ಜನಪ್ರಿಯ ಸ್ಮಾರ್ಟ್‌ಫೋನ್ ಕಂಪೆನಿಗಳಲ್ಲಿ ಒಂದಾಗಿರುವ ಒಪ್ಪೋ ಕಂಪೆನಿ (Oppo Company) ತನ್ನ ಬ್ರಾಂಡ್ನ ಅಡಿಯಲ್ಲಿ ಇದುವರೆಗೆ ಹಲವಾರು ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಮಧ್ಯೆ ಕಂಪೆನಿ ಸಹ ಇತ್ತೀಚಿನ ತಂತ್ರಜ್ಞಾನಕ್ಕೆ ಒಗ್ಗಿಕೊಂಡು ಹೊಸ ಮಾದರಿ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗ ಒಪ್ಪೋ ಕಂಪೆನಿಯಿಂದ ಒಂದು ಮಹತ್ತರವಾದ ಘೋಷಣೆಯಾಗಿತ್ತು. ಅದೇ ಫೋಲ್ಡಬಲ್ ಸ್ಮಾರ್ಟ್‌ಫೋನ್ (Oppo Foldable Smartphone) ಅನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು, ಅದೇ ರೀತಿ ಈ ಸ್ಮಾರ್ಟ್‌ಫೋನ್ ಕೆಲವು ದಿನಗಳ ಹಿಂದೆ ಜಾಗತಿಕ ಮಾರುಕಟ್ಟೆಯಲ್ಲಿ (Global Market) ಲಾಂಚ್ ಆಗಿತ್ತು. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿರಲಿಲ್ಲ. ಇದೀಗ ಭಾರತೀಯ ಗ್ರಾಹಕರಿಗೆ ಕಂಪೆನಿ ಗುಡ್ ನ್ಯೂಸ್ ನೀಡಿದೆ.
ಹೌದು, ಒಪ್ಪೋ ಕಂಪೆನಿಯಿಂದ ಇತ್ತೀಚೆಗ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದ ಒಪ್ಪೋ ಫೈಂಡ್ ಎನ್2 ಫ್ಲಿಪ್ ಸ್ಮಾರ್ಟ್‌ಫೋನ್ ಕೆಲವೇ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಸದ್ಯ ಈ ಸ್ಮಾರ್ಟ್ಫೋನ್ನ ಬೆಲೆ ಮತ್ತು ಫೀಚರ್ಸ್ ಮಾಹಿತಿ ಬಹಿರಂಗವಾಗಿದೆ.
ಬೆಲೆ ಮತ್ತು ಲಭ್ಯತೆ
ಒಪ್ಪೋ ಫೈಂಡ್ ಎನ್2 ಫ್ಲಿಪ್ ಬೆಲೆ ಯುರೋಪ್‌ನಲ್ಲಿ EUR 849 ಆಗಿದೆ. ಇನ್ನು ಭಾರತದಲ್ಲಿ ಈ ಫೋನಿನ ಆರಂಭಿಕ ವೇರಿಯಂಟ್ ಬೆಲೆ 80,000 ರೂಪಾಯಿಗಳ ಆಸುಪಾಸಿನಲ್ಲಿ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಇದೊಂದು ಗೊಂಬೆ ಮನೆಯಲ್ಲಿದ್ರೆ ಮಕ್ಕಳು ಗಲಾಟೆ ಮಾಡೋದೇ ಇಲ್ವಂತೆ, ಬೆಲೆಯೂ ಕಡಿಮೆ!
ಒಪ್ಪೋ ಫೈಂಡ್ ಎನ್2 ಫ್ಲಿಪ್ ಸ್ಮಾರ್ಟ್‌ಫೋನ್ ಫೀಚರ್ಸ್
ಒಪ್ಪೋ ಫೈಂಡ್ ಎನ್2 ಫ್ಲಿಪ್ ಸ್ಮಾರ್ಟ್‌ಫೋನ್ 6.8 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಪ್ರೈಮೆರಿ ಡಿಸ್‌ಪ್ಲೇ ಹೊಂದಿದೆ. ಇದು 1,080 x 2,520 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ HDR10+ ಬೆಂಬಲಿಸಲಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಫೋನ್ 3.26 ಇಂಚಿನ ಕವರ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 900 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಸಹ ಬೆಂಬಲಿಸಲಿದೆ.
ಕ್ಯಾಮೆರಾ ಸೆಟಪ್
ಒಪ್ಪೋ ಫೈಂಡ್ ಎನ್2 ಫ್ಲಿಪ್ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್ ಶೂಟರ್ ಅನ್ನು ಹೊಂದಿದೆ. ಇದಲ್ಲದೆ ಫೋಲ್ಡಿಂಗ್ ಡಿಸ್‌ಪ್ಲೇಯ ಮೇಲ್ಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ ಫೈಂಡ್ ಎನ್2 ಫ್ಲಿಪ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9000+ ಎಸ್ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಆಧಾರಿತ ಕಲರ್ ಒಎಸ್ 13.0 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8ಜಿಬಿ ರ್‍ಯಾಮ್ ಮತ್ತು 256ಜಿಬಿ ಹಾಗೂ 16ಜಿಬಿ ರ್‍ಯಾಮ್ ಮತ್ತು 512ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಎರಡು ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಬ್ಯಾಟರಿ ಬ್ಯಾಕಪ್
ಒಪ್ಪೋ ಫೈಂಡ್ ಎನ್2 ಫ್ಲಿಪ್ ಸ್ಮಾರ್ಟ್‌ಫೋನ್ 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 44W ಸೂಪರ್‌ವೂಕ್ ಚಾರ್ಜಿಂಗ್ ಬೆಂಬಲಿಸಲಿದೆ.
ಇತರೆ ಫೀಚರ್ಸ್
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.3, GPS/ A-GPS ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್ ಮತ್ತು ಗೈರೋಸ್ಕೋಪ್ ಅನ್ನು ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ