ಆ್ಯಪಲ್​ಗೂ ಸೆಡ್ಡು ಹೊಡೆದ ಓಪ್ಪೋ, ಫೈಂಡ್ ಎಕ್ಸ್ ಬಿಡುಗಡೆ


Updated:June 21, 2018, 7:32 PM IST
ಆ್ಯಪಲ್​ಗೂ ಸೆಡ್ಡು ಹೊಡೆದ ಓಪ್ಪೋ,  ಫೈಂಡ್ ಎಕ್ಸ್ ಬಿಡುಗಡೆ

Updated: June 21, 2018, 7:32 PM IST
ನವದೆಹಲಿ: ಸೆಲ್ಫಿ ಕ್ಯಾಮೆರಾ ಮೂಲಕವೇ ಯುವ ಸಮೂಹವನ್ನು ಸೆಳೆದಿರುವ ಚೀನಾದ ಸ್ಮಾರ್ಟ್​ಪೋನ್​ ಸಂಸ್ಥೆ ಇದೀಗ ಫೈಂಡ್ ಎಕ್ಸ್ ಮೊಬೈಲ್​ನ್ನು ಬಿಡುಗಡೆಗೊಳಿಸಿದೆ. ಪ್ಯಾರಿಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಓಪ್ಪೋ ಫೈಂಡ್ ಎಕ್ಸ್ ಜಾಗತಿಕ ಪ್ರವೇಶ ಪಡೆದಿದ್ದು, ಅತಿ ಶೀಘ್ರದಲ್ಲೇ ಭಾರತ ಸೇರಿದಂತೆ ಇತರ ರಾಷ್ಟ್ರಗಳನ್ನು ತಲುಪಲಿದೆ.

ಬೆಜೆಲ್‌ಲೆಸ್ ವಿನ್ಯಾಸದೊಂದಿಗೆ ನಾಚ್​ ಡಿಸ್​ಪ್ಲೇಯಿರುವ ಫೈಂಡ್​ ಎಕ್ಸ್​ ಮೊಬೈಲ್​ ಆ್ಯಪಲ್​ಗಿಂತಲೂ ದುಬಾರಿಯಾಗಿದ್ದು, ಲಂಬೋರ್ಗಿನಿ ಸೀಮಿತ ಆವೃತ್ತಿಯನ್ನು ಪರಿಚಯಿಸಲಾಗಿದೆ. ಓಪ್ಪೋ ಫೈಂಡ್ ಎಕ್ಸ್ ಲಂಬೋರ್ಗಿನಿ ಸೀಮಿತಿ ಆವೃತ್ತಿ ಬೆಲೆ (512GB): ಅಂದಾಜು 1,34,470 ರೂ. (1699 Euros) ಎನ್ನಲಾಗಿದೆ.

ಆ್ಯಪಲ್ ಐಫೋನ್ ಎಕ್ಸ್ 256GB ವೆರಿಯಂಟ್ ಬರೋಬ್ಬರಿ 1,03,333 ರೂ.ಗಳಷ್ಟು ದುಬಾರಿಯೆನಿಸಿತ್ತು, ಆದರೆ ಇದೀಗ ಓಪ್ಪೋ ಫೈಂಡ್​ ಎಕ್ಸ್​ ಲ್ಯಾಂಬೋರ್ಗಿನಿ ಐಫೋನ್‌ಗಿಂತಲೂ ಹೆಚ್ಚು ಬೆಲೆ ಬಾಳುತ್ತಿದೆ.

ಓಪ್ಪೋ ಫೈಂಡ್ ಎಕ್ಸ್ ಬೆಲೆ: ಅಂದಾಜು 78,500 ರೂ. (999 Euros)

ಓಪ್ಪೋ ಫೈಂಡ್ ಎಕ್ಸ್ ವಿಶೇಷತಗೆಳು:
6.4 ಇಂಚುಗಳ OLED HD+ ಡಿಸ್‌ಪ್ಲೇ,
ಬೆಜೆಲ್‌ಲೆಸ್ ವಿನ್ಯಾಸ, ಸಂಪೂರ್ಣ ನಾಚ್​ ಡಿಸ್​ಪ್ಲೇ
Loading...

ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5,
2340x1080 ಪಿಕ್ಸೆಲ್ ರೆಸೊಲ್ಯೂಷನ್,
ಆಂಡ್ರಾಯ್ಡ್ ಓರಿಯೋ ಆಪರೇಟಿಂಗ್​ ಸಿಸ್ಟಂ
ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್​

8GB RAM ನೊಂದಿಗೆ 256GB/512GB ಸ್ಟೋರೆಜ್ ಸಾಮರ್ಥ್ಯ
ಬ್ಯಾಟರಿ: 3,730mAh, VOOC ತಂತ್ರಗಾರಿಕೆ
16MP ಮತ್ತು 20MP ಸ್ಲೈಡಿಂಗ್ ಕ್ಯಾಮೆರಾ, ಕೃತಕ ಬುದ್ಧಿಮತ್ತೆ (AI) ಸಹಾಯ,
25MP ಸೆಲ್ಫಿ ಕ್ಯಾಮೆರಾ ಮತ್ತು 3D ಎಮೋಜಿ ಬೆಂಬಲ ನೀಡಲಾಗಿದೆ.
ಉಳಿದಂತೆ ಕನೆಕ್ಟಿವಿಟಿ: 4G, VoLTE, 3G, WiFI, Bluetooth, GPS, NFC and USB Type C ಕೊಡಲಾಗಿದೆ.
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...