಹೊಸ ಸ್ಮಾರ್ಟ್‌ಫೋನ್‌ (Smartphone) ಅನ್ನು ಬಿಡುಗಡೆ ಮಾಡಿದೆ. ಇದು ಬಹಳಷ್ಟು ಫೀಚರ್ಸ್‌ (Features) ಅನ್ನು ಹೊಂದಿದೆ. ಗ್ರಾಹಕರು ಈಗಾಗಲೇ ಈ ಮೊಬೈಲ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಒಪ್ಪೊ ಕಂಪನಿ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಬಹಳಷ್ಟು ಮಹತ್ತರ ಸ್ಥಾನದಲ್ಲಿದೆ. ಒಪ್ಪೊ ಎ ಸೀರಿಸ್‌ನಲ್ಲಿ ತಮ್ಮ ಎ98 (Oppo A98) ಎಂಬ ಸ್ಮಾರ್ಟ್‌ಫೋನ್‌ ಅನ್ನು ಉತ್ಪಾದಿಸುವ ಯೋಜನೆಯಲ್ಲಿದೆ.


    ಒಪ್ಪೋ ತನ್ನ A ಸರಣಿಯಲ್ಲಿ ಒಪ್ಪೋ ಎ98 ಎಂಬ ಹೊಸ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲು ಸಿದ್ಧತೆ ನಡೆಸುತ್ತಿದೆ. ಇದರಲ್ಲಿ ಆಕರ್ಷಕವಾದ 108 ಮೆಗಾಫಿಕ್ಸೆಲ್ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಕೂಡಾ ಹೊರಬಿದ್ದಿದೆ.


    ಏನೆಲ್ಲಾ ಫೀಚರ್ಸ್‌ಗಳಿವೆ ಈ ಸ್ಮಾರ್ಟ್‌ಫೋನಿನಲ್ಲಿ?


    • ಇದರಲ್ಲಿ ಆಕರ್ಷಕವಾದ 108 ಮೆಗಾಫಿಕ್ಸೆಲ್ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.


    ಇದನ್ನೂ ಓದಿ: ಇದಪ್ಪಾ ಎಲ್ಲರೂ ಒಪ್ಪುವ ಒಪ್ಪೋ ಫೋನ್! ಹೊಸ ಮೊಬೈಲ್‌ ಹೇಗಿದೆ? ಬೆಲೆ ಎಷ್ಟಿದೆ?

    • ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 778G ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಲಿದೆ,

    • ಅಡ್ರಿನೊ 642L ಗ್ರಾಫಿಕ್ ಪ್ರೊಸೆಸರ್ ಯೂನಿಟ್‌ ಒಳಗೊಂಡಿದೆ.


    Oppo is releasing a new mobile phone! You will be shocked if you see the features!
    ಒಪ್ಪೊ ಎ98 ಮೊಬೈಲ್‌


    • ಜೊತೆಗೆ ಈ ಫೋನ್‌ ಆಂಡ್ರಾಯ್ಡ್ v12 ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್‌ ಆಗಲಿದೆ ಎಂಬ ವರದಿ ಕೂಡ ಪ್ರಚಾರದಲ್ಲಿದೆ.

    • ಇನ್ನು ಮುಂಭಾಗದ ಸೆಲ್ಫಿ ಕ್ಯಾಮೆರಾ 16 ಮೆಗಾಫಿಕ್ಸೆಲ್‌ ಸನ್ನು ಹೊಂದಿದೆ.

    • ಇನ್ನು ಈ ಫೋನಿನ ಬ್ಯಾಟರಿ ಸಾಮರ್ಥ್ಯ 5000mah ಆಗಿದ್ದು ಇದು 64 ವ್ಯಾಟ್ಸ್‌ನಷ್ಟು ವೇಗದ ಚಾರ್ಜಿಂಗ್‌ ಸಾಮರ್ಥ್ಯವನ್ನು ಹೊಂದಿದೆ.


    ಒಪ್ಪೊ ಎ98 ಸ್ಮಾರ್ಟ್‌ಫೋನಿನ ಬೆಲೆ ಎಷ್ಟು?


    ಈ ಸ್ಮಾರ್ಟ್‌ಫೋನಿನ ಫೀಚರ್ಸ್‌ ಅನ್ನು ವರದಿ ಮಾಡಿರುವ ಜೊತೆಗೆ ಇದರ ಸಂಭಾವ್ಯ ಬೆಲೆಯನ್ನು ಕೂಡ ಬಹಿರಂಗ ಪಡಿಸಿದ್ದಾರೆ. ಈ ಪ್ರಕಾರ ಇಈ ಹೊಸ ಎ98 ಒಪ್ಪೊ ಮೊಬೈಲ್‌ನ ಆರಂಭಿಕ ಬೆಲೆಯು 22,869 ರೂಪಾಯಿಗೆ ಲಭ್ಯವಾಗಲಿದೆ ಎಂದು ವರದಿಯಲ್ಲಿ ತಿಳೀಸಿದ್ದಾರೆ.


    ಇದು ಈ ಬಾರಿಯ ಒಪ್ಪೊ ಎ ಸೀರಿಸ್‌ನಲ್ಲಿ ಬಿಡುಗಡೆಯಾಗುತ್ತಿರುವ ವಿಶೇಷ ಸ್ಮಾರ್ಟಫೋನ್‌ ಅಂತ ಹೇಳಬಹುದು. ಇದು ಇನ್ನಷ್ಟು ಫೀಚರ್ಸ್‌ ಅನ್ನು ಹೊಂದಿದ್ದು ಶೀಘ್ರದಲ್ಲೇ ಇದರ ಕಂಪ್ಲೀಟ್‌ ಮಾಹಿತಿಯನ್ನು ಬಿಡುಗಡೆ ಮಾಡಲಿದೆ.


    ಇದರ ಜೊತೆಗೆ ಮಾರುಕಟ್ಟೆಯಲ್ಲಿ ಸದ್ಯದಲ್ಲೇ ಗ್ರಾಹಕರು ಬಯಸುವ ಬೆಲೆಯಲ್ಲಿ, ಫೀಚರ್ಸ್‌ನಲ್ಲಿ ಲಭ್ಯವಾಗಲಿದೆ.


    ಒಪ್ಪೊ ಎ17ಕೆ ಮೊಬೈಲ್‌ ಹೇಗಿದೆ?


    ಇತ್ತೀಚಿಗೆ ಕೆಲವು ದಿನಗಳ ಹಿಂದೆ ಒಪ್ಪೊ ಸಂಸ್ಥೆ ತನ್ನ ಎ ಸೀರಿಸ್‌ನಲ್ಲಿ ಒಪ್ಪೊ ಎ17ಕೆ ಯನ್ನು ಬಿಡುಗಡೆ ಮಾಡಿತ್ತು . ಇದೂ ಕೂಡ ಈ ಎ98 ಮೊಬೈಲ್‌ ನಂತೆಯೇ ಹೊಸ ಫೀಚರ್ಸ್‌ ಅನ್ನು ಹೊಂದಿದೆ.


    Oppo is releasing a new mobile phone! You will be shocked if you see the features!
    ಒಪ್ಪೊ ಎ98 ಮೊಬೈಲ್


    ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್:




      • Oppo A17K ಸ್ಮಾರ್ಟ್‌ಫೋನ್‌ ರಿಯರ್‌ ಕ್ಯಾಮರಾ ಸೆಟಪ್‌  ಹೊಂದಿದ್ದು ಇದರಲ್ಲಿ ಮುಖ್ಯ ಕ್ಯಾಮರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ.







      • 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ವಿಡಿಯೋ ಕರೆ ಮತ್ತು ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಅದೇ ರೀತಿ ಕ್ಯಾಮರಾ ಫೀಚರ್ಸ್‌ ನೈಟ್‌ ಮೋಡ್‌, ಟೈಮ್‌ಲಾಪ್ಸ್‌, ಎಕ್ಸ್‌ಪರ್ಟ್‌, ಪನೋರಮ ಮತ್ತು ಗೂಗಲ್‌ ಲೆನ್ಸ್‌ ಇದೆ.







      • ಹೆಚ್ಚು ಬಾಳಿಕೆ ಬರುವ 5000mah ಬ್ಯಾಟರಿಯನ್ನು ಹೊಂದಿದೆ. ಜೊತೆಗೆ ಸೂಪರ್‌ ಪವರ್‌ ಮೋಡ್‌ ಮತ್ತು ಸೂಪರ್‌ ನೈಟ್‌ಟೈಮ್‌ ಸ್ಟ್ಯಾಂಡ್‌ಬೈ ಅನ್ನು ಒಳಕೊಂಡಿದೆ.




    ಇದನ್ನೂ ಓದಿ: ನೀವು ವನ್‌ಪ್ಲಸ್‌, ಒಪ್ಪೋ ಗ್ರಾಹಕರೇ? ಹಾಗಿದ್ರೆ ಈ ವಿಷಯ ತಿಳಿಯಲೇಬೇಕು

    • ಡ್ಯುಯೆಲ್‌ ಸಿಮ್‌, Wifi 5, ಬ್ಲೂಟೂತ್‌ v5.3 ಹಾಗೂ ಮೈಕ್ರೊ ಯುಎಸ್‌ಬಿ ಪೋರ್ಟ್‌ ಸಿ ಯಿಂದ ಕೂಡಿದೆ.

    Published by:Harshith AS
    First published: