ಟೆಕ್ನಾಲಜಿ ಮಾರುಕಟ್ಟೆಯಲ್ಲಿ (Technology Market) ಹೆಚ್ಚು ಬೇಡಿಕೆಯಲ್ಲಿರುವ ಸಾಧನಗಳಲ್ಲಿ ಸ್ಮಾರ್ಟ್ಫೋನ್ಗಳು ಒಂದಾಗಿದೆ. ಸ್ಮಾರ್ಟ್ಫೋನ್ಗಳ ಬಳಕೆ ಇತ್ತೀಚೆಗೆ ವ್ಯಾಪಕವಾಗಿ ಹಬ್ಬಿದೆ. ಹಿಂದೆ ಒಂದು ಮನೆಯಲ್ಲಿ ಒಂದೇ ಮೊಬೈಲ್ಗಳಿದ್ದವು. ಆದರೆ ಈಗ ಮೊಬೈಲ್ ಇಲ್ಲದ ಮನೆಗಳೇ ಇಲ್ಲ ಎಂಬಂತಾಗಿದೆ. ಕೊರೋನಾ ಎಂಬ ಸಾಂಕ್ರಾಮಿಕ ರೋಗ ಬಂದ ನಂತರ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮೊಬೈಲ್ (Mobile) ಇಲ್ಲದೇ ಜೀವನವೇ ಇಲ್ಲ ಎನ್ನತಾರೆ. ಈಗಿನ ಕಾಲದಲ್ಲಿ ಸ್ಮಾರ್ಟ್ಫೋನ್ ಕಂಪೆನಿಗಳು ಕೂಡ ಹೊಸ ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಪಡೆಯುತ್ತಿದೆ. ಇದೀಗ ಒಪ್ಪೋ ಕಂಪೆನಿ (Oppo Company) ಹೊಸ ಸ್ಮಾರ್ಟ್ಫೋನ್ ಅನ್ನು ಅನಾವರಣಗೊಳಿಸಲು ರೆಡಿಯಾಗಿದೆ.
ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯಾಗಿರುವ ಒಪ್ಪೋ ತನ್ಮ ಬ್ರಾಂಡ್ನ ಅಡಿಯಲ್ಲಿ ಒಪ್ಪೋ ಫೈಂಡ್ ಎಕ್ಸ್6 ಎಂಬ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಇದೀಗ ಈ ಸ್ಮಾರ್ಟ್ಫೋನ್ನ ಬಿಡುಗಡೆಗೆ ಮೊದಲೇ ಫೀಚರ್ಸ್ ಲೀಕ್ ಆಗಿದೆ. ಹಾಗಿದ್ರೆ ಈ ಸ್ಮಾರ್ಟ್ಫೋನ್ನ ಸ್ಪೆಷಲ್ ಫೀಚರ್ಸ್ ಏನು ಎ.ಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಫುಲ್ ಓದಿ.
ಒಪ್ಪೋ ಫೈಂಡ್ ಎಕ್ಸ್6 ಸ್ಮಾರ್ಟ್ಫೋನ್ನ ಫೀಚರ್ಸ್
ಒಪ್ಪೋ ಫೈಂಡ್ ಎಕ್ಸ್6 ಸ್ಮಾರ್ಟ್ಫೋನ್ 6.73 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದರಿಬಹುದು. ಅಲ್ಲದೆ ಈ ಡಿಸ್ಪ್ಲೇ ರಚನೆಯ ಅನುಪಾತ 20:9 ರಷ್ಟಿದೆ ಎನ್ನಲಾಗಿದೆ. ಇನ್ನು ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಪಡೆಯುವ ಸಾಧ್ಯತೆಯಿದೆ. ಇದು 120 Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಏರ್ಟೆಲ್ನಿಂದ ಭಾರೀ ಅಗ್ಗದ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ! ಬೆಲೆ ಎಷ್ಟು?
ಕ್ಯಾಮೆರಾ ಫೀಚರ್ಸ್
ಒಪ್ಪೋ ಫೈಂಡ್ ಎಕ್ಸ್6 ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದರ ಸೆಲ್ಫಿ ಕ್ಯಾಮೆರಾ ವಿವರದ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ ಫೈಂಡ್ ಎಕ್ಸ್6 ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಪ್ಲಸ್ ಜನ್ 1SoC ಪ್ರೊಸೆಸರ್ ಬಲವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದು ಆಂಡ್ರಾಯ್ಡ್ ವಿ12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 ಜಿಬಿ ರ್ಯಾಮ್ ಮತ್ತು 256 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಈ ಸ್ಮಾರ್ಟ್ಫೋನ್ ಅನ್ನು ಮೆಮೊರಿ ಕಾರ್ಡ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸುವ ಆಯ್ಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪೆನಿ ಬಹಿರಂಗ ಪಡಿಸಿಲ್ಲ.
ಬ್ಯಾಟರಿ ಫೀಚರ್ಸ್
ಒಪ್ಪೋ ಫೈಂಡ್ ಎಕ್ಸ್6 ಸ್ಮಾರ್ಟ್ಫೋನ್ 4700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು 120W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರಲಿದೆ. ಎಂದು ಅಂದಾಜಿಸಲಾಗಿದೆ.
ಇತರೆ ಫೀಚರ್ಸ್
ಈ ಸ್ಮಾರ್ಟ್ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್ಸ್ಪಾಟ್, ಬ್ಲೂಟೂತ್, ವೈಫೈ ಅನ್ನು ಬೆಂಬಲಿಸಲಿದೆ. ಇದಲ್ಲದೆ ಆಕ್ಸಿಲೆರೋಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್, ಗ್ರಾವಿಟಿ ಸೆನ್ಸಾರ್ ಅನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ.
ಬೆಲೆ ಮತ್ತು ಲಭ್ಯತೆ
ಇನ್ನು ಒಪ್ಪೊ ಫೈಂಡ್ ಎಕ್ಸ್6 ಸ್ಮಾರ್ಟ್ಫೋನ್ನ ಬೆಲೆ ಅಥವಾ ಲಭ್ಯತೆಯ ಬಗ್ಗೆ ಕಂಪೆನಿ ಯಾವುದೇ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ಆದರೆ ಭಾರತದಲ್ಲಿ ಮಾತ್ರ ಈ ಸ್ಮಾರ್ಟ್ಫೋನ್ ಬಿಡುಗಡೆಯಾಗೋದು ಗ್ಯಾರಂಟಿಯಾಗಿದೆ. ಇನ್ನು ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ಹೇಳಲಿದ್ದು, ತದನಂತರದಲ್ಲಿ ಬೆಲೆ ಬಗ್ಗೆ ಮಾಹಿತಿ ತಿಳಿಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ